AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Droupadi Murmu Playing Badminton: ಬ್ಯಾಡ್ಮಿಂಟನ್ ಅಂಗಳದಲ್ಲಿ ರಾಷ್ಟ್ರಪತಿ ಮುರ್ಮು, ಸೈನಾ ನೆಹ್ವಾಲ್ ನಡುವೆ ಪೈಪೋಟಿ, ವಿಡಿಯೋ ಇಲ್ಲಿದೆ

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ರಾಷ್ಟ್ರಪತಿ ಭವನದಲ್ಲಿ ದೇಶದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ಅವರೊಂದಿಗೆ ಬ್ಯಾಡ್ಮಿಂಟನ್ ಅಂಗಳದಲ್ಲಿ ಪೈಪೋಟಿ ನಡೆಸಿದರು. ಮುರ್ಮು ತನ್ನ ಅದ್ಭುತ ಆಟದಿಂದ ಸೈನಾ ನೆಹ್ವಾಲ್ ಅವರಂತಹ ಶ್ರೇಷ್ಠ ಆಟಗಾರ್ತಿಯನ್ನೂ ಅಚ್ಚರಿಗೊಳಿಸಿದರು.

Droupadi Murmu Playing Badminton: ಬ್ಯಾಡ್ಮಿಂಟನ್ ಅಂಗಳದಲ್ಲಿ ರಾಷ್ಟ್ರಪತಿ ಮುರ್ಮು, ಸೈನಾ ನೆಹ್ವಾಲ್ ನಡುವೆ ಪೈಪೋಟಿ, ವಿಡಿಯೋ ಇಲ್ಲಿದೆ
ದ್ರೌಪದಿ ಮುರ್ಮು-ಸೈನಾ ನೆಹ್ವಾಲ್
ನಯನಾ ರಾಜೀವ್
|

Updated on: Jul 11, 2024 | 9:50 AM

Share

ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್​ ಜತೆ ರಾಷ್ಟ್ರಪತಿ ದ್ರೌಪದಿ ಮುರ್ಮು ಬ್ಯಾಡ್ಮಿಂಟರ್​ ಆಡಿರುವ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ. ರಾಷ್ಟ್ರಪತಿ ಭವನದ ಬ್ಯಾಡ್ಮಿಂಟನ್ ಕೋರ್ಟ್​ನಲ್ಲಿ ನಡೆದ ಈ ಪಂದ್ಯವು ರಾಷ್ಟ್ರಪತಿಯ ಕ್ರೀಡಾ ಉತ್ಸಾಹವನ್ನು ಪ್ರದರ್ಶಿಸಿತು. ರಾಷ್ಟ್ರಪತಿ ಮುರ್ಮು ಅವರು ಸೈನಾ ಅವರೊಂದಿಗೆ ಬ್ಯಾಡ್ಮಿಂಟನ್ ಆಡುವಾಗ ಅನುಭವಿ ಆಟಗಾರರಂತೆ ಆಡಿದರು. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸೈನಾ ನೆಹ್ವಾಲ್ ಅವರೊಂದಿಗೆ ಆಟವನ್ನು ಆನಂದಿಸುತ್ತಿರುವ ದೃಶ್ಯಗಳು ವೈರಲ್ ಆಗಿದೆ.

ಈ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಸೈನಾ ನೆಹ್ವಾಲ್, ಈ ಅನುಭವ ಅವಿಸ್ಮರಣೀಯ ಎಂದು ಬಣ್ಣಿಸಿದ್ದಾರೆ. ಅವರು ತಮ್ಮ ಖುಷಿಯನ್ನು ಹೀಗೆ ಹಂಚಿಕೊಂಡರು. ಇದು ನನ್ನ ಜೀವನದ ಸ್ಮರಣೀಯ ದಿನ. ‘‘ನನ್ನೊಂದಿಗೆ ಬ್ಯಾಡ್ಮಿಂಟನ್ ಆಡಿದ್ದಕ್ಕಾಗಿ ರಾಷ್ಟ್ರಪತಿ ಮುರ್ಮು ಅವರಿಗೆ ತುಂಬಾ ಧನ್ಯವಾದಗಳು” ಎಂದಿದ್ದಾರೆ.

ರಾಷ್ಟ್ರಪತಿ ಭವನದ ಬ್ಯಾಡ್ಮಿಂಟನ್ ಕೋರ್ಟ್ ನಲ್ಲಿ ಖ್ಯಾತ ಆಟಗಾರ್ತಿ ಸೈನಾ ನೆಹ್ವಾಲ್ ಅವರೊಂದಿಗೆ ಬ್ಯಾಡ್ಮಿಂಟನ್ ಆಡಿದಾಗ ಅಧ್ಯಕ್ಷ ದ್ರೌಪದಿ ಮುರ್ಮು ಅವರ ಕ್ರೀಡೆ ಮತ್ತು ಆಟಗಳ ಮೇಲಿನ ಸ್ವಾಭಾವಿಕ ಪ್ರೀತಿಯನ್ನು ಕಾಣಬಹುದು. ಬ್ಯಾಡ್ಮಿಂಟನ್ ಶಕ್ತಿಕೇಂದ್ರವಾಗಿ ಭಾರತ ಹೊರಹೊಮ್ಮುತ್ತಿರುವ ಹಿನ್ನೆಲೆಯಲ್ಲಿ ರಾಷ್ಟ್ರಪತಿಗಳು ಸ್ಪೂರ್ತಿದಾಯಕ ಹೆಜ್ಜೆ ಇಟ್ಟಿದ್ದಾರೆ.

ಹರ್ಯಾಣ ಮೂಲದ ಸೈನಾ ನೆಹ್ವಾಲ್ 2008ರಲ್ಲಿ ಬಿಎಬ್ಲ್ಯೂಎಫ್​ ವಿಶ್ವ ಜೂನಿಯರ್ ಚಾಂಪಿಯನ್​ಶಿಪ್​ ಗೆಲ್ಲುವ ಮೂಲಕ ಎಲ್ಲರ ಗಮನ ಸೆಳೆದಿದ್ದರು. ಒಲಿಂಪಿಕ್​ ಕ್ವಾರ್ಟರ್ ಫೈನಲ್ ತಲುಪಿದ ಮೊದಲ ಭಾರತೀಯ ಮಹಿಳೆ ಎನ್ನುವ ಖ್ಯಾತಿಗೆ ಪಾತ್ರರಾದರು. ಅವರು ಹಾಂಗ್​ಕಾಂಗ್​ನ ಆಗಿನ ವಿಶ್ವದ ಐದನೇ ಶ್ರೇಯಾಂಕದ ವಾಂಗ್​ಚೆನ್​ ಅವರನ್ನು ಸೋಲಿಸಿದರು.

ಮತ್ತಷ್ಟು ಓದಿ: ಅಭಿವೃದ್ಧಿ ಹೊಂದಿದ ಭಾರತದ ಸಂಕಲ್ಪದಲ್ಲಿ ಜನರಿಗೆ ನಂಬಿಕೆ ಇದೆ: ದ್ರೌಪದಿ ಮುರ್ಮು

ಆದರೆ ಇಂಡೋನೇಷ್ಯಾದ ಮರಿಯಾ ಕ್ರಿಸ್ಟಿನ್ ಯುಲಿಯಾಂಟಿ ವಿರುದ್ಧ ಸೋತರು. 2009ರಲ್ಲಿ ಸೈನಾ ಬಿಡಬ್ಲ್ಯೂಎಫ್​ ಸೂಪರ್ ಸಿರೀಸ್ ಈವೆಂಟ್​ ಗೆದ್ದ ಮೊದಲ ಭಾರತೀಯರಾದರು. ಅವರಿಗೆ 2009ರಲ್ಲಿ ಅರ್ಜುನಪ್ರಶಸ್ತಿ ಹಾಗೂ 2010ರಲ್ಲಿ ರಾಜೀವ್​ ಗಾಂಧಿ ಖೇಲ್​ ರತ್ನ ಪ್ರಶಸ್ತಿಯನ್ನು ನೀಡಲಾಯಿತು.

ಲಂಡನ್​ನಲ್ಲಿ 2012ರಲ್ಲಿ ನಡೆದ ಒಲಿಂಪಿಕ್ಸ್​ನಲ್ಲಿ ನೆಹ್ವಾಲ್ ಮಹಿಳೆಯರ ಸಿಂಗಲ್ಸ್​ನಲ್ಲಿ ಕಂಚಿನ ಪದಕ ಗೆದ್ದಿದ್ದರು. ಅವರು ಅಂತಾರಾಷ್ಟ್ರೀಯ ಮಟ್ಟದಲ್ಲಿ 20ಕ್ಕೂ ಹೆಚ್ಚು ಪ್ರಶಸ್ತಿಗಳನ್ನು ಗೆದ್ದಿದ್ದಾರೆ. 2016ರಲ್ಲಿ ಕೇಂದ್ರವು ಅವರಿಗೆ ಪ್ರತಿಷ್ಠಿತ ಪದ್ಮಭೂಷಣ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ