ಕೇವಲ 2 ಲಕ್ಷ ರೂ. ಕೊಟ್ಟರೆ ಸಾಕು ಕಳ್ಳತನದ ಪಾಠ, ಇದೆಂಥಾ ಕಾಲೇಜಪ್ಪಾ!

ಇದು ಕಳ್ಳರ ಕಾಲೇಜು, ಇಲ್ಲಿ ಉತ್ತಮ ಪ್ರಜೆ ಹೇಗಾಗಬಹುದು ಎನ್ನುವ ಪಾಠ ಮಾಡುವುದಿಲ್ಲ, ಸಮಾಜದಲ್ಲಿ ಹೆಸರನ್ನು ಹೇಗೆ ಹಾಳು ಮಾಡಿಕೊಳ್ಳಬಹುದು ಎನ್ನುವ ಪಾಠ ನಡೆಯುತ್ತದೆ. ಕಳ್ಳರ ಕಾಲೇಜುಗಳು ಎಂದೇ ಇವು ಕುಖ್ಯಾತಿ ಪಡೆದಿವೆ. ಭೋಪಾಲ್​ನಿಂದ 100 ಕಿ.ಮೀ ದೂರದಲ್ಲಿರುವ ರಾಜ್​ಗಢ ಜಿಲ್ಲೆಯ ಮೂರು ಹಳ್ಳಿಗಳಲ್ಲಿ ಚಿಕ್ಕವಯಸ್ಸಿನಿಂದಲೇ ಮಕ್ಕಳನ್ನು ವೃತ್ತಿಪರ ಕಳ್ಳರು ಹಾಗೂ ದರೋಡೆಕೋರನ್ನಾಗಿ ಮಾಡಲು ತರಬೇತಿ ನೀಡಲಾಗುತ್ತದೆ.

ಕೇವಲ 2 ಲಕ್ಷ ರೂ. ಕೊಟ್ಟರೆ ಸಾಕು ಕಳ್ಳತನದ ಪಾಠ, ಇದೆಂಥಾ ಕಾಲೇಜಪ್ಪಾ!
ಗ್ಯಾಂಗ್

Updated on: Dec 11, 2025 | 8:48 AM

ಭೋಪಾಲ್, ಡಿಸೆಂಬರ್ 11: ಕೆಟ್ಟ ವಿದ್ಯಾರ್ಥಿಗಳಿರಬಹುದು ಆದರೆ ಕೆಟ್ಟ ಶಿಕ್ಷಕರಿರುವುದು ತುಂಬಾ ಕಡಿಮೆ, ಮಕ್ಕಳು ಓದಬೇಕು, ಒಳ್ಳೆಯ ನೌಕರಿ ಪಡೆಯಬೇಕು, ಸಮಾಜದಲ್ಲಿ ಉತ್ತಮ ಪ್ರಜೆಯಾಗಿ ಬದುಕಬೇಕು ಎನ್ನುವ ಆಸೆ ಎಲ್ಲಾ ಶಿಕ್ಷಕರಿಗಿರುತ್ತದೆ. ಆದರೆ ದುಡ್ಡು ಕೊಟ್ಟರೆ ಕಳ್ಳತನ(Theft) ದ ಪಾಠ ಮಾಡುವ ಕಾಲೇಜುಗಳ ಬಗ್ಗೆ ಎಂದಾದರೂ ಕೇಳಿದ್ದೀರಾ? ಇದು ಮಧ್ಯಪ್ರದೇಶದಲ್ಲಿದೆ. ಕಳ್ಳರ ಕಾಲೇಜುಗಳು ಎಂದೇ ಇವು ಕುಖ್ಯಾತಿ ಪಡೆದಿವೆ. ಭೋಪಾಲ್​ನಿಂದ 100 ಕಿ.ಮೀ ದೂರದಲ್ಲಿರುವ ರಾಜ್​ಗಢ ಜಿಲ್ಲೆಯ ಮೂರು ಹಳ್ಳಿಗಳಲ್ಲಿ ಚಿಕ್ಕವಯಸ್ಸಿನಿಂದಲೇ ಮಕ್ಕಳನ್ನು ವೃತ್ತಿಪರ ಕಳ್ಳರು ಹಾಗೂ ದರೋಡೆಕೋರನ್ನಾಗಿ ಮಾಡಲು ತರಬೇತಿ ನೀಡಲಾಗುತ್ತದೆ.

ಎನ್​ಡಿಟಿವಿ ವರದಿ ಪ್ರಕಾರ ಕಡಿಯಾ, ಗುಲ್ಖೇಡಿ ಹಾಗೂ ಹುಲ್ಖೇಡಿ ಎಂಬ ಈ ಗ್ರಾಮಗಳು ಮಕ್ಕಳಿಗೆ ಕಳ್ಳತನ, ದರೋಡೆ ಹಾಗೂ ಡಕಾಯಿತಿ ಕಲೆಗಳಲ್ಲಿ ತರಬೇತಿ ನೀಡಲಾಗುತ್ತಿದೆ. ಪೋಷಕರು ತಮ್ಮ ಮಕ್ಕಳು ಅಪರಾಧ ಕೌಶಲ್ಯಗಳೊಂದಿಗೆ ಪದವಿ ಪಡೆಯಲು 3 ಲಕ್ಷ ರೂ. ಖಚರ್ಚ ಮಾಡಲು ಸಿದ್ಧರಿದ್ದಾರೆ ಎಂಬುದು ಇನ್ನೂ ಆತಂಕಕಾರಿ ವಿಷಯವಾಗಿದೆ.

ಒಂದು ವರ್ಷದ ತರಬೇತಿ ಬಳಿಕ ಬಾಲಕನ ಪೋಷಕರು ಗ್ಯಾಂಗ್ ನಾಯಕನಿಂದ ವಾರ್ಷಿಕ 3 ರಿಂದ 5 ಲಕ್ಷ ರೂ.ಗಳವರೆಗೆ ಪಾವತಿ ಪಡೆಯುತ್ತಾರೆ. ಈ ಗ್ರಾಮಗಳ 2 ಸಾವಿರಕ್ಕೂ ಹೆಚ್ಚು ತರಬೇತಿ ಪಡೆದ ವ್ಯಕ್ತಿಗಳ ವಿರುದ್ಧ ದೇಶಾದ್ಯಂತ ಇರುವ ಪೊಲೀಸ್ ಠಾಣೆಗಳಲ್ಲಿ 8 ಸಾವಿರಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ.

ಮತ್ತಷ್ಟು ಓದಿ: ಕಳ್ಳತನ, ದರೋಡೆಯಲ್ಲಿ ಖಾಕಿ ಶಾಮೀಲು: ವಿಚಾರಣೆಗೆ ಬಂದಿದ್ದ ಆರೋಪಿಯಿಂದಲೇ ಹಣ ಎಗರಿಸಿದ ಹೆಡ್ ಕಾನ್ಸ್​​ಟೇಬಲ್

12 ಅಥವಾ 13 ವರ್ಷದ ಮಕ್ಕಳನ್ನು ಅವರ ಪೋಷಕರು ಈ ಹಳ್ಳಿಗಳಿಗೆ ಅಪರಾಧ ಚಟುವಟಿಕೆಗಳಲ್ಲಿ ತರಬೇತಿ ನೀಡಲು ಕಳುಹಿಸುತ್ತಾರೆ. ಈ ಕಠಿಣ ಪಠ್ಯಕ್ರಮದಲ್ಲಿ ಸೇರಲು ಕುಟುಂಬಗಳು 2 ರಿಂದ 3 ಲಕ್ಷ ರೂ.ವರೆಗೆ ಶುಲ್ಕವನ್ನು ಪಾವತಿಸುತ್ತಾರಂತೆ. ಪೊಲೀಸರು ಎಲ್ಲಾ ಅಧಿಕಾರವನ್ನು ಹೊಂದಿದ್ದರೂ ಸಹ, ಈ ಪ್ರದೇಶದಲ್ಲಿ ಎಚ್ಚರಿಕೆಯಿಂದ ನಡೆದುಕೊಳ್ಳುತ್ತಾರೆ.

ಮಕ್ಕಳಿಗೆ ಜೇಬುಗಳ್ಳತನ, ಜನದಟ್ಟಣೆಯ ಸ್ಥಳಗಳಲ್ಲಿ ಚೀಲಗಳನ್ನು ಕಸಿದುಕೊಳ್ಳುವುದು, ವೇಗವಾಗಿ ಓಡುವುದು, ಪೊಲೀಸರಿಂದ ತಪ್ಪಿಸಿಕೊಳ್ಳುವುದು ಮತ್ತು ಸಿಕ್ಕಿಬಿದ್ದರೆ ಹೊಡೆತಗಳನ್ನು ಸಹಿಸಿಕೊಳ್ಳುವುದು ಮುಂತಾದ ವಿವಿಧ ಅಪರಾಧ ಕೌಶಲ್ಯಗಳನ್ನು ಕಲಿಸಲಾಗುತ್ತದೆ.

ಗ್ಯಾಂಗ್‌ನಲ್ಲಿ ಒಂದು ವರ್ಷ ಪೂರ್ಣಗೊಳಿಸಿದ ನಂತರ, ಮಗುವಿನ ಪೋಷಕರು ಗ್ಯಾಂಗ್ ನಾಯಕನಿಂದ ವಾರ್ಷಿಕ 3 ರಿಂದ 5 ಲಕ್ಷ ರೂ.ಗಳವರೆಗೆ ಪಾವತಿಯನ್ನು ಪಡೆಯುತ್ತಾರೆ. ಕಳೆದ ವರ್ಷ ಆಗಸ್ಟ್ 8 ರಂದು ಜೈಪುರದ ಹಯಾತ್ ಹೋಟೆಲ್‌ನಲ್ಲಿ ನಡೆದ ಅದ್ದೂರಿ ಡೆಸ್ಟಿನೇಶನ್ ವೆಡ್ಡಿಂಗ್​ನಲ್ಲಿ , ಒಬ್ಬ ಅಪ್ರಾಪ್ತ ಕಳ್ಳ 1.5 ಕೋಟಿ ರೂ. ಮೌಲ್ಯದ ಆಭರಣ ಮತ್ತು 1 ಲಕ್ಷ ರೂ. ನಗದು ಇದ್ದ ಬ್ಯಾಗನ್ನು ದೋಚಿಕೊಂಡು ಪರಾರಿಯಾಗಿದ್ದ. ಸಮಾರಂಭ ನಡೆದು ವಧು-ವರರನ್ನು ಆಶೀರ್ವದಿಸುತ್ತಿದ್ದಾಗ, ವರನ ತಾಯಿ ತನ್ನ ಬಿಳಿ ಚೀಲವನ್ನು ಪಕ್ಕದಲ್ಲಿ ಇಟ್ಟಿದ್ದರು.

ಅವಕಾಶವನ್ನು ಸದುಪಯೋಗಪಡಿಸಿಕೊಂಡ ಕಳ್ಳನು ಚೀಲವನ್ನು ಕದ್ದು, ಅದರಲ್ಲಿದ್ದ ಬೆಲೆಬಾಳುವ ವಸ್ತುಗಳನ್ನು ದೋಚಿದ್ದ. ಕೊನೆಗೆ, ಕಳ್ಳತನದಲ್ಲಿ ಭಾಗಿಯಾಗಿದ್ದ ಅಪ್ರಾಪ್ತ ಬಾಲಕನನ್ನು ಬಂಧಿಸಲಾಗಿತ್ತು, ಇದರಿಂದಾಗಿ ಇಡೀ ಗ್ಯಾಂಗ್​ನ ಸತ್ಯ ಬಹಿರಂಗಗೊಂಡಿತ್ತು. ಡಿಸೆಂಬರ್ 2023 ರಲ್ಲಿ, 22 ವರ್ಷದ ಯಶ್ ಸಿಸೋಡಿಯಾ ದೆಹಲಿಯಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಆಭರಣಗಳಿಂದ ತುಂಬಿದ ಚೀಲವನ್ನು ಕದ್ದು ಪರಾರಿಯಾಗಿದ್ದನು. ಹಳ್ಳಿಯೊಳಗೆ ಪರಿಚಯವಿಲ್ಲದ ಯಾವೊಬ್ಬ ವ್ಯಕ್ತಿ ಪ್ರವೇಶಿಸಿದರೂ, ನಿವಾಸಿಗಳು ತಕ್ಷಣವೇ ಎಚ್ಚರಗೊಳ್ಳುತ್ತಾರಂತೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ