ಏಕಾಏಕಿ 30 ಸಾವಿರ ಅಡಿ ಎತ್ತರದಿಂದ 9 ಸಾವಿರ ಅಡಿಗೆ ಇಳಿದ ವಿಮಾನ, ಪ್ರಯಾಣಿಕರ ಕಿವಿ, ಮೂಗಿನಲ್ಲಿ ರಕ್ತಸ್ರಾವ

ತೈವಾನ್​ಗೆ ಹೊರಟಿದ್ದ ಕೊರಿಯನ್ ಏರ್​ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದ ಹಿನ್ನೆಲೆಯಲ್ಲಿ ವಿಮಾನ ಏಕಾಏಕಿ 30 ಸಾವಿರ ಅಡಿಯಿಂದ 9 ಸಾವಿರ ಅಡಿಗೆ ಇಳಿದಿದ್ದು, ಪ್ರಯಾಣಿಕರಲ್ಲಿ ಆತಂಕ ಸೃಷ್ಟಿ ಮಾಡಿತ್ತು.

ಏಕಾಏಕಿ 30 ಸಾವಿರ ಅಡಿ ಎತ್ತರದಿಂದ 9 ಸಾವಿರ ಅಡಿಗೆ ಇಳಿದ ವಿಮಾನ, ಪ್ರಯಾಣಿಕರ ಕಿವಿ, ಮೂಗಿನಲ್ಲಿ ರಕ್ತಸ್ರಾವ
Image Credit source: India TV
Follow us
|

Updated on:Jun 25, 2024 | 8:58 AM

ತೈವಾನ್​ಗೆ ತೆರಳುತ್ತಿದ್ದ ಕೊರಿಯನ್ ಏರ್​ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದ ಹಿನ್ನೆಲೆಯಲ್ಲಿ ವಿಮಾನ ಏಕಾಏಕಿ 30 ಸಾವಿರ ಅಡಿಯಿಂದ 9 ಸಾವಿರ ಅಡಿಗೆ ಇಳಿದಿದ್ದು, ಪ್ರಯಾಣಿಕರಲ್ಲಿ ಆತಂಕ ಸೃಷ್ಟಿ ಮಾಡಿತ್ತು.

ಈಗಾಗಲೇ ಪ್ರಯಾಣಿಕರಿಗೆ ಆಕ್ಸಿಜನ್​ ಮಾಸ್ಕ್​ ಹಾಕಿಕೊಳ್ಳಲು ಸೂಚನೆ ನೀಡಲಾಗಿದ್ದರೂ ಕೂಡ, ಪ್ರಯಾಣಿಕರ ಕಿವಿ, ಹಾಗೂ ಮೂಗಿನಿಂದ ರಕ್ತಸ್ರಾವವನ್ನು ತಡೆಯಲು ಸಾಧ್ಯವಾಗಿಲ್ಲ. ಪೈಲಟ್​ ಕೂಡಲೇ ವಿಮಾನವನ್ನು ಹಿಂದಕ್ಕೆ ತಿರುಗಿಸಲು ನಿರ್ಧರಿಸಿದರು, ಇಂಚೆನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದರು. ತಕ್ಷಣ 13 ಪ್ರಯಾಣಿಕರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು.

ದಕ್ಷಿಣ ಕೊರಿಯಾದ ಯೋನ್​ಹಾಪ್ ಸುದ್ದಿಸಂಸ್ಥೆ ಪ್ರಕಾರ, ಶನಿವಾರ ಕೊರಿಯನ್ ಏರ್​ ವಿಮಾನ ಕೆಇ-189 ಕ್ಯಾಬಿನ್ ಪ್ರೆಶರೈಸೇಷನ್​ ಸಿಸ್ಟಮ್​ನಲ್ಲಿ ಹಠಾತ್ ದೋಷ ಕಂಡು ಬಂದಿತ್ತು.

ವಿಮಾನ 30 ಸಾವಿರ ಅಡಿಯಿಂದ ಹಠಾತ್ 9 ಸಾವಿರ ಅಡಿಗೆ ಕುಸಿಯಿತು, ಇದರಿಂದ ಕೆಲವು ಪ್ರಯಾಣಿಕರಿಗೆ ಆರೋಗ್ಯ ಸಮಸ್ಯೆ ಉಂಟಾಯಿತು. ಇಬ್ಬರು ಪ್ರಯಾಣಿಕರು ಎತ್ತರದಿಂದ ಹಠಾತ್ ಕುಸಿತ ಉಂಟಾಗಿದ್ದರಿಂದ ಕಿವಿ ಹಾಗೂ ಮೂಗಿನಲ್ಲಿ ರಕ್ತಸ್ರಾವವಾಯಿತು.

ಮತ್ತಷ್ಟು ಓದಿ: Bengaluru: ತಾಂತ್ರಿಕ ದೋಷ, ಬೆಂಗಳೂರು ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದ ವಿಮಾನ

ಇತರೆ 15 ಂಂದಿ ಕಿವಿ ನೋವು ಹಾಗೂ ಉಸಿರುಗಟ್ಟುವಿಕೆಯನ್ನು ಅನುಭವಿಸಿದರು. ಊಟ ನೀಡಿದ ಸ್ವಲ್ಪ ಸಮಯದಲ್ಲೇ ವಿಮಾನ ಕೆಳಕ್ಕೆ ವಾಲಿತು ಮತ್ತು ಕ್ಯಾಬಿನ್​ನಲ್ಲಿ ಅವ್ಯವಸ್ಥೆ ಉಂಟಾಯಿತು ಎಂದು ತೈವಾನ್ ಪ್ರಯಾಣಿಕರೊಬ್ಬರು ಹೇಳಿದ್ದಾರೆ.

ವಿಮಾನದಲ್ಲಿ ಮಕ್ಕಳು ಹೆದರಿ ಅಳುತ್ತಿದ್ದರು, ಘಟನೆ ಬಗ್ಗೆ ಕೊರಿಯನ್ ಏರ್​ ಪ್ರಯಾಣಿಕರ ಬಳಿ ಕ್ಷಮೆಯಾಚಿಸಿದೆ. ತಾಂತ್ರಿಕ ದೋಷದ ಕಾರಣಗಳ ಬಗ್ಗೆ ತನಿಖೆ ಪ್ರಾರಂಭಿಸಿದೆ. ಎಲ್ಲಾ ಅಗತ್ಯ ನಿರ್ವಹಣಾ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ವಿಮಾನಯಾನ ಪ್ರಯಾಣಿಕರಿಗೆ ಭರವಸೆ ನೀಡಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 8:58 am, Tue, 25 June 24

ತಾಜಾ ಸುದ್ದಿ