ಸಪ್ತಪದಿಗೂ ಮುನ್ನ ವಧುವಿನ ಮುಖ ನೋಡಿ ಮದುವೆ ಬೇಡ ಎಂದ ವರ

|

Updated on: Jun 17, 2024 | 12:07 PM

ಮದುವೆ ಮಂಟಪದಲ್ಲಿ ಕುಳಿತಿದ್ದ ವ್ಯಕ್ತಿಯೊಬ್ಬ ಈ ಮದುವೆ ನನಗೆ ಬೇಡವೆಂದು ಹಸೆಮಣೆಯಿಂದ ಕೆಳಗಿಳಿದಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಮಂಟಪದಲ್ಲಿ ವಧುವಿನ ಮುಖ ನೋಡುತ್ತಿದ್ದಂತೆ ವರ ತನ್ನ ನಿರ್ಧಾರವನ್ನು ಬದಲಿಸಿದ್ದಾನೆ, ಇದಕ್ಕೆ ಕಾರಣವೇನು ಇಲ್ಲಿದೆ ಮಾಹಿತಿ.

ಸಪ್ತಪದಿಗೂ ಮುನ್ನ ವಧುವಿನ ಮುಖ ನೋಡಿ ಮದುವೆ ಬೇಡ ಎಂದ ವರ
Follow us on

ವರನೊಬ್ಬ ಕೊನೆಯ ಕ್ಷಣದಲ್ಲಿ ಮದುವೆ ಬೇಡವೆಂದು ನಿರಾಕರಿಸಿರುವ ಘಟನೆ ಉತ್ತರ ಪ್ರದೇಶದ ಗೋರಖ್​ಪುರದಲ್ಲಿ ನಡೆದಿದೆ. ಮದುವೆ ಸಂತಸದಲ್ಲಿದ್ದ ಎರಡೂ ಕುಟುಂಬವು ನಿರಾಸೆಗೊಂಡಿವೆ. ವಧುವಿನ ಮುಖ ನೋಡಿದವನು ಇದ್ದಕ್ಕಿದ್ದಂತೆ ನನಗೆ ಈ ಮದುವೆ ಬೇಡ, ನನ್ನ ಹಣ ನನಗೆ ವಾಪಸ್ ಕೊಡಿ ಎಂದು ಹೇಳಲು ಶುರು ಮಾಡಿದ್ದ.

ಘಟನೆ ಹಿನ್ನೆಲೆ ಏನು?
ಈ ಘಟನೆ ಚೌರಿಚೌರಾ ಎನ್ನುವ ಪ್ರದೇಶದಲ್ಲಿ ಡನೆದಿದೆ. ಹರ್ಯಾಣದಲ್ಲಿರುವ ಕುಟುಂಬವು ತನ್ನ ಮಗನಿಗೆ ವಧು ಹುಡುಕುತ್ತಿದ್ದರು. ಹೇಗೋ ಈ ಸಂಬಂಧ ಚೌರಿಚೌರಾಕ್ಕೆ ಬಂದಿತ್ತು, ಹುಡುಗಿನ ಫೋಟೊ ನೋಡಿ ಒಪ್ಪಿಗೆ ಸೂಚಿಸಿದ್ದರು.
ಮದುವೆಯ ವೆಚ್ಚ ಭರಿಸಲು ಹಣವಿಲ್ಲ ಎಂದಿದ್ದಕ್ಕೆ ಹುಡುಗನ ಕುಟುಂಬದವರೇ ಮದುವೆಯ ಖರ್ಚಿಗೆಂದು ಹಣ ನೀಡಿದ್ದರು.

ಜೂನ್ 16ರಂದು ಮದುವೆಯ ಮೆರವಣಿಗೆ ಬಂದಿತ್ತು, ವಧು ಮಂಟಪದಲ್ಲಿ ಕುಳಿತಿದ್ದಳು, ಸಪ್ತಪದಿ ತುಳಿಯುವ ಮುನ್ನ ವಧುವಿನ ಮುಖ ನೋಡಿದ ವರ ಈಕೆ ಕಪ್ಪಗಿದ್ದಾಳೆ, ನಾನು ಫೋಟೊದಲ್ಲಿ ನೋಡಿದ್ದ ಹುಡುಗಿ ಇವಳಲ್ಲ, ಅವಳು ಬೆಳ್ಳಗಿದ್ದಳು, ಎಲ್ಲಾ ಸೇರಿ ನನಗೆ ಮೋಸ ಮಾಡಿದ್ದಾರೆ, ಹಣವನ್ನು ವಾಪಸ್ ಕೊಡಿ ಎಂದು ಹೇಳುತ್ತಾ ಗಲಾಟೆ ಮಾಡಿದ್ದಾನೆ.

ಮತ್ತಷ್ಟು ಓದಿ: ಅಮ್ಮ ನನಗೆ ಆ ಹುಡುಗ ಇಷ್ಟವಿಲ್ಲವೆಂದರೂ ಬಲವಂತದ ನಿಶ್ಚಿತಾರ್ಥ ಮಾಡಿಸಿದ ತಾಯಿ, ಆತ್ಮಹತ್ಯೆ ಮಾಡಿಕೊಂಡ ಮಗಳು

ವರನ ಮಾತು ಕೇಳಿ ಅಲ್ಲಿದ್ದವರಿಗೂ ಆಶ್ಚರ್ಯವಾಗಿತ್ತು, ನಂತರ ಎರಡೂ ಕಡೆಯವರಿಗೂ ವಾಗ್ವಾದ ಶುರುವಾಯಿತು, ಈ ಬಗ್ಗೆ ಅಲ್ಲಿದ್ದವರು ಯಾರೋ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ