ರಾಯಬಾಗ: ಸರ್ಕಾರಿ ಬಸ್ ಡಿಕ್ಕಿ, ಬೈಕ್​ನಲ್ಲಿದ್ದ ಮೂವರು ಸ್ಥಳದಲ್ಲೇ ದುರ್ಮರಣ

ಗಂಗಾಧರ​ ಬ. ಸಾಬೋಜಿ

|

Updated on:Mar 18, 2023 | 9:14 PM

ಸರ್ಕಾರಿ ಬಸ್ ಡಿಕ್ಕಿಯಾಗಿ ಬೈಕ್​ನಲ್ಲಿದ್ದ ಮೂವರು ದುರ್ಮರಣ ಹೊಂದಿರುವಂತಹ ದಾರುಣ ಘಟನೆ ಜಿಲ್ಲೆಯ ರಾಯಬಾಗ ತಾಲೂಕಿನ ಹಾರೂಗೇರಿ ಬಳಿ ನಡೆದಿದೆ.

ರಾಯಬಾಗ: ಸರ್ಕಾರಿ ಬಸ್ ಡಿಕ್ಕಿ, ಬೈಕ್​ನಲ್ಲಿದ್ದ ಮೂವರು ಸ್ಥಳದಲ್ಲೇ ದುರ್ಮರಣ
ಸ್ಥಳಕ್ಕೆ ಕುಡಚಿ ಪೊಲೀಸರ ಭೇಟಿ, ಪರಿಶೀಲನೆ

ಬೆಳಗಾವಿ: ಸರ್ಕಾರಿ ಬಸ್ ಡಿಕ್ಕಿಯಾಗಿ (accident) ಬೈಕ್​ನಲ್ಲಿದ್ದ ಮೂವರು ದುರ್ಮರಣ ಹೊಂದಿರುವಂತಹ ದಾರುಣ ಘಟನೆ ಜಿಲ್ಲೆಯ ರಾಯಬಾಗ ತಾಲೂಕಿನ ಹಾರೂಗೇರಿ ಬಳಿ ನಡೆದಿದೆ. ಹಾಳಸಿರಬೂರ ಗ್ರಾಮದ ನಿವಾಸಿ ಭಗವಂತ ಕಾಂಬಳೆ(45), ವಿಶ್ವನಾಥ್ ಕಾಂಬಳೆ(24), ಕುಮಾರ್ ಕಾಂಬಳೆ(35) ಮೃತರು. ಘಟನಾ ಸ್ಥಳಕ್ಕೆ ಕುಡಚಿ ಠಾಣೆಯ ಪೊಲೀಸರ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಮತ್ತೊಂದು ಪ್ರಕರಣದಲ್ಲಿ ನೆಲಮಂಗಲ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಸೌದೆ ತುಂಬಿದ ಟ್ರ್ಯಾಕ್ಟರ್, ಬುಲೆರೋ ಜೀಪ್ ಹಾಗೂ ಕಾರ್ ನಡುವೆ ಸರಣಿಯ ಅಪಘಾತ ಸಂಭವಿಸಿದೆ. ಘಟನೆ ಹಿನ್ನೆಲೆ ಕುಣಿಗಲ್ ರಸ್ತೆಯ ಯಂಟಗಾಕನಹಳ್ಳಿ ಬಳಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ರಸ್ತೆಯಲ್ಲಿ ಟ್ರಾಕ್ಟರ್​ನಲ್ಲಿ‌ ಇದ್ದ ಸೌದೆ ಚೆಲ್ಲಾಡಿದ್ದರಿಂದ ನಿಂತಲ್ಲೆ ನಿಂತ ವಾಹನಗಳು. ಘಟನೆಯಲ್ಲಿ ಯಾವುದೇ ಪ್ರಾಣಹಾನಿ‌ ಸಂಭವಿಸಿಲ್ಲ. ನೆಲಮಂಗಲ ಸಂಚಾರಿ ಠಾಣಾ ವ್ಯಾಪ್ತಿಯಲ್ಲಿ‌ ಪ್ರಕರಣ ದಾಖಲಾಗಿದೆ.

ಸಿಡಿಲು ಬಡಿದು ಮೂರು ಕುರಿಗಳು ಸಾವು

ರಾಯಚೂರು: ಸಿಡಿಲು ಬಡಿದು ಮೂರು ಕುರಿಗಳು ಸಾವನ್ನಪ್ಪರುವಂತಹ ಸನ್ನಿವೇಶ ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಲಿಂಗದಹಳ್ಳಿಯಲ್ಲಿ ನಡೆದಿದೆ. ಮಧ್ಯಾಹ್ನ ಗುಡುಗು ಸಮೇತ ಮಳೆ ಸುರಿದಿತ್ತು. ದೇವದುರ್ಗ, ಲಿಂಗಸುಗೂರು ತಾಲ್ಲೂಕಿನ ಹಲವು ಕಡೆ ಮಳೆರಾಯ ಅಬ್ಬರಿಸಿದ್ದ. ಈ ಹಿನ್ನೆಲೆ ಸಿಡಿಲು ಬಡಿದು ಮೂರು ಕುರಿಗಳು ಮೃತಪಟ್ಟಿವೆ. ಬಸವರಾಜ್ ಅನ್ನೋರಿಗೆ ಸೇರಿದ ಕುರಿಗಳು ಎನ್ನಲಾಗಿದೆ. ಸ್ಥಳಕ್ಕೆ ತಾಲ್ಲೂಕು ಅಧಿಕಾರಿಗಳ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ಇದನ್ನೂ ಓದಿ: 8 ವರ್ಷದ ಬಳಿಕ ಯುವಕನ ಭೀಭತ್ಸ ಕೊಲೆ ರಹಸ್ಯ ಬೆಳಕಿಗೆ: ತಮ್ಮನನ್ನೇ ಹತ್ಯೆ ಮಾಡಿದ್ದ ಅಕ್ಕ, ಪ್ರಿಯಕರ ಅರೆಸ್ಟ್​​

ಲಾರಿ ಡಿಕ್ಕಿಯಾಗಿ ಸ್ಕೂಟರ್​​ನಲ್ಲಿದ್ದ ಇಬ್ಬರು ಸ್ಥಳದಲ್ಲೇ ದುರ್ಮರಣ

ಮಂಗಳೂರು: ಲಾರಿ ಡಿಕ್ಕಿಯಾಗಿ ಸ್ಕೂಟರ್​​ನಲ್ಲಿದ್ದ ಇಬ್ಬರು ಸ್ಥಳದಲ್ಲೇ ದುರ್ಮರಣ ಹೊಂದಿರುವಂತಹ ಘನಟೆ ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರಿನ ನಂತೂರು ಸಿಗ್ನಲ್​ನಲ್ಲಿ ನಡೆದಿದೆ. ಸ್ಯಾಮ್ಯುಯೆಲ್ ಜೇಸುದಾಸ್(67), 30 ವರ್ಷದ ಯುವತಿ ಮೃತರು. ಆಕ್ರೋಶಗೊಂಡ ಸಾರ್ವಜನಿಕರಿಂದ ಲಾರಿ ಚಾಲಕನಿಗೆ ಥಳಿಸಲಾಗಿದೆ. ಘಟನಾ ಸ್ಥಳಕ್ಕೆ ಕದ್ರಿ ಠಾಣೆಯ ಪೊಲೀಸರ ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ಲಾರಿ ಚಾಲಕನನ್ನು ವಶಕ್ಕೆ ಪಡೆದಿದ್ದಾರೆ.

ಮರಕ್ಕೆ ನೇಣು ಬಿಗಿದು ಕಾರ್ಮಿಕ ಆತ್ಮಹತ್ಯೆ

ದಕ್ಷಿಣ ಕನ್ನಡ: ಮರಕ್ಕೆ ನೇಣು ಬಿಗಿದು ಕಾರ್ಮಿಕ ದಿವಾಕರ ಗೌಡ (44) ಎಂಬಾತ ಆತ್ಮಹತ್ಯೆ ಮಾಡಿಕೊಂಡ ಘಟನೆ ಬಂಟ್ವಾಳ ತಾಲೂಕಿನ ರಾಯಿ ಗ್ರಾಮದ ಮುದ್ದಾಜೆ ಎಂಬಲ್ಲಿ ನಡೆದಿದೆ. ಅವಿವಾಹಿತರಾಗಿದ್ದ ಮೃತ ದಿವಾಕರ ಗೌಡ ಕೃಷಿ ಕಾರ್ಮಿಕನಾಗಿ ದುಡಿಯುತ್ತಿದ್ದರು. ಮನೆ ಸಮೀಪದ ಮರವೊಂದಕ್ಕೆ ಚೂಡಿದಾರ ಶಾಲು ಬಳಸಿ ನೇಣಿಗೆ ಶರಣಾಗಿದ್ದಾರೆ. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ಇನ್ನು ಈ ಕುರಿತು ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಗದಗ: ತಾಯಿಯ ಅನೈತಿಕ ಸಂಬಂಧ ಪ್ರಶ್ನೆ ಮಾಡಿದ ಅಪ್ರಾಪ್ತ ಬಾಲಕಿಯನ್ನ ಕೊಂದ ದುರುಳ

ಒಂಟಿ ಮಹಿಳೆ ವೃದ್ದೆಯರನ್ನ‌ ಟಾರ್ಗೆಟ್ ಮಾಡಿಕೊಂಡು ಸರಗಳ್ಳತನ

ದೇವನಹಳ್ಳಿ: ಬೆಂಗಳೂರು ಗ್ರಾಮಾಂತರ ಭಾಗದಲ್ಲಿ ಸರಗಳ್ಳರ ಹಾವಳಿ ಹೆಚ್ಚಾಗಿದ್ದು, ಒಂಟಿ ಮಹಿಳೆ, ವೃದ್ದೆಯರನ್ನ‌ ಟಾರ್ಗೆಟ್ ಮಾಡಿಕೊಂಡು ಸರಗಳ್ಳತನ ಮಾಡಲಾಗುತ್ತಿದೆ. ಕಳೆದೊಂದು ವಾರದಲ್ಲಿ ಎರಡು ಕಡೆ ಸರಗಳ್ಳತನ ನಡೆದಿದೆ. ದೊಡ್ಡಬಳ್ಳಾಪುರದ ಕರೇನಹಳ್ಳಿಯ ನಾರಾಯಣಮ್ಮ ಬಳಿ 45 ಗ್ರಾಂ ಮತ್ತು ತೇರಿನ ಬೀದಿಯ ಸಾವಿತ್ರಮ್ಮ ಬಳಿ 60 ಗ್ರಾಂ‌ ನ‌ ಚಿನ್ನದ ಸರಗಳ್ಳತನವಾಗಿದೆ. ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು ಅಪರಿಚಿತರಿಂದ ಕೃತ್ಯವೆಸಗಲಾಗಿದೆ. ಹಾಡ ಹಗಲೆ ಸರಗಳ್ಳತನಗಳಿಂದ ಮಹಿಳೆಯರು ಬೆಚ್ಚಿ ಬಿದಿದ್ದಾರೆ. ದೊಡ್ಡಬಳ್ಳಾಪುರ ನಗರ ಮತ್ತು ಗ್ರಾಮಾಂತರ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada