AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Chocolate Momos: ಡಿಫರೆಂಟ್‌ ಆಗಿ ಚಾಕೊಲೇಟ್‌ ಮೊಮೊಸ್‌ ತಯಾರಿಸಿದ ಬೀದಿ ಬದಿ ವ್ಯಾಪಾರಿ

ತಿನ್ನೋ ಆಹಾರದಲ್ಲಿ ವಿಚಿತ್ರ ಪ್ರಯೋಗಗಳು ನಡೆಯುವುದು ಹೊಸದೇನಲ್ಲ ಬಿಡಿ. ಅದರಲ್ಲೂ ಈ ಬೀದಿ ಬದಿ ವ್ಯಾಪಾರಿಗಳು ಗುಲಾಬ್‌ ಜಾಮೂನ್‌ ದೋಸೆ, ಐಸ್‌ಕ್ರೀಂ ದೋಸೆ, ಓರಿಯೋ ಪಕೋಡಾ, ಚಾಕೊಲೇಟ್‌ ಮ್ಯಾಗಿ ಅಂತೆಲ್ಲಾ ವಿಚಿತ್ರ ವಿಚಿತ್ರವಾದ ಆಹಾರಗಳನ್ನು ತಯಾರು ಮಾಡುತ್ತಾರೆ. ಈ ವಿಲಕ್ಷಣ ಆಹಾರ ಸಂಯೋಜನೆಗಳ ವಿಡಿಯೋಗಳು ಸೋಷಿಯಲ್‌ ಮೀಡಿಯಾದಲ್ಲಿ ಆಗಾಗ್ಗೆ ಕಾಣಸಿಗುತ್ತಿರುತ್ತವೆ. ಇದೀಗ ಅದೇ ರೀತಿ ಬೀದಿ ಬದಿ ವ್ಯಾಪಾರಿಯೊಬ್ಬ ಡಿಫರೆಂಟ್‌ ಆಗಿ ಚಾಕೊಲೇಟ್‌ ಮೊಮೊಸ್‌ ತಯಾರಿಸಿದ್ದಾನೆ. ಈ ವಿಡಿಯೋ ಇದೀಗ ಎಲ್ಲೆಡೆ ಹರಿದಾಡುತ್ತಿದೆ.

Chocolate Momos: ಡಿಫರೆಂಟ್‌ ಆಗಿ ಚಾಕೊಲೇಟ್‌ ಮೊಮೊಸ್‌ ತಯಾರಿಸಿದ ಬೀದಿ ಬದಿ ವ್ಯಾಪಾರಿ
ವೈರಲ್​​ ವಿಡಿಯೋ Image Credit source: instagram
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Apr 22, 2025 | 4:19 PM

ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಮೊಮೊಸ್‌ (Momos) ಎಂದರೆ ಬಹುತೇಕ ಹೆಚ್ಚಿನವರಿಗೆ ಬಲು ಇಷ್ಟ. ನೇಪಾಳ (Nepal) ಮತ್ತು ಟಿಬೆಟ್‌ನ ಈ ಡಿಶ್‌  ಅನ್ನು ಎಲ್ರೂ ಬಾಯಿ ಚಪ್ಪರಿಸಿಕೊಂಡು ತಿನ್ನುತ್ತಾರೆ. ಖಾರವಾದ ಚಟ್ನಿಯೊಂದಿಗೆ ಈ ಮೊಮೊಗಳನ್ನು ಸವಿಯುವ ಮಜಾನೇ ಬೇರೆ. ಚಿಕನ್‌, ವೆಜ್‌, ಫ್ರೈಡ್‌, ಸ್ಟೀಮ್ಡ್‌ ಅಂತೆಲ್ಲಾ ವೈರೈಟಿ ಮೊಮೊಗಳನ್ನು ನೀವು ಸವಿದಿರುತ್ತೀರಿ ಅಲ್ವಾ. ಆದ್ರೆ ಯಾವತ್ತಾದ್ರೂ ಚಾಕೊಲೇಟ್‌ ಮೊಮೊಸ್‌ (Chocolate Momos) ಸವಿದಿದ್ದೀರಾ? ಇಲ್ಲೊಬ್ಬ ದೆಹಲಿಯ ಬೀದಿ ಬದಿ ವ್ಯಾಪಾರಿ  ಮೊಮೊಸ್‌ನಲ್ಲಿ ವಿಚಿತ್ರ ಪ್ರಯೋಗ ಮಾಡಿದ್ದು, ಖಾರ ಚಟ್ನಿ ಬದಲಿಗೆ ಚಾಕೊಲೇಟ್‌ನಲ್ಲಿ ಅದ್ದಿ ಮೊಮೊಗಳನ್ನು ಗ್ರಾಹಕರಿಗೆ ಸರ್ವ್‌ ಮಾಡಿದ್ದಾನೆ. ಈ ಕುರಿತ ವಿಡಿಯೋವೊಂದು ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ಸದ್ದು ಮಾಡುತ್ತಿದ್ದು, ಈ ವಿಚಿತ್ರ ತಿನಿಸನ್ನು ಅದ್ಯಾರು ತಿಂತಾರಪ್ಪಾ ಎಂದು ನೆಟ್ಟಿಗರು ತಲೆ ಚಚ್ಚಿಕೊಂಡಿದ್ದಾರೆ.

ಡಿಫರೆಂಟ್‌ ಆಗಿ ಚಾಕೊಲೇಟ್‌ ಮೊಮೊಸ್‌ ತಯಾರಿಸಿದ ದೆಹಲಿಯ ಬೀದಿಬದಿ ವ್ಯಾಪಾರಿ:

ದೆಹಲಿಯ ವಿವೇಕ್‌ ವಿಹಾರ ನಗರದ ಬೀದಿ ಬದಿ ವ್ಯಾಪಾರಿಯೊಬ್ಬ ಈ ವಿಚಿತ್ರ ಪ್ರಯೋಗವನ್ನು ಮಾಡಿದ್ದು, 300 ರೂ. ಗಳಿಗೆ ಡಿಫರೆಂಟ್‌ ಆಗಿರುವ ಚಾಕೊಲೇಟ್‌ ಮೊಮೊಸ್‌ಗಳನ್ನು ಮಾರಾಟ ಮಾಡುತ್ತಿದ್ದಾನೆ. ಈ ಕುರಿತ ವಿಡಿಯೋವನ್ನು humbhifoodie ಹೆಸರಿನ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಶೇರ್‌ ಮಾಡಲಾಗಿದೆ.

ಇದನ್ನೂ ಓದಿ
Image
ಬೇಸಿಗೆಯಲ್ಲಿ ಹಸಿ ಮಾವು ತಿನ್ಬೇಕಂತೆ; ಯಾಕೆ ಗೊತ್ತಾ?
Image
ಯುವಕರೇ ಕೆಲಸದ ಸ್ಥಳದಲ್ಲಿ ಗಂಟೆಗಟ್ಟಲೆ ಕುರ್ಚಿಯಲ್ಲಿ ಕುಳಿತುಕೊಳ್ಳುತ್ತೀರಾ?
Image
Brain teaser: ಬುದ್ದಿವಂತರು ಮಾತ್ರ ಈ ಒಗಟನ್ನು ಬಿಡಿಸಲು ಸಾಧ್ಯ
Image
ಬೆಂಗಳೂರಿನಲ್ಲಿ ಆರಾಮ ಜೀವನ ನಡೆಸಲು ಯುವಕನ ಪ್ಲಾನಿಂಗ್‌ ಹೇಗಿದೆ ನೋಡಿ

ಚಾಕೊಲೇಟ್‌ ಮೊಮೊಸ್‌ ತಯಾರಿಕೆಯ ವಿಡಿಯೋ ಇಲ್ಲಿದೆ ನೋಡಿ:

ಈ ವೈರಲ್‌ ವಿಡಿಯೋದಲ್ಲಿ ಒಂದು ಪಾತ್ರೆಗೆ ಬೆಣ್ಣೆ ಸವರಿ ಅದಕ್ಕೆ ಡೈರಿ ಮಿಲ್ಕ್‌ ಚಾಕೊಲೇಟ್‌ ಮತ್ತು ಚಾಕೊಲೇಟ್‌ ಸೀರಪ್‌ ಸುರಿದು ಇವೆರಡನ್ನು ಸ್ವಲ್ವ ನೀರು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ನಂತರ ಅದಕ್ಕೆ ಎಣ್ಣೆಯಲ್ಲಿ ಕರಿದ ಮೊಮೊಸ್‌ ಸೇರಿಸಿ ಎಲ್ಲವನ್ನೂ ಮಿಶ್ರಣ ಮಾಡಿ, ನಂತರ ಇದನ್ನು ಒಂದು ಪ್ಲೇಟ್‌ಗೆ ಹಾಕಿ ಅದನ್ನು ಗ್ರಾಹಕರಿಗೆ ಸರ್ವ್‌ ಮಾಡುತ್ತಿರುವಂತಹ ದೃಶ್ಯವನ್ನು ಕಾಣಬಹುದು.

ಇದನ್ನೂ ಓದಿ: ಅಕ್ಷಯ ತೃತೀಯದಂದು ಚಿನ್ನ ಖರೀದಿಸುವುದು ಏಕೆ? ಪೌರಾಣಿಕ ಕಥೆ ಇಲ್ಲಿದೆ

9 ಮಿಲಿಯನ್‌ಗೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿರುವ ಈ ವಿಡಿಯೋಗೆ ನೆಟ್ಟಿಗರು ತರಹೇವಾರಿ ಕಾಮೆಂಟ್ಸ್‌ಗಳನ್ನು ಮಾಡಿದ್ದಾರೆ. ಒಬ್ಬ ಬಳಕೆದಾರರು ʼಈ ವಿಚಿತ್ರ ರೆಸಿಪಿ ಮಾಡಿದವನಿಗೆ ನರಕದಲ್ಲಿ ಇದೇ ರೀತಿಯ ವಿಚಿತ್ರ ಶಿಕ್ಷೆ ಸಿಗಬೇಕುʼ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ʼಈ ಜನ ಯಾಕೆ ಹೀಗೆಲ್ಲಾ ಮಾಡ್ತಾರಪ್ಪಾʼ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼಇದನ್ನು ತಿಂದವರು ಆಸ್ಪತ್ರೆಗೆ ಸೇರುವುದಂತೂ ನಿಜʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

VIDEO: ವಿವಾದಕ್ಕೀಡಾದ ಶುಭ್​​ಮನ್ ಗಿಲ್ ರನೌಟ್
VIDEO: ವಿವಾದಕ್ಕೀಡಾದ ಶುಭ್​​ಮನ್ ಗಿಲ್ ರನೌಟ್
Daily Devotional: ಪೂಜೆ ಸಮಯದಲ್ಲಿ ಯಾವ ಬಣ್ಣದ ಬಟ್ಟೆ ಧರಿಸಬೇಕು?
Daily Devotional: ಪೂಜೆ ಸಮಯದಲ್ಲಿ ಯಾವ ಬಣ್ಣದ ಬಟ್ಟೆ ಧರಿಸಬೇಕು?
horoscope: ಈ ರಾಶಿಯವರಿಗೆ ಇಂದು ಆಕಸ್ಮಿಕ ಧನಯೋಗ, ವೃತ್ತಿಯಲ್ಲಿ ಯಶಸ್ಸು
horoscope: ಈ ರಾಶಿಯವರಿಗೆ ಇಂದು ಆಕಸ್ಮಿಕ ಧನಯೋಗ, ವೃತ್ತಿಯಲ್ಲಿ ಯಶಸ್ಸು
6ಕ್ಕೆ ಆರೂ ವಿಷಯದಲ್ಲಿ ಫೇಲಾದ ಮಗನಿಗೆ ಕೇಕ್‌ ತಿನ್ನಿಸಿ ಧೈರ್ಯ ತುಂಬಿದ ಅಪ್ಪ
6ಕ್ಕೆ ಆರೂ ವಿಷಯದಲ್ಲಿ ಫೇಲಾದ ಮಗನಿಗೆ ಕೇಕ್‌ ತಿನ್ನಿಸಿ ಧೈರ್ಯ ತುಂಬಿದ ಅಪ್ಪ
ತಾಯಿಯ ಜೊತೆಯಲ್ಲೇ ಸನ್ಮಾನ; ಇದು ಚೈತ್ರಾ ಕುಂದಾಪುರ ಪಾಲಿನ ಹೆಮ್ಮೆಯ ಕ್ಷಣ
ತಾಯಿಯ ಜೊತೆಯಲ್ಲೇ ಸನ್ಮಾನ; ಇದು ಚೈತ್ರಾ ಕುಂದಾಪುರ ಪಾಲಿನ ಹೆಮ್ಮೆಯ ಕ್ಷಣ
ಬಿಜೆಪಿಯಿಂದ ಉಚ್ಚಾಟಿತ ಯತ್ನಾಳ್ ತನ್ನ ಅಸ್ತಿತ್ವ ಉಳಿಸಿಕೊಳ್ಳಬೇಕಿದೆ: ಸಚಿವ
ಬಿಜೆಪಿಯಿಂದ ಉಚ್ಚಾಟಿತ ಯತ್ನಾಳ್ ತನ್ನ ಅಸ್ತಿತ್ವ ಉಳಿಸಿಕೊಳ್ಳಬೇಕಿದೆ: ಸಚಿವ
ರಸ್ತೆಯಲ್ಲಿ ನಿಲ್ಲಿಸಿದ್ದ ಸ್ಕೂಟಿಯನ್ನೇ ತಳ್ಳಿಕೊಂಡು ಹೋದ ಗೂಳಿ!
ರಸ್ತೆಯಲ್ಲಿ ನಿಲ್ಲಿಸಿದ್ದ ಸ್ಕೂಟಿಯನ್ನೇ ತಳ್ಳಿಕೊಂಡು ಹೋದ ಗೂಳಿ!
ಕ್ಯಾನ್ಸರ್​ಗೀಡಾಗಿದ್ದ ಚಿರಂತ್ ಬಲಗೈ ಮೂಳೆ ಆಪರೇಷನ್ ಮೂಲಕ ತೆಗೆಯಲಾಗಿದೆ!
ಕ್ಯಾನ್ಸರ್​ಗೀಡಾಗಿದ್ದ ಚಿರಂತ್ ಬಲಗೈ ಮೂಳೆ ಆಪರೇಷನ್ ಮೂಲಕ ತೆಗೆಯಲಾಗಿದೆ!
‘ಕಲಾಮಾಧ್ಯಮ’ ಯಶಸ್ಸು ಕಂಡಿದ್ದು ರಾತ್ರೋರಾತ್ರಿ ಅಲ್ಲ; ಪರಮ್ ಕಷ್ಟದ ಹಾದಿ
‘ಕಲಾಮಾಧ್ಯಮ’ ಯಶಸ್ಸು ಕಂಡಿದ್ದು ರಾತ್ರೋರಾತ್ರಿ ಅಲ್ಲ; ಪರಮ್ ಕಷ್ಟದ ಹಾದಿ
ಗಂಗಾ ಎಕ್ಸ್‌ಪ್ರೆಸ್‌ವೇಯಲ್ಲಿ ವಾಯುಪಡೆಯಿಂದ ಯುದ್ಧವಿಮಾನಗಳ ತಾಲೀಮು
ಗಂಗಾ ಎಕ್ಸ್‌ಪ್ರೆಸ್‌ವೇಯಲ್ಲಿ ವಾಯುಪಡೆಯಿಂದ ಯುದ್ಧವಿಮಾನಗಳ ತಾಲೀಮು