ಎಎಐ ಅಧಿಕಾರಿ ಮಹಿಳೆಯ ಉಡುಪಿನಲ್ಲಿ ಶವವಾಗಿ ಪತ್ತೆ

|

Updated on: Jun 25, 2024 | 9:25 AM

ಎಎಐ ಅಧಿಕಾರಿಯೊಬ್ಬರು ಮಹಿಳಾ ಉಡುಪಿನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಉತ್ತರಾಖಂಡದಲ್ಲಿ ಈ ಘಟನೆ ನಡೆದಿದೆ.

ಎಎಐ ಅಧಿಕಾರಿ ಮಹಿಳೆಯ ಉಡುಪಿನಲ್ಲಿ ಶವವಾಗಿ ಪತ್ತೆ
ಸಾಂದರ್ಭಿಕ ಚಿತ್ರ
Follow us on

ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ(ಎಎಐ) ಹಿರಿಯ ಅಧಿಕಾರಿಯೊಬ್ಬರು ತಮ್ಮ ಅಧಿಕೃತ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಉತ್ತರಾಖಂಡದ ಪಂತ್​ನಗರದಲ್ಲಿರುವ ವಿಮಾನ ನಿಲ್ದಾಣದ ಏರ್​ ಟ್ರಾಫಿಕ್ ಕಂಟ್ರೋಲ್ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಹಾಯಕ ವ್ಯವಸ್ಥಾಪಕ ಆಶಿಶ್ ಚೌನ್ಸಾಲಿ ಭಾನುವಾರ ರಾತ್ರಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ.

ಅವರು ತುಟಿಯಲ್ಲಿ ಲಿಪ್​ಸ್ಟಿಕ್ ಇತ್ತು, ಮಹಿಳೆಯ ಬಟ್ಟೆಯನ್ನು ಧರಿಸಿದ್ದರು, ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ಮ್ಯಾಕ್ಸಿ ಡ್ರೆಸ್​, ಬಿಂದಿ, ಲಿಪ್​ಸ್ಟಿಕ್ ಮತ್ತು ಬಳೆಗಳು ಸೇರಿದಂತೆ ಮಹಿಳೆಯರಂತೆ ಕಾಣುತ್ತಿದ್ದರು. ಸೋಮವಾರ ಅವರು ಕರ್ತವ್ಯಕ್ಕೆ ಹಾಜರಾಗಿರಲಿಲ್ಲ, ಒಮ್ಮೆ ಮನೆಗೆ ಹೋಗಿ ವಿಚಾರಿಸೋಣ ಎಂದು ಸಹೋದ್ಯೋಗಿಗಳು ಮನೆಗೆ ಬಂದಿದ್ದಾರೆ.

ಒಳಗಡೆಯಿಂದ ಮನೆ ಲಾಕ್​ ಆಗಿದ್ದ ಕಾರಣ, ಕೊಠಡಿಯ ಬಾಗಿಲು ಒಡೆದು ನೋಡಿದ್ದಾರೆ ಆಗ ಅವರು ನೇಣುಬಿಗಿದುಕೊಂಡು ಸಾವನ್ನಪ್ಪಿರುವುದು ಕಂಡುಬಂದಿದೆ. ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಷ್ಟರೊಳಗಾಗಲೇ ಅವರು ಮೃತಪಟ್ಟಿದ್ದರು ಎಂದು ವೈದ್ಯರು ಹೇಳಿದ್ದಾರೆ.

ಮತ್ತಷ್ಟು ಓದಿ:ಬಿಹಾರದ ಸೇತುವೆ ಕೆಳಗೆ ರುಂಡವಿಲ್ಲದ ಮಹಿಳೆ ಶವ ಅರೆನಗ್ನ ಸ್ಥಿತಿಯಲ್ಲಿ ಪತ್ತೆ

ದೈಹಿಕ ಹಲ್ಲೆಯೂ ಕಂಡುಬಂದಿಲ್ಲ, ಆ ಮನೆಯಲ್ಲಿ ಅವರ ಹೊರತಾಗಿ ಬೇರಾರು ಅಲ್ಲಿಗೆ ಬಂದಿದ್ದಾರೆ ಎಂದೆನಿಸುತ್ತಿರಲಿಲ್ಲ ಎಂದು ಎಸ್​ಎಸ್​ಪಿ ಮಂಜುನಾಥ್ ಟಿಸಿ ಹೇಳಿದ್ದಾರೆ. ಪೊಲೀಸರು ಎಲ್ಲಾ ಕೋನಗಳಲ್ಲಿ ತನಿಖೆ ನಡೆಸುತ್ತಿದ್ದಾರೆ, ಹಿಂದಿನ ದಿನ ರಾತ್ರಿ ಅವರೊಂದಿಗಿದ್ದ ಸಂಬಂಧಿ ಹಾಗೂ ಸಹೋದ್ಯೋಗಿಗಳ ವಿಚಾರಣೆ ನಡೆಸಲಾಗುತ್ತಿದೆ.

ಹಿಂದಿನ ದಿನ ರಾತ್ರಿ ಇಬ್ಬರು ಸಂಬಂಧಿಕರು ಅವರ ಮನೆಗೆ ಬಂದಿದ್ದರು, ಊಟ ಮಾಡಿ ತಮ್ಮ ಅಪಾರ್ಟ್​ಮೆಂಟ್​ಗೆ ಹೊಂದಿರುಗಿದ್ದರು. ಬೆಳಗ್ಗೆ 8 ಗಂಟೆಯ ಸಮಯದಲ್ಲಿ ಮಾವಿನ ತೋಟಕ್ಕೆ ಹೋಗಬೇಕೆಂದು ಎಲ್ಲರೂ ನಿರ್ಧರಿಸಿದ್ದರು , ಅಧಿಕಾರಿಗೆ ಕರೆ ಮಾಡಿದಾಗ ಸ್ವೀಕರಿಸಲಿಲ್ಲ, ಹಾಗಾಗಿ ಅಲ್ಲಿಗೆ ಬಂದು ಬಾಗಿಲು ಒಡೆದು ನೋಡಿದ್ದಾರೆ. ಆದರೆ ಅವರು ಮಹಿಳಾ ಉಡುಪಿನಲ್ಲಿ ಏಕೆ ಇದ್ದರು ಎಂಬುದರ ಬಗ್ಗೆ ತನಿಖೆ ಮಾಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.

ಪೊಲೀಸರು ಅಧಿಕಾರಿಯ ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರ ಅವರ ಸಾವಿಗೆ ಕಾರಣ ತಿಳಿಯಲಿದೆ ಎಂದಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ