AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಡಿಶಾ: ಬೀಫ್ ಅಡುಗೆ ಮಾಡಿದ್ದಕ್ಕೆ 7 ಎಂಜಿನಿಯರಿಂಗ್ ವಿದ್ಯಾರ್ಥಿಗಳನ್ನು ಹಾಸ್ಟೆಲ್‌ನಿಂದ ಹೊರಹಾಕಿದ ಕಾಲೇಜು: ವರದಿ

 ಬೇರೊಂದು ವಿದ್ಯಾರ್ಥಿ ಗುಂಪಿನ ದೂರಿನ ಮೇರೆಗೆ ಕಾಲೇಜು ಅಧಿಕಾರಿಗಳು ಆರೋಪಗಳ ಕುರಿತು ವಿಚಾರಣೆ ನಡೆಸಿದರು. ವಿದ್ಯಾರ್ಥಿ ಕಾಲೇಜು ಆವರಣದಲ್ಲಿ ಕೆಲವು ನಿರ್ಬಂಧಿತ ಚಟುವಟಿಕೆಗಳಲ್ಲಿ ತೊಡಗಿದ್ದರು ಎಂದು ವಿಚಾರಣೆಯಿಂದ ತಿಳಿದುಬಂದಿದೆ, ಇದು ಅವರನ್ನು ಹೊರಹಾಕಲು ಕಾರಣವಾಯಿತು ಎಂದು ಇಂಡಿಯನ್ ಎಕ್ಸ್​​​ಪ್ರೆಸ್ ವರದಿ ಹೇಳಿದೆ.

ಒಡಿಶಾ: ಬೀಫ್ ಅಡುಗೆ ಮಾಡಿದ್ದಕ್ಕೆ 7 ಎಂಜಿನಿಯರಿಂಗ್ ವಿದ್ಯಾರ್ಥಿಗಳನ್ನು ಹಾಸ್ಟೆಲ್‌ನಿಂದ ಹೊರಹಾಕಿದ ಕಾಲೇಜು: ವರದಿ
ಪ್ರಾತಿನಿಧಿಕ ಚಿತ್ರ
ರಶ್ಮಿ ಕಲ್ಲಕಟ್ಟ
|

Updated on: Sep 16, 2024 | 12:59 PM

Share

ಭುವನೇಶ್ವರ್ ಸೆಪ್ಟೆಂಬರ್ 16: ಒಡಿಶಾದ (Odisha) ಬರ್ಹಾಂಪುರದ ಪರಲಾ ಮಹಾರಾಜ ಇಂಜಿನಿಯರಿಂಗ್ ಕಾಲೇಜಿನಲ್ಲಿ ಬೀಫ್ ಅಡುಗೆ ಮಾಡಿದ್ದಾರೆ ಎಂಬ ಆರೋಪದ ಮೇಲೆ ಏಳು ವಿದ್ಯಾರ್ಥಿಗಳನ್ನು ಹಾಸ್ಟೆಲ್‌ನಿಂದ ಹೊರಹಾಕಲಾಗಿದೆ. ಇದರ ಬೆನ್ನಲ್ಲೇ ಕಾಲೇಜಿನಲ್ಲಿ ಉದ್ವಿಗ್ನ ವಾತಾವಾರಣವುಂಟಾಗಿದ್ದು ಕಾಲೇಜು ಆವರಣದಲ್ಲಿ ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. “ಹಾಲ್ ಆಫ್ ರೆಸಿಡೆನ್ಸ್‌ನ ನಿಯಮಗಳು ಮತ್ತು ನೀತಿ ಸಂಹಿತೆ”ಗೆ ವಿರುದ್ಧವಾದ ‘ನಿರ್ಬಂಧಿತ ಚಟುವಟಿಕೆಗಳಲ್ಲಿ’ ವಿದ್ಯಾರ್ಥಿಗಳು ತೊಡಗಿಸಿಕೊಂಡಿದ್ದರಿಂದ ಅವರನ್ನು ಹೊರಹಾಕಲಾಗಿದೆ ಎಂದು ವಿದ್ಯಾರ್ಥಿಗಳ ಕಲ್ಯಾಣ ವಿಭಾಗದ ಡೀನ್ ಗುರುವಾರ ಅಧಿಸೂಚನೆಯಲ್ಲಿ ಹೇಳಿರುವುದಾಗಿ ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

ಆದಾಗ್ಯೂ, ಈ ನಿರ್ಬಂಧಿತ ಚಟುವಟಿಕೆಗಳು ಏನನ್ನು ಒಳಗೊಂಡಿವೆ ಎಂಬುದರ ಕುರಿತು ಯಾವುದೇ ಅಧಿಕೃತ ಕಾಮೆಂಟ್ ಇಲ್ಲ. ಮೂಲಗಳನ್ನು ಉಲ್ಲೇಖಿಸಿ, ಹೊರಹಾಕಲ್ಪಟ್ಟ ವಿದ್ಯಾರ್ಥಿಗಳಲ್ಲಿ ಒಬ್ಬರಿಗೆ ₹ 2,000 ದಂಡವನ್ನು ವಿಧಿಸಲಾಗಿದೆ ಎಂದು ಇಂಡಿಯನ್ ಇಂಡಿಯನ್ ಇಂಡಿಯನ್ ಎಕ್ಸ್‌ಪ್ರೆಸ್ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಬುಧವಾರ ರಾತ್ರಿ ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿಗಳು ‘ಬೀಫ್’ ಬೇಯಿಸಿದ್ದರು ಎನ್ನಲಾಗಿದೆ. ತರುವಾಯ, ಹಾಸ್ಟೆಲ್ ನಲ್ಲಿದ್ದ ಮತ್ತೊಂದು ಗುಂಪು ಘಟನೆಯನ್ನು ಡೀನ್‌ಗೆ ವರದಿ ಮಾಡಿದೆ.

“ವೈವಿಧ್ಯಮಯ ಸಮುದಾಯವಾಗಿ, ಎಲ್ಲಾ ವಿದ್ಯಾರ್ಥಿಗಳ ಮೌಲ್ಯಗಳು ಮತ್ತು ನಂಬಿಕೆಗಳನ್ನು ಗೌರವಿಸುವ ಪ್ರಾಮುಖ್ಯತೆಯನ್ನು ನಾವು ಅರ್ಥಮಾಡಿಕೊಂಡಿದ್ದೇವೆ. ಈ ಘಟನೆಯು (ಬೀಫ್ ಅಡುಗೆಯ ಆರೋಪ) ಅಶಾಂತಿ ಮತ್ತು ಅಸ್ವಸ್ಥತೆಯನ್ನು ಉಂಟುಮಾಡಿದೆ, ಇದು ಉದ್ವಿಗ್ನ ವಾತಾವರಣಕ್ಕೆ ಕಾರಣವಾಗಿದೆ. ಘಟನೆಯಲ್ಲಿ ಭಾಗಿಯಾಗಿರುವ ಹಾಸ್ಟೆಲ್ ವಾಸಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ದಯಮಾಡಿ ವಿನಂತಿಸುತ್ತೇನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಬಜರಂಗದಳ ಮತ್ತು ವಿಶ್ವ ಹಿಂದೂ ಪರಿಷತ್ ಸದಸ್ಯರು ಸಹ ಕಾಲೇಜಿಗೆ ಭೇಟಿ ನೀಡಿ ಪ್ರಾಂಶುಪಾಲರನ್ನು ಭೇಟಿ ಮಾಡಿ, ವಿದ್ಯಾರ್ಥಿಗಳ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿದರು.

ಬೇರೊಂದು ವಿದ್ಯಾರ್ಥಿ ಗುಂಪಿನ ದೂರಿನ ಮೇರೆಗೆ ಕಾಲೇಜು ಅಧಿಕಾರಿಗಳು ಆರೋಪಗಳ ಕುರಿತು ವಿಚಾರಣೆ ನಡೆಸಿದರು. ವಿದ್ಯಾರ್ಥಿ ಕಾಲೇಜು ಆವರಣದಲ್ಲಿ ಕೆಲವು ನಿರ್ಬಂಧಿತ ಚಟುವಟಿಕೆಗಳಲ್ಲಿ ತೊಡಗಿದ್ದರು ಎಂದು ವಿಚಾರಣೆಯಿಂದ ತಿಳಿದುಬಂದಿದೆ, ಇದು ಅವರನ್ನು ಹೊರಹಾಕಲು ಕಾರಣವಾಯಿತು ಎಂದು ವರದಿ ಹೇಳಿದೆ.

ಈ ತಿಂಗಳ ಆರಂಭದಲ್ಲಿ, ಉತ್ತರ ಪ್ರದೇಶದ ಅಮ್ರೋಹಾದಲ್ಲಿ ಶಾಲೆಯ ಪ್ರಾಂಶುಪಾಲರು “ನಾನ್ ವೆಜ್” ಆಹಾರವನ್ನು (ಬಿರಿಯಾನಿ) ಶಾಲೆಗೆ ತಂದಿದ್ದಕ್ಕಾಗಿ ಏಳು ವರ್ಷದ ವಿದ್ಯಾರ್ಥಿಯನ್ನು “ಹೊರಹಾಕಿದ್ದಾರೆ” ಎಂದು ತೋರಿಸುವ ವೈರಲ್ ವಿಡಿಯೊ ಕಾಣಿಸಿಕೊಂಡಿತ್ತು. ವಿದ್ಯಾರ್ಥಿಯ ತಾಯಿ ತನ್ನ ಮಗುವನ್ನು ಹೊರಹಾಕಲು ಕಾರಣವನ್ನು ಪ್ರಶ್ನಿಸಿದಾಗ ಪ್ರಾಂಶುಪಾಲರು ಅವಹೇಳನಕಾರಿ ಹೇಳಿಕೆಗಳನ್ನು ನೀಡುತ್ತಿರುವುದು ಕಂಡುಬಂದಿದೆ.

ಇದನ್ನೂ ಓದಿ: ದೆಹಲಿಯ ಮುಂದಿನ ಮುಖ್ಯಮಂತ್ರಿ ಯಾರಾಗಬಹುದು? ಸಂಭಾವ್ಯ ಅಭ್ಯರ್ಥಿಗಳಿವರು

ಸಾರ್ವಜನಿಕ ಆಕ್ರೋಶದ ನಂತರ, ಅಮ್ರೋಹಾದ ಉಪವಿಭಾಗೀಯ ಮ್ಯಾಜಿಸ್ಟ್ರೇಟ್ (ಎಸ್‌ಡಿಎಂ) ಸುಧೀರ್ ಕುಮಾರ್ ಅವರು ಈ ಬಗ್ಗೆ ತನಿಖೆ ನಡೆಸಲು ಮೂಲ ಶಿಕ್ಷಾ ಅಧಿಕಾರಿ (ಬಿಎಸ್‌ಎ) ಮತ್ತು ಶಾಲೆಗಳ ಜಿಲ್ಲಾ ಇನ್ಸ್‌ಪೆಕ್ಟರ್‌ಗೆ ಸೂಚಿಸಲಾಗಿದೆ ಎಂದು ಘೋಷಿಸಿದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ