ತುಮಕೂರು ಹೆಚ್​ಪಿ ಪೆಟ್ರೋಲ್ ಬಂಕ್​ನಲ್ಲಿ ವಂಚನೆ, ₹ 110ಕ್ಕೆ ಕೇವಲ 300ಮಿಲೀ ಪೆಟ್ರೋಲ್ !

ಇದು ಕೇವಲ ತುಮಕೂರಿನ ಪೆಟ್ರೋಲ್ ಬಂಕ್ ಕತೆ ಒಂದೇ ಅಲ್ಲ, ಬಹಳಷ್ಟು ಕಡೆಗಳಲ್ಲಿ ಬಂಕ್ ನವರು ಗ್ರಾಹಕರ ಪೆಟ್ರೋಲ್ ಕದಿಯುವ ಕೆಲಸ ಮಾಡುತ್ತಾರೆ. ಅದರೆ ಅವಸರದಲ್ಲಿರುವ ಜನರ ಗಮನಕ್ಕೆ ಅದು ಬರೋದಿಲ್ಲ. ಸಂಬಂಧಪಟ್ಟ ಇಲಾಖೆ ಮತ್ತು ಪೊಲೀಸರು ಅನ್ಯಾಯವೆಸಗುತ್ತಿರುವ ಪೆಟ್ರೋಲ್ ಬಂಕ್ ಮಾಲೀಕರ ವಿರುದ್ಧ ಕಠಿಣ ಕ್ರಮ ಜರುಗಿಬೇಕು.

ತುಮಕೂರು ಹೆಚ್​ಪಿ ಪೆಟ್ರೋಲ್ ಬಂಕ್​ನಲ್ಲಿ ವಂಚನೆ, ₹ 110ಕ್ಕೆ ಕೇವಲ 300ಮಿಲೀ ಪೆಟ್ರೋಲ್ !
|

Updated on: Jul 11, 2024 | 10:11 AM

ತುಮಕೂರು: ವಂಚನೆಗಳಲ್ಲಿ ಎಷ್ಟು ವಿಧ? ಈ ಪ್ರಶ್ನೆಗೆ ಬ್ರಹ್ಮನೂ ಉತ್ತರಿಸಲಾರ. ನಗರದ ಕುಣಿಗಲ್ ರಸ್ತೆಯಲ್ಲಿ ಸಾಹುಕಾರ್ ಫ್ಯುಯೆಲ್ ಪಾರ್ಕ್ ಅಂತ ಹೆಚ್ ಪಿ ಪೆಟ್ರೋಲ್ ಬಂಕ್ ಇದೆ. ದ್ವಿಚಕ್ರ ವಾಹನ ಸವಾರೊಬ್ಬರು ಕಳೆದ ರಾತ್ರಿ ₹110 ಕ್ಕೆ ಪೆಟ್ರೋಲ್ ಹಾಕಿಸಿಕೊಂಡಾಗ ಅವರ ಗಾಡಿಯಲ್ಲಿ ಸುರಿಯಲ್ಪಟ್ಟಿದ್ದು ಕೇವಲ 300 ಮಿಲೀ ಇಂಧನ ಮಾತ್ರ. ಬೈಕ್ ಸವಾರ ಬಿಲ್ ತೆಗೆಸಿದಾಗ ವಂಚನೆ ಬಯಲಿಗೆ ಬಂದಿದೆ. ಯಾಕೆ ಹೀಗೆ ಅಂತ ಕೇಳಿದರೆ ಉಡಾಫೆಯ ಉತ್ತರ ಬಂಕ್ ನವರಿಂದ ಸಿಕ್ಕಿದೆ. ಸ್ಥಳೀಯರು ಹೇಳುವ ಪ್ರಕಾರ ಪೆಟ್ರೋಲ್ ಬಂಕ್ ನವರು ನಾರ್ಮಲ್ ಪೆಟ್ರೋಲ್ ದಾಸ್ತಾನಿದ್ದರೂ, ಅದು ಮುಗಿದಿದೆ ಕೇವಲ ಪವರ್ ಪೆಟ್ರೋಲ್ ಮಾತ್ರ ಇದೆ ಅನ್ನುತ್ತಾರಂತೆ. ಯಾಕೆಂದರೆ ಪವರ್ ಪೆಟ್ರೋಲ್ ಬೆಲೆ ಹೆಚ್ಚು. ಪೊಲೀಸರಿಗೆ ದೂರು ದಾಖಲಿಸಲಾಗಿದೆ, ಅವರೇನು ಕ್ರಮ ತೆಗೆದುಕೊಳ್ಳುತ್ತಾರೋ ನೋಡಬೇಕು ಎಂದು ವಂಚನೆಗೊಳಗಾದ ಸ್ಥಳೀಯರು ಹೇಳುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:    ಪೆಟ್ರೋಲ್, ಡೀಸೆಲ್, ಹಾಲಿನ ದರ ಏರಿಕೆ ಬೆನ್ನಲ್ಲೇ ಆಟೋ ಪ್ರಯಾಣ ದರ ಏರಿಕೆಗೆ ಒತ್ತಾಯ

Follow us