Arjitha Seva: ಸೆಪ್ಟೆಂಬರ್​ ತಿಂಗಳಲ್ಲಿ ತಿರುಪತಿ ತಿಮ್ಮಪ್ಪನ ದರ್ಶನಕ್ಕಾಗಿ ಇಂದಿನಿಂದ ಆನ್​ಲೈನ್​ ಟಿಕೆಟ್​ ಬಿಡುಗಡೆ

TTD: ಅರ್ಜಿತ ಸೇವೆಗಳಾದ ಸುಪ್ರಭಾತಂ, ತೋಮಾಲ, ಅರ್ಚನೆ, ಅಷ್ಟದಳ ಪಾದ ಪದ್ಮಾರಾಧನೆ, ಊಂಜಲ ಸೇವೆ (ತೊಟ್ಟಿಲು ಸೇವೆ) ಟಿಕೆಟ್‌ಗಳನ್ನು ಲಕ್ಕಿ ಡಿಪ್‌ನಲ್ಲಿ ಹಂಚಿಕೆ ಮಾಡಲಾಗುತ್ತದೆ. ಭಕ್ತರು ಇಂದು ಬೆಳಗ್ಗೆ 10ರಿಂದ ಜೂನ್ 29ರ ಬೆಳಗ್ಗೆ 10 ಗಂಟೆಯೊಳಗೆ ಅರ್ಜಿತ ಸೇವಾ ಟಿಕೆಟ್‌ಗಾಗಿ ಆನ್‌ಲೈನ್‌ನಲ್ಲಿ ನೋಂದಾಯಿಸಿಕೊಳ್ಳಬೇಕು ಎಂದು ಟಿಟಿಡಿ ಸೂಚಿಸಿದೆ.

Arjitha Seva: ಸೆಪ್ಟೆಂಬರ್​ ತಿಂಗಳಲ್ಲಿ ತಿರುಪತಿ ತಿಮ್ಮಪ್ಪನ ದರ್ಶನಕ್ಕಾಗಿ ಇಂದಿನಿಂದ ಆನ್​ಲೈನ್​ ಟಿಕೆಟ್​ ಬಿಡುಗಡೆ
ತಿರುಪತಿ ತಿಮ್ಮಪ್ಪನ ಅರ್ಜಿತ ಸೇವೆಯ ಟಿಕೆಟ್‌ಗಳ ಹಂಚಿಕೆ ಇಂದಿನಿಂದ ಶುರು
Follow us
TV9 Web
| Updated By: ಸಾಧು ಶ್ರೀನಾಥ್​

Updated on:Jun 28, 2022 | 2:52 PM

ತಿರುಮಲ ಶ್ರೀವಾರಿ ಅರ್ಜಿತ ಸೇವೆಯ ಟಿಕೆಟ್‌ಗಳನ್ನು ಸೆಪ್ಟೆಂಬರ್ ತಿಂಗಳಿಗಾಗಿ ಇಂದಿನಿಂದ ಬಿಡುಗಡೆ ಮಾಡಲಾಗಿದೆ. ಮೊದಲು ಬಂದವರಿಗೆ ಮೊದಲು ಸೇವೆ ಆಧಾರದ ಮೇಲೆ ಜೂನ್ 29ರವರೆಗೆ ಟಿಕೆಟ್‌ಗಳ ಹಂಚಿಕೆಯಾಗಲಿದೆ.

ಅರ್ಜಿತ ಸೇವೆಗಳಾದ ಸುಪ್ರಭಾತಂ, ತೋಮಾಲ, ಅರ್ಚನೆ, ಅಷ್ಟದಳ ಪಾದ ಪದ್ಮಾರಾಧನೆ, ಊಂಜಲ ಸೇವೆ (ತೊಟ್ಟಿಲು ಸೇವೆ) ಟಿಕೆಟ್‌ಗಳನ್ನು ಲಕ್ಕಿ ಡಿಪ್‌ನಲ್ಲಿ ಹಂಚಿಕೆ ಮಾಡಲಾಗುತ್ತದೆ. ಭಕ್ತರು ಇಂದು ಬೆಳಗ್ಗೆ 10ರಿಂದ ಜೂನ್ 29ರ ಬೆಳಗ್ಗೆ 10 ಗಂಟೆಯೊಳಗೆ ಅರ್ಜಿತ ಸೇವಾ ಟಿಕೆಟ್‌ಗಾಗಿ ಆನ್‌ಲೈನ್‌ನಲ್ಲಿ ನೋಂದಾಯಿಸಿಕೊಳ್ಳಬೇಕು ಎಂದು ಟಿಟಿಡಿ ಸೂಚಿಸಿದೆ.

ತಿರುಮಲ ಶ್ರೀವಾರಿಯ ಭಕ್ತರಿಗೆ ತಿರುಪತಿ ತಿರುಮಲ ದೇವಸ್ಥಾನ ಆಡಳಿತ ಮಂಡಳಿ (ಟಿಟಿಡಿ-TTD)ಸಿಹಿಸುದ್ದಿ ಹೇಳಿದೆ. ಟಿಟಿಡಿ ಸೆಪ್ಟೆಂಬರ್ ತಿಂಗಳ ತಿರುಮಲ ಶ್ರೀವಾರಿ ಆರ್ಜಿತ ಸೇವಾ ಟಿಕೆಟ್‌ಗಳ ಕೋಟಾವನ್ನು ಆನ್‌ಲೈನ್‌ನಲ್ಲಿ ಇಂದು ಬಿಡುಗಡೆ ಮಾಡಿದೆ. ಒಟ್ಟು 46,470 ಟಿಕೆಟ್‌ಗಳಲ್ಲಿ 8070 ಭಕ್ತರಿಗೆ ಲಕ್ಕಿ ಡಿಪ್ ಸೇವಾ ಟಿಕೆಟ್‌ಗಳು ಲಭ್ಯವಿವೆ. ಅದೇ ರೀತಿ, ಮೊದಲು ಬಂದವರಿಗೆ ಮೊದಲು ಸೇವೆಯ ಆಧಾರದ ಮೇಲೆ 38,400 ಟಿಕೆಟ್‌ಗಳಿವೆ ಎಂದು ಟಿಟಿಡಿ ಹೇಳಿದೆ ( TTD Arjitha Seva tickets ).

ಅರ್ಜಿತ ಸೇವೆಗಳಾದ ಸುಪ್ರಭಾತಂ, ತೋಮಾಲ, ಅರ್ಚನ, ಅಷ್ಟದಳ ಪಾದ ಪದ್ಮಾರಾಧನೆ ಟಿಕೆಟ್‌ಗಳನ್ನು ಲಕ್ಕಿ ಡಿಪ್‌ನಲ್ಲಿ ಹಂಚಿಕೆ ಮಾಡಲಾಗುತ್ತದೆ. ಭಕ್ತರು ಇಂದು ಬೆಳಗ್ಗೆ 10ರಿಂದ ಜೂನ್ 29ರ ಬೆಳಗ್ಗೆ 10 ಗಂಟೆಯೊಳಗೆ ಆರ್ಜಿತ ಸೇವಾ ಟಿಕೆಟ್‌ಗಾಗಿ ಆನ್‌ಲೈನ್‌ನಲ್ಲಿ ನೋಂದಾಯಿಸಿಕೊಳ್ಳಬೇಕು ಎಂದು ಟಿಟಿಡಿ ಸೂಚಿಸಿದೆ.

Tirumala Tirupati: September quota of Arjitha Seva tickets released today

ಅರ್ಜಿತ ಸೇವಾ ಟಿಕೆಟ್‌ಗಾಗಿ ಆನ್‌ಲೈನ್‌ನಲ್ಲಿ ನೋಂದಾಯಿಸಿಕೊಳ್ಳಬೇಕು – ಟಿಟಿಡಿ

ಆನ್‌ಲೈನ್ ಲಕ್ಕಿ ಡಿಪ್ ಡ್ರಾ ನಂತರ ಟಿಕೆಟ್‌ಗಳನ್ನು ದೃಢೀಕರಿಸಲಾಗುತ್ತದೆ. ಜೂನ್ 29 ರಂದು ಮಧ್ಯಾಹ್ನ 12 ಗಂಟೆಯ ನಂತರ ಟಿಟಿಡಿ ವೆಬ್‌ಸೈಟ್‌ನಲ್ಲಿ ನಿಗದಿಪಡಿಸಲಾದ ಟಿಕೆಟ್‌ಗಳ ಪಟ್ಟಿಯನ್ನು ಇರಿಸಲಾಗುತ್ತದೆ. ಅದೇ ರೀತಿ ಎಸ್ ಎಂಎಸ್ ಮತ್ತು ಇ-ಮೇಲ್ ಮೂಲಕ ಭಕ್ತರಿಗೆ ಮಾಹಿತಿ ನೀಡಲಾಗುತ್ತದೆ. ಟಿಕೆಟ್ ಪಡೆದ ಭಕ್ತರು ಎರಡು ದಿನಗಳಲ್ಲಿ ಟಿಕೆಟ್ ದರವನ್ನು ಪಾವತಿಸಬೇಕು. ಇದನ್ನು ಗಮನದಲ್ಲಿಟ್ಟುಕೊಂಡು, ಈ ಅರ್ಜಿತ ಸೇವಾ ಟಿಕೆಟ್‌ಗಳನ್ನು ನೀವು ಬುಕ್ ಮಾಡಬೇಕೆಂದು TTD ತಿಳಿಸಿದೆ.

ಇಂದು ಸಂಜೆ 4 ಗಂಟೆಗೆ ಕಲ್ಯಾಣೋತ್ಸವ, ಊಂಜಲ ಸೇವೆ, ಅರ್ಜಿತ ಬ್ರಹ್ಮೋತ್ಸವ, ಸಹಸ್ರ ದೀಪಾಲಂಕಾರ ಸೇವೆಗಳು ಬಿಡುಗಡೆಯಾಗಲಿವೆ. ಮೊದಲು ಬಂದ ಭಕ್ತರಿಗೆ ಆದ್ಯತೆ ಮೇರೆಗೆ ಇವುಗಳನ್ನು ನಿಗದಿಪಡಿಸಲಾಗಿದೆ. ಭಕ್ತರು ತಮ್ಮ ಸೇವಾ ಟಿಕೆಟ್‌ಗಳನ್ನು ಕಾಯ್ದಿರಿಸುವ ಮೊದಲು ಮಾರ್ಗಸೂಚಿಗಳನ್ನು ಅನುಸರಿಸುವಂತೆ ಟಿಟಿಡಿ ಒತ್ತಾಯಿಸುತ್ತದೆ.

Published On - 2:32 pm, Tue, 28 June 22