BMW Hit and Run Case: ತಾನೇ ಕಾರು ಓಡಿಸುತ್ತಿದ್ದುದಾಗಿ ಒಪ್ಪಿಕೊಂಡ ಆರೋಪಿ ಮಿಹಿರ್​

ಮುಂಬೈನಲ್ಲಿ ನಡೆದ ಬಿಎಂಡಬ್ಲ್ಯೂ ಹಿಟ್ ಅಂಡ್ ರನ್ ಪ್ರಕರಣದ ಪ್ರಮುಖ ಆರೋಪಿ ಮಿಹಿರ್ ಶಾ, ಜುಲೈ 7 ರಂದು ಬೆಳಗ್ಗೆ ಅಪಘಾತದ ಸಮಯದಲ್ಲಿ ಐಷಾರಾಮಿ ಕಾರನ್ನು ತಾನೇ ಚಾಲನೆ ಮಾಡುತ್ತಿದ್ದುದಾಗಿ ಒಪ್ಪಿಕೊಂಡಿದ್ದಾರೆ. ಮುಂಬೈ ಪೊಲೀಸರು ಮಿಹಿರ್ ಶಾ ಅವರನ್ನು ದಾದರ್‌ನ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹಾಜರುಪಡಿಸಿದರು ಮತ್ತು 24 ವರ್ಷದ ಆರೋಪಿಯನ್ನು ಜುಲೈ 16 ರವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಿದರು.

BMW Hit and Run Case: ತಾನೇ ಕಾರು ಓಡಿಸುತ್ತಿದ್ದುದಾಗಿ ಒಪ್ಪಿಕೊಂಡ ಆರೋಪಿ ಮಿಹಿರ್​
ಮಿಹಿರ್Image Credit source: Hindustan Times
Follow us
|

Updated on: Jul 11, 2024 | 8:47 AM

ಬಿಎಂಡಬ್ಲ್ಯೂ ಕಾರು ಹಿಟ್​ ಆ್ಯಂಡ್​ ರನ್ ಪ್ರಕರಣದಲ್ಲಿ ಪ್ರಮುಖ ಆರೋಪಿ ಮಿಹಿರ್ ಶಾ ಅಪಘಾತದ ಸಂದರ್ಭದಲ್ಲಿ ತಾನೇ ಕಾರು ಚಲಾಯಿಸುತ್ತಿದ್ದುದಾಗಿ ಒಪ್ಪಿಕೊಂಡಿದ್ದಾರೆ. ಮೀನು ತರಲೆಂದು ಪತಿಯೊಂದಿಗೆ ಬೈಕ್​ನಲ್ಲಿ ಹೋಗಿದ್ದ ಮಹಿಳೆ ಹಿಂದಿರುಗಿ ಮನೆಗೆ ಮರಳಲಿಲ್ಲ. ಬೆಳಗಿನ ಜಾವ 5 ಗಂಟೆ ಸುಮಾರಿಗೆ ದಂಪತಿ ಮೀನು ಖರೀದಿಸಿ ಮನೆಗೆ ವಾಪಸಾಗುತ್ತಿದ್ದ ಸಮಯದಲ್ಲಿ ಮಿಹಿರ್​ ಚಲಾಯಿಸುತ್ತಿದ್ದ ಬಿಎಂಡಬ್ಲ್ಯೂ ಕಾರು ಬೈಕ್​ಗೆ ಗುದ್ದಿದ ಪರಿಣಾಮ ಇಬ್ಬರು ಕಾರಿನ ಬಾನೆಟ್​ ಮೇಲೆ ಬಿದ್ದಿದ್ದರು. ಮಹಿಳೆಯ ಪತಿ ಕಾರಿನಿಂದ ಹಾರಿ ಬಚಾವಾಗಿದ್ದಾರೆ ಆದರೆ ಮಹಿಳೆ ಅಲ್ಲಿಯೇ ಮೃತಪಟ್ಟಿದ್ದಾರೆ.

ಇದಾದ ಬಳಿಕ ಮಿಹಿರ್​ ಸ್ವಲ್ಪ ದೂರ ಹೋದ ಬಳಿಕ ಕಾರಿನಿಂದ ಇಳಿದು ಆ ಜಾಗದಲ್ಲಿ ಡ್ರೈವರ್​ನ್ನು ಕೂರಿಸಿ ತಾನು ಹಿಂದೆ ಕುಳಿತು ಅಲ್ಲಿಂದ ಪರಾರಿಯಾಗಿದ್ದ. ಆತ ತಲೆ ಮರೆಸಿಕೊಂಡಿದ್ದ ಹಿನ್ನೆಲೆಯಲ್ಲಿ ಶಿವಸೇನೆ ನಾಯಕರಾಗಿರುವ ಆತನ ತಂದೆಯನ್ನು ಪೊಲೀಸರು ಬಂಧಿಸಿದ್ದರು. ಬಳಿಕ ಆತನನ್ನೂ ಬಂಧಿಸಿದ್ದರು.

ಮೊದಲು ಕಾರು ತಾನು ಚಲಾಯಿಸುತ್ತಿರಲಿಲ್ಲ ಎಂದು ಹೇಳಿದ್ದ ಮಿಹಿರ್ ಇದೀಗ ತಾನೇ ಕಾರು ಚಲಾಯಿಸುತ್ತಿದ್ದುದಾಗಿ ಒಪ್ಪಿಕೊಂಡಿದ್ದಾರೆ. ಆರೋಪಿ ಜುಲೈ 16ರವರೆಗೆ ಪೊಲೀಸ್​ ಕಸ್ಟಡಿಯಲ್ಲಿರಲಿದ್ದಾರೆ. ಆತನ ಬಳಿಕ ಚಾಲನಾ ಪರವಾನಗಿ ಇದೆ ಎಂದು ಹೇಳಿದ್ದರೂ ಕೂಡ ಪೊಲೀಸರಿಗೆ ಯಾವುದೇ ದಾಖಲೆ ಕೊಟ್ಟಿಲ್ಲ.

ಮಿಹಿರ್​ನ ತಾಯಿ, ಸಹೋದರಿಯರು ಮತ್ತು ಸ್ನೇಹಿತರು ಸೇರಿದಂತೆ ಒಟ್ಟು 14 ಜನರ ಹೇಳಿಕೆಗಳನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ. ಪೊಲೀಸರು ದಕ್ಷಿಣ ಮಧ್ಯ ಮುಂಬೈನ ವರ್ಲಿಯಲ್ಲಿ ಅಪಘಾತ ಸ್ಥಳಕ್ಕೆ ಭೇಟಿ ನೀಡಬಹುದು ಮತ್ತು ಅವರ ತನಿಖೆಯ ಭಾಗವಾಗಿ ಸಂಪೂರ್ಣ ಅಪರಾಧದ ದೃಶ್ಯವನ್ನು ಮರುಸೃಷ್ಟಿಸಬಹುದು ಎಂದು ಮಾಲೆಮೆಯಲ್ಲಿನ ಅಧಿಕಾರಿ ತಿಳಿಸಿದ್ದಾರೆ.

ಮತ್ತಷ್ಟು ಓದಿ: ಮೀನು ತರಲೆಂದು ಹೊರಗೆ ಹೋಗಿದ್ದ ಮಹಿಳೆಗೆ ಬಿಎಂಡಬ್ಲ್ಯೂ ಕಾರು ಡಿಕ್ಕಿ, ಸ್ಥಳದಲ್ಲೇ ಸಾವು

ಪಾಲ್ಘಢದ ಜಿಲ್ಲೆಯ ಶಿವಸೇನಾ ನಾಯಕರಾಗಿದ್ದ ಆರೋಪಿ ಮಿಹಿರ್ ಶಾ ಅವರ ತಂದೆ ರಾಜೇಶ್ ಶಾ ಕೂಡ ಪ್ರಕರಣದಲ್ಲಿ ಆರೋಪಿಯಾಗಿದ್ದು, ಪ್ರಸ್ತುತ ಜಾಮೀನಿನ ಮೇಲೆ ಹೊರಗಿದ್ದಾರೆ. ಈ ಅಪಘಾತದ ವೇಳೆ ಮಿಹಿರ್ ಶಾ ಜೊತೆ ಕಾರಿನಲ್ಲಿ ಇದ್ದ ಚಾಲಕ ಬಿಡಾವತ್ ಕೂಡ ಆರೋಪಿಯಾಗಿದ್ದಾನೆ.

ಪುಣೆಯಲ್ಲೂ ಇಂಥದ್ದೇ ಪ್ರಕರಣ ನಡೆದಿತ್ತು

ಪುಣೆಯಲ್ಲಿ 17 ವರ್ಷದ ವೇದಾಂತ್ ಅಗರ್ವಾಲ್ ಎಂಬಾತ ಪೋಷೆ ಕಾರನ್ನು ವೇಗವಾಗಿ ಚಲಾಯಿಸಿಕೊಂಡು ಬಂದು ಬೈಕ್​ಗೆ ಗುದ್ದಿದ ಪರಿಣಾಮ ಇಬ್ಬರು ಸಾವನ್ನಪ್ಪಿದ್ದರು. ಬಳಿಕ ಚಾಲಕನ ಸೀಟಿನಲ್ಲಿ ತಾನಿರಲಿಲ್ಲ ಬೇರೆಯವರಿದ್ದರು ಎಂದು ಹೇಳಲು ಪ್ರಯತ್ನಿಸಿದರೂ ಸತ್ಯ ಆಚೆ ಬಂದಿತ್ತು. ಇದೀಗ ಆತ ಜಾಮೀನಿನ ಮೇಲೆ ಹೊರಗಿದ್ದಾರೆ. ಆತನ ತಂದೆ, ಅಜ್ಜ ಹಾಗೂ ತಾಯಿಯ ಮೇಲೂ ಕೂಡ ಪ್ರಕರಣ ದಾಖಲಿಸಲಾಗಿದ್ದು, ಜೈಲಿನಲ್ಲಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಕುಮಾರಸ್ವಾಮಿ ವಿರುದ್ಧ ಯೋಗೇಶ್ವರ್ ಮಾಡಿದ ಆರೋಪ ಸರಿಯಲ್ಲ: ನಿಖಿಲ್
ಕುಮಾರಸ್ವಾಮಿ ವಿರುದ್ಧ ಯೋಗೇಶ್ವರ್ ಮಾಡಿದ ಆರೋಪ ಸರಿಯಲ್ಲ: ನಿಖಿಲ್
ವಿಡಿಯೋ: ರಾಮ-ಆಂಜನೇಯನ ಮೂರ್ತಿ ಉದ್ಘಾಟಿಸಿದ ಶಿವರಾಜ್ ಕುಮಾರ್
ವಿಡಿಯೋ: ರಾಮ-ಆಂಜನೇಯನ ಮೂರ್ತಿ ಉದ್ಘಾಟಿಸಿದ ಶಿವರಾಜ್ ಕುಮಾರ್
ಕಾಂಗ್ರೆಸ್​ನಿಂದ ಸ್ಪರ್ಧಿಸಿ ಗೆದ್ದರೆ ಮಂತ್ರಿಯಾಗಬಹುದೇ ಯೋಗೇಶ್ವರ್?
ಕಾಂಗ್ರೆಸ್​ನಿಂದ ಸ್ಪರ್ಧಿಸಿ ಗೆದ್ದರೆ ಮಂತ್ರಿಯಾಗಬಹುದೇ ಯೋಗೇಶ್ವರ್?
ಊಹಾಪೋಹಗಳಿಗೆ ತೆರೆಹಾಡಿದ ಯೋಗೇಶ್ವರ್ ತಮ್ಮ ಚಿಹ್ನೆ ಇನ್ನೂ ನಿರ್ಧರಿಸಿಲ್ಲ
ಊಹಾಪೋಹಗಳಿಗೆ ತೆರೆಹಾಡಿದ ಯೋಗೇಶ್ವರ್ ತಮ್ಮ ಚಿಹ್ನೆ ಇನ್ನೂ ನಿರ್ಧರಿಸಿಲ್ಲ
ಸುರೇಶ್ ಚುನಾವಣೆ ಸ್ಪರ್ಧೆಯಿಂದ ದೂರವುಳಿಯಲು ನಿರ್ಧರಿಸಿದ್ದಾರೆ: ಬಾಲಕೃಷ್ಣ
ಸುರೇಶ್ ಚುನಾವಣೆ ಸ್ಪರ್ಧೆಯಿಂದ ದೂರವುಳಿಯಲು ನಿರ್ಧರಿಸಿದ್ದಾರೆ: ಬಾಲಕೃಷ್ಣ
ಗಸ್ತು ತಿರುಗುವ ಕುರಿತು ಭಾರತ-ಚೀನಾ ಒಪ್ಪಂದದ ಬಗ್ಗೆ ಸೇನಾ ಮುಖ್ಯಸ್ಥರ ಮಾತು
ಗಸ್ತು ತಿರುಗುವ ಕುರಿತು ಭಾರತ-ಚೀನಾ ಒಪ್ಪಂದದ ಬಗ್ಗೆ ಸೇನಾ ಮುಖ್ಯಸ್ಥರ ಮಾತು
ಯಾವ ಪಕ್ಷದಿಂದ ಸ್ಪರ್ಧಿಸಬೇಕೆನ್ನುವ ಗೊಂದಲದಲ್ಲಿ ಬಿಜೆಪಿ ನಾಯಕ ಯೋಗೇಶ್ವರ್
ಯಾವ ಪಕ್ಷದಿಂದ ಸ್ಪರ್ಧಿಸಬೇಕೆನ್ನುವ ಗೊಂದಲದಲ್ಲಿ ಬಿಜೆಪಿ ನಾಯಕ ಯೋಗೇಶ್ವರ್
ಕೇಕ್​ನಲ್ಲಿ ಮೂಡಿದ ಮರಳು ದಂಧೆಯ ಚಿತ್ರಣ
ಕೇಕ್​ನಲ್ಲಿ ಮೂಡಿದ ಮರಳು ದಂಧೆಯ ಚಿತ್ರಣ
ಬದೋನಿ ಬ್ಯೂಟಿ... ಅತ್ಯುತ್ತಮ ಡೈವಿಂಗ್ ಕ್ಯಾಚ್ ಹಿಡಿದ ಆಯುಷ್
ಬದೋನಿ ಬ್ಯೂಟಿ... ಅತ್ಯುತ್ತಮ ಡೈವಿಂಗ್ ಕ್ಯಾಚ್ ಹಿಡಿದ ಆಯುಷ್
ಭೂಮಾಫಿಯಾ ಜೊತೆ ಬಿಬಿಎಂಪಿ ಅಧಿಕಾರಿಗಳು ಶಾಮೀಲು: ಜಗದೀಶ್, ವಕೀಲ
ಭೂಮಾಫಿಯಾ ಜೊತೆ ಬಿಬಿಎಂಪಿ ಅಧಿಕಾರಿಗಳು ಶಾಮೀಲು: ಜಗದೀಶ್, ವಕೀಲ