AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಾಡಿ ಶೇಮಿಂಗ್, ಸಹೋದ್ಯೋಗಿಗಳ ವರ್ತನೆಯಿಂದ ಬೇಸತ್ತು ಬ್ಯಾಂಕ್​ ಉದ್ಯೋಗಿ ಆತ್ಮಹತ್ಯೆ

ನೋಯ್ಡಾದ ಆಕ್ಸಿಸ್ ಬ್ಯಾಂಕ್‌ನಲ್ಲಿ ರಿಲೇಶನ್‌ಶಿಪ್ ಮ್ಯಾನೇಜರ್ ಆಗಿ ನೇಮಕಗೊಂಡಿದ್ದ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ನಂದಗ್ರಾಮ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಘಟನೆ ನಡೆದ ಸ್ಥಳದಿಂದ ಪೊಲೀಸರು ಆತ್ಮಹತ್ಯೆ ಪತ್ರವನ್ನು ವಶಪಡಿಸಿಕೊಂಡಿದ್ದಾರೆ. ಅದರ ಆಧಾರದ ಮೇಲೆ ಪೊಲೀಸರು ಮುಂದಿನ ಕ್ರಮ ಕೈಗೊಳ್ಳುತ್ತಿದ್ದಾರೆ.

ಬಾಡಿ ಶೇಮಿಂಗ್, ಸಹೋದ್ಯೋಗಿಗಳ ವರ್ತನೆಯಿಂದ ಬೇಸತ್ತು ಬ್ಯಾಂಕ್​ ಉದ್ಯೋಗಿ ಆತ್ಮಹತ್ಯೆ
ಯುವತಿ ಕುಟುಂಬದ ಆಕ್ರಂದನ
ನಯನಾ ರಾಜೀವ್
|

Updated on: Jul 18, 2024 | 8:27 AM

Share

ನೋಯ್ಡಾದ ಆಕ್ಸಿಸ್​ ಬ್ಯಾಂಕ್​ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಯುವತಿ ಐದು ಪುಟಗಳ ಡೆತ್​ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ. ಆ ಡೆತ್​ ನೋಟ್​ನಲ್ಲಿ ಆಕೆ ಸಹೋದ್ಯೋಗಿಗಳ ವರ್ತನೆಯಿಂದ ಬೇಸತ್ತಿರುವ ಸಂಗತಿ ಬಯಲಿಗೆ ಬಂದಿದೆ. ಯುವತಿ ಸಹೋದರ ನಾಲ್ಕೈದು ಸಹೋದ್ಯೋಗಿಗಳ ವಿರುದ್ಧ ನಂದಗ್ರಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಕಳೆದ ಐದಾರು ತಿಂಗಳಿನಿಂದ ತನ್ನ ಸಹೋದರಿ ಶಿವಾನಿ ತ್ಯಾಗಿಗೆ ಕೆಲಸದ ಸ್ಥಳದಲ್ಲಿ ತನ್ನ ಸಹೋದ್ಯೋಗಿಗಳು ಕಿರುಕುಳ ನೀಡಿದ್ದಾರೆ ಎಂದು ಹರಿನಗರ ನಿವಾಸಿ ಗೌರವ್ ತ್ಯಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ.

ಆಕೆಯ ಕೆಲಸದಲ್ಲಿ ಸುಖಾಸುಮ್ಮನೆ ತಪ್ಪು ಕಂಡುಹಿಡಿಯುವುದು, ಬಾಡಿ ಶೇಮಿಂಗ್, ಕಿರುಕುಳ ನೀಡುತ್ತಿದ್ದರು, ಗೇಲಿ ಮಾಡುತ್ತಿದ್ದರು ಇದರಿಂದ ಬೇಸತ್ತು ವಿಷ ಕುಡಿದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಸಂಬಂಧಿಕರು ಯುವತಿಯನ್ನು ಎಂಎಂಜಿ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.

ಮತ್ತಷ್ಟು ಓದಿ: Viral: ಹಣಕ್ಕಾಗಿ ಬ್ಲಾಕ್‌ಮೇಲ್;‌ ಗೆಳತಿಯ ಕಾಟ ತಾಳಲಾರದೆ ಆತ್ಮಹತ್ಯೆಯ ದಾರಿ ಹಿಡಿದ ಉದ್ಯಮಿ

ಅಲ್ಲಿಂದ ಯುವತಿಯನ್ನು ಜಿಟಿಬಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆ ವೇಳೆ ಅವರು ಸಾವನ್ನಪ್ಪಿದ್ದಾರೆ. ಬಾಲಕಿ ಬರೆದ ಪತ್ರದಲ್ಲಿ ಎಲ್ಲಾ ಆರೋಪಿಗಳ ಹೆಸರನ್ನು ಬರೆಯಲಾಗಿದೆ ಎಂದು ಹೇಳಲಾಗಿದೆ.

ಈ ಪ್ರಕರಣದಲ್ಲಿ ಮೂವರು ಸಹೋದ್ಯೋಗಿಗಳಾದ ಜ್ಯೋತಿ ಚೌಹಾನ್, ಅಕ್ರಂ ಮತ್ತು ನಜ್ಮುಸ್ ಶಾಕಿಬ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ ಎಂದು ನಗರ ಡಿಸಿಪಿ ಜ್ಞಾನೇಂದ್ರ ಸಿಂಗ್ ತಿಳಿಸಿದ್ದಾರೆ. ಸಾಕ್ಷ್ಯಾಧಾರಗಳ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ