ಶಿವ ಇಲ್ಲಿ ದಕ್ಷಿಣ ದಿಕ್ಕಿಗೆ ಮುಖ ಮಾಡಿರುವುದೇಕೆ? ಯಮನನ್ನೇ ಸೆರೆ ಹಿಡಿದ ಶಿವನನ್ನು ದರ್ಶಿಸಿದರೆ ನಿಮಗೆ ದೀರ್ಘಾಯುಷ್ಯ ಸಿಗುತ್ತದೆ!

ಯಮಧರ್ಮ ರಾಜನನ್ನು ಶಿವ ಬಂಧಿಸಿದ ದೇವಾಲಯ. ಪುರಾಣಗಳ ಪ್ರಕಾರ, ಈ ದೇವಾಲಯದಲ್ಲಿರುವ (Markandeshwar Mahadev Temple) ಮೃಕಂಡ ಋಷಿ... ಶಿವನನ್ನು ಕುರಿತು ತಪಸ್ಸು ಮಾಡಿ ಯಮರಾಜನನ್ನು ಸೋಲಿಸಿ ಅಮರನಾದನು. ಭಕ್ತರನ್ನು ರಕ್ಷಿಸಲು ಯಮರಾಜನನ್ನು ಶಿವ ಈ ದೇವಾಲಯದಲ್ಲಿ ಯಮನನ್ನು ಬಂಧಿಸಿಟ್ಟನೆಂದು ನಂಬುತ್ತಾರೆ.

ಶಿವ ಇಲ್ಲಿ ದಕ್ಷಿಣ ದಿಕ್ಕಿಗೆ ಮುಖ ಮಾಡಿರುವುದೇಕೆ? ಯಮನನ್ನೇ ಸೆರೆ ಹಿಡಿದ ಶಿವನನ್ನು ದರ್ಶಿಸಿದರೆ ನಿಮಗೆ ದೀರ್ಘಾಯುಷ್ಯ ಸಿಗುತ್ತದೆ!
ಯಮನನ್ನೇ ಸೆರೆ ಹಿಡಿದ ಶಿವನನ್ನು ಇಲ್ಲಿ ದರ್ಶಿಸಿದರೆ ನಿಮಗೆ ದೀರ್ಘಾಯುಷ್ಯ ಸಿಗುತ್ತದೆ!
Follow us
ಸಾಧು ಶ್ರೀನಾಥ್​
|

Updated on: Sep 17, 2024 | 5:06 AM

ದೇಶದಲ್ಲಿ ಲೆಕ್ಕವಿಲ್ಲದಷ್ಟು ಸಣ್ಣ ಮತ್ತು ದೊಡ್ಡ ದೇವಾಲಯಗಳಿವೆ. ಈ ಅನೇಕ ದೇವಾಲಯಗಳಲ್ಲಿ ವಿಷ್ಣು, ಶಿವ, ದುರ್ಗಾ, ಹನುಮಾನ್ ಮತ್ತು ಗಣಪತಿಯಂತಹ ದೇವರುಗಳು ಭಕ್ತರಿಗೆ ದರ್ಶನ ನೀಡುವ ಮತ್ತು ಪೂಜೆಯನ್ನು ಪಡೆಯುವ ಪ್ರಮುಖ ದೇವತೆಗಳಾಗಿದ್ದಾರೆ. ಸಾವಿರಾರು ವರ್ಷಗಳಷ್ಟು ಹಳೆಯದಾದ ದೇವಾಲಯಗಳಲ್ಲಿ ಶಿವ ಮತ್ತು ಶಿವ ಭಕ್ತರಿಗೆ ಸಂಬಂಧಿಸಿದ ದೇವಾಲಯಗಳಿವೆ. ದೇಶದಲ್ಲಿ ಶಿವಭಕ್ತರ ಸಂಖ್ಯೆ, ಶಿವಾಲಯಗಳು ಮತ್ತು ಶಿವಲಿಂಗಗಳ ಸಂಖ್ಯೆ ಅಸಂಖ್ಯಾತವಾಗಿದೆ.

ಮಾರ್ಕಂಡೇಶ್ವರ ಮಹಾದೇವ ದೇವಸ್ಥಾನದ ಪುರಾಣ ಮತ್ತು ಇತಿಹಾಸ: ಅಂತಹ ಒಂದು ದೇವಾಲಯವೆಂದರೆ ಯಮಧರ್ಮ ರಾಜನನ್ನು ಶಿವ ಬಂಧಿಸಿದ ದೇವಾಲಯ. ಪುರಾಣಗಳ ಪ್ರಕಾರ, ಈ ದೇವಾಲಯದಲ್ಲಿರುವ (Markandeshwar Mahadev Temple) ಮೃಕಂಡ ಋಷಿ… ಶಿವನನ್ನು ಕುರಿತು ತಪಸ್ಸು ಮಾಡಿ ಯಮರಾಜನನ್ನು ಸೋಲಿಸಿ ಅಮರನಾದನು. ಭಕ್ತರನ್ನು ರಕ್ಷಿಸಲು ಯಮರಾಜನನ್ನು ಶಿವ ಈ ದೇವಾಲಯದಲ್ಲಿ ಯಮನನ್ನು ಬಂಧಿಸಿಟ್ಟನೆಂದು ನಂಬುತ್ತಾರೆ. ಈ ಪುರಾತನ ಮತ್ತು ಪ್ರಸಿದ್ಧ ದೇವಾಲಯದಲ್ಲಿ ಮಹಾದೇವನ ದರ್ಶನ ಪಡೆದ ಭಕ್ತರು ದೀರ್ಘಾಯುಷ್ಯ ಮತ್ತು ಉತ್ತಮ ಆರೋಗ್ಯವನ್ನು ಪಡೆಯುತ್ತಾರೆ ಎಂಬುದು ನಂಬಿಕೆ.

ಉಜ್ಜಯಿನಿಯಲ್ಲಿ ಶಿವನ ಅದ್ಭುತವಾದ ದೇವಾಲಯವಿದೆ. ಐತಿಹಾಸಿಕ ದಾಖಲೆಗಳ ಪ್ರಕಾರ, 5000 ವರ್ಷಗಳಷ್ಟು ಹಳೆಯದಾದ ಈ ದೇವಾಲಯವು ಚಕ್ರವರ್ತಿ ವಿಕ್ರಮಾದಿತ್ಯನ ಆಳ್ವಿಕೆ ಕಾಲದ್ದು ಎಂದು ನಂಬಲಾಗಿದೆ. ದಂತಕಥೆಯ ಪ್ರಕಾರ ತನ್ನ ಭಕ್ತರನ್ನು ಉಳಿಸಲು ಶಿವನು ಆ ದೇವಾಲಯದಲ್ಲಿ ಯಮರಾಜನನ್ನು ಬಂಧಿಸಿದನು. ಬ್ರಹ್ಮನನ್ನು ಕುರಿತು ತಪಸ್ಸು ಮಾಡಿದ ಮೃಕಂಡ ಋಷಿಗೆ ಪುತ್ರ ಸಂತಾನ ಪ್ರಾಪ್ತಿಯಾಯಿತು. ಆದರೆ ಅಲ್ಪಾಯುಷಿ ಗಂಡು ಮಗು ಜನಿಸಿದನು. ಆ ಮಗುವಿಗೆ ಮಾರ್ಕಂಡೇಯ ಎಂದು ನಾಮಕರಣ ಮಾಡಿ, ಬೆಳೆಸಲಾಗುತ್ತಿತ್ತು.

Ujjain Markandeshwar Mahadev Temple, 5000 years old temple where god shiva tied yama dharma raj to save devotee Markandeshwar  

ಆದರೆ ಮೃಕಂಡ ಮುನಿಯು ತನ್ನ ಮಗ ಮಾರ್ಕಂಡೇಯುವಿನ ಅಲ್ಪಾಯುಷ್ಯದ ಬಗ್ಗೆ ಚಿಂತಿತನಾಗಿದ್ದನು. ತಂದೆಯ ದುಃಖವನ್ನು ಕಂಡು ಮಗನ ಹೃದಯ ಕುಗ್ಗಿತು. ತನ್ನ ಮಗನ ಇಚ್ಛೆಯ ಮೇರೆಗೆ ಋಷಿ ಮೃಕಂಡ ಮಗನ ಸಂಪೂರ್ಣ ಜನ್ಮ ವೃತ್ತಾಂತವನ್ನು ವಿವರಿಸಿದನು. ತಂದೆತಾಯಿಗಳ ದುಃಖವನ್ನು ಹೋಗಲಾಡಿಸಲು ಮತ್ತು ದೀರ್ಘಾಯುಷ್ಯವನ್ನು ಪಡೆಯಲು ಮಾರ್ಕಂಡೇಯನು ಅದೇ ದೇವಾಲಯದಲ್ಲಿ ಆವಂತಿಕಾ ತೀರ್ಥದ ಮಹಾಕಾಲ ವನದಲ್ಲಿ ಶಂಕರನನ್ನು ಕುರಿತು ತೀವ್ರ ತಪಸ್ಸು ಮಾಡಿದನು. ಈ ಮಧ್ಯೆ, 12 ವರ್ಷದವನಿದ್ದಾಗ ಯಮರಾಜನು ಮಾರ್ಕಂಡೇಯನನ್ನು ಕರೆದುಕೊಂಡು ಹೋಗಲು ಬಂದನು. ಆದರೆ ಮಾರ್ಕಂಡೇಯನಿಗೆ ಯಮನೊಂದಿಗೆ ಹೋಗಲು, ಸಾಯಲು ಇಷ್ಟವಿರಲಿಲ್ಲ. ಯಮರಾಜನಿಂದ ತನ್ನನ್ನು ರಕ್ಷಿಸಿಕೊಳ್ಳಲು, ಅವನು ಶಿವನ ಮೂರ್ತಿಯನ್ನು ಎರಡೂ ಕೈಗಳಿಂದ ಹಿಡಿದನು.

ಯಮಧರ್ಮ ರಾಜನನ್ನು ಸೆರೆ ಹಿಡಿದ ಶಿವ: ಯಮರಾಜನು ಮಾರ್ಕಂಡೇಯನ ಪ್ರಾಣ ತೆಗೆಯಲು ಭೂಮಿಗೆ ಬಂದಾಗ.. ಯಮನಿಂದ ತನ್ನ ಭಕ್ತನನ್ನು ರಕ್ಷಿಸಲು ಮಹಾದೇವನು ಕಾಣಿಸಿಕೊಂಡನು. ಮಾರ್ಕಂಡೇಯನನ್ನು ರಕ್ಷಿಸಲು, ಯಮಧರ್ಮ ರಾಜನನ್ನು ಶಿವ ಆ ದೇವಾಲಯದಲ್ಲಿ ಬಂಧಿಸಿದನು. ಅದೇ ವೇಳೆ ಮಾರ್ಕಂಡೇಯ ಋಷಿಗೆ 12 ಕಲ್ಪಗಳ ಕಾಲ ಜೀವಿಸುವ ವರವನ್ನು ನೀಡಿದನು.

ಶಿವಲಿಂಗವು ದಕ್ಷಿಣಾಭಿಮುಖವಾಗಿದೆ: ಹೀಗೆ, ಯಮರಾಜ ಈ ದೇವಾಲಯದಲ್ಲಿ ಬಂಧಿಸಲ್ಪಟ್ಟನು. ದೇವಾಲಯದಲ್ಲಿ ಪ್ರತಿಷ್ಠಾಪಿಸಲಾಗಿರುವ ಶಿವಲಿಂಗದ ಮೇಲೆ ಸಹಜವಾಗಿಯೇ ಒಂದು ಕಣ್ಣು ಇರುತ್ತದೆ. ದಕ್ಷಿಣವು ಕಾಲನ ಅಂದರೆ ಯಮನ ದಿಕ್ಕು. ಹಿಂದೂ ನಂಬಿಕೆಯ ಪ್ರಕಾರ ಭಕ್ತರನ್ನು ರಕ್ಷಿಸಲು ಯಮನನ್ನು ಶಿವ ಇಲ್ಲಿ ಬಂಧಿಸಿಟ್ಟಿದ್ದಾನೆ. ಬಾಲ ಭಕ್ತ ಮಾರ್ಕಂಡೇಶ್ವರ ಮತ್ತು ಶಿವ ಮಹಾದೇವನ ಆರಾಧನೆಯಿಂದ ಜನರು ದೀರ್ಘಾಯುಷ್ಯ ಪಡೆಯುತ್ತಾರೆ. ಈ ಅದ್ಭುತ ದೇವಾಲಯವು ವರ್ಷವಿಡೀ ಭಕ್ತರನ್ನು ಆಕರ್ಷಿಸುತ್ತದೆ. ಸಾವಿರಾರು ಶಿವ ಭಕ್ತರು ಈ ದೇವಾಲಯಕ್ಕೆ ಹಬ್ಬಗಳು ಅಥವಾ ಜನ್ಮದಿನಗಳು ಅಥವಾ ವಿವಾಹ ವಾರ್ಷಿಕೋತ್ಸವಗಳಂತಹ ಶುಭ ಸಂದರ್ಭಗಳಲ್ಲಿ ಭೇಟಿ ನೀಡಿ ದೀರ್ಘಾಯುಷ್ಯ ಮತ್ತು ಆರೋಗ್ಯಕ್ಕಾಗಿ ಪ್ರಾರ್ಥಿಸುತ್ತಾರೆ.

ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ