ಕುಡಿದ ಅಮಲಿನಲ್ಲಿ ಟೆಂಪೋಗೆ ಕಾರನ್ನು ಗುದ್ದಿಸಿದ ಎನ್​ಸಿಪಿ ನಾಯಕನ ಪುತ್ರ

ಎನ್​ಸಿಪಿಯ ಶರದ್​ಪವಾರ್ ಬಣದ ನಾಯಕ ಬಂಡು ಗಾಯಕ್ವಾಡ್ ಪುತ್ರ ಸೌರಭ್ ಗಾಯಕ್ವಾಡ್ ಕುಡಿದ ಮತ್ತಿನಲ್ಲಿ ಕಾರನ್ನು ಚಲಾಯಿಸಿಕೊಂಡು ಬಂದು ಟೆಂಪೋಗೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಗಾಯಗೊಂಡಿದ್ದಾರೆ. ಈ ಘಟನೆ ಪುಣೆಯಲ್ಲಿ ನಡೆದಿದೆ.

ಕುಡಿದ ಅಮಲಿನಲ್ಲಿ ಟೆಂಪೋಗೆ ಕಾರನ್ನು ಗುದ್ದಿಸಿದ ಎನ್​ಸಿಪಿ ನಾಯಕನ ಪುತ್ರ
ಕಾರು

Updated on: Jul 18, 2024 | 9:23 AM

ವೇಗವಾಗಿ ಬಂದ ಕಾರೊಂದು ಟೆಂಪೋ ಟ್ರಕ್ ಗೆ ಡಿಕ್ಕಿ ಹೊಡೆದಿರುವ ಘಟನೆ ಮಂಗಳವಾರ ಬೆಳಗ್ಗೆ ಪುಣೆಯಲ್ಲಿ ನಡೆದಿದೆ. ವರದಿಗಳ ಪ್ರಕಾರ, ಕೋಳಿಗಳನ್ನು ಸಾಗಿಸುತ್ತಿದ್ದ ಟೆಂಪೋಗೆ ಕಾರು ಡಿಕ್ಕಿ ಹೊಡೆದಿದೆ. ಪುಣೆಯ ಮಂಜರಿ ಮುಂಧ್ವಾ ರಸ್ತೆಯಲ್ಲಿ ವೇಗವಾಗಿ ಬಂದ ಎಸ್‌ಯುವಿ ಟೆಂಪೋ ಟ್ರಕ್‌ಗೆ ಡಿಕ್ಕಿ ಹೊಡೆದಿರುವ ಘಟನೆಯ ಸಿಸಿಟಿವಿ ವಿಡಿಯೋ ಬಹಿರಂಗವಾಗಿದೆ.

ಬಂಡು ಗಾಯಕ್ವಾಡ್ ಅವರ ಪುತ್ರ ಸೌರಭ್ ಗಾಯಕ್ವಾಡ್ ಎಂಬಾತ ಕಾರನ್ನು ಓಡಿಸುತ್ತಿದ್ದ. ಬಂಡು ಗಾಯಕ್ವಾಡ್ ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ(ಶರದ್ಚಂದ್ರ ಪವಾರ್) ಸದಸ್ಯ ಮತ್ತು ಮಾಜಿ ಕಾರ್ಪೊರೇಟರ್.
ಅಪಘಾತ ನಡೆದ ಸಂದರ್ಭದಲ್ಲಿ ಸೌರಭ್ ಗಾಯಕ್ವಾಡ್ ಕುಡಿದಿದ್ದರು ಎಂದು ವರದಿಗಳು ಹೇಳಿವೆ.

ಘಟನೆಯಲ್ಲಿ ಕೋಳಿಗಳನ್ನು ಸಾಗಿಸುತ್ತಿದ್ದ ಟೆಂಪೋದ ಚಾಲಕ ಸೌರಭ್ ಗಾಯಕ್ವಾಡ್ ಹಾಗೂ ಕ್ಲೀನರ್ ಗಾಯಗೊಂಡಿದ್ದಾರೆ. ಪುಣೆಯ ಮುಂಡ್ವಾ ರಸ್ತೆಯಲ್ಲಿರುವ ಝಡ್ ಕಾರ್ನರ್ ನಲ್ಲಿ ಮಂಗಳವಾರ ಬೆಳಗ್ಗೆ ಈ ಅಪಘಾತ ಸಂಭವಿಸಿದೆ.

ಮತ್ತಷ್ಟು ಓದಿ: BMW Hit and Run Case: ತಾನೇ ಕಾರು ಓಡಿಸುತ್ತಿದ್ದುದಾಗಿ ಒಪ್ಪಿಕೊಂಡ ಆರೋಪಿ ಮಿಹಿರ್​

ಸಿಕ್ಕಿರುವ ಮಾಹಿತಿಯ ಪ್ರಕಾರ, ಸೌರಭ್ ಗಾಯಕ್ವಾಡ್ ಅವರು ತಮ್ಮ ಟಾಟಾ ಹ್ಯಾರಿಯರ್ ಕಾರಿನಲ್ಲಿ ಮುಂಡ್ವಾದಲ್ಲಿರುವ ತಮ್ಮ ಮನೆಗೆ ಬೆಳಿಗ್ಗೆ 5 ಗಂಟೆಗೆ ಹೊರಡುತ್ತಿದ್ದರು. ಈ ವೇಳೆ ಅವರು ಕುಡಿದ ಮತ್ತಿನಲ್ಲಿದ್ದ ಕಾರು ಟೆಂಪೋಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.

ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ. ಸೌರಭ್ ಗಾಯಕ್ವಾಡ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕೇಶವನಗರದ ಈ ರಸ್ತೆಯಲ್ಲಿ ಬೆಳಗಿನ ಜಾವ ನಾಲ್ಕರಿಂದಲೇ ಜನಜಂಗುಳಿ ಇರುತ್ತದೆ.

ಇತ್ತೀಚಿನ ದಿನಗಳಲ್ಲಿ ಪ್ರಭಾವಿ ವ್ಯಕ್ತಿಗಳ ಮಕ್ಕಳು ಕಾರನ್ನು ಅಡ್ಡಾದಿಟ್ಟಿ ಚಲಾಯಿಸಿ ಅಪಘಾತ ಮಾಡಿರುವ ಸಾಕಷ್ಟು ಘಟನೆಗಳು ಬೆಳಕಿಗೆ ಬಂದಿವೆ. ಮಿಹಿರ್ ಶಾ, ವೇದಾಂತ್ ಅಗರ್ವಾಲ್ ಸಾಲಿಗೆ ಈಗ ಸೌರಭ್ ಗಾಯಕ್ವಾಡ್ ಕೂಡ ಸೇರಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ