AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶರದ್ ಪವಾರ್ ಹುಟ್ಟುಹಬ್ಬದ ಅಂಗವಾಗಿ ವಿಶೇಷ ಭೋಜನಕೂಟ, ಯಾರೆಲ್ಲಾ ಬಂದಿದ್ರು ಗೊತ್ತಾ?

ಎನ್​ಸಿಪಿ ನಾಯಕ ಶರದ್ ಪವಾರ್ ಡಿಸೆಂಬರ್ 12ರಂದು ತಮ್ಮ 85ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಇದಕ್ಕೂ ಮುನ್ನ ಭೋಜನಕೂಟವನ್ನು ಆಯೋಜಿಸಲಾಗಿತ್ತು. ಅಜಿತ್ ಪವಾರ್, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ, ಕೈಗಾರಿಕೋದ್ಯಮಿ ಗೌತಮ್ ಅದಾನಿ ಮತ್ತು ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಕೂಡ ಬಂದಿದ್ದರು. ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಮತ್ತು ಕೇಂದ್ರದ ಮಾಜಿ ಸಚಿವ ಶರದ್ ಪವಾರ್ ಡಿಸೆಂಬರ್ 12 ರಂದು ತಮ್ಮ 85 ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲಿದ್ದಾರೆ.

ಶರದ್ ಪವಾರ್ ಹುಟ್ಟುಹಬ್ಬದ ಅಂಗವಾಗಿ ವಿಶೇಷ ಭೋಜನಕೂಟ, ಯಾರೆಲ್ಲಾ ಬಂದಿದ್ರು ಗೊತ್ತಾ?
ಶರದ್ ಪವಾರ್
ನಯನಾ ರಾಜೀವ್
|

Updated on: Dec 11, 2025 | 7:39 AM

Share

ನವದೆಹಲಿ, ಡಿಸೆಂಬರ್ 11: ಎನ್​ಸಿಪಿ ಮುಖ್ಯಸ್ಥ ಶರದ್ ಪವಾರ್(Sharad Pawar) ಹುಟ್ಟುಹಬ್ಬದ ಅಂಗವಾಗಿ ದೆಹಲಿಯಲ್ಲಿ ವಿಶೇಷ ಭೋಜನಕೂಟವನ್ನು ಆಯೋಜಿಸಿದ್ದರು. ರಾಹುಲ್ ಗಾಂಧಿ ಮತ್ತು ಗೌತಮ್ ಅದಾನಿ ಸೇರಿದಂತೆ ಅನೇಕ ರಾಜಕೀಯ ಮತ್ತು ಉದ್ಯಮಿಗಳು ಅವರ ಮನೆಯಲ್ಲಿ ನಡೆದ ವಿಶೇಷ ಭೋಜನ ಕೂಟದಲ್ಲಿ ಪಾಲ್ಗೊಂಡಿದ್ದರು. ಅಜಿತ್ ಪವಾರ್, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ, ಕೈಗಾರಿಕೋದ್ಯಮಿ ಗೌತಮ್ ಅದಾನಿ ಮತ್ತು ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಕೂಡ ಬಂದಿದ್ದರು. ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಮತ್ತು ಕೇಂದ್ರದ ಮಾಜಿ ಸಚಿವ ಶರದ್ ಪವಾರ್ ಡಿಸೆಂಬರ್ 12 ರಂದು ತಮ್ಮ 85 ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲಿದ್ದಾರೆ.

ತೃಣಮೂಲ ಕಾಂಗ್ರೆಸ್ ನಾಯಕಿ ಸೌಗತ ರಾಯ್, ಬಿಜೆಪಿ ನಾಯಕ ಡಿ ಪುರಂದೇಶ್ವರಿ ಮತ್ತು ಕೇಂದ್ರ ಸಚಿವ ರವನೀತ್ ಸಿಂಗ್ ಬಿಟ್ಟು ಕೂಡ ಪವಾರ್ ಅವರ ಮನೆಯಲ್ಲಿ ಆಯೋಜಿಸಲಾದ ಭೋಜನ ಕೂಟದಲ್ಲಿ ಭಾಗವಹಿಸಿದ್ದರು. ರಾಜಕೀಯ ಎಲ್ಲೆಡೆ ಇರಬಾರದು. ಸಮಾಜವು ಪರಸ್ಪರ ಸಂಬಂಧಗಳಿಂದ ಅಭಿವೃದ್ಧಿ ಹೊಂದುತ್ತದೆ. ಸಮಾಜವು ರಾಜಕೀಯದ ಮೇಲೆ ನಡೆಯುವುದಿಲ್ಲ. ರಾಜಕೀಯವು ಸಮಾಜದ ಮೇಲೆ ನಡೆಯುತ್ತದೆ ಎಂದು ಕಾಂಗ್ರೆಸ್ ನಾಯಕ ಪವನ್ ಖೇಡಾ ಹೇಳಿದ್ದಾರೆ.

ಜೆಜೆಪಿ ನಾಯಕ ದುಷ್ಯಂತ್ ಚೌಟಾಲ ಕೂಡ ಶರದ್ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದು, ದೇವರು ಪವಾರ್​ಗೆ ಉತ್ತಮ ಆರೋಗ್ಯ ನೀಡಲಿ, ರಾಷ್ಟ್ರ ರಾಜಕಾರಣಕ್ಕೆ ಅವರ ಕೊಡುಗೆಯನ್ನು ಮುಂದುವರಿಸಲು ಶಕ್ತಿಯನ್ನು ನೀಡಲಿ ಎಂದು ಹೇಳಿದರು. ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಕೂಡ ಸಂಜೆ ತಡವಾಗಿ ಪವಾರ್ ಅವರ ನಿವಾಸಕ್ಕೆ ಆಗಮಿಸಿದರು, ಇದು ಸಭೆಯಲ್ಲಿ ರಾಜಕೀಯ ವಲಯದಲ್ಲಿ ಭಾರೀ ಸಂಚಲನ ಮೂಡಿಸಿತು.

ಮತ್ತಷ್ಟು ಓದಿ: ಎನ್​ಸಿಪಿ ಸಭೆಯಲ್ಲಿ ಆರ್​ಎಸ್​ಎಸ್​ಗೆ ಶರದ್ ಪವಾರ್ ಪ್ರಶಂಸೆ

ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಕೂಡ ಭೋಜನ ಕೂಟದಲ್ಲಿ ಭಾಗವಹಿಸಿದ್ದರು. ಸರಳ ಹುಟ್ಟುಹಬ್ಬದ ಸಭೆಯಾಗಿದ್ದರೂ, ಮೈತ್ರಿಕೂಟಗಳನ್ನು ಮೀರಿ ನಾಯಕರ ಆಗಮನವು ಬದಲಾಗುತ್ತಿರುವ ಸಮೀಕರಣಗಳ ಬಗ್ಗೆ ಮತ್ತು ಶರದ್ ಪವಾರ್ ಅವರ ಭೋಜನ ಕೂಟವು ಹೊಸ ರಾಜಕೀಯ ಹೊಂದಾಣಿಕೆಗಳಿಗೆ ಮುನ್ನುಡಿಯಾಗಬಹುದೇ ಎಂಬ ಅನುಮಾನ ಮೂಡಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ