Sign In

By signing in or creating an account, you agree with Associated Broadcasting Company's Terms & Conditions and Privacy Policy.

Noida: ವಜಾ ಮಾಡಿದ್ದಕ್ಕೆ ಕೋಪಗೊಂಡು 14 ಕಾರುಗಳ ಮೇಲೆ ಆಸಿಡ್ ಸುರಿದ ಭೂಪ!

ಕೆಲಸದಿಂದ ವಜಾ ಮಾಡಿದ್ದಕ್ಕೆ ಕೋಪಗೊಂಡು ಬುಧವಾರ (ಮಾರ್ಚ್ 15) ಬೆಳಗ್ಗೆ 14 ಕಾರುಗಳಿಗೆ ಆಸಿಡ್ ಹಾಕಿ ವಿಕೃತಿ ಮೆರೆದಿದ್ದಾನೆ. ಈ ಘಟನೆಯು ಮ್ಯಾಕ್ಸ್‌ಬ್ಲಿಸ್ ವೈಟ್ ಹೌಸ್ ಸೊಸೈಟಿಯ ಪಾರ್ಕಿಂಗ್ ಪ್ರದೇಶದಲ್ಲಿನ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Noida: ವಜಾ ಮಾಡಿದ್ದಕ್ಕೆ ಕೋಪಗೊಂಡು 14 ಕಾರುಗಳ ಮೇಲೆ ಆಸಿಡ್ ಸುರಿದ ಭೂಪ!
Noida Man pouring acid on 14 carsImage Credit source: Twitter
Follow us
ನಯನಾ ಎಸ್​ಪಿ
|

Updated on:Mar 18, 2023 | 1:52 PM

ನೋಯ್ಡಾ: ಕೆಲಸದಿಂದ ವಜಾ ಮಾಡಿದಾಗ ಮನಸ್ಸಿಗೆ ನೋವಾಗೋದು ಸಹಜ, ಅದಕ್ಕೆ ಸಾಮನ್ಯವಾಗಿ ಜನ ಕಣ್ಣೀರಿಡುತ್ತಾರೆ, ಇಲ್ಲದಿದ್ದರೆ ವಜಾ (Suspend) ಮಾಡಿದವರಿಗೆ ಸರಿಯಾಗಿ ಬಯ್ಯುತ್ತಾರೆ. ಆದರೆ ನೋಯ್ಡಾ ಮೂಲದ ವ್ಯಕ್ತಿಯೊಬ್ಬ ಕಾನೂನನ್ನು (Indian Law) ಕೈಗೆ ತೆಗೆದುಕೊಂಡಿರುವ ಘಟನೆ ಬೆಳಕಿಗೆ ಬಂದಿದೆ. ನೋಯ್ಡಾ ಸೆಕ್ಟರ್ 75 ರ (Noida Sector 75) ಬಹುಮಹಡಿ ಸೊಸೈಟಿಯಲ್ಲಿ ನಿವಾಸಿಗಳ ಕಾರುಗಳನ್ನು ತೊಳೆಯುವ ಮೂಲಕ ಜೀವನ ಸಾಗಿಸುತ್ತಿದ್ದ 25 ವರ್ಷದ ವ್ಯಕ್ತಿಯನ್ನು ಕಳಪೆ ಕೆಲಸದ ಕಾರಣದಿಂದ ಕೆಲಸದಿಂದ ವಜಾ ಮಾಡಿದ್ದರು. ಇದೇ ಕೋಪಕ್ಕೆ ಬುಧವಾರ (ಮಾರ್ಚ್ 15) ಬೆಳಗ್ಗೆ ಇಲ್ಲಿನ ನಿವಾಸಿಗಳ 14 ಕಾರುಗಳ ಮೇಲೆ ಆಸಿಡ್ ಸುರಿದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಗುರುವಾರ ನೋಯ್ಡಾ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಬುಧವಾರ ಬೆಳಗ್ಗೆ ನಡೆದ ಈ ಘಟನೆಯು ಮ್ಯಾಕ್ಸ್‌ಬ್ಲಿಸ್ ವೈಟ್ ಹೌಸ್ ಸೊಸೈಟಿಯ ಪಾರ್ಕಿಂಗ್ ಪ್ರದೇಶದಲ್ಲಿನ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಹರ್ದೋಯ್ ಜಿಲ್ಲೆಗೆ ಸೇರಿದ ರಾಮರಾಜ್​ ಅವರನ್ನು ನಂತರ ಭದ್ರತಾ ಸಿಬ್ಬಂದಿ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ರಾಮರಾಜ್ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 427 (ಕಿಡಿಗೇಡಿತನ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಸೆಕ್ಟರ್ 113 ಪೊಲೀಸ್ ಠಾಣೆಯ ಠಾಣಾಧಿಕಾರಿ ಜಿತೇಂದ್ರ ಸಿಂಗ್ ತಿಳಿಸಿದ್ದಾರೆ.

ಅಲ್ಲಿನ ನಿವಾಸಿಗಳ ಪ್ರಕಾರ, ರಾಮರಾಜ್ 2016 ರಲ್ಲಿ ಸೊಸೈಟಿಯಲ್ಲಿ ಕಾರುಗಳನ್ನು ತೊಳೆಯಲು ಪ್ರಾರಂಭಿಸಿದರು. “ಸುಮಾರು ಒಂದು ವಾರದ ಹಿಂದೆ, ಕೆಲವು ನಿವಾಸಿಗಳು ಅವರ ಕೆಲಸದಿಂದ ಸಂತೋಷವಾಗದ ಕಾರಣ ಕೆಲಸದಿಂದ ತೆಗೆದುಹಾಕಲು ನಿರ್ಧರಿಸಿದರು. ಸೊಸೈಟಿಯ ಇತರ ಮನೆಯಲ್ಲಿ ರಾಮರಾಜ್ ಕೆಲಸ ಮಾಡುತ್ತಿದ್ದ ಕಾರಣ, ಅವರ ಪ್ರವೇಶವನ್ನು ನಿರ್ಬಂಧಿಸಿರಲಿಲ್ಲ. ಬುಧವಾರ ಬೆಳಗ್ಗೆ 9.15ರ ಸುಮಾರಿಗೆ ನೆಲಮಾಳಿಗೆಯಲ್ಲಿ ನಿಲ್ಲಿಸಿದ್ದ ಸುಮಾರು 15 ಕಾರುಗಳ ಮೇಲೆ ಆ್ಯಸಿಡ್‌ ಸುರಿಯುತ್ತಿರುವುದನ್ನು ಸೆಕ್ಯೂರಿಟಿ ನೋಡಿದ್ದಾರೆ. ಈ ಕಾರುಗಳು ಅವರನ್ನು ಕೆಲಸದಿಂದ ವಜಾ ಮಾಡಿದವರ ಒಡೆತನದಲ್ಲಿದ್ದವು’ ಎಂದು ಸೊಸೈಟಿಯ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ಉಪಾಧ್ಯಕ್ಷ ಸಂಜಯ್ ಪಂಡಿತ್ ಹೇಳಿದರು.

“ರಾಮರಾಜ್ ಅಪರಾಧ ಮಾಡಿದ ನಂತರ ಸ್ಥಳದಿಂದ ಪರಾರಿಯಾಗಿದ್ದಾನೆ, ಆದರೆ ಭದ್ರತಾ ಸಿಬ್ಬಂದಿ ಅವನನ್ನು ಹಿಡಿಯುವಲ್ಲಿ ಯಶಸ್ವಿಯಾದರು. ಪೊಲೀಸರಿಗೆ ಒಪ್ಪಿಸಲಾಗಿದೆ ಮತ್ತು ಕಾರು ಮಾಲೀಕರು ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ” ಎಂದು ಪಂಡಿತ್ ತಿಳಿಸಿದರು.

ಇದನ್ನೂ ಓದಿ: ಅನುಕಂಪದ ನೌಕರಿ ಆಸೆಗೆ ಗಂಡನನ್ನೇ ಕೊಲೆ ಮಾಡಿ ಸೀಲಿಂಗ್ ಫ್ಯಾನ್​ಗೆ ನೇತು ಹಾಕಿದ್ದ ಪತ್ನಿ; ಆಮೇಲೇನಾಯ್ತು?

ರಾಮರಾಜ್ ಅವರನ್ನು ವಶಕ್ಕೆ ಪಡೆಯಲಾಗಿದ್ದು, ಆತನ ವಿರುದ್ಧ ನಾನ್-ಕಾಗ್ನಿಜಬಲ್ ವರದಿಯನ್ನು ದಾಖಲಿಸಲಾಗಿದೆ. ವಿಚಾರಣೆಯ ಸಮಯದಲ್ಲಿ, ಯಾರೋ ತನಗೆ ಆಸಿಡ್ ನೀಡಿದರು ಮತ್ತು ಕಾರುಗಳನ್ನು ಹಾನಿಗೊಳಿಸಿದ್ದಕ್ಕೆ ಕ್ಷಮಿಸಿ ಎಂದು ಅವರು ಪೊಲೀಸರಿಗೆ ತಿಳಿಸಿದರು, ”ಎಂದು ಸಬ್-ಇನ್ಸ್ಪೆಕ್ಟರ್ (SHO) ಹೇಳಿದರು.

Published On - 1:43 pm, Sat, 18 March 23

ನಗರಸಭೆ ಮತ್ತು ಜಿಲ್ಲಾಡಳಿತ ವಿರುದ್ಧ ಬೆಂಕಿಯುಗುಳಿದ ಯಾದಗಿರಿ ನಿವಾಸಿಗಳು
ನಗರಸಭೆ ಮತ್ತು ಜಿಲ್ಲಾಡಳಿತ ವಿರುದ್ಧ ಬೆಂಕಿಯುಗುಳಿದ ಯಾದಗಿರಿ ನಿವಾಸಿಗಳು
ಲೈವ್​ನಲ್ಲೇ ಅಂಬಾಟಿ ರಾಯುಡು ಚಳಿ ಬಿಡಿಸಿದ ನವಜೋತ್ ಸಿಂಗ್ ಸಿಧು
ಲೈವ್​ನಲ್ಲೇ ಅಂಬಾಟಿ ರಾಯುಡು ಚಳಿ ಬಿಡಿಸಿದ ನವಜೋತ್ ಸಿಂಗ್ ಸಿಧು
ಸಿಕ್ಕ‌ಸಿಕ್ಕ ಮನೆಗಳಿಗೆ ನುಗ್ಗಿದ ಆಸಾಮಿ: ಮೊಬೈಲ್, ವಾಚ್ ಕಳ್ಳತನ
ಸಿಕ್ಕ‌ಸಿಕ್ಕ ಮನೆಗಳಿಗೆ ನುಗ್ಗಿದ ಆಸಾಮಿ: ಮೊಬೈಲ್, ವಾಚ್ ಕಳ್ಳತನ
ಧನ್ವೀರ್ ಜೊತೆ ಸಿನಿಮಾ ಮಾಡ್ತಾರೆ ದರ್ಶನ್; ಸೂಚನೆ ಕೊಟ್ಟ ದಾಸ
ಧನ್ವೀರ್ ಜೊತೆ ಸಿನಿಮಾ ಮಾಡ್ತಾರೆ ದರ್ಶನ್; ಸೂಚನೆ ಕೊಟ್ಟ ದಾಸ
ಬಸನಗೌಡ ಯತ್ನಾಳ್ ಬಗ್ಗೆ ಮಾತಾಡಲು ಇಚ್ಛಿಸದ ವಿಜಯೇಂದ್ರ
ಬಸನಗೌಡ ಯತ್ನಾಳ್ ಬಗ್ಗೆ ಮಾತಾಡಲು ಇಚ್ಛಿಸದ ವಿಜಯೇಂದ್ರ
ತುಮಕೂರು ಜಿಲ್ಲೆ ನೀರಿನ ಯೋಜನೆಗಳ ಬಗ್ಗೆ ಶ್ರೀಗಳಿಗೆ ವಿವರಿಸಿದ ಪರಮೇಶ್ವರ್
ತುಮಕೂರು ಜಿಲ್ಲೆ ನೀರಿನ ಯೋಜನೆಗಳ ಬಗ್ಗೆ ಶ್ರೀಗಳಿಗೆ ವಿವರಿಸಿದ ಪರಮೇಶ್ವರ್
ಕಾಂಗ್ರೆಸ್ ಅಧಿಕಾರದಲ್ಲಿ 50 ವಸ್ತುಗಳ ಬೆಲೆ ಜಾಸ್ತಿಯಾಗಿದೆ: ಹಿರಿಯ ನಾಗರಿಕ
ಕಾಂಗ್ರೆಸ್ ಅಧಿಕಾರದಲ್ಲಿ 50 ವಸ್ತುಗಳ ಬೆಲೆ ಜಾಸ್ತಿಯಾಗಿದೆ: ಹಿರಿಯ ನಾಗರಿಕ
ತುಮಕೂರು ರೈಲ್ವೆ ನಿಲ್ದಾಣಕ್ಕೆ ಶ್ರೀಗಳ ಹೆಸರು: ಪರಮೇಶ್ವರ್ ಹೇಳಿದ್ದಿಷ್ಟು
ತುಮಕೂರು ರೈಲ್ವೆ ನಿಲ್ದಾಣಕ್ಕೆ ಶ್ರೀಗಳ ಹೆಸರು: ಪರಮೇಶ್ವರ್ ಹೇಳಿದ್ದಿಷ್ಟು
ಧನ್ವೀರ್ ಮದುವೆಗೆ ಯಾವ ಬಟ್ಟೆ ಧರಿಸಬೇಕು? ಪ್ಲ್ಯಾನ್ ರಿವೀಲ್ ಮಾಡಿದ ದಾಸ
ಧನ್ವೀರ್ ಮದುವೆಗೆ ಯಾವ ಬಟ್ಟೆ ಧರಿಸಬೇಕು? ಪ್ಲ್ಯಾನ್ ರಿವೀಲ್ ಮಾಡಿದ ದಾಸ
VIDEO: ರಶೀದ್ ಖಾನ್ ವಿಚಿತ್ರ ಶಾಟ್, ಯಶಸ್ವಿ ಜೈಸ್ವಾಲ್ ಅದ್ಭುತ ಕ್ಯಾಚ್
VIDEO: ರಶೀದ್ ಖಾನ್ ವಿಚಿತ್ರ ಶಾಟ್, ಯಶಸ್ವಿ ಜೈಸ್ವಾಲ್ ಅದ್ಭುತ ಕ್ಯಾಚ್