AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರಧಾನಿ ಹುದ್ದೆಯ ಆಫರ್ ನಯವಾಗಿ ತಿರಸ್ಕರಿಸಿದೆ ಎಂದ ಗಡ್ಕರಿ; ಬಿಜೆಪಿಯಲ್ಲಿ ಹುದ್ದೆಗಾಗಿ ಹೋರಾಟ ನಡೆಯುತ್ತಿದೆ ಎಂದ ಆರ್‌ಜೆಡಿ

"ಬಿಜೆಪಿಯಲ್ಲಿ ಸ್ಥಾನದ ಯುದ್ಧ ನಡೆಯುತ್ತಿದೆ. ಮುಂಬರುವ ಕೆಲವು ತಿಂಗಳುಗಳಲ್ಲಿ ನೀವು ಅದರ ಫಲಿತಾಂಶಗಳನ್ನು ನೋಡಬಹುದು. ಬಿಜೆಪಿ ಈ ಬಾರಿ ಪ್ರಧಾನಿ ಮೋದಿಯವರನ್ನು ತನ್ನ ನಾಯಕನನ್ನಾಗಿ ಆಯ್ಕೆ ಮಾಡಿದೆಯೇ? ಟೈಮ್‌ಲೈನ್ ಪರಿಶೀಲಿಸಿ, ಎನ್‌ಡಿಎ ಆಯ್ಕೆ ಮಾಡಿದೆ" ಎಂದು ರಾಷ್ಟ್ರೀಯ ಜನತಾ ದಳ ನಾಯಕ ಮನೋಜ್ ಝಾ ಹೇಳಿದ್ದಾರೆ.

ಪ್ರಧಾನಿ ಹುದ್ದೆಯ ಆಫರ್ ನಯವಾಗಿ ತಿರಸ್ಕರಿಸಿದೆ ಎಂದ ಗಡ್ಕರಿ; ಬಿಜೆಪಿಯಲ್ಲಿ ಹುದ್ದೆಗಾಗಿ ಹೋರಾಟ ನಡೆಯುತ್ತಿದೆ ಎಂದ ಆರ್‌ಜೆಡಿ
ನಿತಿನ್ ಗಡ್ಕರಿ
ರಶ್ಮಿ ಕಲ್ಲಕಟ್ಟ
|

Updated on: Sep 16, 2024 | 1:49 PM

Share

ದೆಹಲಿ ಸೆಪ್ಟೆಂಬರ್ 16: 2024ರ ಸಾರ್ವತ್ರಿಕ ಚುನಾವಣೆಗೆ ಮುನ್ನ ಪ್ರಧಾನಿ ರೇಸ್​​ಗಿಳಿದರೆ ಬೆಂಬಲಿಸುವುದಾಗಿ ವಿರೋಧ ಪಕ್ಷದ  ದೊಡ್ಡ ನಾಯಕರೊಬ್ಬರು ಆಫರ್ ನನಗೆ ಆಫರ್ ನೀಡಿದ್ದರು ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ (Nitin Gadkari) ಅವರ ಇತ್ತೀಚಿನ ಹೇಳಿಕೆಗೆ ಪ್ರತಿಕ್ರಿಯಿಸಿದ ರಾಷ್ಟ್ರೀಯ ಜನತಾ ದಳ (RJD) ನಾಯಕ ಮನೋಜ್ ಝಾ (Manoj Jha), ಬಿಜೆಪಿಯಲ್ಲೇ “ಸ್ಥಾನಕ್ಕಾಗಿ ಯುದ್ಧ ನಡೆಯುತ್ತಿದೆ” ಎಂದು ಹೇಳಿದ್ದಾರೆ.  ಲೋಕಸಭೆಯಲ್ಲಿ ಬಿಜೆಪಿಗೆ ಬಹುಮತದ 272 ಸ್ಥಾನಗಳ ಕೊರತೆ ಮತ್ತು ಟಿಡಿಪಿ ಮತ್ತು ಜೆಡಿ (ಯು) ನಂತಹ ಸಮ್ಮಿಶ್ರ ಪಾಲುದಾರರನ್ನು ಅವಲಂಬಿಸಿದೆ. “ಬಿಜೆಪಿಯಲ್ಲಿ ಸ್ಥಾನದ ಯುದ್ಧ ನಡೆಯುತ್ತಿದೆ. ಮುಂಬರುವ ಕೆಲವು ತಿಂಗಳುಗಳಲ್ಲಿ ನೀವು ಅದರ ಫಲಿತಾಂಶಗಳನ್ನು ನೋಡಬಹುದು. ಬಿಜೆಪಿ ಈ ಬಾರಿ ಪ್ರಧಾನಿ ಮೋದಿಯವರನ್ನು ತನ್ನ ನಾಯಕನನ್ನಾಗಿ ಆಯ್ಕೆ ಮಾಡಿದೆಯೇ? ಟೈಮ್‌ಲೈನ್ ಪರಿಶೀಲಿಸಿ, ಎನ್‌ಡಿಎ ಆಯ್ಕೆ ಮಾಡಿದೆ” ಎಂದು ಝಾ ಹೇಳಿರುವುದಾಗಿ ಎಎನ್ಐ ವರದಿ ಮಾಡಿದೆ.

ಗಡ್ಕರಿ ಹೇಳಿದ್ದೇನು?

2024 ರ ಸಾರ್ವತ್ರಿಕ ಚುನಾವಣೆಗೆ ಮುಂಚಿತವಾಗಿ ತನಗೆ ಉನ್ನತ ಹುದ್ದೆಯ ಆಫರ್ ನೀಡಲಾಗಿತ್ತು. ನಾನು ಅದನ್ನು ನಯವಾಗಿ ತಿರಸ್ಕರಿಸಿದೆ ಎಂದು ಗಡ್ಕರಿ ಹೇಳಿದ್ದಾರೆ. ಗಡ್ಕರಿ ಅವರು ವ್ಯಕ್ತಿಯ ಗುರುತನ್ನು ಬಹಿರಂಗಪಡಿಸದಿದ್ದರೂ, ಹಿರಿಯ ನಾಯಕರೊಬ್ಬರು ತಮ್ಮನ್ನು ಸಂಪರ್ಕಿಸಿದ್ದಾರೆ ಎಂದು ಅವರು ಸುಳಿವು ನೀಡಿದರು.  “ನಾನು ಯಾರನ್ನೂ ಹೆಸರಿಸಲು ಬಯಸುವುದಿಲ್ಲ, ಆದರೆ ಒಬ್ಬ ವ್ಯಕ್ತಿ ನನಗೆ ಹೇಳಿದರು, ನೀವು ಪ್ರಧಾನಿಯಾಗುವುದಾದರೆ ನಾವು ನಿಮಗೆ ಬೆಂಬಲ ನೀಡುತ್ತೇವೆ. ಅದಕ್ಕೆ ನಾನು ನೀವು ನನ್ನನ್ನು ಏಕೆ ಬೆಂಬಲಿಸಬೇಕು ಮತ್ತು ನಾನು ನಿಮ್ಮ ಬೆಂಬಲವನ್ನು ಏಕೆ ತೆಗೆದುಕೊಳ್ಳಬೇಕು? ನನ್ನ ಜೀವನದಲ್ಲಿ ನಾನು ನನ್ನ ನಂಬಿಕೆ ಮತ್ತು ಸಂಘಟನೆಗೆ ನಿಷ್ಠನಾಗಿದ್ದೇನೆ. ನಾನು ಯಾವುದೇ ಹುದ್ದೆಗೆ ರಾಜಿ ಮಾಡಿಕೊಳ್ಳುವುದಿಲ್ಲ ಏಕೆಂದರೆ ನನ್ನ ನಂಬಿಕೆಯು ನನಗೆ ಅತ್ಯಂತ ಮುಖ್ಯವಾಗಿದೆ ಎಂದು ನಾನು ಭಾವಿಸುತ್ತೇನೆ ಎಂದು ಪ್ರತಿಕ್ರಿಯಿಸಿರುವುದಾಗಿ ಹೇಳಿದ್ದಾರೆ.

ಇದನ್ನೂ ಓದಿ: ಭಾರತದಲ್ಲಿ ಮುಂದಿನ ಸಾವಿರ ವರ್ಷದ ಬೆಳವಣಿಗೆಗೆ ಈಗ ತಳಹದಿ ನಿರ್ಮಾಣ: ರೀ ಇನ್ವೆಸ್ಟ್ ಸಭೆಯಲ್ಲಿ ಪ್ರಧಾನಿ ಮೋದಿ

ಚೆನ್ನಾಗಿ ಆಡಿದ್ದಾರೆ ಎಂದ ಶಿವಸೇನಾ

ವಿಪಕ್ಷಗಳ ಮೈತ್ರಿಕೂಟ ದೇಶವನ್ನು ಮುನ್ನಡೆಸುವ ಸಮರ್ಥ ನಾಯಕರನ್ನು ಹೊಂದಿದೆ ಎಂದು ಶಿವಸೇನಾ (ಯುಬಿಟಿ) ನಾಯಕಿ ಪ್ರಿಯಾಂಕಾ ಚತುರ್ವೇದಿ ಭಾನುವಾರ ಹೇಳಿದ್ದಾರೆ. ನಿತಿನ್ ಗಡ್ಕರಿ ಜೀ ಅವರು ಉನ್ನತ ಕುರ್ಚಿಯಲ್ಲಿರಲು ತಮ್ಮ ಮನದಾಳದ ಆಸೆಯನ್ನು ವ್ಯಕ್ತಪಡಿಸುತ್ತಿದ್ದಾರೆ, ವಿರೋಧ ಪಕ್ಷಗಳ ಬೈಗುಳವನ್ನು ಬಳಸಿಕೊಂಡು ಅವರು ಮೋದಿಜಿಗೆ ಸಂದೇಶವನ್ನು ಕಳುಹಿಸುತ್ತಿದ್ದಾರೆ. ಇಂಡಿಯಾ ಮೈತ್ರಿಕೂಟವು ದೇಶವನ್ನು ಮುನ್ನಡೆಸಬಲ್ಲ ಅತ್ಯಂತ ಸಮರ್ಥ ನಾಯಕರನ್ನು ಹೊಂದಿದೆ, ಬಿಜೆಪಿಯಿಂದ ಒಬ್ಬರನ್ನು ಎರವಲು ಪಡೆಯಲು ಬಯಸುವುದಿಲ್ಲ. ನಿತಿನ್ ಜಿ ಚೆನ್ನಾಗಿ ಆಡಿದ್ದಾರೆ” ಎಂದು ಅವರು ಎಕ್ಸ್ ನಲ್ಲಿ ಬರೆದಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ