ಅಬುಧಾಬಿಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ; ಅಧ್ಯಕ್ಷ ನಹ್ಯಾನ್ರಿಂದ ಮೋದಿಗೆ ಸ್ವಾಗತ

| Updated By: ಆಯೇಷಾ ಬಾನು

Updated on: Jun 28, 2022 | 6:54 PM

ಯುಎಇನಲ್ಲಿ 2 ದಿನ ಪ್ರವಾಸ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅಬುಧಾಬಿಗೆ ಬಂದು ಇಳಿದಿದ್ದಾರೆ. ಅಧ್ಯಕ್ಷ ನಹ್ಯಾನ್ ಪ್ರಧಾನಿ ಮೋದಿಗೆ ಸ್ವಾಗತ ಕೋರಿದ್ದಾರೆ.

ಅಬುಧಾಬಿಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ; ಅಧ್ಯಕ್ಷ ನಹ್ಯಾನ್ರಿಂದ ಮೋದಿಗೆ ಸ್ವಾಗತ
ನರೇಂದ್ರ ಮೋದಿ
Follow us on

ಅಬುಧಾಬಿ: ಯುನೈಟೆಡ್ ಅರಬ್ ಎಮಿರೇಟ್ಸ್ (UAE)ನಲ್ಲಿ 2 ದಿನ ಪ್ರವಾಸ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ(Narendra Modi) ಅಬುಧಾಬಿಗೆ ಬಂದು ಇಳಿದಿದ್ದಾರೆ. ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್(Sheikh Mohamed bin Zayed Al Nahyan) ಪ್ರಧಾನಿ ಮೋದಿಗೆ ಸ್ವಾಗತ ಕೋರಿದ್ದಾರೆ. ಯುಎಇ ಜೊತೆ ಪ್ರಧಾನಿ ಮೋದಿ ಹಲವು ಮಹತ್ವದ ವಿಷಯಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಹಾಗೂ ಹಲವು ಒಪ್ಪಂದಗಳಿಗೆ ಉಭಯ ನಾಯಕರು ಸಹಿ ಹಾಕಲಿದ್ದಾರೆ. ಇದೇ ವೇಳೆ ಮೇ 13ರಂದು ನಿಧನರಾಗಿದ್ದ ಯುಎಇ ಅಧ್ಯಕ್ಷ ಶೇಕ್ ಖಲೀಫಾಗೆ ಶ್ರದ್ಧಾಂಜಲಿ ಸಲ್ಲಿಸಲಿದ್ದಾರೆ.

ಜರ್ಮನಿಯಲ್ಲಿ ನಡೆದ ಜಿ7 ಶೃಂಗಸಭೆಯಲ್ಲಿ ಭಾಗಿವಹಿಸಿದ್ದ ಬೆನ್ನಲ್ಲೆ ಪ್ರಧಾನಿ ಯುಎಇಗೆ ಬಂದಿಳಿಸಿದ್ದಾರೆ. ಇನ್ನು ಅಬುಧಾಬಿ ಇಂಟರ್ ನ್ಯಾಷನಲ್ ಏರ್ಪೋರ್ಟ್ಗೆ ಬಂದಿಳಿದ ಮೋದಿಯವರನ್ನು ದುಬೈ ರಾಜ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಸ್ವಾಗತಿಸಿದ್ದಾರೆ. ಈ ಸಂಬಂಧ ಟ್ವೀಟ್ ಮಾಡಿರುವ ನರೇಂದ್ರ ಮೋದಿ, ನನ್ನನ್ನು ಸ್ವಾಗತಿಸಲು ಬಂದ ಖೇಖ ಮೊಹಮ್ಮದ್ ಅವರ ವಿಶೇಷ ಅತಿಥ್ಯಕ್ಕೆ ಮನಸೋತಿದ್ದೇನೆ ಎಂದು ಬರೆದುಕೊಂಡಿದ್ದಾರೆ.

ಪ್ರವಾದಿ ಮೊಹಮದ್ ಪೈಗಂಬರ್ ಅವರ ಬಗ್ಗೆ ಬಿಜೆಪಿ ವಕ್ತಾರೆ ನೂಪುರ್ ಶರ್ಮಾ ನೀಡಿದ್ದ ಹೇಳಿಕೆಗೆ ಕೆಲವು ಮಧ್ಯಪ್ರಾಚ್ಯ ದೇಶಗಳು ಖಂಡನೆ ವ್ಯಕ್ತಪಡಿಸಿದ್ದವು. ಕತಾರ್, ಸೌದಿ, ಪಾಕಿಸ್ತಾನದಂತಹ ಇಸ್ಲಾಮಿಕ್ ದೇಶಗಳು ಭಾರತದ ವಿರುದ್ಧ ವಾಗ್ದಾಳಿ ಮಾಡಿದ್ದವು. ಇದರ ನಡುವೆ ಸದ್ಯ ಈಗ ನರೇಂದ್ರ ಮೋದಿ ಯುಎಇ ಪ್ರವಾಸದಲ್ಲಿದ್ದು ಭಿನ್ನಭಿಪ್ರಾಯ ಶಮನ ಮಾಡಲಿದ್ದಾರೆ. ಯುಎಇ ಕೂಡ ಸ್ನೇಹದ ಸೂಚನೆ ನೀಡಿದೆ. ನೂಪುರ್ ಶರ್ಮಾ ವಿವಾದ ಸಂಭವಿಸಿದ ನಂತರ ಟೀಮ್ ಮೋದಿ ವಿಶೇಷವಾಗಿ ಮಧ್ಯಪ್ರಾಚ್ಯದಲ್ಲಿ ಭಿನ್ನಾಭಿಪ್ರಾಯವನ್ನು ತಣಿಸುವಲ್ಲಿ ಯಶಸ್ವಿಯಾಗಿದ್ದಾರೆ.

Published On - 5:40 pm, Tue, 28 June 22