ಅಮ್ಮ ನನಗೆ ಆ ಹುಡುಗ ಇಷ್ಟವಿಲ್ಲವೆಂದರೂ ಬಲವಂತದ ನಿಶ್ಚಿತಾರ್ಥ ಮಾಡಿಸಿದ ತಾಯಿ, ಆತ್ಮಹತ್ಯೆ ಮಾಡಿಕೊಂಡ ಮಗಳು

ಅಮ್ಮ ನನಗೆ ಈ ಹುಡುಗ ಹಾಗೂ ಇಷ್ಟು ಬೇಗೆ ಮದುವೆ ಇಷ್ಟವಿಲ್ಲ ಎಂದರು ತಾಯಿ ಹಣದ ಆಸೆಗೆ, ಬಲವಂತವಾಗಿ ಮಗಳಿಗೆ ಬಲವಂತವಾಗಿ ನಿಶ್ಚಿತಾರ್ಥ ಮಾಡಿದ್ದಾಳೆ. ಇದರಿಂದ ಮನನೊಂದು 19ರ ಹುಡುಗಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇದೀಗ ಈ ಪ್ರಕರಣ ಸಾಮಾಜಿಕ ಜಾಲತಾಣದಲ್ಲಿ ವೈರಲ್​​ ಆಗಿದೆ.

ಅಮ್ಮ ನನಗೆ ಆ ಹುಡುಗ ಇಷ್ಟವಿಲ್ಲವೆಂದರೂ ಬಲವಂತದ ನಿಶ್ಚಿತಾರ್ಥ ಮಾಡಿಸಿದ ತಾಯಿ, ಆತ್ಮಹತ್ಯೆ ಮಾಡಿಕೊಂಡ ಮಗಳು
ಸಾಂದರ್ಭಿಕ ಚಿತ್ರ
Follow us
|

Updated on: Jun 17, 2024 | 11:41 AM

ಯುವತಿಯೊಬ್ಬಳು ಮನೆಯವರ ಒತ್ತಾಯಕ್ಕೆ ಮನಿದು ನಿಶ್ಚಿತಾರ್ಥ ಮಾಡಿಕೊಂಡು ಪ್ರಾಣ ಕಳೆದುಕೊಂಡಿದ್ದಾಳೆ. ಈ ಘಟನೆ ಚೀನಾದಲ್ಲಿ ನಡೆದಿದೆ. 19 ವರ್ಷದ ಟಾಂಗ್‌ಟಾಂಗ್ ಎಂಬ ಯುವತಿಯನ್ನು ಐದು ದಿನಗಳ ಹಿಂದೆ ವ್ಯಕ್ತಿಯೊಬ್ಬರ ಜತೆಗೆ ನಿಶ್ಚಿತಾರ್ಥ ಮಾಡಲಾಗಿದೆ. ಈಕೆಯ ಕುಟುಂಬ ತುಂಬಾ ಬಡತನದಲ್ಲಿದ್ದು, ಊರಿನಲ್ಲಿ ತನ್ನ ತಾಯಿಯೊಂದಿಗೆ ಸಣ್ಣ ಬಟ್ಟೆ ಅಂಗಡಿಯನ್ನು ನಡೆಸುತ್ತಿದದ್ದರು ಎಂದು ಹೇಳಲಾಗಿದೆ. ನಿಶ್ಚಿತಾರ್ಥ ಮಾಡಿಕೊಂಡ ಯುವಕ ಉತ್ತಮ ಆರ್ಥಿಕ ಪರಿಸ್ಥಿತಿಯನ್ನು ಹೊಂದಿದ್ದು, ತುಂಬಾ ಚೆನ್ನಾಗಿ ನೋಡಿಕೊಳ್ಳುವ ಭರವಸೆಯನ್ನು ನೀಡಿದ್ದ, ಈ ಕಾರಣಕ್ಕೆ ಆಕೆಯ ಮನೆಯವರು ಮದುವೆ ಮಾಡಲು ಮುಂದಾಗಿದ್ದಾರೆ. ಜತೆಗೆ ಆಕೆಯ ತಾಯಿಗೆ ಹಣ ಆಸೆಯನ್ನು ಕೂಡ ತೋರಿಸಿದರು. ಹಣ ಆಸೆಯಿಂದ ತಾಯಿ ಕೂಡ ಆಕೆಯನ್ನು ಆ ವರನಿಗೆ ಮದುವೆ ಮಾಡಲು ಮುಂದಾಗಿದ್ದಾಳೆ.

ಆದರೆ ಟಾಂಗ್‌ಟಾಂಗ್​​ಗೆ ಈ ನಿಶ್ಚಿತಾರ್ಥ ಇಷ್ಟ ಇರಲಿಲ್ಲ ಹಾಗೂ ಇಷ್ಟು ಬೇಗ ಮದುವೆಯಾಗಲು ಇಷ್ಟವಿಲ್ಲದಿದ್ದರು, ತಾಯಿಯ ಒತ್ತಡಕ್ಕೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾಳೆ. ನಿಶ್ಚಿತಾರ್ಥ ಸಮಾರಂಭದಲ್ಲಿ ಟಾಂಗ್‌ಟಾಂಗ್ ಅವರ ತಾಯಿಗೆ ಆ ಹುಡುಗ 270,000 ಯುವಾನ್ (33,40,730 ರೂ.) ನೀಡಿದ್ದಾನೆ. ಆತನಿಗೆ ಕೆಟ್ಟ ಅಭ್ಯಾಸ ಇರುವ ಕಾರಣ ಟಾಂಗ್‌ಟಾಂಗ್​​​ಗೆ ಈ ನಿಶ್ಚಿತಾರ್ಥವನ್ನು ವಿರೋಧಿಸಿದಲ್ಲೂ, ಈ ನಿಶ್ಚಿತಾರ್ಥವನ್ನು ಮುರಿಯಲು ಆಕೆ ತುಂಬಾ ಪ್ರಯತ್ನ ಕೂಡ ಪಟ್ಟಿದ್ದಾಳೆ. ಆದರೆ ಆಕೆಯ ತಾಯಿಯ ಒತ್ತಡದಿಂದ ಆತನನ್ನು ನಿಶ್ಚಿತಾರ್ಥ ಮಾಡಿಕೊಂಡಿದ್ದಾಳೆ.

ನಿಶ್ಚಿತಾರ್ಥದ 17 ದಿನಗಳ ನಂತರ ಆಕೆ ಒಂದು ನಿರ್ಧಾರವನ್ನು ತೆಗೆದುಕೊಳ್ಳುತ್ತಾಳೆ. ತನ್ನ ಮನೆಯ ಸಮೀಪವಿರುವ ನದಿಗೆ ಹಾರಿ ಪ್ರಾಣ ಕಳೆದುಕೊಂಡಿದ್ದಾಳೆ. ಮಗಳ ಮರಣ ನಂತರ ಆಕೆಯ ತಾಯಿ ಹುಡುಗನಿಂದ ತೆಗೆದುಕೊಂಡ ಹಣವನ್ನು ಹಿಂದಿರುಗಿಸಲು ಆತ ಹೇಳುತ್ತಾನೆ. ತಾಯಿಯ ದುರಾಸೆಯಿಂದ ಮಗಳು ಪ್ರಾಣ ಕಳೆದುಕೊಂಡಲು, ಆದರೆ ಹುಡುಗ ಮಾತ್ರ ಆಕೆಯ ತಾಯಿಯನ್ನು ಬಿಡಲಿಲ್ಲ, ವರ ತಾನು ನೀಡಿದ ಹಣವನ್ನು ವಾಪಸ್ಸು ನೀಡುವಂತೆ ಒತ್ತಾಯಿಸುತ್ತಾನೆ, ಆದರೆ ಆಕೆಯ ತಾಯಿ 180,000 ಯುವಾನ್ ಮಾತ್ರ ನೀಡುತ್ತಾಳೆ.

ಇದನ್ನೂ ಓದಿ: ಅಡ್ಡಾದಿಡ್ಡಿ ಕಾರು ಚಲಾಯಿಸಿದ್ದನ್ನು ಪ್ರಶ್ನಿಸಿದ್ದಕ್ಕೆ ಯುವಕನ ಕೊಲೆ

ಹುಡುಗ ನನ್ನ ಜತೆಗೆ ನಿಶ್ಚಿತಾರ್ಥ ಮಾಡಿಕೊಳ್ಳದೆ, ನನಗೆ ಮೋಸ ಆಗಿದೆ. ನನ್ನ ಪೂರ್ತಿ ಹಣ ನೀಡಿ ಎಂದು ಆಕೆಗೆ ವರ ಒತ್ತಾಯಿಸಿದ್ದಾನೆ, ಇಲ್ಲ ನನಗೆ ನೀನು ನಿನ್ನ ವಯಸ್ಸಿನ ಬಗ್ಗೆ ಸುಳ್ಳು ಹೇಳಿದ್ದೀಯಾ, ಹಾಗಾಗಿ ನಾನು ಪೂರ್ತಿ ಹಣ ನೀಡುವುದಿಲ್ಲ ಎಂದು ಟಾಂಗ್‌ಟಾಂಗ್​​ನ ತಾಯಿ ಹೇಳುತ್ತಾಳೆ. ಇದಕ್ಕೆ ಹುಡುಗನ ಮನೆಯವರು ಆಕೆಯ ಅಂಗಡಿಗೆ ಅಡ್ಡಕಟ್ಟಿ, ಹಣ ನೀಡುವಂತೆ ಧ್ವನಿವರ್ಧಕದಲ್ಲಿ ಲೂಪ್‌ನಲ್ಲಿ ಸಂದೇಶಗಳನ್ನು ಪ್ಲೇ ಮಾಡಿದ್ದಾರೆ. ಆ ಹುಡುಗಿಯ ಸಾವಿಗೆ ಆಕೆಯ ತಾಯಿ ಮತ್ತು ಮ್ಯಾಚ್‌ಮೇಕರ್ ಕಾರಣ ಎಂದು ಜನರು ದೂರಿದ್ದಾರೆ. ಆದರೆ ಇಂತಹ ಘಟನೆಗಳು ಚೀನಾದಲ್ಲಿ ಹೆಚ್ಚಾಗಿದೆ ಎಂದು ಹೇಳಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ತಾಜಾ ಸುದ್ದಿ
ಹಾಲಿನ ದರ ಹೆಚ್ಚಳ ಮಾಡಿದ್ದು ಸರ್ಕಾರವಲ್ಲ, ಕೆಎಂಎಫ್ ಎಂದಿದ್ದ ಸಿಎಂ ಉಲ್ಟಾ!
ಹಾಲಿನ ದರ ಹೆಚ್ಚಳ ಮಾಡಿದ್ದು ಸರ್ಕಾರವಲ್ಲ, ಕೆಎಂಎಫ್ ಎಂದಿದ್ದ ಸಿಎಂ ಉಲ್ಟಾ!
ಚುನಾಯಿತ ಜನಪ್ರತಿನಿಧಿ ಎಲ್ಲ ಸಮುದಾಯಳಿಗಾಗಿ ದುಡಿಯಬೇಕು: ಪ್ರಿಯಾಂಕ್ ಖರ್ಗೆ
ಚುನಾಯಿತ ಜನಪ್ರತಿನಿಧಿ ಎಲ್ಲ ಸಮುದಾಯಳಿಗಾಗಿ ದುಡಿಯಬೇಕು: ಪ್ರಿಯಾಂಕ್ ಖರ್ಗೆ
ಮೂರು ಡಿಸಿಎಂ ಬೇಡಿಕೆ ಈಗಿನ ಡಿಸಿಎಂಗೆ ಮೂಗುದಾರ ಹಾಕುವ ಹುನ್ನಾರ: ಸಿಟಿ ರವಿ
ಮೂರು ಡಿಸಿಎಂ ಬೇಡಿಕೆ ಈಗಿನ ಡಿಸಿಎಂಗೆ ಮೂಗುದಾರ ಹಾಕುವ ಹುನ್ನಾರ: ಸಿಟಿ ರವಿ
ಮೈಸೂರಲ್ಲಿಂದು ಬೆಳ್ಳಂಬೆಳಗ್ಗೆಯೇ ಮಳೆ, ಮಕ್ಕಳನ್ನು ಶಾಲೆಗೆ ಕಳಿಸಲು ತಾಪತ್ರಯ
ಮೈಸೂರಲ್ಲಿಂದು ಬೆಳ್ಳಂಬೆಳಗ್ಗೆಯೇ ಮಳೆ, ಮಕ್ಕಳನ್ನು ಶಾಲೆಗೆ ಕಳಿಸಲು ತಾಪತ್ರಯ
‘ನನ್ನನ್ನು ಯಾರೂ ಮಾತನಾಡಿಸೋಲ್ಲ’; ಜೈಲಲ್ಲಿ ಪವಿತ್ರಾ ಗೌಡ ಕಣ್ಣೀರು
‘ನನ್ನನ್ನು ಯಾರೂ ಮಾತನಾಡಿಸೋಲ್ಲ’; ಜೈಲಲ್ಲಿ ಪವಿತ್ರಾ ಗೌಡ ಕಣ್ಣೀರು
Daily Horoscope: ನಿಶ್ಚಿತವಾದ ವಿವಾಹವು ಅನ್ಯರಿಂದ ತಪ್ಪಿಹೋಗಬಹುದು
Daily Horoscope: ನಿಶ್ಚಿತವಾದ ವಿವಾಹವು ಅನ್ಯರಿಂದ ತಪ್ಪಿಹೋಗಬಹುದು
Daily Devotional: ಬ್ರಾಹ್ಮೀ ಮುಹೂರ್ತದ ಮಹತ್ವ ತಿಳಿದುಕೊಳ್ಳಿ
Daily Devotional: ಬ್ರಾಹ್ಮೀ ಮುಹೂರ್ತದ ಮಹತ್ವ ತಿಳಿದುಕೊಳ್ಳಿ
‘ಎಲ್ಲರಿಗೂ ಹೊಟ್ಟೆ ಉರಿ ಸರ್​’: ದರ್ಶನ್​ ನೋಡಲು ಬಂದ ಅಭಿಮಾನಿಯ ಮಾತು ಕೇಳಿ
‘ಎಲ್ಲರಿಗೂ ಹೊಟ್ಟೆ ಉರಿ ಸರ್​’: ದರ್ಶನ್​ ನೋಡಲು ಬಂದ ಅಭಿಮಾನಿಯ ಮಾತು ಕೇಳಿ
ಬಲವಾದ ಕಾರಣ ನೀಡಿ ದರ್ಶನ್​ ಭೇಟಿಗೆ ಬಂದ ಫ್ಯಾನ್ಸ್; ಆದರೆ ಸಿಗಲಿಲ್ಲ ಅವಕಾಶ
ಬಲವಾದ ಕಾರಣ ನೀಡಿ ದರ್ಶನ್​ ಭೇಟಿಗೆ ಬಂದ ಫ್ಯಾನ್ಸ್; ಆದರೆ ಸಿಗಲಿಲ್ಲ ಅವಕಾಶ
ಕಬಾಬ್​ಗೆ ಕಲರ್​ ಬಳಸಿದ್ರೆ 7 ವರ್ಷ ಜೈಲು, 10 ಲಕ್ಷ ರೂ.ದಂಡ
ಕಬಾಬ್​ಗೆ ಕಲರ್​ ಬಳಸಿದ್ರೆ 7 ವರ್ಷ ಜೈಲು, 10 ಲಕ್ಷ ರೂ.ದಂಡ