ಛತ್ತೀಸ್ಗಢ: ಮಕ್ಕಳಿಗೆ ಹಾವು ಕಚ್ಚಿದರೆ ಅವರಿಗೆ ಮಾತ್ರವಲ್ಲ ಅವರ ಪೋಷಕರಿಗೂ ಕೈ-ಕಾಲು ಆಡುವುದಿಲ್ಲ. ಆದರೆ, ಛತ್ತೀಸ್ಗಢದ (Chhattisgarh) ಜಶ್‌ಪುರ ಜಿಲ್ಲೆಯ 8 ವರ್ಷದ ಬಾಲಕ ದೀಪಕ್ ತನ್ನ ಮನೆಯ ಹಿತ್ತಲಿನಲ್ಲಿ ಖುಷಿಯಿಂದ ಆಟವಾಡುತ್ತಿದ್ದಾಗ ಇದ್ದಕ್ಕಿದ್ದಂತೆ ಅಲ್ಲಿಗೆ ಬಂದ ನಾಗರಹಾವು (Cobra) ಆತನ ಕಾಲಿಗೆ ಸುತ್ತಿಕೊಂಡಿತು. ಆತ ತಪ್ಪಿಸಿಕೊಳ್ಳಲು ಕೊಸರಾಡಿದಾಗ ಆ ಹಾವು ಆತನಿಗೆ ಕಚ್ಚಿತು. ಆಗ ನೋವಿನಿಂದ ಕಿರುಚಾಡಿದ ಆ ಬಾಲಕ ತನ್ನ ಕಾಲಿನತ್ತ ಬಗ್ಗಿ ಆ ಹಾವನ್ನು ಎಳೆಯಲು ಹೋಗಿದ್ದಾನೆ. ಆಗ ಆ ಹಾವು ಆತನ ಕೈಗೆ ಸುತ್ತಿಕೊಂಡಿದೆ. ಇದರಿಂದ ಆತ ಹಾವಿಗೆ ವಾಪಾಸ್ ಕಚ್ಚಿದ್ದಾನೆ. ಆತ ಸಿಟ್ಟಿನಿಂದ ಜೋರಾಗಿ ಕಚ್ಚಿದ್ದರಿಂದ ಆ ನಾಗರಹಾವಿಗೆ ಗಾಯವಾಗಿ ಆ ಹಾವು ಸಾವನ್ನಪ್ಪಿದೆ!
ನಾಗರಹಾವು ಕಚ್ಚಿದ್ದರೂ ಅಚ್ಚರಿಯ ರೀತಿಯಲ್ಲಿ ಆ ಬಾಲಕ ಬದುಕುಳಿದಿದ್ದಾನೆ. ಆದರೆ, ಆತನಿಂದ ಕಚ್ಚಿಸಿಕೊಂಡ ನಾಗರಹಾವು ಮೃತಪಟ್ಟಿದೆ. ಹಾವಿಗೆ 2 ಬಾರಿ ಕಚ್ಚಿದ ಆ ಬಾಲಕನ ಕಿರುಚಾಟ ಕೇಳಿ ಮನೆಯವರು ಹೊರಗೆ ಓಡಿಬರುವಷ್ಟರಲ್ಲಿ ಆ ಹಾವು ನೆಲದ ಮೇಲೆ ಬಿದ್ದಿತ್ತು. ಹಾವು ನನ್ನ ಕೈಗೆ ಸುತ್ತಿಕೊಂಡು ಕಚ್ಚಿತು. ಇದರಿಂದ ನನಗೆ ಬಹಳ ನೋವಾಯಿತು. ಹಾವಿನಿಂದ ಬಿಡಿಸಿಕೊಳ್ಳು ನಾನು ಸಾಕಷ್ಟು ಪ್ರಯತ್ನಿಸಿದೆ. ಆದರೆ ಅದು ನನ್ನನ್ನು ಬಿಡಲೇ ಇಲ್ಲ. ಕೊನೆಗೆ ಹಾವಿಗೆ 2 ಬಾರಿ ಕಚ್ಚಿದೆ ಎಂದು ಬಾಲಕ ದೀಪಕ್ ತಿಳಿಸಿದ್ದಾನೆ ಎಂದು ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
ಇದನ್ನೂ ಓದಿ: ಮೈಸೂರಿನಲ್ಲಿ ಮನೆಯ ಮೀಟರ್ ಬೋರ್ಡ್ನಲ್ಲಿ ಅಡಗಿ ಕುಳಿತಿತ್ತು ನಾಗರ ಹಾವು
ತನಗೆ ಹಾವು ಕಚ್ಚಿದ ವಿಷಯವನ್ನು ತನ್ನ ಪೋಷಕರಿಗೆ ತಿಳಿಸಿದಾಗ ಆ ಬಾಲಕನ ಕುಟುಂಬಸ್ಥರು ಆತನನ್ನು ವೈದ್ಯಕೀಯ ಕೇಂದ್ರಕ್ಕೆ ಕರೆದೊಯ್ದರು. ಅಲ್ಲಿ ಬಾಲಕನಿಗೆ ಆತನಿಗೆ ಔಷಧಿ ನೀಡಲಾಯಿತು. ಆ ಹಾವು ಆ ಬಾಲಕನ ದೇಹದಲ್ಲಿ ವಿಷವನ್ನು ಬಿಟ್ಟಿರಲಿಲ್ಲ. ಅದು ಹಾಗೇ ಕಚ್ಚಿತ್ತು ಎಂದು ವೈದ್ಯರು ತಿಳಿಸಿದ್ದಾರೆ. ಒಂದು ದಿನ ಆತನನ್ನು ಆಸ್ಪತ್ರೆಯಲ್ಲಿ ಅಡ್ಮಿಟ್ ಮಾಡಲಾಗಿತ್ತು. ಈಗ ಆತ ಸಂಪೂರ್ಣವಾಗಿ ಗುಣಮುಖನಾಗಿ ಡಿಸ್ಚಾರ್ಜ್ ಆಗಿದ್ದಾನೆ.
Published On - 12:20 pm, Sat, 5 November 22