ಸ್ಪಾನಲ್ಲಿ ವೇಶ್ಯಾವಾಟಿಕೆ: 8 ಯುವತಿಯರ ಜತೆ 3 ಯುವಕರು ಏಕಾಂತದಲ್ಲಿಇರುವಾಗಲೇ ಸಿಕ್ಕಿಬಿದ್ದರು
ಸ್ಪಾ ಆ್ಯಂಡ್ ಮಸಾಜ್ ಸೆಂಟರ್ನಲ್ಲಿ ನಡೆಯುತ್ತಿದ್ದ ವೇಶ್ಯಾವಾಟಿಕೆ ದಂಧೆ ಮೇಲೆ ಪೊಲೀಸರು ದಾಳಿ ಮಾಡಿದ್ದಾರೆ. ದಾಳಿ ವೇಳೆ ಅಲ್ಲಿನ ದೃಶ್ಯವಳಿಗಳನ್ನು ಕಂಡು ದಂಗಾಗಿದ್ದಾರೆ. ರಾಜಸ್ಥಾನದಲ್ಲಿ ಈ ಘಟನೆ ನಡೆದಿದ್ದು, ಎಂಟು ಹುಡುಗಿಯರು ಮತ್ತು ಮೂವರು ಹುಡುಗರು ಒಂದೇ ಕೋಣೆಯಲ್ಲಿ ಒಟ್ಟಿಗೆ ಏಕಾಂತದಲ್ಲಿರುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.
ಜೈಪುರ, (ಜುಲೈ 10): ರಾಜಸ್ಥಾನದ ಜೋಧಪುರ ಜಿಲ್ಲೆಯ ಪೊಲೀಸರು ವೇಶ್ಯಾವಾಟಿಕೆ ದಂಧೆ ಮೇಲೆ ದಾಳಿ ಮಾಡಿದ್ದು, ಬರೋಬ್ಬರಿ ಎಂಟು ಯುವತಿಯರು ಮತ್ತು ಮೂವರು ಯುವಕರನ್ನು ಬಂಧಿಸಿದ್ದಾರೆ. ರಾಜಸ್ಥಾನದ ಜೋಧಪುರ ಜಿಲ್ಲೆಯ ಸರದಾರಪುರದ ಸ್ಪಾ ಆ್ಯಂಡ್ ಮಸಾಜ್ ಸೆಂಟರ್ನಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದೆ ಎನ್ನುವ ಮಾಹಿತಿ ಮೇರೆಗೆ ಪೊಲೀಸರು ದಾಳಿ ಮಾಡಿದ್ದಾರೆ. ಅಚ್ಚರಿ ಏನಂದರೆ ಒಂದೇ ಕೋಣೆಯಲ್ಲಿ ಒಳಗೆ ಹೋದಾಗ ಒಂದೇ ಕೋಣೆಯಲ್ಲಿ ಎಂಟು ಯುವತಿಯರ ಜೊತೆ ಮೂವರು ಸರಸ ಸಲ್ಲಾಪದಲ್ಲಿ ತೊಡಗಿದ್ದರು. ಇದನ್ನು ಕಂಡು ಪೊಲೀಸರೇ ಅವಕ್ಕಾಗಿದ್ದಾರೆ. ಸದ್ಯ 8 ಯುವತಿರು ಹಾಗೂ ಮೂವರು ಯುವಕರು ಒಟ್ಟು 11 ಜನರನ್ನು ಬಂಧಿಸಿದ್ದು, ಕೋರ್ಟ್ ನ್ಯಾಯಾಂಗ ಬಂಧನಕ್ಕೆ ನೀಡಿದೆ.
ಜೋಧಪುರ ಗ್ರಾಮೀಣ ವಲಯದ ಸರದಾರಪುರದ ಬಳಿ ಮಾಲೀಕ ಸ್ಪಾ ನಡೆಸುವುದಾಗಿ ಅನುಮತಿ ಪಡೆದುಕೊಂಡಿದ್ದ. ಆದ್ರೆ, ಒಳಗೆ ವೇಶ್ಯಾವಾಟಿಕೆ ನಡೆಸುತ್ತಿದ್ದ. ಈ ಬಗ್ಗೆ ಸ್ಥಳೀಯರಿಂದ ದೂರು ಕೇಳಿಬಂದಿದ್ದವು. ಹೀಗಾಗಿ ಪೊಲೀಸರು ನಿನ್ನೆ (ಜುಲೈ 09) ಸ್ಪಾ ಮೇಲೆ ದಾಳಿ ಮಾಡಿದ್ದಾರೆ. ಪೊಲೀಸರು ಬರುತ್ತಿದ್ದಂತೆಯೇ ಅಲ್ಲಿದ್ದವರು ಭಯದಿಂದ ಓಡಿ ಹೋಗಲು ಪ್ರಯತ್ನಿಸಿದ್ದಾರೆ.
ಇದನ್ನೂ ಓದಿ: ಡ್ರಾಪ್ ಕೇಳಿದ ಬಾಲಕಿ ಮೇಲೆ ಅತ್ಯಾಚಾರ: ತಮ್ಮೊಂದಿಗೆ ಬಂದಿದ್ದ ಯುವಕರಿಂದಲೇ ಕೃತ್ಯ
ಬಳಿಕ ಪೊಲೀಸರು ಸ್ಪಾ ಒಳಗೆ ಹೋಗಿ ನೋಡಿದಾಗ ಕೋಣೆಯೊಂದರಲ್ಲೇ ಎಂಟು ಯುವತಿ ಮತ್ತು ಮೂವರು ಯುವಕರು ಸಲ್ಲಾಪದಲ್ಲಿ ತೊಡಗಿಕೊಂಡಿರುವುದು ಕಂಡುಬಂದಿದೆ. ಈ ದೃಶ್ಯವನ್ನು ನೋಡಿದ ಪೊಲೀಸರು ಒಂದು ಕ್ಷಣ ಬೆಚ್ಚಿಬಿದ್ದಿದ್ದಾರೆ. ಪೊಲೀಸರನ್ನು ನೋಡುತ್ತಿದ್ದಂತೆಯೇ ಸಲ್ಲಾಪದಲ್ಲಿ ತೊಡಗಿದ್ದವು ಎದ್ನೋ ಬಿದ್ನೋ ಕೋಣೆ ತುಂಬ ಓಡಾಡಿ ಬಟ್ಟೆ ಹಾಕಿಕೊಂಡಿದ್ದಾರೆ.
ನಂತರ ಪೊಲೀಸರು ಒಟ್ಟು 11 ಜನರನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು, ಕೋರ್ಟ್ ಆರೋಪಿಗಳಿಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಬಂಧಿತ ಎಲ್ಲಾ ಯುವತಿಯರು ಬೇರೆ ಬೇರೆ ರಾಜ್ಯದವರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:27 pm, Wed, 10 July 24