AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಗ್ಗೆ ನಿಮಗೆಷ್ಟು ಗೊತ್ತು

ಬೆಂಗಳೂರಿನ ಮಧ್ಯ ಭಾಗದಿಂದ ಸುಮಾರು 40 ಕಿ.ಮೀ ದೂರವಿರುವ ದೇವನಹಳ್ಳಿ ಬಳಿ ಒಟ್ಟು 4 ಸಾವಿರ ಎಕರೆ ಪ್ರದೇಶದಲ್ಲಿ 2008 ರಲ್ಲಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ನಿರ್ಮಾಣ ಮಾಡಲಾಯಿತು. ಇಲ್ಲಿಂದ ಪ್ರತಿನಿತ್ಯ ಎಷ್ಟು ಪ್ರಯಾಣಿಕರು ದೇಶ-ವಿದೇಶಕ್ಕೆ ಸಂಚರಿಸುತ್ತಾರೆ, ಟ್ಯಾಕ್ಸಿಗಳು ಎಷ್ಟು ಸಂಚಾರ ಮಾಡುತ್ತವೆ. ಈ ಎಲ್ಲದರ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.

ಕಿರಣ್ ಹನುಮಂತ್​ ಮಾದಾರ್
|

Updated on:Jun 21, 2024 | 6:19 PM

Share
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಬೆಂಗಳೂರಿನ ಮಧ್ಯ ಭಾಗದಿಂದ ಸುಮಾರು 40 ಕಿ.ಮೀ ದೂರದ ದೇವನಹಳ್ಳಿ ಬಳಿ,  ಒಟ್ಟು 4 ಸಾವಿರ ಎಕರೆ ಪ್ರದೇಶದಲ್ಲಿ 2008 ರಲ್ಲಿ ನಿರ್ಮಾಣವಾಯಿತು. 

1 / 8
ಮೊದಲು ಒಂದು ಟರ್ಮಿನಲ್​ನಿಂದ ಕೆಐಎಬಿ ಆರಂಭವಾಗಿದ್ದು, ಟರ್ಮಿನಲ್ 1 ರಿಂದ ಪ್ರತಿನಿತ್ಯ 30 ರಿಂದ 40 ಸಾವಿರ ಜನ ಪ್ರಯಾಣಿಕರು ಒಡಾಟ ನಡೆಸುತ್ತಿದ್ದರು. ಬಳಿಕ ಎರಡನೆ ಟರ್ಮಿನಲ್ ಆರಂಭದ ನಂತರ ಪ್ರಯಾಣಿಕರ ಪ್ರಯಾಣ ಸಂಖ್ಯೆ ಬರೊಬ್ಬರಿ 1 ಲಕ್ಷಕ್ಕೆ ಏರಿದೆ.

2 / 8
ಟರ್ಮಿನಲ್ 01 ಮತ್ತು 02 ರಿಂದ ನಿತ್ಯ ಒಂದು ಲಕ್ಷಕ್ಕೂ ಅಧಿಕ ಜನರು ಪ್ರಯಾಣ ಬೆಳಸುತ್ತಿದ್ದಾರೆ. ಒಂದು ವರ್ಷಕ್ಕೆ 37 ಮಿಲಿಯನ್ ಪ್ರಯಾಣಿಕರು ಕೆಂಪೇಗೌಡ ಏರ್ಪೋಟ್ ಮೂಲಕ ಪ್ರಯಾಣ ಬೆಳಸಿದರೆ, ವಿದೇಶಗಳಿಗೆ 4.67 ಮಿಲಿಯನ್  ಹಾಗೂ  ದೇಶದಲ್ಲಿ 32.86 ಮಿಲಿಯನ್ ಪ್ರಯಾಣಿಕರು ಸಂಚರಿಸುತ್ತಿದ್ದಾರೆ. ಅದರಂತೆ ಪ್ರತಿವರ್ಷ ಒಂದು ಮಿಲಿಯನ್​ಗಿ‌ಂತಲೂ ಅಧಿಕ ಪ್ರಯಾಣಿಕರ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದೆ.

3 / 8
ಕೆಂಪೇಗೌಡ ಏರ್ಪೋಟ್ ನಿಂದ ಒಂದು ದಿನಕ್ಕೆ ದೇಶ ಹಾಗೂ ವಿದೇಶಗಳಿಗೆ ಸೇರಿ 760 ಟ್ರಿಪ್ ವಿಮಾನಗಳು ಸಂಚಾರ ಮಾಡುತ್ತವೆ. ಈ ಮೂಲಕ ದೇಶದಲ್ಲಿ ಅತಿ ಹೆಚ್ಚು ಪ್ರಯಾಣಿಕರು ಸಂಚಾರ ಮಾಡುವ ಮೂರನೆ ಅತಿದೊಡ್ಡ ವಿಮಾನ ನಿಲ್ದಾಣವಾಗಿ ಹೊರಹೊಮ್ಮಿದೆ.

4 / 8
ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ  4 ಕಿಲೋ ಮೀಟರ್ ಉದ್ದದ 2 ರನ್ ವೇಗಳು ( ಉತ್ತರಕ್ಕೊಂದು ಮತ್ತು ದಕ್ಷಿಣಕ್ಕೊಂದು ರನ್ ವೇ ) ಇವೆ. 1 ಲಕ್ಷ ಜನ ಪ್ರತಿನಿತ್ಯ ಎರಡು ಟರ್ಮಿನಲ್​ಗಳಿಂದ ಸಂಚರಿಸುತ್ತಾರೆ. ಸರಣಿ ರಜಾ ಹಾಗೂ ಪ್ರಮುಖ ದಿನಗಳಲ್ಲಿ ಒಂದೂವರೆ ಲಕ್ಷದವರೆಗೂ ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗುತ್ತದೆ.

5 / 8
ನಿತ್ಯ ಕೆಂಪೇಗೌಡ ಏರ್ಪೋರ್ಟ್​ನಿಂದ 25 ಸಾವಿರಕ್ಕೂ ಅಧಿಕ ವಾಹನಗಳ ಸಂಚಾರ ಮಾಡುತ್ತವೆ. ಅದರಲ್ಲಿ 10 ಸಾವಿರ ಒಲಾ ಉಬರ್ ಟ್ಯಾಕ್ಸಿಗಳು, ಒಂದು ಸಾವಿರದ ಐನೂರು ಏರ್ಪೋರ್ಟ್​ ಟ್ಯಾಕ್ಸಿಗಳಿವೆ. ಏರ್ಪೋರ್ಟ್​ನ‌ ಬಿಎಂಟಿಸಿ ಬಸ್​ಗಳಿಂದಲೂ ನಿತ್ಯ ಬೆಂಗಳೂರಿನ ವಿವಿದೆಡೆಗೆ 470 ಟ್ರಿಪ್ ಸಂಚರಿಸುತ್ತವೆ. 

6 / 8
ಹೆಚ್ಚು ಗಾರ್ಡನ್ ಹೊಂದಿರುವ ವಿಶ್ವದ ಕೆಲವೇ ವಿಮಾನ ನಿಲ್ದಾಣಗಳಲ್ಲಿ ಕೆಂಪೇಗೌಡ ಏರ್ಪೋರ್ಟ್​ ಕೂಡ ಸ್ಥಾನ ಪಡೆದಿದೆ. ಪ್ರಯಾಣಿಕರಿಗೆ ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ಪ್ರಯಾಣಕ್ಕೆ ಅನುಕೂಲ, ಗಾರ್ಡ‌ನ್ ಮತ್ತು ಭದ್ರತೆ ವಿಚಾರದಲ್ಲಿ ಕೆಂಪೇಗೌಡ ಏರ್ಪೋರ್ಟ್​ಗೆ ಪ್ರಶಸ್ತಿಗಳು ಒಲಿದಿದೆ.

7 / 8
ಟ್ಯಾಕ್ಸಿ, ಬಸ್, ರೈಲು ಹಾಗೂ ಮೆಟ್ರೋ ಸಂಪರ್ಕ ಹೊಂದಿರುವ ಕೆಂಪೇಗೌಡ ಏರ್ಪೋರ್ಟ್​ಗೆ 2026 ಕ್ಕೆ ಮೆಟ್ರೋ ರೈಲು ಕೂಡ ಬರಲಿದೆ. ಜೊತೆಗೆ ವಿಶಾಲವಾದ ರಸ್ತೆಗಳು, ಪಾರ್ಕಿಂಗ್, ಪಿಕಪ್ ಮತ್ತು ಡ್ರಾಪ್ ಪಾಯಿ‌ಂಟ್, ಐಷಾರಾಮಿ ಹೋಟೆಲ್ ಏರ್ಪೋಟ್ ಹೊಂದಿದೆ.

8 / 8

Published On - 6:14 pm, Fri, 21 June 24