8 ವರ್ಷದ ಬಳಿಕ ಯುವಕನ ಭೀಭತ್ಸ ಕೊಲೆ ರಹಸ್ಯ ಬೆಳಕಿಗೆ: ತಮ್ಮನನ್ನೇ ಹತ್ಯೆ ಮಾಡಿದ್ದ ಅಕ್ಕ, ಪ್ರಿಯಕರ ಅರೆಸ್ಟ್​​

2015 ಆ. 11ರಂದು ನಡೆದಿದ್ದ ಯುವಕನ ಭೀಭತ್ಸ ಕೊಲೆ ರಹಸ್ಯ 8 ವರ್ಷದ ಬಳಿಕ ಬೆಳಕಿಗೆ ಬಂದಿದೆ. ಭಾಗ್ಯಶ್ರೀ ಮತ್ತು ಶಿವಪುತ್ರನನ್ನು ಬೆಂಗಳೂರಿನ ಜಿಗಣಿ ಪೊಲೀಸರು ಬಂಧಿಸಿದ್ದಾರೆ.

8 ವರ್ಷದ ಬಳಿಕ ಯುವಕನ ಭೀಭತ್ಸ ಕೊಲೆ ರಹಸ್ಯ ಬೆಳಕಿಗೆ: ತಮ್ಮನನ್ನೇ ಹತ್ಯೆ ಮಾಡಿದ್ದ ಅಕ್ಕ, ಪ್ರಿಯಕರ ಅರೆಸ್ಟ್​​
ಭಾಗ್ಯಶ್ರೀ, ಲಿಂಗರಾಜ್, ಶಿವಪುತ್ರ,
Follow us
ಗಂಗಾಧರ​ ಬ. ಸಾಬೋಜಿ
|

Updated on:Mar 18, 2023 | 4:40 PM

ಬೆಂಗಳೂರು: 2015 ಆ. 11ರಂದು ನಡೆದಿದ್ದ ಯುವಕನ ಭೀಭತ್ಸ ಕೊಲೆ (murder) ರಹಸ್ಯ 8 ವರ್ಷದ ಬಳಿಕ ಬೆಳಕಿಗೆ ಬಂದಿದೆ. ಸಿ ರಿಪೋರ್ಟ್ ಆಗಿದ್ದ ಕೇಸ್​ನ ಹಂತಕರು ಕೊನೆಗೂ ಸಿಕ್ಕಿ ಬಿದಿದ್ದಾರೆ. ಭಾಗ್ಯಶ್ರೀ ಮತ್ತು ಶಿವಪುತ್ರನನ್ನು ಬೆಂಗಳೂರಿನ ಜಿಗಣಿ ಪೊಲೀಸರು ಬಂಧಿಸಿದ್ದಾರೆ. ಲಿಂಗರಾಜ್ ಪೂಜಾರಿ ಎಂಬ ಯುವಕನನ್ನು ಕೊಲೆ ಮಾಡಿ ಮೃತದೇಹ ಪೀಸ್ ಪೀಸ್ ಮಾಡಿ ಕೈ, ಕಾಲು, ರುಂಡ ಕತ್ತರಿಸಿ ಏರ್​ ಬ್ಯಾಗ್​ನಲ್ಲಿ ಈ ಇಬ್ಬರು ಆರೋಪಿಗಳು ತುಂಬಿದ್ದರು. ಗುರುತು ಸಿಗದಂತೆ ದೇಹದ ಭಾಗ ಬೇರೆ ಬೇರೆ ಕಡೆ ಎಸೆದಿದ್ದರು. ಬಳಿಕ ಮಹಾರಾಷ್ಟ್ರದ ನಾಸಿಕ್​ನಲ್ಲಿ ತಲೆಮರೆಸಿಕೊಂಡಿದ್ದರು. ಬಂಧಿತರು ಮೂಲತಃ ವಿಜಯಪುರ ಜಿಲ್ಲೆಯವರು. ಆದರೆ ಬೆಂಗಳೂರು ಹೊರವಲಯ ಜಿಗಣಿ ಇಂಡಸ್ಟ್ರಿಯಲ್ ಏರಿಯಾದಲ್ಲಿ ಕೆಲಸ ಮಾಡಿಕೊಂಡಿದ್ದರು. ಜೊತೆಗೆ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಜಿಗಣಿಯ ವಡೇರಮಂಚನಹಳ್ಳಿಯಲ್ಲಿ ಬಾಡಿಗೆ ಮನೆಯಲ್ಲಿ ಬಂಧಿತರು ವಾಸವಾಗಿದ್ದರು.

ಈ ವೇಳೆ ಜಿಗಣಿಯ ವಡೇರಮಂಚನಹಳ್ಳಿಗೆ ಲಿಂಗರಾಜು ಬಂದಿದ್ದಾನೆ. ಇಬ್ಬರು ಒಂದೇ ಮನೆಯಲ್ಲಿ ವಾಸ ಮಾಡುತ್ತಿರೋದಕ್ಕೆ ಅಕ್ಕನ ಜೊತೆ ಗಲಾಟೆ ಮಾಡಿದ್ದಾನೆ. ಇಬ್ಬರ ಪ್ರೀತಿಗೆ ಭಾಗ್ಯಶ್ರೀ ಸಹೋದರ ಲಿಂಗರಾಜು ವಿರೋಧಿಸಿದ್ದಾನೆ. ಹಾಗಾಗಿ ಪ್ರಿಯಕರ ಶಿವಪುತ್ರ ಜೊತೆ ಸೇರಿ ತಮ್ಮನನ್ನೇ ಭಾಗ್ಯಶ್ರೀ ಹತ್ಯೆಗೈದಿದ್ದಾಳೆ. ಬಳಿಕ ಆತನ ಮೃತದೇಹವನ್ನು ಪೀಸ್ ಪೀಸ್ ಮಾಡಿದ್ದಾರೆ. ಬ್ಯಾಗ್​ನಲ್ಲಿ ಹಾಕಿಕೊಂಡು ದೇಹದ ಭಾಗಗಳನ್ನು ಬೇರೆ ಬೇರೆ ಕಡೆ ಬಿಸಾಡಿದ್ದಾರೆ. ಕೆರೆಯಲ್ಲಿ ಕಾಲು ಮಾತ್ರ ಪೊಲೀಸರಿಗೆ ಸಿಕ್ಕಿತ್ತು.

ಇದನ್ನೂ ಓದಿ: ಬಾಗಲಕೋಟೆ: ಗಿರಿಸಾಗರ ಗ್ರಾಮದಿಂದ ನಾಪತ್ತೆಯಾಗಿದ್ದ ಬಾಲಕಿ ಶವವಾಗಿ ಪತ್ತೆ

ಆರೋಪಿಗಳು ಹೆಸರು ಬದಲಿಸಿಕೊಂಡು ನಾಸಿಕ್​​ಗೆ ಹೋಗಿ ತಲೆಮರೆಸಿಕೊಂಡಿದ್ದರು. 8 ವರ್ಷಗಳ ಬಳಿಕ ಕೊಲೆ ಆರೋಪಿಗಳನ್ನು  ಪೊಲೀಸರು ಬಂಧಿಸಿದ್ದು, ಜಿಗಣಿ ಪೊಲೀಸರ ಕಾರ್ಯಕ್ಕೆ ಎಸ್​ಪಿ ಮಲ್ಲಿಕಾರ್ಜುನ್ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಲಾರಿ ಡಿಕ್ಕಿಯಾಗಿ ಸ್ಕೂಟರ್​​ನಲ್ಲಿದ್ದ ಇಬ್ಬರು ಸ್ಥಳದಲ್ಲೇ ದುರ್ಮರಣ

ಮಂಗಳೂರು: ಲಾರಿ ಡಿಕ್ಕಿಯಾಗಿ ಸ್ಕೂಟರ್​​ನಲ್ಲಿದ್ದ ಇಬ್ಬರು ಸ್ಥಳದಲ್ಲೇ ದುರ್ಮರಣ ಹೊಂದಿರುವಂತಹ ಘನಟೆ ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರಿನ ನಂತೂರು ಸಿಗ್ನಲ್​ನಲ್ಲಿ ನಡೆದಿದೆ. ಸ್ಯಾಮ್ಯುಯೆಲ್ ಜೇಸುದಾಸ್(67), 30 ವರ್ಷದ ಯುವತಿ ಮೃತರು. ಆಕ್ರೋಶಗೊಂಡ ಸಾರ್ವಜನಿಕರಿಂದ ಲಾರಿ ಚಾಲಕನಿಗೆ ಥಳಿಸಲಾಗಿದೆ. ಘಟನಾ ಸ್ಥಳಕ್ಕೆ ಕದ್ರಿ ಠಾಣೆಯ ಪೊಲೀಸರ ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ಲಾರಿ ಚಾಲಕನನ್ನು ವಶಕ್ಕೆ ಪಡೆದಿದ್ದಾರೆ.

ಒಂಟಿ ಮಹಿಳೆ ವೃದ್ದೆಯರನ್ನ‌ ಟಾರ್ಗೆಟ್ ಮಾಡಿಕೊಂಡು ಸರಗಳ್ಳತನ

ದೇವನಹಳ್ಳಿ: ಬೆಂಗಳೂರು ಗ್ರಾಮಾಂತರ ಭಾಗದಲ್ಲಿ ಸರಗಳ್ಳರ ಹಾವಳಿ ಹೆಚ್ಚಾಗಿದ್ದು, ಒಂಟಿ ಮಹಿಳೆ, ವೃದ್ದೆಯರನ್ನ‌ ಟಾರ್ಗೆಟ್ ಮಾಡಿಕೊಂಡು ಸರಗಳ್ಳತನ ಮಾಡಲಾಗುತ್ತಿದೆ. ಕಳೆದೊಂದು ವಾರದಲ್ಲಿ ಎರಡು ಕಡೆ ಸರಗಳ್ಳತನ ನಡೆದಿದೆ. ದೊಡ್ಡಬಳ್ಳಾಪುರದ ಕರೇನಹಳ್ಳಿಯ ನಾರಾಯಣಮ್ಮ ಬಳಿ 45 ಗ್ರಾಂ ಮತ್ತು ತೇರಿನ ಬೀದಿಯ ಸಾವಿತ್ರಮ್ಮ ಬಳಿ 60 ಗ್ರಾಂ‌ ನ‌ ಚಿನ್ನದ ಸರಗಳ್ಳತನವಾಗಿದೆ. ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು ಅಪರಿಚಿತರಿಂದ ಕೃತ್ಯವೆಸಗಲಾಗಿದೆ. ಹಾಡ ಹಗಲೆ ಸರಗಳ್ಳತನಗಳಿಂದ ಮಹಿಳೆಯರು ಬೆಚ್ಚಿ ಬಿದಿದ್ದಾರೆ. ದೊಡ್ಡಬಳ್ಳಾಪುರ ನಗರ ಮತ್ತು ಗ್ರಾಮಾಂತರ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಗದಗ: ತಾಯಿಯ ಅನೈತಿಕ ಸಂಬಂಧ ಪ್ರಶ್ನೆ ಮಾಡಿದ ಅಪ್ರಾಪ್ತ ಬಾಲಕಿಯನ್ನ ಕೊಂದ ದುರುಳ

ಮರಕ್ಕೆ ನೇಣು ಬಿಗಿದು ಕಾರ್ಮಿಕ ಆತ್ಮಹತ್ಯೆ

ದಕ್ಷಿಣ ಕನ್ನಡ: ಮರಕ್ಕೆ ನೇಣು ಬಿಗಿದು ಕಾರ್ಮಿಕ ದಿವಾಕರ ಗೌಡ (44) ಎಂಬಾತ ಆತ್ಮಹತ್ಯೆ ಮಾಡಿಕೊಂಡ ಘಟನೆ ಬಂಟ್ವಾಳ ತಾಲೂಕಿನ ರಾಯಿ ಗ್ರಾಮದ ಮುದ್ದಾಜೆ ಎಂಬಲ್ಲಿ ನಡೆದಿದೆ. ಅವಿವಾಹಿತರಾಗಿದ್ದ ಮೃತ ದಿವಾಕರ ಗೌಡ ಕೃಷಿ ಕಾರ್ಮಿಕನಾಗಿ ದುಡಿಯುತ್ತಿದ್ದರು. ಮನೆ ಸಮೀಪದ ಮರವೊಂದಕ್ಕೆ ಚೂಡಿದಾರ ಶಾಲು ಬಳಸಿ ನೇಣಿಗೆ ಶರಣಾಗಿದ್ದಾರೆ. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ಇನ್ನು ಈ ಕುರಿತು ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 4:40 pm, Sat, 18 March 23

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್