ಕೆನಡಾಕ್ಕೆ ಖಲಿಸ್ತಾನಿ ಬೆದರಿಕೆಯನ್ನು ನೆನಪಿಸಲು 1985ರ ಕಾನಿಷ್ಕಾ ಫ್ಲೈಟ್ ಬಾಂಬ್ ಸ್ಫೋಟ ಉಲ್ಲೇಖಿಸಿದ ಭಾರತ

ಅಮೆರಿಕದಲ್ಲಿ ಅಲ್-ಖೈದಾದಿಂದ ವಿನಾಶಕಾರಿ 9/11 ದಾಳಿಯ ತನಕ, ಏರ್ ಇಂಡಿಯಾ ಫ್ಲೈಟ್ 182 ರ ಬಾಂಬ್ ದಾಳಿಯು ಇತಿಹಾಸದಲ್ಲಿ ಅತ್ಯಂತ ಕೆಟ್ಟ ಭಯೋತ್ಪಾದಕ ದಾಳಿಯಾಗಿತ್ತು. ಕೆನಡಾದ ಇತಿಹಾಸದಲ್ಲಿ ಇದು ಅತ್ಯಂತ ಭೀಕರ ಭಯೋತ್ಪಾದಕ ದಾಳಿಯಾಗಿದ್ದು ಇದರಲ್ಲಿ 270 ಕ್ಕೂ ಹೆಚ್ಚು ಕೆನಡಾದ ನಾಗರಿಕರು ಅದರಲ್ಲಿಯೂ ಭಾರತೀಯ ಮೂಲದವರು ಸೇರಿದಂತೆ ವಿಮಾನದಲ್ಲಿದ್ದ ಎಲ್ಲಾ 329 ಜನರ ಸಾವಿಗೀಡಾಗಿದ್ದರು.

ಕೆನಡಾಕ್ಕೆ ಖಲಿಸ್ತಾನಿ ಬೆದರಿಕೆಯನ್ನು ನೆನಪಿಸಲು 1985ರ ಕಾನಿಷ್ಕಾ ಫ್ಲೈಟ್ ಬಾಂಬ್ ಸ್ಫೋಟ ಉಲ್ಲೇಖಿಸಿದ ಭಾರತ
ಎಸ್. ಜೈಶಂಕರ್
Follow us
|

Updated on: Jun 24, 2024 | 7:45 PM

ಟೊರೊಂಟೊ/ದೆಹಲಿ ಜೂನ್ 24: ಕೆನಡಾದಲ್ಲಿ (Canada) ನೆಲೆಸಿರುವ ಖಲಿಸ್ತಾನಿ (Khalistani )ಘಟಕಗಳಿಂದ ಬೆದರಿಕೆಯ ಕುರಿತು ತನ್ನ ಕಳವಳವನ್ನು ಪುನರುಚ್ಚರಿಸಲು 1985 ರಲ್ಲಿ ಏರ್ ಇಂಡಿಯಾ ಫ್ಲೈಟ್ 182ದಲ್ಲಿ ನಡೆದ ಮಾರಣಾಂತಿಕ ಬಾಂಬ್ ದಾಳಿಯನ್ನು(1985 Kanishka flight bombing) ಭಾರತ ಉಲ್ಲೇಖಿಸಿದೆ. ಈ ದಾಳಿಯು ಭಯೋತ್ಪಾದನೆ ಏಕೆ ಎಂದಿಗೂ ಇರಬಾರದು ಎಂಬುದನ್ನು ನೆನಪಿಸುತ್ತದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಹೇಳಿದ್ದಾರೆ. ಭಾರತೀಯ ಅಧಿಕಾರಿಗಳು ಭಯೋತ್ಪಾದಕ ಎಂದು ಘೋಷಿಸಿದ್ದ ಖಲಿಸ್ತಾನಿ ಕಾರ್ಯಕರ್ತ ಹರ್ದೀಪ್ ಸಿಂಗ್ ನಿಜ್ಜಾರ್, ಹತ್ಯೆಯ ಮೊದಲ ವಾರ್ಷಿಕೋತ್ಸವದಂದು ಕೆನಡಾದ ಸಂಸತ್ತು ಒಂದು ನಿಮಿಷ ಮೌನ ಆಚರಿಸಿದ ಕೆಲವೇ ದಿನಗಳಲ್ಲಿ ಕನಿಷ್ಕಾ ವಿಮಾನದ ಬಾಂಬ್ ದಾಳಿಯ ಸಂತ್ರಸ್ತರಿಗೆ ಶ್ರದ್ಧಾಂಜಲಿ ಸಲ್ಲಿಸಲು ಒಟ್ಟಾವಾದಲ್ಲಿ ಭಾರತೀಯ ಹೈಕಮಿಷನ್ ಭಾನುವಾರ ಸಭೆ ಆಯೋಜಿಸಿದ್ದ ಬೆನ್ನಲ್ಲೇ ಜೈಶಂಕರ್ ಈ ಹೇಳಿಕೆ ನೀಡಿದ್ದಾರೆ.

ಅಮೆರಿಕದಲ್ಲಿ ಅಲ್-ಖೈದಾದಿಂದ ವಿನಾಶಕಾರಿ 9/11 ದಾಳಿಯ ತನಕ, ಏರ್ ಇಂಡಿಯಾ ಫ್ಲೈಟ್ 182 ರ ಬಾಂಬ್ ದಾಳಿಯು ಇತಿಹಾಸದಲ್ಲಿ ಅತ್ಯಂತ ಕೆಟ್ಟ ಭಯೋತ್ಪಾದಕ ದಾಳಿಯಾಗಿತ್ತು. ಕೆನಡಾದ ಇತಿಹಾಸದಲ್ಲಿ ಇದು ಅತ್ಯಂತ ಭೀಕರ ಭಯೋತ್ಪಾದಕ ದಾಳಿಯಾಗಿದ್ದು ಇದರಲ್ಲಿ 270 ಕ್ಕೂ ಹೆಚ್ಚು ಕೆನಡಾದ ನಾಗರಿಕರು ಅದರಲ್ಲಿಯೂ ಭಾರತೀಯ ಮೂಲದವರು ಸೇರಿದಂತೆ ವಿಮಾನದಲ್ಲಿದ್ದ ಎಲ್ಲಾ 329 ಜನರ ಸಾವಿಗೀಡಾಗಿದ್ದರು. ಇದರಲ್ಲಿ 24 ಮಂದಿ ಭಾರತೀಯರಾಗಿದ್ದರು.

ಇತಿಹಾಸದಲ್ಲಿ ಭಯೋತ್ಪಾದನೆಯ ಅತ್ಯಂತ ಕೆಟ್ಟ ಕೃತ್ಯಗಳಲ್ಲಿ ಒಂದಾಗಿದೆ. ಇದರ 39 ನೇ ವಾರ್ಷಿಕೋತ್ಸವದಂದು X ನಲ್ಲಿನ ಪೋಸ್ಟ್‌ನಲ್ಲಿ ಜೈಶಂಕರ್ ಅವರು 329 ಸಂತ್ರಸ್ತ ಕಟುಂಬಗಳೊಂದಿಗೆ ನಮ್ಮ ಪ್ರಾರ್ಥನೆ ಇದೆ. “ಭಯೋತ್ಪಾದನೆಯನ್ನು ಎಂದಿಗೂ ಸಹಿಸಬಾರದು ಎಂಬುದನ್ನು ವಾರ್ಷಿಕೋತ್ಸವವು ನೆನಪಿಸುತ್ತದೆ” ಎಂದು ಅವರು ಹೇಳಿದರು.

ಇತ್ತೀಚಿನ ತಿಂಗಳುಗಳಲ್ಲಿ ಕೆನಡಾದ ಅಧಿಕಾರಿಗಳು ಖಲಿಸ್ತಾನ್ ಪರ ಅಂಶಗಳ ಚಟುವಟಿಕೆಗಳ ಬಗ್ಗೆ ಕಣ್ಣುಮುಚ್ಚಿ ಕುಳಿತಿರುವುದನ್ನು ಸ್ಪಷ್ಟವಾಗಿ ಉಲ್ಲೇಖಿಸಿ, ಒಟ್ಟಾವಾದಲ್ಲಿ ನಡೆದ ಸಮಾರಂಭದಲ್ಲಿ ಭಾರತೀಯ ಹೈಕಮಿಷನರ್ ಸಂಜಯ್ ವರ್ಮಾ ಅವರು “ವಿಶ್ವದ ಯಾವುದೇ ಸರ್ಕಾರವು ಭಯೋತ್ಪಾದನೆಯ ಬೆದರಿಕೆಯನ್ನು ಕಡೆಗಣಿಸಬಾರದು.ಇವು ರಾಜಕೀಯ ಲಾಭಕ್ಕಾಗಿ ತನ್ನ ಪ್ರದೇಶಗಳಿಂದ ಹೊರಹೊಮ್ಮುತ್ತಿದೆ. ಅಸ್ಥಿರ ರಾಜಕೀಯ ಹಿತಾಸಕ್ತಿಗಳಿಗಿಂತ ಮಾನವ ಜೀವನವು ಹೆಚ್ಚು ಮುಖ್ಯವಾಗಿದೆ ಎಂದಿದ್ದಾರೆ.

ಎಲ್ಲಾ ಭಯೋತ್ಪಾದನಾ ಚಟುವಟಿಕೆಗಳನ್ನು “ಅನುಕರಣೀಯ ಕಾನೂನು ಮತ್ತು ಸಾಮಾಜಿಕ ಕ್ರಮಗಳೊಂದಿಗೆ ಎದುರಿಸಬೇಕು” ಮತ್ತು ಸರ್ಕಾರಗಳು, ಭದ್ರತಾ ಏಜೆನ್ಸಿಗಳು ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳು ಭಯೋತ್ಪಾದಕ ಜಾಲಗಳನ್ನು ಕಿತ್ತೊಗೆಯಲು, ಅವರ ಹಣಕಾಸುವನ್ನು ಅಡ್ಡಿಪಡಿಸಲು ಮತ್ತು ಅವರ “ತಿರುಚಿದ ಸಿದ್ಧಾಂತಗಳನ್ನು” ಎದುರಿಸಲು ಒಟ್ಟಾಗಿ ಕೆಲಸ ಮಾಡಬೇಕು ಎಂದು ವರ್ಮಾ ಹೇಳಿದರು.

ಇದನ್ನೂ ಓದಿ: Excise Policy case: ಕೇಜ್ರಿವಾಲ್ ಜಾಮೀನಿಗೆ ಇಡಿ ತಡೆಯಾಜ್ಞೆ ಮನವಿ; ದೆಹಲಿ ಹೈಕೋರ್ಟ್​ನಿಂದ ಮಂಗಳವಾರ ತೀರ್ಪು ಪ್ರಕಟ

ಕಾನಿಷ್ಕ ಬಾಂಬ್ ದಾಳಿ ಸೇರಿದಂತೆ ಭಯೋತ್ಪಾದನೆಯನ್ನು ವೈಭವೀಕರಿಸುವ ಯಾವುದೇ ಕೃತ್ಯವನ್ನು ಖಂಡಿಸಬೇಕು ಎಂದು ಭಾರತೀಯ ಹೈಕಮಿಷನ್ ಹೊರಡಿಸಿದ ಹೇಳಿಕೆ ತಿಳಿಸಿದೆ. ಕೆನಡಾದಲ್ಲಿ ಅನೇಕ ಸಂದರ್ಭಗಳಲ್ಲಿ ಇಂತಹ ಕ್ರಮಗಳನ್ನು ವಾಡಿಕೆಯಂತೆ ಅನುಮತಿಸಲಾಗಿದೆ ಎಂಬುದು ದುರದೃಷ್ಟಕರ” ಎಂದು ಮಿಷನ್ ಹೇಳಿಕೆಯಲ್ಲಿ ತಿಳಿಸಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ