ಭಾರತವಿಲ್ಲದೆ ನಮ್ಮ ಆರ್ಥಿಕತೆ ನಡೆಯಲು ಸಾಧ್ಯವಿಲ್ಲ, ತಪ್ಪಿನ ಅರಿವಾಗಿದೆ, ಭಾರತಕ್ಕೆ ಮಾಲ್ಡೀವ್ಸ್ ವಿದೇಶಾಂಗ ಸಚಿವ ಭೇಟಿ

ಮಾಲ್ಡೀವ್ಸ್​​​​​ಗೆ ತನ್ನ ತಪ್ಪಿನ ಅರಿವಾಗಿದೆ. ಕೆಟ್ಟ ಮೇಲೆ ಬುದ್ಧಿ ಬಂದಿದೆ ಮಾಲ್ಡೀವ್ಸ್​​ಗೆ. ಭಾರತ ವಿರುದ್ಧ ವಿಷಕಾರುತ್ತಿದ್ದ ಈ ದೇಶಕ್ಕೆ ಈಗ ಬುದ್ಧಿ ಬಂದಿದೆ. ಭಾರತದ ಜತೆಗಿನ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸಲು, ತನ್ನ ಆರ್ಥಿಕತೆಗೆ ಉಂಟಾಗಿರುವ ನಷ್ಟವನ್ನು ತುಂಬಲು ಭಾರತದಿಂದ ಮಾತ್ರ ಸಾಧ್ಯ ಎಂದು ಹೇಳಿದೆ. ಇದೀಗ ಮಾಲ್ಡೀವ್ಸ್​​ನ ವಿದೇಶಾಂಗ ಸಚಿವ ಭಾರತಕ್ಕೆ ಬರುತ್ತಿದ್ದಾರೆ.

ಭಾರತವಿಲ್ಲದೆ ನಮ್ಮ ಆರ್ಥಿಕತೆ ನಡೆಯಲು ಸಾಧ್ಯವಿಲ್ಲ, ತಪ್ಪಿನ ಅರಿವಾಗಿದೆ, ಭಾರತಕ್ಕೆ ಮಾಲ್ಡೀವ್ಸ್ ವಿದೇಶಾಂಗ ಸಚಿವ ಭೇಟಿ
Follow us
|

Updated on:May 08, 2024 | 12:25 PM

ಉಪ್ಪು ತಿಂದ ಮೇಲೆ ನೀರು ಕುಡಿಯಲೇಬೇಕು, ಮಾಲ್ಡೀವ್ಸ್‌ ಸ್ಥಿತಿ ಕೂಡ ಈಗ ಅದೇ ರೀತಿಯಾಗಿದೆ. ಚೀನಾದ ಕೈಯಲ್ಲಿ ಗೊಂಬೆಯಂತೆ ಕುಣಿದ ಮಾಲ್ಡೀವ್ಸ್‌ ಇದೀಗ ಆರ್ಥಿಕ ಸಂಕಷ್ಟ ಎದುರಿಸುತ್ತಿದೆ. ಭಾರತ ವಿರುದ್ಧ ಹೇಳಿಕೆಯನ್ನು ನೀಡಿ ಮಾಲ್ಡೀವ್ಸ್‌ ಕೈ ಸುಟ್ಟುಕೊಂಡಿದೆ. ಇದೀಗ ತನ್ನ ತಪ್ಪಿನ ಅರಿವು ಮಾಲ್ಡೀವ್ಸ್‌ ಗೊತ್ತಾಗಿದೆ. ಭಾರತವಿಲ್ಲದೆ ತನ್ನ ಆರ್ಥಿಕತೆ ನಡೆಯಲು ಸಾಧ್ಯವಿಲ್ಲ ಎಂದು ಮಾಲ್ಡೀವ್ಸ್‌ ತಿಳಿದಿದೆ. ಭಾರತೀಯರ ಹೆಚ್ಚಾಗಿ ಪ್ರವಾಸ ಮಾಡುತ್ತಿದ್ದ ಮಾಲ್ಡೀವ್ಸ್​​​​ಗೆ ಈಗ​​​​ ಪ್ರವಾಸಿಗರೇ ಇಲ್ಲದಂತಾಗಿದೆ. ಪ್ರಧಾನಿ ಮೋದಿ ಹಾಗೂ ಭಾರತ ವಿರುದ್ಧ ನೀಡಿದ ಒಂದು ಹೇಳಿಕೆ, ಮಾಲ್ಡೀವ್ಸ್​​ನ ಆರ್ಥಿಕತೆಯನ್ನೇ ತಲೆಕೆಳಗೆ ಮಾಡಿದೆ. ಇದೀಗ ಈ ನಷ್ಟವನ್ನು ತುಂಬಲು ಹಾಗೂ ತನ್ನ ಆರ್ಥಿಕತೆಯನ್ನು ಬಳಸಪಡಿಸಲು ಭಾರತದ ಅಗತ್ಯವಿದೆ ಎಂದು ಭಾರತದ ಜತೆಗೆ ಮಾತುಕತೆ ನಡೆಸಲು ಮಾಲ್ಡೀವ್ಸ್‌ ಮುಂದಾಗಿದೆ.

ಮಾಲ್ಡೀವ್ಸ್​​​ನಲ್ಲಿರುವ ಭಾರತ ಸೇನೆಯನ್ನು ವಾಪಸ್ಸು ಕರೆಸಿಕೊಳ್ಳವಂತೆ ಹೇಳಿತ್ತು. ಇದಕ್ಕಾಗಿ ಮೇ 10ವರೆಗೆ ಗಡುವು ನೀಡಿತ್ತು. ಆದರೆ ಇದೀಗ ಈ ಗಡುವು ಮುಗಿಯುವ ಮುನ್ನ ಅಂದರೆ ಮೇ 9ಕ್ಕೆ ಮಾಲ್ಡೀವ್ಸ್ ವಿದೇಶಾಂಗ ಸಚಿವರು ಭಾರತಕ್ಕೆ ಭೇಟಿ ನೀಡುತ್ತಿದ್ದಾರೆ. ಮಾಲ್ಡೀವ್ಸ್ ವಿದೇಶಾಂಗ ಸಚಿವ ಮೂಸಾ ಜಮೀರ್ ಅವರು ಗುರುವಾರ ಭಾರತಕ್ಕೆ ಬರುತ್ತಿದ್ದಾರೆ. ಈ ಬಗ್ಗೆ ಮಾಲ್ಡೀವ್ಸ್ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮಂಗಳವಾರ ತಿಳಿಸಿದೆ. ಈ ವೇಳೆ ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರನ್ನು ಭೇಟಿಯಾಗಿ ದ್ವಿಪಕ್ಷೀಯ ಮತ್ತು ಪ್ರಾದೇಶಿಕ ವಿಷಯಗಳ ಬಗ್ಗೆ ಚರ್ಚಿಸಲಿದ್ದಾರೆ.

ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಜ್ಜು ಈ ಹಿಂದೆ ಚೀನಾದ ಪರವಾಗಿದ್ದು, ಈ ಕಾರಣಕ್ಕೆ ಭಾರತದ 88 ಸೇನಾ ಸಿಬ್ಬಂದಿಗಳನ್ನು ವಾಪಸ್ಸು ಕರೆಸಿಕೊಳ್ಳುವಂತೆ ಹೇಳಿತ್ತು. ಮಾರ್ಚ್ 10 ಮತ್ತು ಮೇ 10ರ ಒಳಗಾಗಿ ತನ್ನ ಸೇನೆಯನ್ನು ಭಾರತಕ್ಕೆ ವಾಪಸ್ಸು ಕರೆಸಿಕೊಳ್ಳಬೇಕು ಎಂದು ಮಾಲ್ಡೀವ್ಸ್ ಫೆಬ್ರವರಿಯಲ್ಲಿ ಹೇಳಿತ್ತು. ಮಾಲ್ಡೀವ್ಸ್‌ನಲ್ಲಿ ನಿಯೋಜಿಸಲಾದ ಎಲ್ಲಾ 80 ಸೇನಾ ಸಿಬ್ಬಂದಿಯನ್ನು ಭಾರತ ಹಿಂತೆಗೆದುಕೊಳ್ಳುವುದಾಗಿ ಹೇಳಿತ್ತು, ಇದಕ್ಕೆ ಎರಡು ರಾಷ್ಟ್ರಗಳು ಒಪ್ಪಿಕೊಂಡಿತ್ತು.

ಕಳೆದ ಮೂರು ತಿಂಗಳಲ್ಲಿ ಭಾರತ ತನ್ನ ಸೇನೆಯನ್ನು ಎರಡು ತಂಡಗಳಾಗಿ ವಾಪಸ್ಸು ಕರೆಸಿಕೊಂಡಿದೆ. 88 ಭಾರತೀಯ ಸೈನಿಕರು, ಎರಡು ಹೆಲಿಕಾಪ್ಟರ್‌ಗಳು ಮತ್ತು ಒಂದು ಡಾರ್ನಿಯರ್ ವಿಮಾನವನ್ನು ಭಾರತ ಮಾಲ್ಡೀವ್ಸ್‌ನಲ್ಲಿ ನಿಯೋಜಿಸಿತ್ತು. ಎರಡು ಹೆಲಿಕಾಪ್ಟರ್‌ಗಳು ಮತ್ತು ಡ್ರೋನರ್ ವಿಮಾನಗಳನ್ನು ಭಾರತವು ಮಾಲ್ಡೀವ್ಸ್‌ಗೆ ನೀಡಿದೆ. ಇದೀಗ ಈ ಗೊಂದಲವನ್ನು ನಿವಾರಿಸಲು ಮಾಲ್ಡೀವ್ಸ್ ವಿದೇಶಾಂಗ ಸಚಿವರು ಭಾರತಕ್ಕೆ ಭೇಟಿ ನೀಡುತ್ತಿದ್ದಾರೆ. ಇನ್ನು ಭಾರತದಲ್ಲಿ ಚುನಾವಣೆ ನಡೆಯುತ್ತಿದ್ದು, ಈ ವೇಳೆಯೇ ಮಾಲ್ಡೀವ್ಸ್ ವಿದೇಶಾಂಗ ವ್ಯವಹಾರ ಸಚಿವರು ಭೇಟಿ ನೀಡುತ್ತಿರುವುದು ವಿಶೇಷವಾಗಿದೆ.

ಇದನ್ನೂ ಓದಿ: ಪಾಠ ಕಲಿಯದ ನೇಪಾಳ; ಭಾರತದ ಪ್ರದೇಶಗಳನ್ನು ತನ್ನ ನೋಟಿನಲ್ಲಿ ಮುದ್ರಿಸಲು ನಿರ್ಧಾರ

ಭಾರತಕ್ಕೆ ಮನವಿ ಮಾಡಿದ ಮಾಲ್ಡೀವ್ಸ್ ಪ್ರವಾಸೋದ್ಯಮ ಸಚಿವರು

ಉಭಯ ದೇಶಗಳ ನಡುವಿನ ಸಂಬಂಧ ಹದಗೆಟ್ಟಿರುವ ಮಧ್ಯೆ, ಮಾಲ್ಡೀವ್ಸ್ ಪ್ರವಾಸೋದ್ಯಮ ಸಚಿವ ಇಬ್ರಾಹಿಂ ಫೈಸಲ್ ಸೋಮವಾರ ತಮ್ಮ ದೇಶದ ಪ್ರವಾಸೋದ್ಯಮಕ್ಕೆ ಆರ್ಥಿಕ ಬಲ ನೀಡುವಂತೆ ಭಾರತದ ಪ್ರವಾಸಿಗರಿಗೆ ಮನವಿ ಮಾಡಿದ್ದಾರೆ. ನಮಗೊಂದು ಇತಿಹಾಸವಿದೆ. ಭಾರತದ ಜತೆಗೆ ನಮ್ಮ ಸರ್ಕಾರ ಕೂಡ ಒಟ್ಟಾಗಿ ಕೆಲಸ ಮಾಡಲಿದೆ ಎಂದು ಹೇಳಿದರು. ನಾವು ಯಾವಾಗಲೂ ಶಾಂತಿ ಮತ್ತು ಸೌಹಾರ್ದ ಪರಿಸರಕ್ಕೆ ಬೆಂಬಲ ನೀಡುತ್ತೇವೆ. ನಮ್ಮ ಜನರು ಮತ್ತು ಸರ್ಕಾರವು ಭೇಟಿ ನೀಡುವ ಭಾರತೀಯರನ್ನು ಆತ್ಮೀಯವಾಗಿ ಸ್ವಾಗತಿಸುತ್ತದೆ. ಪ್ರವಾಸೋದ್ಯಮ ಸಚಿವನಾಗಿ, ದಯವಿಟ್ಟು ಮಾಲ್ಡೀವ್ಸ್ ಪ್ರವಾಸೋದ್ಯಮದ ಭಾಗವಾಗಲು ನಾನು ಭಾರತೀಯರಿಗೆ ಹೇಳಲು ಬಯಸುತ್ತೇನೆ. ನಮ್ಮ ಆರ್ಥಿಕತೆಯು ಪ್ರವಾಸೋದ್ಯಮವನ್ನು ಅವಲಂಬಿಸಿದೆ ಎಂದು ಹೇಳಿದ್ದಾರೆ.

ಮೋದಿ ಮತ್ತು ಭಾರತವನ್ನು ಟೀಕಿಸಿದ್ದ ಮಾಲ್ಡೀವ್ಸ್

ಜನವರಿ 6 ರಂದು, ಪ್ರಧಾನಿ ಮೋದಿ ಅವರು ಲಕ್ಷದ್ವೀಪದ ಕೆಲವು ಚಿತ್ರಗಳು ಮತ್ತು ವೀಡಿಯೊಗಳನ್ನು ಎಕ್ಸ್​​​ನಲ್ಲಿ ಹಂಚಿಕೊಂಡಿದ್ದರು, ಈ ಬಗ್ಗೆ ಮಾಲ್ಡೀವ್ಸ್‌ನ ಮೂವರು ಸಚಿವರು ಸಾಮಾಜಿಕ ಭಾರತ ಮತ್ತು ಪ್ರಧಾನಿ ಮೋದಿ ವಿರುದ್ಧ ಅವಹೇಳನಕಾರಿ ಕಾಮೆಂಟ್‌ಗಳನ್ನು ಮಾಡಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಭಾರತದಲ್ಲಿ ತೀವ್ರ ವಿರುದ್ಧ ವ್ಯಕ್ತವಾಗಿದ್ದು, ಜನರು ಸಾಮಾಜಿಕ ಜಾಲತಾಣಗಳಲ್ಲಿ ಮಾಲ್ಡೀವ್ಸ್ ಅನ್ನು ಬಹಿಷ್ಕರಿಸಿ ಪ್ರವಾಸೋದ್ಯಮಕ್ಕೆ ಹೋಗುವುದಿಲ್ಲ ಎಂದು ಅಭಿಯಾನ ನಡೆಸಿದರು. ಇದರ ನಂತರ ಕಳೆದ ವರ್ಷದ ಮೊದಲ ನಾಲ್ಕು ತಿಂಗಳಿಗೆ ಹೋಲಿಸಿದರೆ ಈ ವರ್ಷದ ಮೊದಲ ನಾಲ್ಕು ತಿಂಗಳಲ್ಲಿ ಭಾರತದಿಂದ ಮಾಲ್ಡೀವ್ಸ್​​​ಗೆ ಹೋಗುವ ಪ್ರವಾಸಿಗರ ಸಂಖ್ಯೆ 42 ಪ್ರತಿಶತದಷ್ಟು ಕಡಿಮೆಯಾಗಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:05 am, Wed, 8 May 24

ಸಿಎಂ ಸಿದ್ದರಾಮಯ್ಯಗೆ ಧನ್ಯವಾದ ಹೇಳಿದ ದುನಿಯಾ ವಿಜಯ್; ಕಾರಣವೇನು?
ಸಿಎಂ ಸಿದ್ದರಾಮಯ್ಯಗೆ ಧನ್ಯವಾದ ಹೇಳಿದ ದುನಿಯಾ ವಿಜಯ್; ಕಾರಣವೇನು?
ಒಬ್ಬರೇ ಇದ್ದೀರಾ? ಭಯ ಅನಿಸುತ್ತಿದೆಯಾ? ಈ ವೇಳೆ ಜಪಿಸಬೇಕಾದ ನಾಮಗಳು ಇಲ್ಲಿವೆ
ಒಬ್ಬರೇ ಇದ್ದೀರಾ? ಭಯ ಅನಿಸುತ್ತಿದೆಯಾ? ಈ ವೇಳೆ ಜಪಿಸಬೇಕಾದ ನಾಮಗಳು ಇಲ್ಲಿವೆ
ಈ ರಾಶಿಯವರು ಗೊತ್ತಾಗದೇ ಕೆಟ್ಟವರ ಸಹವಾಸವನ್ನು ಮಾಡುವಿರಿ
ಈ ರಾಶಿಯವರು ಗೊತ್ತಾಗದೇ ಕೆಟ್ಟವರ ಸಹವಾಸವನ್ನು ಮಾಡುವಿರಿ
ಚಲಿಸುವಾಗಲೇ ನೀರಿನಲ್ಲಿ ತೇಲಿದ ಕಾರು; ಪ್ರಾಣದ ಹಂಗು ತೊರೆದು ಜನರ ರಕ್ಷಣೆ
ಚಲಿಸುವಾಗಲೇ ನೀರಿನಲ್ಲಿ ತೇಲಿದ ಕಾರು; ಪ್ರಾಣದ ಹಂಗು ತೊರೆದು ಜನರ ರಕ್ಷಣೆ
ಹೃದಯ ವಿದ್ರಾವಕ ಘಟನೆ: ಬೈಕ್‌ನಲ್ಲೇ ತಂದೆಯ ಶವ ಸಾಗಿಸಿದ ಮಕ್ಕಳು
ಹೃದಯ ವಿದ್ರಾವಕ ಘಟನೆ: ಬೈಕ್‌ನಲ್ಲೇ ತಂದೆಯ ಶವ ಸಾಗಿಸಿದ ಮಕ್ಕಳು
ಭಾರತದ ಷೇರುಪೇಟೆ ಇನ್ನೆಷ್ಟು ಬೇಗ ಡಬಲ್ ಆಗುತ್ತೆ?
ಭಾರತದ ಷೇರುಪೇಟೆ ಇನ್ನೆಷ್ಟು ಬೇಗ ಡಬಲ್ ಆಗುತ್ತೆ?
ಸುದ್ದಿಗೋಷ್ಠಿಗೂ ಮುನ್ನ ಸಿಎಂ- ಸಚಿವರುಗಳು ಪಿಸು ಪಿಸು ಮಾತು
ಸುದ್ದಿಗೋಷ್ಠಿಗೂ ಮುನ್ನ ಸಿಎಂ- ಸಚಿವರುಗಳು ಪಿಸು ಪಿಸು ಮಾತು
ಚಾಮುಂಡೇಶ್ವರಿ ತಾಯಿಗೆ ವಿಶೇಷ ಪೂಜೆ ಸಲ್ಲಿಸಿದ ನಿಖಿಲ್ ಕುಮಾರಸ್ವಾಮಿ
ಚಾಮುಂಡೇಶ್ವರಿ ತಾಯಿಗೆ ವಿಶೇಷ ಪೂಜೆ ಸಲ್ಲಿಸಿದ ನಿಖಿಲ್ ಕುಮಾರಸ್ವಾಮಿ
ಡ್ರೋನ್​​ನಲ್ಲಿ ಗಣಪತಿಯನ್ನು ವಿಸರ್ಜನೆ ಮಾಡಿದ ಯುವಕರು! ವಿಡಿಯೋ ನೋಡಿ
ಡ್ರೋನ್​​ನಲ್ಲಿ ಗಣಪತಿಯನ್ನು ವಿಸರ್ಜನೆ ಮಾಡಿದ ಯುವಕರು! ವಿಡಿಯೋ ನೋಡಿ
ಫ್ಲಿಪ್​ಕಾರ್ಟ್ ಬಿಗ್ ಬಿಲಿಯನ್ ಡೇ ಆಫರ್ ಸೇಲ್ 26ಕ್ಕೆ ಸ್ಟಾರ್ಟ್​!
ಫ್ಲಿಪ್​ಕಾರ್ಟ್ ಬಿಗ್ ಬಿಲಿಯನ್ ಡೇ ಆಫರ್ ಸೇಲ್ 26ಕ್ಕೆ ಸ್ಟಾರ್ಟ್​!