ಲಕ್ನೋ: ಅಯೋಧ್ಯೆ ರಾಮ ಮಂದಿರದ ನಿರ್ಮಾಣಕ್ಕೆ ದಿನಗಣನೆ ಆರಂಭವಾಗಿದೆ. ಆಗಸ್ಟ್ 5ರಂದು ಭೂಮಿ ಪೂಜೆ ಸಮಾರಂಭ ನಡೆಯಲಿದ್ದು ಪ್ರಧಾನಿ ನರೇಂದ್ರ ಮೋದಿ ಹಾಗೂ ಇತರೆ ಗಣ್ಯರು ಉಪಸ್ಥಿತರಿರಲಿದ್ದಾರೆ. ಪ್ರಖ್ಯಾತ ಸ್ಥಪತಿ ಚಂದ್ರಕಾಂತ್ ಸೋಮಪುರ ನೇತೃತ್ವದಲ್ಲಿ ನಿರ್ಮಾಣವಾಗಲಿರುವ ದೇವಸ್ಥಾನದ ಕಟ್ಟಡವು ಸರಿಸುಮಾರು 161 ಅಡಿ ಎತ್ತರವಿರಲಿದೆ ಎಂದು ತಿಳಿದುಬಂದಿದೆ.
ಈ ನಡುವೆ, ಶಂಕರಾಚಾರ್ಯ ಸ್ವರೂಪಾನಂದ ಸರಸ್ವತಿ ಸ್ವಾಮೀಜಿ ರಾಮ ಮಂದಿರದ ಭೂಮಿ ಪೂಜೆ ನೆರವೇರಿಸಲು ಇದು ಸೂಕ್ತ ಸಮಯವಲ್ಲ ಎಂದು ಹೇಳಿದ್ದಾರೆ.
ಜೊತೆಗೆ, ರಾಮ ಮಂದಿರದ ನಿರ್ವಹಣೆಯಲ್ಲಿ ನಮಗೆ ಯಾವ ಸ್ಥಾನಮಾನವು ಬೇಡ. ಆದರೆ, ದೇವಾಲಯದ ನಿರ್ಮಾಣಕಾರ್ಯ ಯಾವುದೇ ವಿಘ್ನಗಳಿಲ್ಲದೆ ಸಂಪನ್ನವಾಗಬೇಕು ಎಂಬ ಆಸೆಯಿದೆ. ಹಾಗಾಗಿ, ಭೂಮಿ ಪೂಜೆಗೆ ನಿಶ್ಚಯಿಸಲಾಗಿರುವ ಸಮಯ ಅಶುಭವಾಗಿದೆ ಎಂದು ನುಡಿದಿದ್ದಾರೆ.
Published On - 4:49 pm, Thu, 23 July 20