Bengaluru: ತಾಂತ್ರಿಕ ದೋಷ, ಬೆಂಗಳೂರು ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದ ವಿಮಾನ

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಇಂದು ಎರಡು ವಿಮಾನಗಳಲ್ಲಿ ತಾಂತ್ರಿಕ ದೋಷ ಕಂಡುಬಂದಿದೆ. ಎಐಎಕ್ಸ್ ಕನೆಕ್ಟ್ ವಿಮಾನವು ಟೇಕ್​ ಆಫ್ ಆದ ನಂತರದಲ್ಲಿ ತಾಂತ್ರಿಕ ದೋಷ ಕಂಡುಬಂದಿದ್ದು, ಆಕಾಶ್ ಏರ್​ಲೈನ್ಸ್​​ನ ವಿಮಾನವು ಟೇಕ್​ ಆಫ್ ಆಗುವ ಮುನ್ನವೇ ತಾಂತ್ರಿಕ ದೋಷ ಕಂಡುಬಂದಿದೆ.

Bengaluru: ತಾಂತ್ರಿಕ ದೋಷ, ಬೆಂಗಳೂರು ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದ ವಿಮಾನ
ಎಐಎಕ್ಸ್ ಕನೆಕ್ಟ್ ಏರ್​ಲೈನ್ಸ್ ವಿಮಾನImage Credit source: FILE
Follow us
|

Updated on:Mar 11, 2023 | 3:24 PM

ದೇವನಹಳ್ಳಿ: ಬೆಂಗಳೂರಿನಿಂದ ಲಖನೌಗೆ ಹೊರಟಿದ್ದ ಎಐಎಕ್ಸ್ ಕನೆಕ್ಟ್ ವಿಮಾನವು (AIX Airlines Flight) ಶನಿವಾರ (ಮಾರ್ಚ್ 11) ತಾಂತ್ರಿಕ ದೋಷದಿಂದ ಟೇಕ್ ಆಫ್ ಆದ 10 ನಿಮಿಷಗಳ ನಂತರ ದೇವನಹಳ್ಳಿ ಬಳಿ ಇರುವ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (Kempe Gowda International Airport, Bengaluru) ತುರ್ತು ಭೂಸ್ಪರ್ಶ ಮಾಡಿದೆ. ಪ್ರಯಾಣಿಕರಿಗೆ ಪರಿಯಾಯ ವ್ಯವಸ್ಥೆ ಮಾಡಲಾಗಿದೆ ಎಂದು ಏರ್ ಏಷ್ಯಾ ಅಧಿಕಾರಿಗಳು ತಿಳಿಸಿದ್ದಾರೆ. ಬೆಂಗಳೂರಿನಿಂದ ಲಕ್ನೋಗೆ ಕಾರ್ಯಾಚರಣೆ ನಡೆಸಲು ಉದ್ದೇಶಿಸಿರುವ i5-2472, ಸಣ್ಣ ತಾಂತ್ರಿಕ ಸಮಸ್ಯೆಯನ್ನು ಎದುರಿಸಿದೆ ಎಂದು ಎಐಎಕ್ಸ್ ಕನೆಕ್ಟ್ ವಕ್ತಾರರು ತಿಳಿಸಿದ್ದಾರೆ. ಮಾಹಿತಿಯ ಪ್ರಕಾರ, i5-2472 ವಿಮಾನವು ಶನಿವಾರ ಬೆಳಿಗ್ಗೆ 6.45 ಕ್ಕೆ ಟೇಕ್ ಆಫ್ ಆಗಿದ್ದು, ಬೆಳಿಗ್ಗೆ 9 ಗಂಟೆಗೆ ಲಕ್ನೋದಲ್ಲಿ ಇಳಿಯಬೇಕಿತ್ತು. ಆದಾಗ್ಯೂ, ಟೇಕ್ ಆಫ್ ಆದ ಕೆಲವೇ ನಿಮಿಷಗಳಲ್ಲಿ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ತುರ್ತು ಲ್ಯಾಂಡಿಂಗ್ ಮಾಡಲಾಯಿತು.

ಎಐಎಕ್ಸ್ ಕನೆಕ್ಟ್ ವಿಮಾನ ಮಾತ್ರವಲ್ಲದೆ, ಮತ್ತೊಂದು ವಿಮಾನದಲ್ಲಿ ಕೂಡ ತಾಂತ್ರಿಕ ದೋಷ ಕಂಡುಬಂದಿದೆ. ಆಕಾಶ್ ಏರ್​ಲೈನ್ಸ್​​ನ QP 1325 ವಿಮಾನದಲ್ಲಿ ತಾಂತ್ರಿಕ ದೋಷ ಕಂಡುಬಂದಿದೆ. ಆದರೆ ಟೇಕ್ ಆಫ್​ ಆಗುವ ಮುನ್ನವೇ ತಾಂತ್ರಿಕ ಸಮಸ್ಯೆ ಕಂಡುಬಂದ ಹಿನ್ನಲೆ ವಿಮಾನ ಹಾರಾಟ ನಡೆಸಿಲ್ಲ. ಬೆಂಗಳೂರಿನಿಂದ 175 ಜನರನ್ನು ಹೊತ್ತು ಅಹಮದಾಬಾದ್​ಗೆ ತೆರಳಬೇಕಿತ್ತು. ಅದರಂತೆ, ಬೆಳಗ್ಗೆ 11 ಗಂಟೆಗೆ ಪ್ರಯಾಣಿಕರನ್ನು ಕೂರಿಸಿಕೊಂಡು ಟ್ಯಾಕ್ಸಿ ಬೇನಲ್ಲಿ ಟೇಕ್​ಅಪ್​ಗೆ ಹೋಗುತ್ತಿತ್ತು. ಆದರೆ ಟೇಕ್ ಆಫ್​ಗೂ ಮುನ್ನ ತಾಂತ್ರಿಕ ಸಮಸ್ಯೆ ತಿಳಿದುಬಂದ ಹಿನ್ನಲೆ ವಿಮಾನವನ್ನು ವಾಪಸ್ ನಿಲ್ದಾಣಕ್ಕೆ ತರಲಾಯಿತು. ಪ್ರಯಾಣಿಕರಿಗೆ ಬೇರೆ ವಿಮಾನದ ವ್ಯವಸ್ಥೆ ಕಲ್ಪಿಸಲಾಯಿತು.

ಇದನ್ನೂ ಓದಿ: ಮಹಿಳಾ ದಿನ: ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಇಡೀ ಕಾರ್ಯಾಚರಣೆ ಸಂಪೂರ್ಣವಾಗಿ ಸುರಕ್ಷಿತವಾಗಿ ಮಹಿಳಾ ತಂಡದ ಸುಪರ್ದಿಯಲ್ಲಿತ್ತು!

ತಾಂತ್ರಿಕ ದೋಷದಿಂದಾಗಿ ವಿಮಾನಗಳು ತುರ್ತು ಭೂಸ್ಪರ್ಶ ಮಾಡುತ್ತವೆ. ಒಡಿಶಾದ ರಾಜಧಾನಿ ಭುವನೇಶ್ವರ ವಿಮಾನ ನಿಲ್ದಾಣದಲ್ಲಿ ಪಕ್ಷಿಯೊಂದು ಡಿಕ್ಕಿ ಹೊಡೆದ ಪರಿಣಾಮ ಬಿಜು ಪಟ್ನಾಯಕ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮಹಾರಾಷ್ಟ್ರದ ಪುಣೆಗೆ ಹೊರಟಿದ್ದ ಏರ್ ಏಷ್ಯಾ ವಿಮಾನ ತುರ್ತು ಭೂಸ್ಪರ್ಶ ಮಾಡಿತ್ತು. ಪುಣೆಗೆ ಹೊರಟಿದ್ದ ಏರ್ ಏಷ್ಯಾ ವಿಮಾನವು ಭುವನೇಶ್ವರದಿಂದ ಟೇಕ್ ಆಫ್ ಆದ ಕೆಲವೇ ನಿಮಿಷಗಳಲ್ಲಿ ಪಕ್ಷಿ ಹೊಡೆದಿದೆ. ತಕ್ಷಣ ಮಾಹಿತಿ ರವಾನಿಸಿ ತುರ್ತು ಭೂಸ್ಪರ್ಶ ಮಾಡಲಾಗಿತ್ತು.

ಈ ವರ್ಷದ ಜನವರಿ 16ರಂದು ಬೆಂಗಳೂರಿನಿಂದ ಪ್ಯಾರಿಸ್‌ಗೆ ತೆರಳಿದ್ದ ಏರ್ ಫ್ರಾನ್ಸ್ ವಿಮಾನ ಆಸ್ಟ್ರಿಯಾದ ವಿಯೆನ್ನಾದಲ್ಲಿ ತುರ್ತು ಭೂಸ್ಪರ್ಶ ಮಾಡಿತ್ತು. AF 203 ವಿಮಾನದಲ್ಲಿದ್ದ ಹೆಚ್ಚಿನ ಪ್ರಯಾಣಿಕರು ಪ್ಯಾರಿಸ್ ಮೂಲಕ ಅಮೆರಿಕ ಅಥವಾ ಕೆನಡಾಕ್ಕೆ ಹೋಗಬೇಕುತ್ತು. ಪ್ರಯಾಣಿಕರು ಸುಮಾರು ಹತ್ತು ಗಂಟೆಗಳ ಕಾಲ ವಿಯೆನ್ನಾ ವಿಮಾನ ನಿಲ್ದಾಣದಲ್ಲಿ ಆಹಾರ, ನೀರು ಅಥವಾ ಏರ್ ಫ್ರಾನ್ಸ್‌ನಿಂದ ಇತರೆ ಯಾವುದೇ ಮಾಹಿತಿಯಿಲ್ಲದೆ ಪರದಾಡಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:59 pm, Sat, 11 March 23

ತಾಜಾ ಸುದ್ದಿ