Bal Gangadhar Tilak Death Anniversary: ಇಂದು ಬಾಲ ಗಂಗಾಧರ್ ತಿಲಕ್ ಪುಣ್ಯ ತಿಥಿ; ಅವರ ಕುರಿತ ಕುತೂಹಲಕಾರಿ ಮಾಹಿತಿ ಇಲ್ಲಿದೆ

ಮಹಾತ್ಮ ಗಾಂಧೀಜಿಯವರಿಂದ ಆಧುನಿಕ ಭಾರತದ ಸೃಷ್ಟಿಕರ್ತ ಎಂದು ಕರೆಸಿಕೊಂಡಿದ್ದ ಬಾಲ ಗಂಗಾಧರ್ ತಿಲಕ್ ಕುರಿತು ಕುತೂಹಲಕಾರಿ ಮಾಹಿತಿ ಇಲ್ಲಿದೆ.

Bal Gangadhar Tilak Death Anniversary: ಇಂದು ಬಾಲ ಗಂಗಾಧರ್ ತಿಲಕ್ ಪುಣ್ಯ ತಿಥಿ; ಅವರ ಕುರಿತ ಕುತೂಹಲಕಾರಿ ಮಾಹಿತಿ ಇಲ್ಲಿದೆ
Follow us
TV9 Web
| Updated By: ಸುಷ್ಮಾ ಚಕ್ರೆ

Updated on: Aug 01, 2022 | 10:59 AM

ಬೆಂಗಳೂರು: ಸ್ವರಾಜ್ಯ ನನ್ನ ಜನ್ಮಸಿದ್ಧ ಹಕ್ಕು ಅದನ್ನು ಪಡೆದೇ ತೀರುತ್ತೇನೆ ಎಂದು ಘೋಷಿಸಿದ್ದ ಬಾಲಗಂಗಾಧರ ತಿಲಕ್ (Bal Gangadhar Tilak) ಓರ್ವ ಸಮಾಜ ಸುಧಾರಕ, ಭಾರತದ ರಾಷ್ಟ್ರೀಯತಾವಾದಿ ಮತ್ತು ಸ್ವಾತಂತ್ರ್ಯ ಹೋರಾಟಗಾರ. ಸಂಸ್ಕೃತ ವಿದ್ವಾಂಸರಾಗಿದ್ದ ಅವರು 1920ರ ಆಗಸ್ಟ್ 1ರಂದು ನಿಧನರಾದರು. ಮರಾಠಿ ಮತ್ತು ಹಿಂದಿಯಲ್ಲಿ ಅವರ ಭಾಷಣಗಳು ಬಹಳ ಜನಪ್ರಿಯವಾಗಿವೆ. ಬ್ರಿಟಿಷರ ವಿರುದ್ಧ ಭಾರತದ ಸ್ವಾತಂತ್ರ್ಯಕ್ಕೆ ಅಡಿಪಾಯ ಹಾಕುವಲ್ಲಿ ಬಾಲ ಗಂಗಾಧರ ತಿಲಕ್ ಅವರ ಕೊಡುಗೆ ಗಣನೀಯವಾದುದು. ಸ್ವಾತಂತ್ರ್ಯ ಹೋರಾಟವನ್ನು ಅವರು ರಾಷ್ಟ್ರೀಯ ಚಳುವಳಿಯಾಗಿ ಪರಿವರ್ತಿಸಿದರು.

ಬಾಲ ಗಂಗಾಧರ ತಿಲಕ್ ಭಾರತೀಯ ಸ್ವಾತಂತ್ರ್ಯ ಚಳವಳಿಯ ಮೊದಲ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅವರನ್ನು ಜನ ಪ್ರೀತಿಯಿಂದ ‘ಲೋಕಮಾನ್ಯ’ ಎಂದು ಕರೆಯುತ್ತಿದ್ದರು. ಬಾಲಗಂಗಾಧರ ತಿಲಕ್ ಅವರು ಭಾರತೀಯ ಸ್ವಾತಂತ್ರ್ಯ ಹೋರಾಟದ ಅಗ್ರಗಣ್ಯ ಮತ್ತು ಅತ್ಯಂತ ಸಕ್ರಿಯ ನಾಯಕರಾಗಿದ್ದರು ಮತ್ತು ಮಹಾತ್ಮ ಗಾಂಧಿ ಮತ್ತು ಸರ್ದಾರ್ ವಲ್ಲಭಾಯಿ ಪಟೇಲ್ ಮುಂದಿನ ಅನೇಕ ನಾಯಕರಿಗೆ ಸ್ವಾತಂತ್ರ್ಯ ಹೋರಾಟದ ಮಾರ್ಗ ಹಾಕಿಕೊಟ್ಟರು.

ಇದನ್ನೂ ಓದಿ: Mann Ki Baat Live Updates: 91ನೇ ಮನ್ ಕಿ ಬಾತ್​ನಲ್ಲಿ ಸ್ವಾತಂತ್ರ್ಯ ಸಂಭ್ರಮದ ಅನುಭವ ಆಹ್ವಾನಿಸಿದ ಮೋದಿ

ಮಹಾತ್ಮ ಗಾಂಧೀಜಿಯವರಿಂದ ಆಧುನಿಕ ಭಾರತದ ಸೃಷ್ಟಿಕರ್ತ ಎಂದು ಕರೆಸಿಕೊಂಡಿದ್ದ ಬಾಲ ಗಂಗಾಧರ್ ತಿಲಕ್ ಕುರಿತು ಕುತೂಹಲಕಾರಿ ಮಾಹಿತಿ ಇಲ್ಲಿದೆ. ಮಹಾರಾಷ್ಟ್ರದ ರತ್ನಗಿರಿಯಲ್ಲಿ 1856 ರಂದು ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ ಬಾಲ ಗಂಗಾಧರ್ ತಿಲಕ್ 1877ರಲ್ಲಿ ಪುಣೆಯ ಡೆಕ್ಕನ್ ಕಾಲೇಜಿನಿಂದ ಎಲ್​ಎಲ್​ಬಿ ಪದವಿ ಪಡೆದಿದ್ದರು. 1884ರಲ್ಲಿ ಡೆಕ್ಕನ್ ಎಜುಕೇಷನ್ ಸೊಸೈಟಿ ಸ್ಥಾಪಿಸಿ ಯುವಕರಿಗೆ ರಾಷ್ಟ್ರೀಯತಾವಾದಿ ತತ್ವಗಳನ್ನು ತಿಳಿಸಿದರು.

ಸ್ವರಾಜ್ಯ ನನ್ನ ಜನ್ಮಸಿದ್ಧ ಹಕ್ಕು ಅದನ್ನು ನಾನು ಪಡೆದೇ ತೀರುತ್ತೇನೆ ಎಂಬುದು ಅವರ ಪ್ರಸಿದ್ಧವಾದ ಸ್ಲೋಗನ್. ಸ್ವರಾಜ್ಯವಿಲ್ಲದೆ ಕೈಗಾರಿಕಾ ಪ್ರಗತಿಯೂ ಸಾಧ್ಯವಿಲ್ಲ. ಭಾರತದ ಸ್ವಾತಂತ್ರ್ಯಕ್ಕಾಗಿ ಪ್ರಯತ್ನಗಳನ್ನು ಮಾಡುವುದು ಸಾಮಾಜಿಕ ಸುಧಾರಣೆಗಳಿಗಿಂತ ಹೆಚ್ಚು ಮುಖ್ಯವಾಗಿದೆ. ದೇವರು ಅಸ್ಪೃಶ್ಯತೆಯನ್ನು ಸಹಿಸಿಕೊಂಡರೆ, ನಾನು ಅವನನ್ನು ದೇವರು ಎಂದು ಕರೆಯುವುದಿಲ್ಲ. ನಮ್ಮ ರಾಷ್ಟ್ರವು ಮರವಾದರೆ ಅದರ ಮೂಲ ಕಾಂಡ ಸ್ವರಾಜ್ಯವಾಗಿದೆ ಎಂದು ಬಾಲ ಗಂಗಾಧರ್ ತಿಲಕ್ ಹೇಳುತ್ತಿದ್ದರು.

ಇದನ್ನೂ ಓದಿ: ಬಾಲ್ ಗಂಗಾಧರ್ ತಿಲಕ್ ಜನ್ಮ ವಾರ್ಷಿಕೋತ್ಸವ: ಸ್ವಾತಂತ್ರ್ಯ ಹೋರಾಟಗಾರನ ಸ್ಪೂರ್ತಿದಾಯಕ ಉಲ್ಲೇಖಗಳು!

ಬ್ರಿಟಿಷ್ ಅಧಿಕಾರಿಗಳು ಬಾಲಗಂಗಾಧರ ತಿಲಕ್ ಅವರನ್ನು “ಭಾರತೀಯ ಅಶಾಂತಿಯ ಪಿತಾಮಹ” ಎಂದು ಕರೆದಿದ್ದರು. ಅವರನ್ನು ಜನರು ಪ್ರೀತಿಯಿಂದ “ಲೋಕಮಾನ್ಯ” ಎಂಬ ಬಿರುದಿನಿಂದ ಕರೆಯುತ್ತಿದ್ದರು. ಇದರರ್ಥ “ಜನರು ಅವರನ್ನು ತಮ್ಮ ನಾಯಕರಾಗಿ ಸ್ವೀಕರಿಸಿದ್ದಾರೆ” ಎಂದರ್ಥ. ಶಿಕ್ಷಣವೇ ಸಮಾಜದ ಉದ್ಧಾರದ ಮೂಲ ಶಕ್ತಿ ಎಂದು ನಂಬಿದ್ದ ಅವರು ಇಂಗ್ಲಿಷ್ ಕಲಿಯಲು ಯುವಕರನ್ನು ಪ್ರೇರೇಪಿಸಿದರು.

ಬಾಲ ಗಂಗಾಧರ್ ತಿಲಕ್ ಮರಾಠಿಯಲ್ಲಿ ‘ಕೇಸರಿ’ (ದಿ ಲಯನ್) ಮತ್ತು ಇಂಗ್ಲಿಷ್‌ನಲ್ಲಿ ‘ದಿ ಮಹರತ್ತಾ’ ಮುಂತಾದ ಪತ್ರಿಕೆಗಳನ್ನು ಪ್ರಾರಂಭಿಸಿದರು. ಅವರು 1893ರಲ್ಲಿ ಗಣೇಶ ಚತುರ್ಥಿ ಮತ್ತು 1895ರಲ್ಲಿ ಶಿವಾಜಿ ಎಂಬ ಎರಡು ಪ್ರಮುಖ ಹಬ್ಬಗಳನ್ನು ಸಹ ಆಯೋಜಿಸಿದರು. ಇಂದಿಗೂ ಗಣೇಶ ಚತುರ್ಥಿಯನ್ನು ಪ್ರತಿ ವರ್ಷ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ.

ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್