ಗದಗ: ತಾಯಿಯ ಅನೈತಿಕ ಸಂಬಂಧ ಪ್ರಶ್ನೆ ಮಾಡಿದ ಅಪ್ರಾಪ್ತ ಬಾಲಕಿಯನ್ನ ಕೊಂದ ದುರುಳ

Kiran Hanumant Madar

|

Updated on:Mar 18, 2023 | 3:08 PM

ಅವರದ್ದು ಮುದ್ದಾದ ಸಂಸಾರ, ಕೀರ್ತಿಗೆ ಒಬ್ಬ ಮಗ, ಆರತಿಗೆ ಒಬ್ಬ ಮಗಳು ಸುಂದರ ಜೀವನ ನಡೆಸುತ್ತಿದ್ದರು. ಈ ಸುಂದರವಾದ ಸಂಸಾರಕ್ಕೆ ಓರ್ವ ಕಾಮುಕ ಎಂಟ್ರಿ ನೀಡಿದ್ದ. ಸಹಾಯದ ನೆಪದಲ್ಲಿ ಸುಂದರ ಸಂಸಾರದ ಯಜಮಾನಿಯನ್ನು ಬುಟ್ಟಿಗೆ ಹಾಕಿಕೊಂಡಿದ್ದಾನೆ. ಈ ಕುರಿತು ತಾಯಿಯ ಅನೈತಿಕ ಸಂಬಂಧ ಪ್ರಶ್ನೇ ಮಾಡಿದ ಅಪ್ರಾಪ್ತ ಬಾಲಕಿಯನ್ನ ಕಿರಾತಕ ಉಸಿರುಗಟ್ಟಿಸಿ ಕ್ರೂರವಾಗಿ ಕೊಂದು ಹಾಕಿದ್ದಾನೆ.

ಗದಗ: ತಾಯಿಯ ಅನೈತಿಕ ಸಂಬಂಧ ಪ್ರಶ್ನೆ ಮಾಡಿದ ಅಪ್ರಾಪ್ತ ಬಾಲಕಿಯನ್ನ ಕೊಂದ ದುರುಳ
ಕೊಲೆಯಾದ ಬಾಲಕಿ, ಆರೋಪಿ

ಗದಗ: ಜಿಲ್ಲೆಯ ಮುಂಡರಗಿ ಪಟ್ಟಣದಲ್ಲಿ ಘನಘೋರ ಘಟನೆ ನಡೆದಿದೆ. ನಾವಿಬ್ಬರು ನಮಗಿಬ್ಬರು ಎಂಬ ಸುಂದರ ಸಂಸಾರದಲ್ಲಿ ಈಗ ಬರಸಿಡಿಲು ಬಡಿದಂತಾಗಿದೆ. 16 ವರ್ಷದ ಮಗಳು ಧಾರುಣ ಕೊಲೆಯಾಗಿದ್ದಾಳೆ. ಅದು ಮಾರ್ಚ್​ 6ರ ಬೆಳಗ್ಗೆ ತಂದೆ, ತಾಯಿ ಇಬ್ಬರು ಮಕ್ಕಳು ಸೇರಿ ಖುಷಿಯಿಂದ ಉಪಹಾರ ಮಾಡಿದ್ದಾರೆ. ಬಳಿಕ ತಂದೆ ತಾಯಿ ಕೂಡ ಕೆಲಸಕ್ಕೆ ಹೋಗಿದ್ದಾರೆ. ಇಬ್ಬರು ಮಕ್ಕಳು ಕೂಡ ಶಾಲೆಗೆ ಹೋಗಿದ್ದಾರೆ. ಎಸ್ಎಸ್ಎಲ್​ಸಿ ಓದುತ್ತಿದ್ದ ಬಾಲಕಿ ಅಂದು ಪೂರ್ವಸಿದ್ಧತಾ ಪರೀಕ್ಷೆ ಮುಗಿಸಿ ಮಧ್ಯಾಹ್ನ ಮನೆಗೆ ಬಂದಿದ್ದಾಳೆ. ಬಾಲಕಿ ಮನೆಯಲ್ಲಿ ಎಂಟ್ರಿಯಾಗಿದ್ದೇ ತಡ ಪಕ್ಕದ ಮನೆಯ ಹಂತಕನೂ ಬೆನ್ನು ಹಿಂದೆಯೇ ಮನೆಯೊಳಗೆ ಸೇರಿದ್ದಾನೆ. ಬಳಿಕ ಅವಳ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನಂತೆ. ಬಾಲಕಿ ಕೂಗಾಟ ಮಾಡಿ ವಿರೋಧಿಸಿದ್ದಾಳೆ. ಆಗ ಕಿರಾತಕ ಅವಳ ಉಸಿರುಗಟ್ಟಿಸಿ ಕ್ರೂರವಾಗಿ ಕೊಂದಿದ್ದಾನೆ.

ಹೌದು ಮುಂಡರಗಿ ಪಟ್ಟಣದ ಖಾಸಗಿ ಹೈಸ್ಕೂಲ್​ನಲ್ಲಿ ಬಾಲಕಿ ಎಸ್ಎಸ್ಎಲ್​ಸಿ ಓದುತ್ತಿದ್ದಳು. ಜಾಣ ಹುಡುಗಿ ಓದಿನಲ್ಲೂ ಮುಂದಿದ್ದಳು. ಅಷ್ಟೇ ಅಲ್ಲ ರಾಷ್ಟ ಮಟ್ಟದ ಯೋಗಾ ಸ್ಪರ್ಧೆಯಲ್ಲಿ ಭಾಗಿಯಾಗಿ ಪ್ರಶಸ್ತಿ ಪಡೆದಿದ್ದಳು. ಹೀಗಾಗಿ ಮನೆಯಲ್ಲಿ ಮಾತ್ರವಲ್ಲ ಸಮಾಜದಲ್ಲೂ ಎಲ್ಲರ ಪ್ರೀತಿಯ ಹುಡುಗಿಯಾಗಿದ್ದಳು.ಆದರೆ ಇಂತಹ ಹುಡುಗಿಯನ್ನ ಅಂದು ಮಟಮಟ ಮಧ್ಯಾಹ್ನವೇ ಉಸಿರುಗಟ್ಟಿಸಿ ಕೊಂದು ಹಾಕಲಾಗಿದೆ. ತಾಯಿ ಖಾಸಗಿ ಶಾಲೆಯಲ್ಲಿ ಶಿಕ್ಷಕಿ ಡ್ಯೂಟಿ ಮುಗಿಸಿ ಮನೆಗೆ ಬಂದು ಬಾಗಿಲು ಬಡಿದರೂ ಬಾಗಿಲು ಓಪನ್ ಮಾಡಿಲ್ಲ. ಮಗಳನ್ನು ಸಾಕಷ್ಟು ಕೂಗಿದ್ದಾಳೆ. ಆ ಮೇಲೆ ಹಿತ್ತಲ ಬಾಗಿಲಿನಿಂದ ತಾಯಿ ಮನೆಯೊಳಗೆ ಹೋಗಿ ಮಗಳ ಘನಘೋರ ಘಟನೆ ಕಂಡು ಬೆಚ್ಚಿ ಬಿದ್ದಿದ್ದಾಳೆ.

ಇದನ್ನೂ ಓದಿ:ಸಂಜೆ ವೇಳೆ ಜೋಡಿ ಸಹೋದರಿಯರನ್ನು ರಾಡ್, ಕಲ್ಲಿನಿಂದ ಜಜ್ಜಿ ಭೀಕರ ಕೊಲೆ -ಕಾರಣವೇನು?

ಅಷ್ಟಕ್ಕೂ ಬಾಲಕಿ ಕೊಲೆಗೆ ಕಾರಣ ಕೇಳಿದ್ರೆ ನೀವೂ ಬೆಚ್ಚಿ ಹೋಗ್ತೀರಾ. ಹೌದು ಮಗಳ ಕೊಲೆಗೆ ತಾಯಿ ಅಕ್ರಮ ಸಂಬಂಧವೇ ಕಾರಣವಂತೆ. ತಾಯಿ ಅನೈತಿಕ ಸಂಬಂಧ ವಿರೋಧ ಮಾಡುತ್ತಿದ್ದ ಬಾಲಕಿಯನ್ನೇ ಕಿರಾತಕ ಕೊಂದು ಹಾಕಿದ್ದಾನೆ. ಮನೆಯಲ್ಲಿ ಉಸಿರುಗಟ್ಟಿಸಿ ಕೊಲೆ ಮಾಡಿ ಕಾಮುಕ ಎಸ್ಕೇಪ್ ಆಗಿದ್ದ. ಮುದ್ದಾದ ಮಗಳು ಕಳೆದುಕೊಂಡು ಕುಟುಂಬಸ್ಥರ ಕಣ್ಣೀರು ಹಾಕುತ್ತಿದ್ದಾರೆ. ನನ್ನ ಮಗಳಿಗೆ ಬಂದಂಥ ಸ್ಥಿತಿ ಯಾರಿಗೂ ಬರಬಾರದು ಎಂದು ಅಮಾಯಕ ತಂದೆ ಕೈಮುಗಿಯುತ್ತಿದ್ದಾನೆ. ದಲಿತ ಬಾಲಕಿಯ ಕ್ರೂರ ಹತ್ಯೆಗೆ ಮುಂಡರಗಿ ಜನರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಿರಾತಕನಿಗೆ ಕಠಿಣ ಶಿಕ್ಷೆ ಆಗಬೇಕು ಎಂದು ಒತ್ತಾಯಿಸಿದ್ದಾರೆ.

ಅಪ್ರಾಪ್ತ ಬಾಲಕಿಯನ್ನ ಕೊಲೆ ಮಾಡಿದ ಕಾಮುಕ

ಅಂದಹಾಗೇ ಈ ಮೆಹಬೂಬ್ ಸಾಬ್ ಬಾಣದ ಹಾಗೂ ಕೊಲೆಯಾದ ಬಾಲಕಿ ತಾಯಿ ನಡುವೆ ಅನೈತಿಕ ಸಂಬಂಧ ಇತ್ತಂತೆ. ಇದು ಬಾಲಕಿಗೆ ಗೊತ್ತಾಗಿದ್ದು, ಅನೈತಿಕ ಸಂಬಂಧಕ್ಕೆ ವಿರೋಧ ಮಾಡುತ್ತಿದ್ದಳು. ಹೀಗಾಗಿ ಬಾಲಕಿಯನ್ನ ಕಂಡರೆ, ಮೆಹಬೂಬ್ ಸಾಬ್ ಬಾಣದನಿಗೆ ಕೋಪ. ಹೀಗಾಗಿ ಮೊನ್ನೆ ಬಾಲಕಿ ಮನೆಯಲ್ಲಿ ಬಾಲಕಿ ಒಬ್ಬಳೇ ಇದ್ದಾಗ ಮನೆಗೆ ಬಂದಿದ್ದಾನೆ. ಅವಳ ಹತ್ತಿರ ಹೋಗಿ ಅವಳನ್ನು ದೈಹಿಕವಾಗಿ ಬಳಸಿಕೊಳ್ಳಲು ಯತ್ನಿಸಿದ್ದಾನಂತೆ. ಆಗ ಬಾಲಕಿ ಕಿರುಚಾಟ ಮಾಡಿದ್ದಾಳಂತೆ. ಆಗ ಅವಳ ಕತ್ತು ಹಿಸುಕಿ, ಉಸಿರು ಗಟ್ಟಿಸಿ ಕೊಲೆ ಮಾಡಿ ಎಸ್ಕೇಪ್ ಆಗಿದ್ದಾನೆ. ಪಟ್ಟಣದಲ್ಲಿ ಈ ಘಟನೆ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಅಲರ್ಟ್ ಆದ ಮುಂಡರಗಿ ಪೊಲೀಸರು ಆರೋಪಿಯನ್ನು ಹೆಡೆಮುರಿ ಕಟ್ಟಿ ಜೈಲಿಗೆ ಅಟ್ಟಿದ್ದಾರೆ.

ಇದನ್ನೂ ಓದಿ:ಪತ್ನಿ ಮತ್ತು ಪ್ರಿಯಕರ ಸೇರಿಕೊಂಡು ಗಂಡನ ಕೊಲೆ ಮಾಡಿದರಾ? ಚಿತ್ತಾಪುರ ಪೊಲೀಸರ ಚಿತ್ತ ಶವಪರೀಕ್ಷೆ ವರದಿಗಾಗಿ ಕಾಯುತ್ತಿರುವುದು ಏಕೆ?

ಇನ್ನು ಮುಂಡರಗಿ ಪಟ್ಟಣದಲ್ಲಿ ತಂದೆ, ತಾಯಿ ಇಬ್ಬರು ಮಕ್ಕಳು ವಾಸ ಮಾಡುತ್ತಿದ್ದರು. ಶಾಲೆಯೊಂದರಲ್ಲಿ ತಂದೆ ಮಾರುತಿ ಫೀವನ್ ಕೆಲಸ ಮಾಡ್ತಾಯಿದ್ದಾನೆ‌. ತಾಯಿ ಶೋಭಾ ಕೂಡಾ ಅತಿಥಿ ಶಿಕ್ಷಕಿಯಾಗಿ ಕೆಲಸ ಮಾಡ್ತಾಯಿದ್ದಾರೆ.‌ ಎಲ್ಲರ ಹಾಗೇ ನಮಗೂ ಒಂದು ಮನೆ ಇರಲಿ ಅಂತ ಮೆಹಬೂಬ್ ಸಾಬಗ ಬಾಣದ ಅವನ ಮೂಲಕ12 ಲಕ್ಷ ರೂಪಾಯಿ ಬ್ಯಾಂಕ್ ಲೂನ್ ಮಾಡಿ ಮನೆ ಕಟ್ಟಿಸಿಕೊಂಡಿದ್ದಾರೆ. ಈತ ಬ್ಯಾಂಕ್ ಲೋನ್ ಕೊಡಿಸಿ ಮನೆಯ ಯಜಮಾನೀಯ ಜೊತೆಗೆ ಅನೈತಿಕ ಸಂಬಂಧವನ್ನು ಇಟ್ಟುಕೊಂಡಿದ್ದನಂತೆ. ಇದು ಇಡೀ ಏರಿಯಾಕ್ಕೆ ಗೊತ್ತಾಗಿದೆ. ಆದರೆ 16 ವರ್ಷದ ಮಗಳಿಗೆ ವಿಷಯ ಗೊತ್ತಾದ ಮೇಲೆ ಮೆಹಬೂಬ್ ಸಾಬ್ ಹಾಗೂ ತಾಯಿ ಸಂಬಂಧಕ್ಕೆ ವಿರೋಧ ಮಾಡಿದ್ದಳಂತೆ. ಇದೇ ಕಾರಣಕ್ಕೆ ಬಾಲಕಿಯನ್ನ ಕೊಲೆ ಮಾಡಿದ್ದಾನೆ. ಆದರೆ ಕೊಲೆಯಾದ ಬಾಲಕಿ ತಾಯಿ ಮಾತ್ರ ನನ್ನದು ತಪ್ಪಿಲ್ಲ, ಯಾರು ಕೊಲೆ ಮಾಡಿದ್ದಾರೆ ಅವರಿಗೆ ತಕ್ಕ ಶಿಕ್ಷೆಯಾಗಬೇಕು ಅಂತಿದ್ದಾರೆ.

ಪೊಲೀಸ್ ಇಲಾಖೆ ಕೂಡ ವಿಷಯವನ್ನ ಗಂಭೀರವಾಗಿ ಪರಿಗಣಿಸಿದೆ. ಹೀಗಾಗಿ ಆರೋಪಿ ಅರೆಸ್ಟ್ ಮಾಡಿ ವಿಚಾರಣೆ ಮಾಡಿದ್ದಾರೆ. ಅತ್ಯಾಚಾರಕ್ಕೆ ಯತ್ನ ಮಾಡಿದ್ದಾನೋ ಅಥವಾ ನೇರವಾಗಿ ಕೊಲೆ ಮಾಡಿದ್ದಾನೋ ಅನ್ನೋ ವಿವಿಧ ಆಯಾಮಗಳಲ್ಲಿ ಪೊಲೀಸ್ ತನಿಖೆ ನಡೆಸಿದ್ದಾರೆ. ಸಧ್ಯಕ್ಕೆ ಕೊಲೆ ಪ್ರಕಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ. ಪೊಲೀಸರಿಗೂ ತಾಯಿ ಹಾಗೂ ಆರೋಪಿ ನಡುವಿನ ಅನೈತಿಕ ಸಂಬಂಧದ ವಾಸನೆ ಬಂದಿದೆ. ಹೀಗಾಗಿ ಎಲ್ಲ ಆಯಾಮಗಳಲ್ಲೂ ತನಿಖೆ ನಡೆಸಿದ್ದು, ಮರಣೋತ್ತರ ಪರೀಕ್ಷೆ ವರದಿಗಾಗಿ ಕಾಯುತ್ತಿದ್ದಾರೆ.

ಇದನ್ನೂ ಓದಿ:Accidentally murdered! ಅತ್ಯಂತ ಸಿನಿಮೀಯ ರೀತಿಯಲ್ಲಿ ಕೊಲೆ​​: ಹಣಕಾಸು ವಿಚಾರಕ್ಕೆ ಗೆಳೆಯರ ಗಲಾಟೆ, ಸಂಧಾನಕ್ಕೆ ಬಂದ ಯುವಕನನ್ನೇ ಮಿಸ್ಸಾಗಿ ಹತ್ಯೆ ಮಾಡಿಬಿಟ್ಟರು!

ತಾಯಿಯ ಅನೈತಿಕ ಸಂಬಂಧಕ್ಕೆ ವಿರೋಧ ಮಾಡಿದ ಮುದ್ದಾದ ಬಾಲಕಿಯನ್ನು ಕ್ರೂರವಾಗಿ ಕೊಲೆ ಮಾಡಿದ್ದಾನೆ ಪಾಪಿ ಬಾಣದ. ಕಾಮುಕನ ಕೈಗಿ ಸಿಲುಕಿ ನರಳಿ ನರಳಿ ಪ್ರಾಣವನ್ನು ಬಿಟ್ಟಿದ್ದಾಳೆ ಅಪ್ರಾಪ್ತ ಬಾಲಕಿ. ಸದ್ಯ ಮುಂಡರಗಿ ಪೊಲೀಸರು ಆರೋಪಿಯನ್ನು ಅರೆಸ್ಟ್ ಮಾಡಿದ್ದಾರೆ. ಕಾಮುನಿಗೆ ತಕ್ಕ ಶಿಕ್ಷಕಿಯಾಗಬೇಕು ಎಂದು ಮುಂಡರಗಿ ಜನತೆ ಒತ್ತಾಯ ಮಾಡ್ತಾಯಿದ್ದಾರೆ. ವರದಿ: ಸಂಜೀವ ಪಾಂಡ್ರೆ ಟಿವಿ9 ಗದಗ

ಇನ್ನಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada