ಕೆನಡಾಕ್ಕೆ ಖಾಲಿಸ್ತಾನಿ ನಡೆಸಿದ ಹಳೆಯ ದಾಳಿ ಬಗ್ಗೆ ನೆನಪಿಸಿ ಸಂಸತ್ತಿನಲ್ಲಿ ಗುಮ್ಮಿದ ಚಂದ್ರ ಆರ್ಯ

ಖಾಲಿಸ್ತಾನಿ ಉಗ್ರರನ್ನು ಬೆಂಬಸಿ, ಭಾರತದ ವಿರುದ್ಧ ಮಾತನಾಡುತ್ತಿದ್ದ ಕೆನಡಾಕ್ಕೆ ಭಾರತ ಮೂಲದ ಕೆನಡಾ ಸಂಸದ ಚಂದ್ರ ಆರ್ಯ ಅವರು ತನ್ನ ತವರು ದೇಶದ ಪರ ಬ್ಯಾಟಿಂಗ್​​ ಮಾಡಿದ್ದಾರೆ. ಸಂಸತ್ತಿನಲ್ಲಿ ಖಾಲಿಸ್ತಾನಿ ಮಾಡಿದ ಒದೊಂದು ಪ್ರಮಾದವನ್ನು ನೆನಪಿಸಿದ್ದಾರೆ. 1985ರಲ್ಲಿ ಖಾಲಿಸ್ತಾನಿ ಉಗ್ರರರು 329 ಜನರ ಬಲಿ ತೆಗೆದುಕೊಂಡ ಘಟನೆ ಬಗ್ಗೆ ನೆನಪಿಸಿದ್ದಾರೆ. ಅಷ್ಟಕ್ಕೂ 1985 ನಡೆದ ಘಟನೆ ಏನು? ಇದಕ್ಕೂ ಭಾರತಕ್ಕೂ ಏನು ಸಂಬಂಧ, ಇಂದಿರಾ ಗಾಂಧಿ ಸಾವಿನ ಬಗ್ಗೆಯೂ ಕೆನಡಾ ಸಂಸತ್ತಿನಲ್ಲಿ ಚರ್ಚೆಯಾಗಿದೆ.

ಕೆನಡಾಕ್ಕೆ ಖಾಲಿಸ್ತಾನಿ ನಡೆಸಿದ ಹಳೆಯ ದಾಳಿ ಬಗ್ಗೆ ನೆನಪಿಸಿ ಸಂಸತ್ತಿನಲ್ಲಿ ಗುಮ್ಮಿದ ಚಂದ್ರ ಆರ್ಯ
ಚಂದ್ರ ಆರ್ಯ
Follow us
|

Updated on: Jun 21, 2024 | 3:43 PM

ಭಾರತದ ವಿರುದ್ಧ ಮಾತನಾಡುತ್ತಿದ್ದ ಕೆನಡಾಕ್ಕೆ, ಭಾರತ ಮೂಲದ ಕೆನಡಾದ ಸಂಸದ ಚಂದ್ರ ಆರ್ಯ (Chandra Arya) ಅವರು, ಉಗ್ರರ ದಾಳಿ ಬಗ್ಗೆ ಹಾಗೂ ಖಾಲಿಸ್ತಾನಿ ಮಾಡಿದ ಕೃತ್ಯಗಳ ಬಗ್ಗೆ ಕೆನಡಾ ಸಂಸತ್​​ನಲ್ಲಿ ನೆನಪಿಸಿದರು. ಇದೀಗ ಖಾಲಿಸ್ತಾನಿಗಳನ್ನು ಬೆಂಬಲಿಸುವ ಕೆನಡಾಕ್ಕೆ ತಕ್ಕ ಉತ್ತರವಾಗಿದೆ ಎಂದು ಹೇಳಬಹುದು. ಸಂಸತ್​​​ನಲ್ಲಿ ಪರೋಕ್ಷವಾಗಿ ಭಾರತದ ಪರ ಮಾತನಾಡಿದ ಅವರು 1985ರ ಏರ್ ಇಂಡಿಯಾ ಬಾಂಬ್ ಸ್ಫೋಟವನ್ನು ನೆನಪಿಸಿಕೊಂಡರು. ಈ ಕೃತ್ಯಕ್ಕೆ 329 ಜನರನ್ನು ಬಲಿ ತೆಗೆದುಕೊಂಡಿತು. ಈ ಘಟನೆಗೆ ಭಯೋತ್ಪಾದಕರೇ ಕಾರಣವಾಗಿದ್ದರು ಎಂದು ಹೇಳಿದ್ದಾರೆ.

ಇದರ ಜತೆಗೆ ಸಂಸತ್​​ನಲ್ಲಿ ಭಾರತದ ಮಾಜಿ ಪ್ರಧಾನಿ ಇಂದಿರಾ ಹತ್ಯೆ ಬಗ್ಗೆಯೂ ಮಾತನಾಡಿದ್ದಾರೆ. ಭಾರತದ ಮಾಜಿ ಪ್ರಧಾನಿ ಇಂದಿರಾ ಅವರನ್ನು ಹತ್ಯೆಯನ್ನು ಖಾಲಿಸ್ತಾನಿ ಬೆಂಬಲಿಗರು ಸಂಭ್ರಮಿಸಿದರು. ಇದು ಕತ್ತಲೆ ಶಕ್ತಿಗಳು ಮತ್ತೆ ಶಕ್ತಿಯುತವಾಗಿವೆ ಎಂಬುದನ್ನು ತೋರಿಸುತ್ತದೆ. ಇನ್ನು ಇತ್ತೀಚೆಗೆ ಕೆನಡಾದಲ್ಲಿ ನಡೆದ ಘಟನೆಗಳು ಹಿಂದೂ ಕೆನಡಿಯನ್ನರ ಕಳವಳ ಉಂಟು ಮಾಡಿದೆ ಎಂದು ಹೇಳಿದರು.

ಜೂನ್ 23 ರಂದು ಭಯೋತ್ಪಾದನೆ ದಾಳಿಗೆ ಬಲಿಯಾದ ಸಂತ್ರಸ್ತರ ರಾಷ್ಟ್ರೀಯ ಸ್ಮರಣಾರ್ಥ ದಿನವಾಗಿದೆ. 39 ವರ್ಷಗಳ ಹಿಂದೆ, ಇದೇ ದಿನ, ಏರ್ ಇಂಡಿಯಾ ಫ್ಲೈಟ್ 182ರಲ್ಲಿ ಬಾಂಬ್​​ ಇಟ್ಟು 329 ಪ್ರಯಾಣಿಕರು ಮತ್ತು ಸಿಬ್ಬಂದಿ ಹತ್ಯೆಗೆ ಖಾಲಿಸ್ತಾನಿ ಉಗ್ರರರು ಕಾರಣವಾಗಿದ್ದರು. ಇದು ಕೆನಡಾದ ಇತಿಹಾಸದಲ್ಲಿ ಅತಿದೊಡ್ಡ ಸಾಮೂಹಿಕ ಹತ್ಯೆಯಾಗಿದೆ ಎಂದು ಕೆನಡಾ ಸ್ಪೀಕರ್​​​​ ಮುಂದೆ ಹೇಳಿದರು.

ಆದರೆ ಇಂದು ನಮ್ಮ ದುರದೃಷ್ಟವಶಾತ್ ಈ ಘಟನೆ ಅನೇಕ ಕೆನಡಿನ್ನರಿಗೆ ನೆನಪಿಲ್ಲ ಎಂದು ಹೇಳಿದರು. ಕೆನಡಾ ಭಯೋತ್ಪಾದನ ಸಿದ್ಧಾಂತವನ್ನು ಬೆಂಬಲಿಸುವ ಕೆಲಸ ಮಾಡುತ್ತಿದೆ ಎಂದು ಹೇಳಿದರು. ಖಾಲಿಸ್ತಾನಿ ಉಗ್ರರರು ಭಾರತದ ಪ್ರಧಾನಿ ಸಾವನ್ನಪ್ಪಿದಾಗ ಸಂಭ್ರಮಿಸಿದೆ, ಕೆನಡಾ ಹಿಂದೂಗಳ ಹತ್ಯೆಗೆ ಸಂಚು ರೂಪಿಸಿದೆ. ಆದರೆ ನಾವು ಏರ್ ಇಂಡಿಯಾ ಬಾಂಬ್ ದಾಳಿಯಿಂದ ಸಾವನ್ನಪ್ಪಿರುವವರ ಕುಟುಂಬದ ಜತೆಗೆ ನಿಲ್ಲುತ್ತೇವೆ ಎಂದು ಹೇಳಿದರು.

ಇದನ್ನೂ ಓದಿ: ವಿದೇಶಿ ಪದವೀಧರರಿಗೆ ಯುಎಸ್ ಗ್ರೀನ್ ಕಾರ್ಡ್ ಭರವಸೆ ನೀಡಿದ ಡೊನಾಲ್ಡ್ ಟ್ರಂಪ್

ಜೂನ್ 23, 1985 ರಂದು, ಮಾಂಟ್ರಿಯಲ್-ಲಂಡನ್-ದೆಹಲಿ ಮಾರ್ಗದಲ್ಲಿ ಹಾರಾಟ ನಡೆಸುತ್ತಿದ್ದ ಏರ್ ಇಂಡಿಯಾ 182 ಕಾನಿಷ್ಕ ವಿಮಾನದ ಮೇಲೆ ಖಾಲಿಸ್ತಾನಿ ಭಯೋತ್ಪಾದಕರ ದಾಳಿ ನಡೆದಿತ್ತು. ಈ ದಾಳಿ ನಡೆದು 39 ವರ್ಷವಾಗಿದೆ. ಅದಕ್ಕೆ ಜೂನ್​​ 23ರಂದು ಸ್ಮರಣೆ ಮಾಡಿಕೊಳ್ಳಲಿದೆ.

ಇನ್ನು ಭಾರತವು ಯಾವಾಗಲೂ ಭಯೋತ್ಪಾದನೆಯ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿದೆ ಮತ್ತು ಭಯೋತ್ಪಾದನೆಯ ಸಮರ್ಥನೆ ಮತ್ತು ವೈಭವೀಕರಣವನ್ನು ವಿರೋಧಿಸುತ್ತದೆ ಎಂದು ಟೊರೊಂಟೊದಲ್ಲಿರುವ ಭಾರತದ ಕಾನ್ಸುಲೇಟ್ ಜನರಲ್ ಹೇಳಿದರು, ಇದು ಕಾನಿಷ್ಕ ಬಾಂಬ್ ಸ್ಫೋಟವನ್ನು ಜಗತ್ತಿಗೆ ನೆನಪಿಸಿತು ಮತ್ತು ಇದು ಅತ್ಯಂತ ಹೇಯ ಭಯೋತ್ಪಾದಕ ಕೃತ್ಯಗಳಲ್ಲಿ ಒಂದಾಗಿದೆ ಎಂದು ಹೇಳಿದರು.

ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ
ನನ್ನ ವಿರುದ್ಧ ಸೋತಿದ್ದಕ್ಕೆ ಸೋಮಣ್ಣಗೆ ಮಂತ್ರಿಯಾಗುವ ಯೋಗ! ಸಿದ್ದರಾಮಯ್ಯ
ನನ್ನ ವಿರುದ್ಧ ಸೋತಿದ್ದಕ್ಕೆ ಸೋಮಣ್ಣಗೆ ಮಂತ್ರಿಯಾಗುವ ಯೋಗ! ಸಿದ್ದರಾಮಯ್ಯ
ಬೆಳಗಿನ ಕಾಮೆಂಟ್​ಗೆ ವ್ಯತಿರಿಕ್ತವಾಗಿ ಕುಮಾರಸ್ವಾಮಿ, ಸಿಎಂ ಸಭೆಗೆ ಹಾಜರು!
ಬೆಳಗಿನ ಕಾಮೆಂಟ್​ಗೆ ವ್ಯತಿರಿಕ್ತವಾಗಿ ಕುಮಾರಸ್ವಾಮಿ, ಸಿಎಂ ಸಭೆಗೆ ಹಾಜರು!
ಸಭೆಗೆ ಬಂದ ಕುಮಾರಸ್ವಾಮಿಯನ್ನು ಸ್ವಾಗತಿಸಿದ ಸಿದ್ದರಾಮಯ್ಯ: ವಿಡಿಯೋ ನೋಡಿ
ಸಭೆಗೆ ಬಂದ ಕುಮಾರಸ್ವಾಮಿಯನ್ನು ಸ್ವಾಗತಿಸಿದ ಸಿದ್ದರಾಮಯ್ಯ: ವಿಡಿಯೋ ನೋಡಿ
‘ದರ್ಶನ್​ ಜೈಲಿಗೆ ಹೋದಮೇಲೆ ನನ್ನ ಮಗಳು ಸರಿಯಾಗಿ ಊಟ ಮಾಡುತ್ತಿಲ್ಲ’
‘ದರ್ಶನ್​ ಜೈಲಿಗೆ ಹೋದಮೇಲೆ ನನ್ನ ಮಗಳು ಸರಿಯಾಗಿ ಊಟ ಮಾಡುತ್ತಿಲ್ಲ’
ಶ್ರೀಗಳು ಸ್ಥಾನ ಬಿಟ್ಟುಕೊಡಿ ಅಂದಿದ್ದು ಸಿದ್ದರಾಮಯ್ಯರನ್ನು ವಿಚಲಿತರಾಗಿಸಿದೆ
ಶ್ರೀಗಳು ಸ್ಥಾನ ಬಿಟ್ಟುಕೊಡಿ ಅಂದಿದ್ದು ಸಿದ್ದರಾಮಯ್ಯರನ್ನು ವಿಚಲಿತರಾಗಿಸಿದೆ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಾಳೆಯೂ ಶಾಲೆಗ, ಕಾಲೇಜುಗಳಿಗೆ ರಜೆ ಘೋಷಣೆ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಾಳೆಯೂ ಶಾಲೆಗ, ಕಾಲೇಜುಗಳಿಗೆ ರಜೆ ಘೋಷಣೆ
ಕೆಪಿಸಿಸಿ ಅಧ್ಯಕ್ಷ ಸ್ಥಾನ ಸಿಕ್ಕರೆ ರಾಜಣ್ಣ ಮಂತ್ರಿ ಸ್ಥಾನ ತ್ಯಜಿಸುತ್ತಾರೆ?
ಕೆಪಿಸಿಸಿ ಅಧ್ಯಕ್ಷ ಸ್ಥಾನ ಸಿಕ್ಕರೆ ರಾಜಣ್ಣ ಮಂತ್ರಿ ಸ್ಥಾನ ತ್ಯಜಿಸುತ್ತಾರೆ?
ಆ ಶ್ರೀ ಸ್ಥಾನ ಬಿಟ್ಟುಕೊಡ್ತಾರಾ? ಕೇಳಿ ನಾನೇ ಸ್ವಾಮೀಜಿ ಆಗ್ತೇನೆ: ರಾಜಣ್ಣ
ಆ ಶ್ರೀ ಸ್ಥಾನ ಬಿಟ್ಟುಕೊಡ್ತಾರಾ? ಕೇಳಿ ನಾನೇ ಸ್ವಾಮೀಜಿ ಆಗ್ತೇನೆ: ರಾಜಣ್ಣ
ಕೆಂಪೇಗೌಡರ ಜಯಂತಿಯಲ್ಲಿ ಹಾಸನ ಡಿಸಿ ಕಣ್ಣೀರು, ಕಾರಣವೇನು ಗೊತ್ತಾ?
ಕೆಂಪೇಗೌಡರ ಜಯಂತಿಯಲ್ಲಿ ಹಾಸನ ಡಿಸಿ ಕಣ್ಣೀರು, ಕಾರಣವೇನು ಗೊತ್ತಾ?
ಚಂದ್ರಶೇಖರ ಶ್ರೀಗಳು ನೀಡಿದ ಹೇಳಿಕೆಗೆ ಆರ್ ಅಶೋಕ ತಮ್ಮ ವ್ಯಾಖ್ಯಾನ ನೀಡಿದರು!
ಚಂದ್ರಶೇಖರ ಶ್ರೀಗಳು ನೀಡಿದ ಹೇಳಿಕೆಗೆ ಆರ್ ಅಶೋಕ ತಮ್ಮ ವ್ಯಾಖ್ಯಾನ ನೀಡಿದರು!