Ramayana Video Viral: ಡಬ್ ಮಾಡಿ ರಾಮಾಯಣದ ವೀಡಿಯೋ ಬಾರ್‌ನಲ್ಲಿ ಪ್ಲೇ ಮಾಡಿದ ಇಬ್ಬರ ಬಂಧನ

ರಾಮಾಯಣ ಧಾರಾವಾಹಿಯ ಚಿಕ್ಕ ಡೈಲಾಗ್​​ನ್ನು ಡಿಜಿಗೆ ಡಬ್ಬಿಂಗ್ ಮಾಡಿದ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್​​ ಆಗಿದೆ. ಈ ಬಗ್ಗೆ ಅನೇಕ ಸಾಮಾಜಿಕ ಜಾಲತಾಣ ಬಳಕೆದಾರರೂ ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Ramayana Video Viral: ಡಬ್ ಮಾಡಿ ರಾಮಾಯಣದ ವೀಡಿಯೋ ಬಾರ್‌ನಲ್ಲಿ ಪ್ಲೇ ಮಾಡಿದ ಇಬ್ಬರ ಬಂಧನ
ರಾಮಾಯಣ ವೈರಲ್ ವಿಡಿಯೋ
Follow us
|

Updated on:Apr 11, 2023 | 5:22 PM

ಲಕ್ನೋ: ನೋಯ್ಡಾ (Noida) ಬಾರ್ ಒಂದರ ಎಲ್ಇಡಿ ಪರದೆಯಲ್ಲಿ ಹಿಂದೆ ಟಿವಿಯಲ್ಲಿ ಬರುತ್ತಿದ್ದ ರಾಮಾಯಣ ಧಾರಾವಾಹಿಯ ಡೈಲಾಗ್​​ಗಳನ್ನು ಡಿಜಿಯ ರೀತಿಯಲ್ಲಿ ಡಬ್​​ ಮಾಡಿ ಬಾರ್​​ನಲ್ಲಿ ಪ್ಲೇ ಮಾಡಿದ್ದಾರೆ. ಇದೀಗ ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ, ಜೊತೆಗೆ ಅನೇಕ ಚರ್ಚೆಗಳಿಗೂ ಕಾರಣವಾಗಿದೆ. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನೋಯ್ಡಾ ಪೊಲೀಸರು ರೆಸ್ಟ್ರೋ-ಬಾರ್‌ನ ಸಹ-ಮಾಲೀಕ ಮತ್ತು ಅದರ ವ್ಯವಸ್ಥಾಪಕರನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ. ಈ ಬಗ್ಗೆ ಪೊಲೀಸರೇ ಸ್ವತಃ ಎಫ್‌ಐಆರ್‌ ದಾಖಲಿಸಿಕೊಂಡಿದ್ದಾರೆ. ಧಾರಾವಾಹಿಯ ಚಿಕ್ಕ ಡೈಲಾಗ್​​ನ್ನು ಡಿಜಿಗೆ ಡಬ್ಬಿಂಗ್ ಮಾಡಿದ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್​​ ಆಗಿದೆ. ಈ ಬಗ್ಗೆ ಅನೇಕ ಸಾಮಾಜಿಕ ಜಾಲತಾಣ ಬಳಕೆದಾರರೂ ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪೊಲೀಸರು ಆರೋಪಿಗಳ ವಿರುದ್ಧ ಸರಿಯಾ ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದಾರೆ.

ಈ ವಿಡಿಯೋದಲ್ಲಿ ರಾಮ ಮತ್ತು ರಾಕ್ಷಸ ರಾಜ ರಾವಣನ ಪಾತ್ರದ ಹಿನ್ನೆಲೆಗೆ ಡಿಜಿ ರೀತಿಯ (ಆಧುನಿಕ ಸಂಗೀತ) ಸಾಂಗ್​​ನ್ನು ಎಡಿಟ್ ಮಾಡಿ ಬಾರ್​ ಎಲ್​ಇಡಿಯಲ್ಲಿ ಪ್ಲೇ ಮಾಡಿದ್ದಾರೆ. ಇದನ್ನು ಕೆಲವು ಸಾಮಾಜಿಕ ಮಾಧ್ಯಮ ಬಳಕೆದಾರರು ಹಂಚಿಕೊಂಡು, ತಕ್ಷಣ ಈ ಆರೋಪಿಗಳ ಮೇಲೆ ಕ್ರಮ ತೆಗೆದಕೊಳ್ಳಬೇಕು, ಇಲ್ಲದಿದ್ದರೆ ದೊಡ್ಡ ಅನಾಹುತವೇ ನಡೆಯುತ್ತದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: Noida Crime: ಕೈಯಲ್ಲಿ ಹೋಳಿ ಬಣ್ಣ, ಚರಂಡಿಯಲ್ಲಿತ್ತು ಮಹಿಳೆಯ ದೇಹದ ಬಿಡಿ ಭಾಗಗಳು

ವೀಡಿಯೊ ಸೋಮವಾರ ಬೆಳಿಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ ಮತ್ತು ಇದು ಗಾರ್ಡನ್ಸ್ ಗ್ಯಾಲೇರಿಯಾ ಮಾಲ್‌ನಲ್ಲಿರುವ ಲಾರ್ಡ್ ಆಫ್ ದಿ ಡ್ರಿಂಕ್ಸ್ ರೆಸ್ಟೊ-ಬಾರ್‌ನಲ್ಲಿ ಪ್ಲೇ ಆಗಿರುವ ವಿಡಿಯೋ ಎಂದು ಪೊಲೀಸರು ಹೇಳಿದ್ದಾರೆ. ಈ ವಿಷಯ ತಿಳಿದ ತಕ್ಷಣ ಸೆಕ್ಟರ್ 39 ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ಉಪ ಆಯುಕ್ತ (ನೋಯ್ಡಾ) ಶಕ್ತಿ ಅವಸ್ತಿ ತಿಳಿಸಿದ್ದಾರೆ.

ಪೊಲೀಸರ ಸ್ವಯಂ ಪ್ರೇರಿತ ಕ್ರಮ

ರೆಸ್ಟ್ರೋ ಬಾರ್‌ನ ಸಹ ಮಾಲೀಕರು, ಅದರ ಮ್ಯಾನೇಜರ್ ಮತ್ತು ವೀಡಿಯೊವನ್ನು ಪ್ಲೇ ಮಾಡಿದ ಡಿಜೆ ವಿರುದ್ಧ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಲಾಗಿದೆ ಎಂದು ಅವಸ್ತಿ ಪಿಟಿಐಗೆ ತಿಳಿಸಿದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಹ-ಮಾಲೀಕ ಮನಕ್ ಅಗರ್ವಾಲ್ ಮತ್ತು ಮ್ಯಾನೇಜರ್ ಅಭಿಷೇಕ್ ಸೋನಿ ಅವರನ್ನು ಬಂಧಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಭಾರತೀಯ ದಂಡ ಸಂಹಿತೆ ಸೆಕ್ಷನ್ 153ಎ (ಸಾಮರಸ್ಯ ಕಾಪಾಡಲು ಅಥವಾ ಸಾರ್ವಜನಿಕ ನೆಮ್ಮದಿಗೆ ಭಂಗ ತರುವ ಸಂಭವ) ಮತ್ತು 295 (ಯಾವುದೇ ವರ್ಗದ ಧರ್ಮವನ್ನು ಅವಮಾನಿಸುವ ಉದ್ದೇಶದಿಂದ ಪೂಜಾ ಸ್ಥಳವನ್ನು ಗಾಯಗೊಳಿಸುವುದು ಅಥವಾ ಅಪವಿತ್ರಗೊಳಿಸುವುದು) ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ವೀಡಿಯೊವನ್ನು ಸಾರ್ವಜನಿಕವಾಗಿ ಪ್ಲೇ ಮಾಡಲಾಗುತ್ತಿದೆ ಮತ್ತು ಹಿಂದೂ ಧರ್ಮವನ್ನು ಅಪಹಾಸ್ಯ ಮಾಡಲಾಗುತ್ತಿದೆ. ತಕ್ಷಣವೇ ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಇಲ್ಲದಿದ್ದರೆ ವಿಧ್ವಂಸಕ ಕೃತ್ಯಗಳು ನಡೆದರೆ ಅದಕ್ಕೆ ಅವರೇ (ರೆಸ್ಟೋ-ಬಾರ್) ಜವಾಬ್ದಾರರಾಗಿರುತ್ತಾರೆ ಎಂದು ಬಳಕೆದಾರರು ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ ಮತ್ತು ಈ ಪೋಸ್ಟ್‌ನಲ್ಲಿ ಯುಪಿ ಪೊಲೀಸ್ ಮತ್ತು ನೋಯ್ಡಾ ಪೋಲೀಸ್ ಹ್ಯಾಂಡಲ್‌ಗಳನ್ನು ಟ್ಯಾಗ್ ಮಾಡಿದ್ದಾರೆ.

Published On - 10:42 am, Tue, 11 April 23

ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
Nithya Bhavishya: ನವರಾತ್ರಿಯ ಮೂರನೇ ದಿನದ ರಾಶಿ ಭವಿಷ್ಯ ತಿಳಿಯಿರಿ
Nithya Bhavishya: ನವರಾತ್ರಿಯ ಮೂರನೇ ದಿನದ ರಾಶಿ ಭವಿಷ್ಯ ತಿಳಿಯಿರಿ
ಶ್ರೀರಂಗಪಟ್ಟಣ ದಸರಾ ವೇದಿಕೆಗೆ ಶಿವಣ್ಣ ಎಂಟ್ರಿ; ಅಭಿಮಾನಿಗಳಿಗೆ ಭಾರಿ ಖುಷಿ
ಶ್ರೀರಂಗಪಟ್ಟಣ ದಸರಾ ವೇದಿಕೆಗೆ ಶಿವಣ್ಣ ಎಂಟ್ರಿ; ಅಭಿಮಾನಿಗಳಿಗೆ ಭಾರಿ ಖುಷಿ
ಮನೆಯೆದುರು ಇಟ್ಟಿದ್ದ ಚಪ್ಪಲಿಯೇ ಮಾಯ; ಈ ಕಳ್ಳನ ಕೆಲಸ ನೋಡಿ
ಮನೆಯೆದುರು ಇಟ್ಟಿದ್ದ ಚಪ್ಪಲಿಯೇ ಮಾಯ; ಈ ಕಳ್ಳನ ಕೆಲಸ ನೋಡಿ
ಜಮ್ಮುವಿನ ಕತ್ರಾದಲ್ಲಿ ಭಾರೀ ಬಸ್‌ ಬೆಂಕಿ ದುರಂತ
ಜಮ್ಮುವಿನ ಕತ್ರಾದಲ್ಲಿ ಭಾರೀ ಬಸ್‌ ಬೆಂಕಿ ದುರಂತ
ಬೆಂಗಳೂರು: ಭೂಮಿ ಪೂಜೆಗೂ ಮುನ್ನ ಜಮೀರ್ ಪ್ರಾರ್ಥನೆ ಹೇಗಿತ್ತು ನೋಡಿ
ಬೆಂಗಳೂರು: ಭೂಮಿ ಪೂಜೆಗೂ ಮುನ್ನ ಜಮೀರ್ ಪ್ರಾರ್ಥನೆ ಹೇಗಿತ್ತು ನೋಡಿ
ಕೀ ವಿಚಾರಕ್ಕೆ ಸ್ವರ್ಗದ ಮಂದಿ ಜತೆ ನರಕದವರ ಕಿರಿಕ್; ದೊಡ್ಡ ಜಗಳದ ಮುನ್ಸೂಚನೆ
ಕೀ ವಿಚಾರಕ್ಕೆ ಸ್ವರ್ಗದ ಮಂದಿ ಜತೆ ನರಕದವರ ಕಿರಿಕ್; ದೊಡ್ಡ ಜಗಳದ ಮುನ್ಸೂಚನೆ