ಕೆಲವೊಮ್ಮೆ ನಮ್ಮ ಜೀವನದಲ್ಲಿ ನಡೆಯುವ ಕೆಲವು ಘಟನೆಗಳು.. ಹೃದಯವನ್ನು ಅಲ್ಲಾಡಿಸಿಬಿಡುತ್ತದೆ… ಪುಕಪುಕ ಮಿಡಿಯುವಂತೆ ಮಾಡಿಬಿಡುತ್ತದೆ. ಉತ್ತರಪ್ರದೇಶದ (Uttar Pradesh) ಫಿರೋಜಾಬಾದ್‌ನ (Firozabad) ನಾಗಲಪಾಸಿ ಗ್ರಾಮದ ವಸತಿ ಶಾಲೆಯಲ್ಲಿ ಇಂತಹುದೆ ಒಂದು ಘಟನೆ ನಡೆದಿದೆ. ಕೆಲವೊಮ್ಮೆ ನಮ್ಮ ಜೀವನದಲ್ಲಿ ಸಂಭವಿಸುವ ಇಂತಹ ಕೆಲವು ಘಟನೆಗಳು ನಮ್ಮ ಹೃದಯವನ್ನು ಕಂಪಿಸುವಂತೆ ಮಾಡುತ್ತದೆ. ವ್ಯಕ್ತಿಯೊಬ್ಬರಿಗೆ ಹೀಗೆಯೇ ಆಗಿದ್ದು, ಶಾಲೆಯ ವಾಷ್ ರೂಂ (School Bathroom) ಬಾಗಿಲು ತೆರೆದಾಗ ಎದುರಿಗಿದ್ದ ಆಘಾತಕಾರಿ ದೃಶ್ಯ ಕಂಡು ಹೃದಯ ಸ್ತಬ್ಧವಾದಂತಾಗಿದೆ. ನಿಜವಾಗಿ ಏನಾಯಿತು ಎಂದು ನೋಡಿದಾಗ…
ಉತ್ತರ ಪ್ರದೇಶದ ಫಿರೋಜಾಬಾದ್‌ನ ನಾಗಲಪಾಸಿ ಗ್ರಾಮದ ವಸತಿ ಶಾಲೆಯಲ್ಲಿ ಏಳು ಅಡಿ ಉದ್ದದ ಮೊಸಳೆಯೊಂದು ಭಾರೀ ಸಂಚಲನ ಮೂಡಿಸಿದೆ. ಶಾಲೆಯ ಶೌಚಾಲಯದಲ್ಲಿ ಈ ಬೃಹತ್ ಮೊಸಳೆ (Crocodile) ಕಾಣಿಸಿಕೊಂಡಾಗ ವಿದ್ಯಾರ್ಥಿಗಳ ಎದೆ ಏಕಾಏಕಿ ಝಲ್ಲೆಂದಿದೆ. ತಕ್ಷಣ ಎಚ್ಚೆತ್ತ ಸ್ಥಳೀಯರು.. ಕೂಡಲೇ ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ.
ಮಾಹಿತಿ ಪಡೆದ ತಕ್ಷಣ ವನ್ಯಜೀವಿ ಸಂರಕ್ಷಣಾ ತಂಡ ಶಾಲೆಗೆ ಆಗಮಿಸಿದೆ. ಎರಡು ಗಂಟೆಗಳ ಕಾಲ ಶ್ರಮವಹಿಸಿ ಕೊನೆಗೂ ಮೊಸಳೆಯನ್ನು ಸುರಕ್ಷಿತವಾಗಿ ಹಿಡಿದು ಕಬ್ಬಿಣದ ಬೋನಿಗೆ ಹಾಕಲಾಯಿತು. ಆಗಷ್ಟೇ ಗ್ರಾಮಸ್ಥರೆಲ್ಲ ನೆಮ್ಮದಿಯ ನಿಟ್ಟುಸಿರು ಬಿಟ್ಟರು. ಭಾನುವಾರವಾದ್ದರಿಂದ ಶಾಲೆಯಲ್ಲಿ ವಿದ್ಯಾರ್ಥಿಗಳಿಲ್ಲದ ಕಾರಣ ದೊಡ್ಡ ಅನಾಹುತ ತಪ್ಪಿದೆ ಎಂದು ಸ್ಥಳೀಯರು ಹೇಳಿದ್ದಾರೆ.
ಇನ್ನಷ್ಟು ಟ್ರೆಂಡಿಂಗ್, ವೈರಲ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:21 pm, Tue, 11 April 23