AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Crime News: ಮೈಕೈ ಮುಟ್ಟಿದ ಕುಡುಕನಿಗೆ ಹೆದರಿ ರೈಲಿನಿಂದ ಕೆಳಗೆ ಹಾರಿದ ಮಹಿಳೆ

ಹೈದರಾಬಾದ್‌ನ ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿರುವ ಮಹಿಳೆ ಮಂಗಳವಾರ ಸಿಕಂದರಾಬಾದ್‌ನಲ್ಲಿ ಎಕ್ಸ್​ಪ್ರೆಸ್​ ರೈಲಿನಲ್ಲಿ ಆಂಧ್ರಪ್ರದೇಶದ ಶ್ರೀಕಾಕುಲಂಗೆ ಒಬ್ಬಂಟಿಯಾಗಿ ಪ್ರಯಾಣಿಸುತ್ತಿದ್ದರು. ಆಗ ಕುಡಿತದ ಅಮಲಿನಲ್ಲಿದ್ದ ವ್ಯಕ್ತಿಯೊಬ್ಬ ಆಕೆಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾನೆ.

Crime News: ಮೈಕೈ ಮುಟ್ಟಿದ ಕುಡುಕನಿಗೆ ಹೆದರಿ ರೈಲಿನಿಂದ ಕೆಳಗೆ ಹಾರಿದ ಮಹಿಳೆ
ಸಾಂದರ್ಭಿಕ ಚಿತ್ರImage Credit source: X
ಸುಷ್ಮಾ ಚಕ್ರೆ
|

Updated on: Jul 10, 2024 | 7:32 PM

Share

ಹೈದರಾಬಾದ್: ಹೈದರಾಬಾದ್‌ನ ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿರುವ 25 ವರ್ಷದ ಮಹಿಳೆಯೊಬ್ಬರು ರೈಲಿನಿಂದ ಬಿದ್ದು ಗಾಯಗೊಂಡಿರುವ ಘಟನೆ ತೆಲಂಗಾಣದ ಮಿರ್ಯಾಲ್‌ಗುಡ ಪಟ್ಟಣದಲ್ಲಿ ನಡೆದಿದೆ. ವಿಶಾಖ ಎಕ್ಸ್‌ಪ್ರೆಸ್ ರೈಲಿನಲ್ಲಿ ಕುಡುಕ ವ್ಯಕ್ತಿಯೊಬ್ಬ ತನ್ನೊಂದಿಗೆ ಅನುಚಿತವಾಗಿ ವರ್ತಿಸಿದ್ದರಿಂದ ಆಕೆ ಕೆಳಗೆ ಹಾರಿದ್ದಾರೆ ಎಂದು ತಿಳಿದುಬಂದಿದೆ. ಆ ಮಹಿಳೆ ಏಕಾಂಗಿಯಾಗಿ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು.

ಪೊಲೀಸರ ಪ್ರಕಾರ, ಮಂಗಳವಾರ ವಿಶಾಖ ಎಕ್ಸ್‌ಪ್ರೆಸ್ ಮಿರ್ಯಾಲಗುಡ ರೈಲ್ವೆ ನಿಲ್ದಾಣವನ್ನು ದಾಟಿದಾಗ ಈ ಘಟನೆ ನಡೆದಿದೆ. ಆಕೆಯೊಂದಿಗೆ 30 ವರ್ಷದ ಆರೋಪಿಯೂ ರೈಲಿನ ಸ್ಲೀಪರ್ ಕೋಚ್‌ನಿಂದ ಬಿದ್ದು ಗಾಯಗೊಂಡಿದ್ದಾನೆ. ಆ ಕುಡುಕ ಮತ್ತು ಮಹಿಳೆ ಇಬ್ಬರನ್ನೂ ಬೇರೆ ಬೇರೆ ಆಸ್ಪತ್ರೆಗಳಿಗೆ ದಾಖಲಿಸಲಾಗಿದ್ದು, ಅವರು ಸುರಕ್ಷಿತವಾಗಿದ್ದಾರೆ ಎಂದು ಸರ್ಕಾರಿ ರೈಲ್ವೆ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ: Crime News: ಪ್ರೇಮಿಯ ಮೇಲಿನ ಕೋಪಕ್ಕೆ 7 ವರ್ಷದ ಮಗುವನ್ನು ಗೋಡೆಗೆ ಬಡಿದು ಕೊಲೆ

ಈ ವಿಷಯ ತಿಳಿದ ಆಕೆಯ ಪತಿ ಪೊಲೀಸರಿಗೆ ದೂರು ನೀಡಿದ್ದು, ಕೋಚ್ ಬಳಿ ಕೈ ತೊಳೆದುಕೊಂಡು ಹಿಂತಿರುಗುತ್ತಿದ್ದ ವೇಳೆ ಕೋಚ್‌ನಲ್ಲಿ ಬಾಗಿಲ ಬಳಿ ನಿಂತಿದ್ದ ಕುಡುಕ ವ್ಯಕ್ತಿ ತನ್ನ ಹೆಂಡತಿಯೊಂದಿಗೆ ಅನುಚಿತವಾಗಿ ವರ್ತಿಸಿ ಮೈಕೈ ಮುಟ್ಟಿದ್ದಾರೆ. ಆಗ ಆಕೆ ಕೆಳಗೆ ಹಾರಿ ಬಿದ್ದಿದ್ದಾರೆ ಎಂದು ಆರೋಪಿಸಿ ದೂರು ದಾಖಲಿಸಿದ್ದಾರೆ.

ಇದನ್ನೂ ಓದಿ: ಬುಲ್ಡೋಜರ್​ನಲ್ಲಿ ಮಂಟಪಕ್ಕೆ ಮದುಮಗ ಎಂಟ್ರಿ; ಯೋಗಿ ಅಭಿಮಾನಿಯ ವಿಡಿಯೋ ವೈರಲ್

ಕೆಲವು ಪ್ರಯಾಣಿಕರಿಂದ ಈ ಘಟನೆಯ ಬಗ್ಗೆ ಮಾಹಿತಿ ಪಡೆದ ನಂತರ ಅವರು ಸ್ಥಳಕ್ಕೆ ಧಾವಿಸಿ ಮಹಿಳೆ ಮತ್ತು ಪುರುಷನನ್ನು ಬೇರೆ ಬೇರೆ ಆಸ್ಪತ್ರೆಗಳಿಗೆ ಸ್ಥಳಾಂತರಿಸಿದ್ದಾರೆ ಎಂದು ಇನ್ನೊಬ್ಬ ಜಿಆರ್‌ಪಿ ಅಧಿಕಾರಿ ತಿಳಿಸಿದ್ದಾರೆ. ಆದರೆ, ತಾನು ಆಕೆಯೊಂದಿಗೆ ಅನುಚಿತವಾಗಿ ವರ್ತಿಸಿಲ್ಲ. ರೈಲು ಚಾಲಕ ಇದ್ದಕ್ಕಿದ್ದಂತೆ ಬ್ರೇಕ್ ಹಾಕಿದಾಗ ಆ ಮಹಿಳೆಯೊಂದಿಗೆ ತಾನೂ ಕೆಳಗೆ ಬಿದ್ದಿರುವುದಾಗಿ ಆರೋಪಿ ಹೇಳಿಕೆ ನೀಡಿದ್ದಾನೆ. ಈ ಬಗ್ಗೆ ತನಿಖೆ ನಡೆಯುತ್ತಿದೆ.

ಇನ್ನಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ