ಕೊವಿಡ್ ವಿರುದ್ಧ ದೇಶ ಹೋರಾಡಲು ನೆಹರೂ, ಗಾಂಧಿ ಕುಟುಂಬವೇ ಕಾರಣ; ಶಿವಸೇನೆ

ಕೊವಿಡ್ ವಿರುದ್ಧ ದೇಶ ಹೋರಾಡಲು ನೆಹರೂ, ಗಾಂಧಿ ಕುಟುಂಬವೇ ಕಾರಣ; ಶಿವಸೇನೆ
ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್​​ ಠಾಕ್ರೆ

ಸದ್ಯದ ಒಕ್ಕೂಟ ಸರ್ಕಾರವು ಕೊವಿಡ್ ಅಲೆಯನ್ನು ರಾಜಕೀಯ ರಹಿತವಾಗಿ ಪರಾಮರ್ಶಿಲಿ ನಿರ್ಧಾರ ಕೈಗೊಳ್ಳಬೇಕಿದೆ. ಅಲ್ಲದೇ ಅತ್ಯಂತ ಶ್ರಮವಹಿಸಿ ದೇಶವನ್ನು ಕೊವಿಡ್ ಅಪಾಯದಿಂದ ಪಾರುಮಾಡಬೇಕಿದೆ ಎಂದು ಸಾಮ್ನಾ ತನ್ನ ಸಂಪಾದಕೀಯದಲ್ಲಿ ಬರೆದುಕೊಂಡಿದೆ.

guruganesh bhat

|

May 08, 2021 | 8:04 PM

ಮುಂಬೈ: ಭಾರತದಲ್ಲಿ ಈ ಹಿಂದೆ ಆಡಳಿತ ನಡೆಸಿದ ಪ್ರಧಾನಿಗಳು, ವಿಶೇಷತಃ ಪಂಡಿತ್ ಜವಹರಲಾಲ್ ನೆಹರೂ, ಲಾಲ್ ಬಹದ್ದೂರ್ ಶಾಸ್ರ್ತಿ ಇಂದಿರಾ ಗಾಂಧಿ, ಮನಮೋಹನ್ ಸಿಂಗ್ ಅವರಂತಹ ನಾಯಕರು ರೂಪಿಸಿದ್ದ ವ್ಯವಸ್ಥೆಯಿಂದಲೇ ಕೊವಿಡ್ ಸೋಂಕಿನ ವಿರುದ್ಧ ಇಷ್ಟು ದೃಢವಾಗಿ ದೇಶ ಹೋರಾಟ ನಡೆಸುತ್ತಿದೆ. ಕಳೆದ 70 ವರ್ಷಗಳಲ್ಲಿ ಆಡಳಿತ ನಡೆಸಿದ ಸರ್ಕಾರಗಳು ರೂಪಿಸಿದ ನೀತಿಯಿಂದ ದೇಶದಲ್ಲಿ ಬಲಿಷ್ಠ ವ್ಯವಸ್ಥೆಯೊಂದು ಬೆಳೆದಿದೆ. ಈ ವ್ಯವಸ್ಥೆಯೇ ಇಂದು ಕೊವಿಡ್ ವಿರುದ್ಧ ಹೋರಾಡಲು ದೇಶಕ್ಕೆ ಸಹಾಯ ಮಾಡುತ್ತಿದೆ ಎಂದು ಶಿವಸೇನಾ ಪಕ್ಷದ ಮುಖವಾಣಿ ‘ಸಾಮ್ನಾ’ದ ಸಂಪಾದಕೀಯದಲ್ಲಿ ಬರೆಯಲಾಗಿದೆ.

ನೆರೆಯ ಚಿಕ್ಕಪುಟ್ಟ ದೇಶಗಳು ಸಹ ಭಾರತಕ್ಕೆ ಕೊವಿಡ್ ವಿರುದ್ಧ ಹೋರಾಡಲು ಸಹಾಯ ಮಾಡುವಂತಹ ಪರಿಸ್ಥಿತಿ ಎದುರಾಗಿದೆ. ಬಾಂಗ್ಲಾದೇಶ 10 ಸಾವಿರೆ ರೆಮ್​ಡೆಸಿವಿರ್ ವಯಲ್​ಗಳಷ್ಟು ಔಷಧ ಕಳುಹಿಸಿದೆ. ಭೂತಾನ್ ಮೆಡಿಕಲ್ ಆಕ್ಸಿಜನ್ ನೀಡಿದೆ. ನೇಪಾಳ, ಮಯನ್ಮಾರ್ ಮತ್ತು ಶ್ರೀಲಂಕಾಗಳು ಸಹ ‘ಆತ್ಮನಿರ್ಭರ ಭಾರತ’ವನ್ನು ಸಾಧಿಸಲು ಸಹಕರಿಸಿವೆ. ಆದರೂ ಬಹುಕೋಟಿ ವೆಚ್ಚದ ಸೆಂಟ್ರಲ್ ವಿಸ್ತಾ ಯೋಜನೆಯ ಕಾಮಗಾರಿಯನ್ನು ಕೇಂದ್ರ ಸರ್ಕಾರ ಸ್ಥಗಿತಗೊಳಿಸಿಲ್ಲ. ಸದ್ಯ ಎದುರಾಗಿರುವ ಪಿಡುಗಿನ ವಿರುದ್ಧ ದೇಶ ಈ ಪ್ರಮಾಣದಲ್ಲಿ ಹೋರಾಡುವಲ್ಲಿ ಕಳೆದ 70 ವರ್ಷಗಳಲ್ಲಿ ಆಡಳಿತ ನಡೆಸಿದ ಸರ್ಕಾರಗಳು ರೂಪಿಸಿದ ವ್ಯವಸ್ಥೆಯೇ ಕಾರಣ. ಹೊರತು ಇಂದಿನ ನಿರ್ಣಯ ಕೈಗೊಳ್ಳಲು ಬಾರದ ಕೇಂದ್ರ ಸರ್ಕಾರವಲ್ಲ ಎಂದು ಶಿವಸೇನೆಯ ಸಾಮ್ನಾ ಪತ್ರಿಕೆ ತನ್ನ ಹಳೆಯ ದೋಸ್ತಿಪಕ್ಷ ಬಿಜೆಪಿಗೆ ಚಾಟಿ ಬೀಸಿದೆ.

ಸದ್ಯದ ಒಕ್ಕೂಟ ಸರ್ಕಾರವು ಕೊವಿಡ್ ಅಲೆಯನ್ನು ರಾಜಕೀಯ ರಹಿತವಾಗಿ ಪರಾಮರ್ಶಿಲಿ ನಿರ್ಧಾರ ಕೈಗೊಳ್ಳಬೇಕಿದೆ. ಅಲ್ಲದೇ ಅತ್ಯಂತ ಶ್ರಮವಹಿಸಿ ದೇಶವನ್ನು ಕೊವಿಡ್ ಅಪಾಯದಿಂದ ಪಾರುಮಾಡಬೇಕಿದೆ ಎಂದು ಸಾಮ್ನಾ ತನ್ನ ಸಂಪಾದಕೀಯದಲ್ಲಿ ಬರೆದುಕೊಂಡಿದೆ.

ಇದನ್ನೂ ಓದಿ: ಆಕ್ಸಿಜನ್ ಪೂರೈಕೆಗಾಗಿ 12 ಸದಸ್ಯರ ಟಾಸ್ಕ್​ಫೋರ್ಸ್ ರಚಿಸಿದ ಸುಪ್ರೀಂ; ಕರ್ನಾಟಕದ ಡಾ.ದೇವಿ ಪ್ರಸಾದ್ ಶೆಟ್ಟಿಗೂ ಸ್ಥಾನ

Bigg Boss Kannada: ಬಿಗ್​ ಬಾಸ್​ ಪ್ರಿಯರಿಗೆ ಕಹಿ ಸುದ್ದಿ; ಅರ್ಧಕ್ಕೆ ನಿಂತ ಸೀಸನ್​ 8 (Shivasena Saamana wrotes Nehru Gandhi familly and govt is reason for India surving in Covid crisis)

Follow us on

Related Stories

Most Read Stories

Click on your DTH Provider to Add TV9 Kannada