ಹುಬ್ಬಳ್ಳಿ: ಹುಬ್ಬಳ್ಳಿಯ ರೈಲ್ವೆ ಮೈದಾನದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಯುವಜನೋತ್ಸವ ಆಯೋಜಿಸಲಾಗಿದ್ದು, ಇದಕ್ಕ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಲು ಇಂದು(ಜನವರಿ 12) ಹುಬ್ಬಳ್ಳಿಗೆ ಆಗಮಿಸಿದ್ದಾರೆ. ಹುಬ್ಬಳ್ಳಿ ಏರ್ಪೋರ್ಟ್ನಿಂದ ರೈಲ್ವೆ ಮೈದಾನದವರೆಗೆ ರೋಡ್ಶೋ ಮೂಲಕ ತೆರಳಿದ ಮೋದಿ, ಮಾರ್ಗಮಧ್ಯೆ ವಾಹನ ನಿಲ್ಲಿಸಿ ಜನರತ್ತ ಕೈಬೀಸಿದರು.
ನೆಚ್ಚಿನ ನಾಯಕರನ್ನು ನೋಡು ಜನ ರಸ್ತೆ ಮಾರ್ಗದಲ್ಲಿ ನಿಂತು ಜೈಕಾರ ಹಾಕಿದರು. ಈ ವೇಳೆ ಬಾಲಕನೋರ್ವ ಭದ್ರತೆಯನ್ನು ಮೀರಿ ಪ್ರಧಾನಿ ಮೋದಿಗೆ ಹೂವಿನ ಹಾರ ಹಾಕಲು ಯತ್ನಿಸಿದ್ದಾನೆ. ಕೂಡಲೇ ಸ್ಥಳದಲ್ಲಿದ್ದ ಪೊಲೀಸ್ ಸಿಬ್ಬಂದಿ ಬಾಲಕನ್ನು ಎಳೆದುಕೊಂಡು ಹೋಗಿದ್ದಾರೆ. ಬಾಲಕ ತಂದಿದ್ದ ಹೂವಿನ ಹಾರವನ್ನು ಮೋದಿ ತೆಗೆದುಕೊಂಡು ಕಾರಿನ ಮೇಲೆ ಹಾಕಿದರು. ಇದನ್ನು ಭದ್ರತಾ ಲೋಪ ಎನ್ನಲಾಗುತ್ತಿದೆ.