ಬಾಲ್ ಗಂಗಾಧರ್ ತಿಲಕ್ ಜನ್ಮ ವಾರ್ಷಿಕೋತ್ಸವ: ಸ್ವಾತಂತ್ರ್ಯ ಹೋರಾಟಗಾರನ ಸ್ಪೂರ್ತಿದಾಯಕ ಉಲ್ಲೇಖಗಳು!

Bal Gangadhar Tilak Birth Anniversary: ಬಾಲ ಗಂಗಾಧರ್ ತಿಲಕ್ ರವರು 1877 ರಲ್ಲಿ ಪುಣೆಯ ಡೆಕ್ಕನ್ ಕಾಲೇಜಿನಿಂದ ಗಣಿತಶಾಸ್ತ್ರದಲ್ಲಿ ಬ್ಯಾಚುಲರ್ ಆಫ್ ಆರ್ಟ್ಸ್ ಪದವಿ ಪಡೆದರು. 1879 ರಲ್ಲಿ ತಿಲಕ್ ಸರ್ಕಾರಿ ಕಾನೂನು ಕಾಲೇಜಿನಿಂದ ಎಲ್.ಎಲ್. ಬಿ ಪದವಿ ಪಡೆದರು

ಬಾಲ್ ಗಂಗಾಧರ್ ತಿಲಕ್ ಜನ್ಮ ವಾರ್ಷಿಕೋತ್ಸವ: ಸ್ವಾತಂತ್ರ್ಯ ಹೋರಾಟಗಾರನ ಸ್ಪೂರ್ತಿದಾಯಕ ಉಲ್ಲೇಖಗಳು!
Bal Gangadhar Tilak
Follow us
TV9 Web
| Updated By: Digi Tech Desk

Updated on: Jul 23, 2021 | 9:38 PM

‘ಸ್ವರಾಜ್ಯ ನನ್ನ ಜನ್ಮ ಸಿದ್ಧ ಹಕ್ಕು, ಹಾಗೂ ಅದನ್ನು ನಾನು ಪಡದೇ ತೀರುತ್ತೇನೆ’ ಎಂದು ಬ್ರಿಟಿಷ್​ರ ವಿರುದ್ದ ಗುಡುಗಿದ, ನಮ್ಮ ರಾಷ್ಟ್ರಪಿತ ಮಹಾತ್ಮ ಗಾಂಧಿಯವರಿಂದ “ಆಧುನಿಕ ಭಾರತದ ಸೃಷ್ಟಿಕರ್ತ” ಎಂದು ಕರೆಯಲ್ಪಟ್ಟ, ಲೋಕಮಾನ್ಯ ಬಾಲ ಗಂಗಾಧರ್ ತಿಲಕ್ ರವರು ಭಾರತೀಯ ಸ್ವಾತಂತ್ರ್ಯ ಚಳವಳಿಯ ಮೊದಲ ನಾಯಕನಾಗಿದ್ದರು.  ಲೋಕಮಾನ್ಯ ಎಂಬ ಬಿರುದಿನ ಅರ್ಥ “ಜನರು ನಾಯಕರಾಗಿ ಸ್ವೀಕರಿಸಲ್ಪಟ್ಟರು” ಎಂದು. ತಿಲಕ್ ರವರ ನಿಜವಾದ ಹೆಸರು ಕೇಶವ್ ಗಂಗಾಧರ್ ತಿಲಕ್, ಇವರು 165 ವರ್ಷಗಳ ಹಿಂದೆ ಜುಲೈ 23 ರಂದು ಮಹಾರಾಷ್ಟ್ರದ ರತ್ನಗಿರಿಯಲ್ಲಿ ಜನಿಸಿದರು. ಅವರು ಸ್ವಾತಂತ್ರ್ಯ ಯೋಧ, ಸಾಮಾಜಿಕ ಚಿಂತಕ, ಮತ್ತು ಶಿಕ್ಷಣತಜ್ಞರಾಗಿದ್ದರು. ಅವರು ಭಾರತದ ಸ್ವಾತಂತ್ರ್ಯದ ಹೋರಾಟದಲ್ಲಿ ಪ್ರಮುಖ ಪಾತ್ರವಹಿಸಿದ್ದರು ಮತ್ತು ವಿಮೋಚನಾ ಹೋರಾಟದಲ್ಲಿ ಸ್ವರಾಜ್ಯದ ತೀವ್ರ ಬೆಂಬಲಿಗರಾಗಿದ್ದರು. ಇಂತಹಾ ಮಹಾನ್​ ದೇಶಭಕ್ತನ ಜನ್ಮದಿನ ಇಂದು.

ಬಾಲ ಗಂಗಾಧರ್ ತಿಲಕ್ ರವರು 1877 ರಲ್ಲಿ ಪುಣೆಯ ಡೆಕ್ಕನ್ ಕಾಲೇಜಿನಿಂದ ಗಣಿತಶಾಸ್ತ್ರದಲ್ಲಿ ಬ್ಯಾಚುಲರ್ ಆಫ್ ಆರ್ಟ್ಸ್ ಪದವಿ ಪಡೆದರು. 1879 ರಲ್ಲಿ ತಿಲಕ್ ಸರ್ಕಾರಿ ಕಾನೂನು ಕಾಲೇಜಿನಿಂದ ಎಲ್.ಎಲ್. ಬಿ ಪದವಿ ಪಡೆದರು ಮತ್ತು ಯುವ ಜನರಿಗೆ ರಾಷ್ಟ್ರೀಯತಾವಾದಿ ತತ್ವಗಳನ್ನು ನೀಡಲು 1884 ರಲ್ಲಿ ಡೆಕ್ಕನ್ ಎಜುಕೇಶನ್ ಸೊಸೈಟಿಯನ್ನು ಸ್ಥಾಪಿಸಿದರು.

ತಿಲಕ್ ರವರ ಜನ್ಮದಿನದ ವಿಶೇಷ ವಾರ್ಷಿಕೋತ್ಸವದಂದು, ಅವರ ಕೆಲವು ಸ್ಪೂರ್ತಿದಾಯಕ ಉಲ್ಲೇಖಗಳನ್ನು ನೋಡೋಣ: * ‘ಸ್ವರಾಜ್ಯ ನನ್ನ ಜನ್ಮ ಸಿದ್ಧ ಹಕ್ಕು, ಹಾಗೂ ಅದನ್ನು ನಾನು ಪಡದೇ ತೀರುತ್ತೇನೆ’

* ‘ಸಮಸ್ಯೆಯೆಂಬುವುದು ಸಂಪನ್ಮೂಲ ಅಥವಾ ಸಾಮರ್ಥ್ಯದ ಕೊರತೆಯಲ್ಲ, ಬದಲಿಗೆ ಇಚ್ಛಾಶಕ್ತಿಯ ಕೊರತೆಯಾಗಿದೆ’

* ‘ಅಸ್ಪೃಶ್ಯತೆ ಎಂಬುವುದು ದೇವರಿಗಿದ್ದರೆ, ಅವನನ್ನು ದೇವರು ಎಂದು ನಾನು ಕರೆಯಲ್ಲ’

* ‘ಧರ್ಮ ಹಾಗೂ ಜೀವನ ಬೇರೆಯಲ್ಲ. ಸನ್ಯಾಸವನ್ನು ಸ್ವೀಕರಿಸುವುದು ಎಂದರೆ ಜೀವನವನ್ನೇ ಬಿಟ್ಟಂತೆ ಅಲ್ಲ. ನಾನು ಎಂಬ ಸ್ವಾರ್ಥದ ಬದಲಿಗೆ ದೇಶ, ಕುಟುಂಬ ಎಂದು ಎಲ್ಲರೂ ಒಟ್ಟಾಗಿ ದುಡಿಯುವುದೇ ನಿಜವಾದಸ್ಪೂರ್ತಿಯಾಗಿದೆ, ಮಾನವೀಯತೆಯಿಂದ ಮಾಡುವ ಕಾರ್ಯಗಳನ್ನು ಮಾಡಿದರೆ ದೇವರ ಕಾರ್ಯಕ್ಕೆ ಸಮ’

* ‘ಜೀವನ ಎಂಬುವುದು ಕಾರ್ಡ್‌ ಗೇಮ್‌ನಂತೆ. ಯಾವ ಕಾರ್ಡ್‌ ಸಿಗುತ್ತೆ ಎಂಬುವುದು ನಮ್ಮ ಕೈಯಲ್ಲಿಲ್ಲ, ಆದರೆ ಸಿಕ್ಕ ಕಾರ್ಡ್‌ ಅನ್ನು ಬಳಸಿಕೊಂಡು ಹೇಗೆ ಆಡುತ್ತೇವೆ ಎಂಬುವುದರಲ್ಲಿ ಯಶಸ್ಸು ಅಡಗಿದೆ’

* ‘ಧೈರ್ಯ ಎಂಬುವುದು ನಿಮ್ಮೊಳಗಿದ್ದರೆ ಅದೇ ನಿಮ್ಮ ವ್ಯಕ್ತಿತ್ವದ ಆಸ್ತಿ’

* ‘ನಾವು ಯಾವುದೇ ರಾಷ್ಟ್ರದ ಇತಿಹಾಸವನ್ನು ಹಿಂದಿನ ಕಾಲಕ್ಕೆ ಪತ್ತೆಹಚ್ಚಿದರೆ, ನಾವು ಅಂತಿಮವಾಗಿ ಪುರಾಣಗಳು ಮತ್ತು ಸಂಪ್ರದಾಯಗಳ ಅವಧಿಗೆ ಬರುತ್ತೇವೆ, ಅದು ಅಂತಿಮವಾಗಿ ತೂರಲಾಗದ ಕತ್ತಲೆಯಲ್ಲಿ ಮರೆಯಾಗುತ್ತದೆ’

ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್