Sanjay Raut Arrest: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಸಂಜಯ್ ರಾವತ್ ಬಂಧನ; ಇಂದು ಕೋರ್ಟ್​ ಮುಂದೆ ಹಾಜರು

TV9 Digital Desk

| Edited By: Sushma Chakre

Updated on: Aug 01, 2022 | 9:20 AM

ಬಂಧನಕ್ಕೊಳಗಾಗಿರುವ ಸಂಜಯ್ ರಾವತ್ ಅವರನ್ನು ಇಡಿ ಅಧಿಕಾರಿಗಳು ಇಂದು (ಸೋಮವಾರ) ವಿಶೇಷ ಪಿಎಂಎಲ್‌ಎ ನ್ಯಾಯಾಲಯದಲ್ಲಿ ಹಾಜರುಪಡಿಸಲಿದ್ದಾರೆ. ಈ ಪ್ರಕರಣದ 10 ಪ್ರಮುಖ ಬೆಳವಣಿಗೆಗಳ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

Sanjay Raut Arrest: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಸಂಜಯ್ ರಾವತ್ ಬಂಧನ; ಇಂದು ಕೋರ್ಟ್​ ಮುಂದೆ ಹಾಜರು
ಸಂಜಯ್ ರಾವತ್

ಮುಂಬೈ: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಶಿವಸೇನೆ ಮುಖಂಡ ಹಾಗೂ ಸಂಸದ ಸಂಜಯ್ ರಾವತ್ ಅವರನ್ನು ಭಾನುವಾರ ತಡರಾತ್ರಿ ಜಾರಿ ನಿರ್ದೇಶನಾಲಯದ (ED) ಅಧಿಕಾರಿಗಳು ಬಂಧಿಸಿದ್ದಾರೆ. ಕೆಲವು ಗಂಟೆಗಳ ಕಾಲ ಇಡಿ ದಾಳಿ ನಡೆಸಿದ ಬಳಿಕ ಅವರನ್ನು ಬಂಧಿಸಲಾಗಿತ್ತು. ಬಂಧನಕ್ಕೊಳಗಾಗಿರುವ ಸಂಜಯ್ ರಾವತ್ (Sanjay Raut) ಅವರನ್ನು ಇಡಿ ಅಧಿಕಾರಿಗಳು ಇಂದು (ಸೋಮವಾರ) ವಿಶೇಷ ಪಿಎಂಎಲ್‌ಎ (Money Laundering Act) ನ್ಯಾಯಾಲಯದಲ್ಲಿ ಹಾಜರುಪಡಿಸಲಿದ್ದಾರೆ. ಈ ಪ್ರಕರಣದ 10 ಪ್ರಮುಖ ಬೆಳವಣಿಗೆಗಳ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

  1. ಮುಂಬೈನ ಪತ್ರಾ ಚಾವ್ಲ್​ ಭೂ ಹಗರಣ ಮತ್ತು ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವ ಸೇನೆಯ ಹಿರಿಯ ನಾಯಕ ಸಜಯ್ ರಾವತ್ ಅವರನ್ನು ಬಂಧಿಸಲಾಗಿದೆ. 1,034 ಕೋಟಿ ರೂ. ಪತ್ರಾ ಚಾವ್ಲ್ ಭೂ ಹಗರಣಕ್ಕೆ ಸಂಬಂಧಿಸಿದಂತೆ ಸಂಜಯ್ ರಾವತ್ ಅವರನ್ನು ಈ ಹಿಂದೆ 2 ಬಾರಿ ವಿಚಾರಣೆ ನಡೆಸಲಾಗಿತ್ತು.
  2. ದಕ್ಷಿಣ ಮುಂಬೈನ ಬಲ್ಲಾರ್ಡ್ ಎಸ್ಟೇಟ್‌ನಲ್ಲಿರುವ ಇಡಿ ವಲಯ ಕಚೇರಿಯಲ್ಲಿ 9 ಗಂಟೆಗಳ ಕಾಲ ವಿಚಾರಣೆಯ ನಂತರ 60 ವರ್ಷದ ಸಂಜಯ್ ರಾವತ್ ಅವರನ್ನು ಬಂಧಿಸಲಾಯಿತು. ಸೋಮವಾರ ಮಧ್ಯರಾತ್ರಿ 12:05 ಗಂಟೆಗೆ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ (ಪಿಎಂಎಲ್‌ಎ) ಅವರು ತನಿಖೆಗೆ ಸಹಕರಿಸದ ಕಾರಣ ಅವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
  3. ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನೇತೃತ್ವದ ಸೇನೆಯ ರಾಜ್ಯಸಭಾ ಸಂಸದರನ್ನು ಮುಂಬೈನ ವಿಶೇಷ ಪಿಎಂಎಲ್‌ಎ ನ್ಯಾಯಾಲಯದ ಮುಂದೆ ಇಂದು ಹಾಜರುಪಡಿಸಲಾಗುವುದು. ಅಲ್ಲಿ ಜಾರಿ ನಿರ್ದೇಶನಾಲಯವು ಅವರನ್ನು ಕಸ್ಟಡಿಗೆ ನೀಡಲು ಕೋರಲಿದೆ.
  4. ಸಂಜಯ್ ರಾವತ್ ಬಂಧನದ ಕುರಿತು ಅವರ ಸಹೋದರ ಮತ್ತು ಶಿವಸೇನಾ ಶಾಸಕ ಸುನೀಲ್ ರಾವತ್ ಪ್ರತಿಕ್ರಿಯಿಸಿದ್ದು, ಬಿಜೆಪಿ ಸಂಜಯ್ ರಾವತ್ ಅವರನ್ನು ಹೆದರಿಸಲು ಪ್ರಯತ್ನಿಸುತ್ತಿದೆ. ಸಂಜಯ್ ರಾವತ್ ಅವರನ್ನು ಮೌನಗೊಳಿಸುವ ಉದ್ದೇಶದಿಂದ ಬಂಧಿಸಲಾಗಿದೆ. ಈಗ ಎಲ್ಲರೂ ಮಹಾರಾಷ್ಟ್ರದಲ್ಲಿ ಈ ಅನ್ಯಾಯದ ವಿರುದ್ಧ ಧ್ವನಿ ಎತ್ತಲಿದ್ದಾರೆ ಎಂದಿದ್ದಾರೆ.
  5. ಸಂಜಯ್ ರಾವತ್ ಅವರ ಮನೆಯಲ್ಲಿ ಪತ್ತೆಯಾದ ಮೊತ್ತ 10 ಲಕ್ಷ ರೂ. ಸಿಎಂ ಏಕನಾಥ್ ಶಿಂಧೆ ಅಯೋಧ್ಯೆ ಪ್ರವಾಸಕ್ಕೆ ಪಕ್ಷದ ನಿಧಿಯಾಗಿದೆ. ಲಕೋಟೆಯ ಮೇಲೆ ‘ಅಯೋಧ್ಯೆ ಪ್ರವಾಸ’ ಎಂದು ಬರೆಯಲಾಗಿದೆ ಎಂದು ಸುನೀಲ್ ಹೇಳಿದ್ದಾರೆ.
  6. ಭಾನುವಾರ ಸಂಜೆ ಸಂಜಯ್ ರಾವತ್ ಅವರನ್ನು ಜಾರಿ ನಿರ್ದೇಶನಾಲಯಕ್ಕೆ ಕರೆದೊಯ್ಯಲಾಯಿತು. ಮುಂಜಾನೆಯಿಂದಲೇ ಅವರ ಮುಂಬೈನ ಮನೆಯ ಮೇಲೆ ದಾಳಿಗಳು ನಡೆದಿತ್ತು. ಸುಮಾರು 9 ಗಂಟೆಗಳ ಕಾಲ ಇಡಿ ದಾಳಿ ಮುಂದುವರೆಯಿತು.
  7. ಉದ್ಧವ್ ಠಾಕ್ರೆ ತಂಡವನ್ನು ತೊರೆಯುವುದಿಲ್ಲ ಎಂದು ಘೋಷಿಸಿದ್ದ ಸಂಜಯ್ ರಾವತ್ ಅವರ ವಿರುದ್ಧ ಸುಳ್ಳು ಪ್ರಕರಣದಲ್ಲಿ ಸುಳ್ಳು ಸಾಕ್ಷ್ಯವನ್ನು ನಿರ್ಮಿಸಲಾಗುತ್ತಿದೆ ಎಂದು ಶಿವಸೇನೆ ನಾಯಕರು ಹೇಳಿದ್ದಾರೆ.
  8. ನಾನು ಶಿವಸೇನೆಯನ್ನು ಬಿಡುವುದಿಲ್ಲ. ನಾನು ಸತ್ತರೂ ಶರಣಾಗುವುದಿಲ್ಲ ಎಂದು ಸಂಜಯ್ ರಾವತ್ ಭಾನುವಾರ ಟ್ವೀಟ್ ಮಾಡಿದ್ದರು. ಯಾವುದೇ ಹಗರಣಕ್ಕೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ದಿವಂಗತ ಬಾಳಾಸಾಬೇಬ್ ಠಾಕ್ರೆಯವರ ಮೇಲೆ ಪ್ರಮಾಣ ಮಾಡುತ್ತೇನೆ. ಬಾಳಾಸಾಹೇಬರು ನಮಗೆ ಹೋರಾಡಲು ಕಲಿಸಿದರು. ನಾನು ಶಿವಸೇನೆಗಾಗಿ ಹೋರಾಡುವುದನ್ನು ಮುಂದುವರಿಸುತ್ತೇನೆ ಎಂದು ಅವರು ಟ್ವೀಟ್ ಮಾಡಿದ್ದರು. ಅದರ ಬೆನ್ನಲ್ಲೇ ಅವರ ಬಂಧನವಾಗಿತ್ತು.
  9. ಮುಖ್ಯಮಂತ್ರಿ ಏಕನಾಥ್ ಶಿಂಧೆ ಸಂಜಯ್ ರಾವತ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ನಾವು ನಮ್ಮ ಬಣ ಅಥವಾ ಬಿಜೆಪಿಯಿಂದ ಅವರಿಗೆ ಯಾವುದೇ ಆಹ್ವಾನವನ್ನು ಕಳುಹಿಸಿಲ್ಲ. ಅವರು ನಿರಪರಾಧಿಯಾಗಿದ್ದರೆ ತನಿಖೆಗೆ ಹೆದರುವುದೇಕೆ? ಎಂದು ಸಿಎಂ ಪ್ರಶ್ನಿಸಿದ್ದಾರೆ.
  10. ಜುಲೈ 1 ರಂದು ಸಂಜಯ್ ರಾವತ್ ರನ್ನು ಸುಮಾರು 10 ಗಂಟೆಗಳ ಕಾಲ ವಿಚಾರಣೆ ನಡೆಸಲಾಗಿದ್ದು, ಅವರ ಹೇಳಿಕೆಯನ್ನು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯ ಕ್ರಿಮಿನಲ್ ಸೆಕ್ಷನ್‌ಗಳ ಅಡಿಯಲ್ಲಿ ದಾಖಲಿಸಲಾಗಿತ್ತು. ಏಪ್ರಿಲ್‌ನಲ್ಲಿ ಜಾರಿ ನಿರ್ದೇಶನಾಲಯವು ತನ್ನ ತನಿಖೆಯ ಭಾಗವಾಗಿ ಸಂಜಯ್ ರಾವತ್ ಅವರ ಪತ್ನಿ ವರ್ಷಾ ರಾವತ್ ಮತ್ತು ಅವರ ಇಬ್ಬರು ಸಹಚರರ 11.15 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿತ್ತು.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada