Sharad Pawar: ಪ್ರಧಾನಿ ನರೇಂದ್ರ ಮೋದಿಯವರ ಶೈಕ್ಷಣಿಕ ಅರ್ಹತೆ ಒಂದು ರಾಜಕೀಯ ವಿಷಯವೇ?: ಶರದ್ ಪವಾರ್

| Updated By: ಡಾ. ಭಾಸ್ಕರ ಹೆಗಡೆ

Updated on: Apr 11, 2023 | 1:15 PM

ಪ್ರಧಾನಿ ನರೇಂದ್ರ ಮೋದಿಯವರ ಶೈಕ್ಷಣಿಕ ಅರ್ಹತೆ ಒಂದು ರಾಜಕೀಯ ವಿಷಯವೇ ಎಂದು ಎನ್​ಸಿಪಿ ಮುಖ್ಯಸ್ಥ ಶರದ್ ಪವಾರ್ ಪ್ರಶ್ನಿಸಿದ್ದಾರೆ. ದೇಶದಲ್ಲಿ ಬಗೆಹರಿಸಬೇಕಾದ ಸಾಕಷ್ಟು ಸಮಸ್ಯೆಗಳಿವೆ ಅದರೆಡೆಗೆ ಗಮನಹರಿಸುವ ಅಗತ್ಯವಿದೆ.

Sharad Pawar: ಪ್ರಧಾನಿ ನರೇಂದ್ರ ಮೋದಿಯವರ ಶೈಕ್ಷಣಿಕ ಅರ್ಹತೆ ಒಂದು ರಾಜಕೀಯ ವಿಷಯವೇ?: ಶರದ್ ಪವಾರ್
ಶರದ್ ಪವಾರ್
Follow us on

ಪ್ರಧಾನಿ ನರೇಂದ್ರ ಮೋದಿಯವರ ಶೈಕ್ಷಣಿಕ ಅರ್ಹತೆ ಎಂಬುದು ರಾಜಕೀಯ ವಿಷಯವೇ ಎಂದು ಎನ್​ಸಿಪಿ ಮುಖ್ಯಸ್ಥ ಶರದ್ ಪವಾರ್ ಪ್ರಶ್ನಿಸಿದ್ದಾರೆ. ದೇಶದಲ್ಲಿ ಬಗೆಹರಿಸಬೇಕಾದ ಸಾಕಷ್ಟು ಸಮಸ್ಯೆಗಳಿವೆ ಅದರೆಡೆಗೆ ಗಮನಹರಿಸುವ ಅಗತ್ಯವಿದೆ.  ನಾವು ನಿರುದ್ಯೋಗ, ಕಾನೂನು ಮತ್ತು ಸುವ್ಯವಸ್ಥೆ ಮತ್ತು ಬೆಲೆ ಏರಿಕೆಯಂತ ಪರಿಸ್ಥಿತಿಯನ್ನು ಎದುರಿಸುತ್ತಿರುವಾಗ, ಒಬ್ಬರ ಶೈಕ್ಷಣಿಕ ಪದವಿಯು ದೇಶದಲ್ಲಿ ರಾಜಕೀಯ ವಿಷಯವಾಗಬೇಕೇ? ಇಂದು ಧರ್ಮ, ಜಾತಿಯ ಹೆಸರಿನಲ್ಲಿ ಜನರಲ್ಲಿ ತಾರತಮ್ಯ ಸೃಷ್ಟಿಸಲಾಗುತ್ತಿದೆ. ಮಹಾರಾಷ್ಟ್ರದಲ್ಲಿ ಅಕಾಲಿಕ ಮಳೆಯಿಂದಾಗಿ ಬೆಳೆ ನಾಶವಾಗಿದೆ. ಇವು ಚರ್ಚೆಯಾಗಬೇಕಾದ ವಿಚಾರಗಳು.

ಉದ್ಧವ್ ಠಾಕ್ರೆ ಮತ್ತು ಅರವಿಂದ್ ಕೇಜ್ರಿವಾಲ್ ಸೇರಿದಂತೆ ಕೇಂದ್ರದ ಹಲವಾರು ವಿರೋಧ ಪಕ್ಷದ ನಾಯಕರು ಪ್ರಧಾನಿ ನರೇಂದ್ರ ಮೋದಿಯವರ ಶೈಕ್ಷಣಿಕ ಅರ್ಹತೆಯನ್ನು ಗುರಿಯಾಗಿಸಿಕೊಂಡು ವಾಗ್ದಾಳಿ ನಡೆಸಿದ್ದರು. ಶರದ್​ ಪವಾರ್​ ಈ ಹೇಳಿಕೆ ವಿರೋಧ ಪಕ್ಷಗಳಲ್ಲಿ ಇರುವ ಒಡಕನ್ನು ಮತ್ತೊಮ್ಮೆ ಹೊರಹಾಕಿದೆ.

ಪ್ರಧಾನಿ ನರೇಂದ್ರ ಮೋದಿಯವರು ಪದವಿ ಪಡೆದಿರುವ ಕುರಿತು ಕೇಜ್ರಿವಾಲ್ ಸಲ್ಲಿಸಿದ್ದ ಅರ್ಜಿಯನ್ನು ಗುಜರಾತ್ ಹೈಕೋರ್ಟ್​ ವಜಾ ಮಾಡಿ ಅವರಿಗೆ 25 ಸಾವಿರ ರೂ. ದಂಡ ವಿಧಿಸಿತ್ತು. ಆ ನಂತರವೂ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಪ್ರಧಾನಿ ಅವರ ಶೈಕ್ಷಣಿಕ ಅರ್ಹತೆಯ ವಿಷಯವಾಗಿ ಟೀಕಾ ಪ್ರಹಾರ ಮುಂದುವರೆಸಿದ್ದರು.

ಮತ್ತಷ್ಟು ಓದಿ: Manish Sisodia Letter: ಪ್ರಧಾನಿ ನರೇಂದ್ರ ಮೋದಿಯ ಶೈಕ್ಷಣಿಕ ಅರ್ಹತೆಯ ಕೊರತೆಯು ದೇಶಕ್ಕೆ ಅಪಾಯಕಾರಿ: ಮನೀಶ್​ ಸಿಸೋಡಿಯಾ ಪತ್ರ ವೈರಲ್

ಅದಾನಿ ವಿವಾದದ ವಿಚಾರದಲ್ಲಿ ಸಹ ಪವಾರ್ ಬೇರೆ ನಿಲುವು ತಾಳಿದ್ದು ಕಾಂಗ್ರೆಸ್​ಗೆ ತೀವ್ರ ಇರಿಸು ಮುರಿಸು ಉಂಟಾಗಿದೆ. ಅದಾನಿ ಮತ್ತು ಪ್ರಧಾನಿ ಮೋದಿ ಅವರ ಸ್ನೇಹ ಪ್ರಶ್ನಿಸಿ, ಅದಾನಿ ಗ್ರೂಪ್ ಮೇಲೆ ಕೇಳಿಬಂದ ಆರೋಪಗಳ ಬಗ್ಗೆ ತನಿಖೆ ನಡೆಸಲು ತೀವ್ರ ಹೋರಾಟ ನಡೆಸುತ್ತಿರುವ ಕಾಂಗ್ರೆಸ್​ಗೆ ಅದರ ಮಿತ್ರಪಕ್ಷದ ನಾಯಕರ ಈ ಹೇಳಿಕೆ ಅಚ್ಚರಿಯನ್ನುಂಟು ಮಾಡಿದೆ.

ಇತ್ತೀಚೆಗೆ ಸಂದರ್ಶನವೊಂದರಲ್ಲಿ ಶರದ್ ಪವಾರ್ ಅದಾನಿ ಗ್ರೂಪ್ ಮೇಲೆ ಹಗರಣದ ಆರೋಪ ಹೊರಿಸಿರುವ ಅಮೆರಿಕದ ಹಿಂಡನ್​ಬರ್ಗ್​ ವರದಿ ಉದ್ದೇಶಪೂರ್ವಕ ಎಂದೆನಿಸುತ್ತದೆ ಎಂದು ತಮ್ಮ ಅನಿಸಿಕೆ ವ್ಯಕ್ತಪಡಿಸಿದ್ದರು.

ಎಎಪಿ ಶಾಸಕ ಆತಿಶಿ ಮಾತನಾಡಿ, ನಾವು ಅಭಿಯಾನವನ್ನು ಪ್ರಾರಂಭಿಸುತ್ತಿದ್ದೇವೆ. ನಿಮ್ಮ ನಾಯಕರು ಪ್ರತಿದಿನ ತಮ್ಮ ಪದವಿಗಳನ್ನು ತೋರಿಸುತ್ತಾರೆ. ನಾನು ದೆಹಲಿ ವಿಶ್ವವಿದ್ಯಾಲಯದಿಂದ ಬಿಎ ಪದವಿ ಮತ್ತು ಆಕ್ಸ್‌ಫರ್ಡ್‌ನಿಂದ ಎರಡು ಸ್ನಾತಕೋತ್ತರ ಪದವಿಗಳನ್ನು ಪಡೆದಿದ್ದೇನೆ. ಅವೆಲ್ಲವೂ ನಿಜ. ಎಲ್ಲಾ ನಾಯಕರನ್ನು ಅದರಲ್ಲೂ ಬಿಜೆಪಿ ನಾಯಕರು ತಮ್ಮ ಪದವಿಯನ್ನು ಬಹಿರಂಗಪಡಿಸಬೇಕು ಎಂದು ಕೇಳಿಕೊಳ್ಳುತ್ತೇನೆ ಎಂದರು.

 

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Published On - 11:47 am, Tue, 11 April 23