ಬಿಹಾರದ ಸೇತುವೆ ಕೆಳಗೆ ರುಂಡವಿಲ್ಲದ ಮಹಿಳೆ ಶವ ಅರೆನಗ್ನ ಸ್ಥಿತಿಯಲ್ಲಿ ಪತ್ತೆ
ಬಿಹಾರದಲ್ಲಿ ಅಪರಿಚಿತ ಮಹಿಳೆಯ ಶವ ಸೇತುವೆ ಕೆಳಗೆ ಪತ್ತೆಯಾಗಿದೆ. ಮಹಿಳೆ ಹಳದಿ ಲೆಗ್ಗಿಂಗ್ ಧರಿಸಿದ್ದಳು. ಮೃತದೇಹವನ್ನು ಸೀರೆಯಿಂದ ಮುಚ್ಚಲಾಗಿತ್ತು. ಆಕೆಯ ತಲೆ ಇನ್ನೂ ನಾಪತ್ತೆಯಾಗಿದ್ದು, ಪೊಲೀಸರು ಆಕೆಯ ತಲೆ ಹಾಗೂ ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ.
ಬಿಹಾರ(Bihar)ದ ಜಮುಯಿ ಅಂಬಾ ಹಳ್ಳಿಯ ಪುಲಿಯಾ ಪ್ರದೇಶದ ಸೇತುವೆಯ ಕೆಳಗೆ ರುಂಡವಿಲ್ಲದ ಮಹಿಳೆ(Woman)ಯ ಶವ(Dead Body) ಅರೆನಗ್ನ ಸ್ಥಿತಿಯಲ್ಲಿ ಪತ್ತೆಯಾಗಿದೆ. ಪೊಲೀಸರು ಮಹಿಳೆಯ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಸದರ್ ಆಸ್ಪತ್ರೆಗೆ ಕಳುಹಿಸಿದ್ದಾರೆ ಮತ್ತು ಸ್ಥಳದಿಂದ ಮದ್ಯ, ಸ್ಪ್ರೈಟ್ ಮತ್ತು ನೀರಿನ ಬಾಟಲಿಗಳು ಸಹ ಪತ್ತೆಯಾಗಿವೆ. ಮಹಿಳೆಯ ಶವ ಪತ್ತೆಯಾದ ನಂತರ ಸ್ಥಳದಲ್ಲಿ ಸಂಚಲನ ಉಂಟಾಗಿದೆ. ಮೃತದೇಹದಿಂದ ದುರ್ವಾಸನೆಯೂ ಬರುತ್ತಿತ್ತು.
ಸದ್ಯ ತಲೆ ಪತ್ತೆಯಾಗದ ಕಾರಣ ಮೃತ ಮಹಿಳೆಯ ಗುರುತು ಪತ್ತೆಯಾಗಿಲ್ಲ. ಘಟನೆಗೆ ಕಾರಣಗಳು ಕೂಡ ತಿಳಿದುಬಂದಿಲ್ಲ. ಪೊಲೀಸರು ಮೃತದೇಹವನ್ನು ಗುರುತಿಸುವಲ್ಲಿ ನಿರತರಾಗಿದ್ದಾರೆ. ದುರ್ವಾಸನೆ ಬರುತ್ತಿದ್ದ ಕಾರಣ ಸ್ಥಳೀಯರು ಮಹಿಳೆಯ ಅರೆನಗ್ನ ಶವವನ್ನು ಮೋರಿಯೊಳಗೆ ಇರುವುದು ಪತ್ತೆ ಮಾಡಿದ್ದಾರೆ. ಬಳಿಕ ನಗರ ಠಾಣೆಗೆ ಮಾಹಿತಿ ನೀಡಲಾಗಿತ್ತು.
ಮೃತದೇಹವನ್ನು ನೋಡಿದರೆ ಮಹಿಳೆಯ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿರುವಂತೆ ಕಂಡು ಬರುತ್ತಿದೆ. ಮಹಿಳೆಯ ಗುರುತು ಮತ್ತು ಕತ್ತರಿಸಿದ ತಲೆಯ ಹುಡುಕಾಟದಲ್ಲಿ ಪೊಲೀಸರು ನಿರತರಾಗಿದ್ದಾರೆ.
ಮೃತ ಮಹಿಳೆಯನ್ನು ಗುರುತಿಸಲು ಪೊಲೀಸರು ಮೃತ ಮಹಿಳೆಯ ಫೋಟೋವನ್ನು ಸಮೀಪದ ಪೊಲೀಸ್ ಠಾಣೆಗಳಿಗೆ ಕಳುಹಿಸಿದ್ದಾರೆ. ಪೊಲೀಸರು ಎಲ್ಲಾ ಆಯಾಮಗಳಿಂದ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.
ಮತ್ತಷ್ಟು ಓದಿ: ಬೆಂಗಳೂರಿನಲ್ಲಿ ಡಬಲ್ ಮರ್ಡರ್; ಗಂಡ, ಮಕ್ಕಳನ್ನು ಬಿಟ್ಟು ತನ್ನ ಜೊತೆಗಿದ್ದ ಪ್ರಿಯತಮೆಯನ್ನೇ ಕೊಂದ ಪ್ರಿಯಕರ
ಮೃತ ಮಹಿಳೆಯ ವಯಸ್ಸು ಸುಮಾರು 30 ವರ್ಷ ಎಂದು ತೋರುತ್ತದೆ. ಮೃತ ಮಹಿಳೆ ಹಳದಿ ಬಣ್ಣದ ಲೆಗ್ಗಿಂಗ್ಸ್ ಧರಿಸಿದ್ದರು. ಮೃತದೇಹವನ್ನು ಸೀರೆಯಿಂದ ಮುಚ್ಚಲಾಗಿತ್ತು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ