ಭೂಪಾಲ್: ಮಧ್ಯಪ್ರದೇಶದ ದಾಮೋಹ್ ಜಿಲ್ಲೆಯಲ್ಲಿ ಹಸುವನ್ನು ಕದ್ದ ಆರೋಪದ ಮೇಲೆ ಗ್ರಾಮಸ್ಥರು ವ್ಯಕ್ತಿಯ ಅರ್ಧ ಮೀಸೆ ಬೋಳಿಸಿ, ಅರ್ಧ ತಲೆ ಬೋಳಿಸಿ ಮುಖಕ್ಕೆ ಕಪ್ಪು ಬಣ್ಣ ಬಳಿದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ದಾಮೋಹ್ ಜಿಲ್ಲೆಯ ಮಾರುತಲ್ ಗ್ರಾಮದ ನಿವಾಸಿಗಳು ಹಸುವನ್ನು ಕದ್ದವನಿಗೆ ಈ ವಿಚಿತ್ರ ಶಿಕ್ಷೆಯನ್ನು ವಿಧಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
“ಆ ವ್ಯಕ್ತಿ ಹಸುವನ್ನು ಕದ್ದಿರುವುದಾಗಿ ಒಪ್ಪಿಕೊಂಡಿದ್ದಾನೆ. ನಂತರ ಗ್ರಾಮಸ್ಥರ ಗುಂಪು ಅವನ ಮೀಸೆಯನ್ನು ಅರ್ಧ ಬೋಳಿಸಿ, ಅವನ ತಲೆಯನ್ನು ಅರ್ಧ ಬೋಳಿಸಲು ನಿರ್ಧರಿಸಿದೆ” ಎಂದು ಅವರು ಹೇಳಿದ್ದಾರೆ. ಅಲ್ಲದೆ, ಗ್ರಾಮಸ್ಥರು ಅವರ ಮುಖಕ್ಕೆ ಕಪ್ಪು ಮಸಿ ಬಳಿದು ಗ್ರಾಮದಲ್ಲಿ ಸುತ್ತಾಡುವಂತೆ ಒತ್ತಾಯಿಸಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ. ಎರಡು ದಿನಗಳ ಹಿಂದೆ ಹಸು ನಾಪತ್ತೆಯಾಗಿದೆ ಎಂದು ದನದ ಮಾಲೀಕರು ದೂರು ನೀಡಿದ್ದು, ಆ ಅನುಮಾನದ ಆಧಾರದ ಮೇಲೆ ಗ್ರಾಮಸ್ಥರು ಸೀತಾರಾಮ್ ಎಂಬಾತನನ್ನು ಬಂಧಿಸಿದ್ದಾರೆ. ಅವರು ಇನ್ನೊಬ್ಬ ವ್ಯಕ್ತಿಯೊಂದಿಗೆ ಸೇರಿ ಪ್ರಾಣಿಯನ್ನು ಕದ್ದಿರುವುದಾಗಿ ಒಪ್ಪಿಕೊಂಡಿದ್ದಾನೆ.
ಈ ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ನಂತರ ಜಬಲ್‌ಪುರ ನಾಕಾ ಪೊಲೀಸ್ ಪೋಸ್ಟ್‌ನ ಉಸ್ತುವಾರಿ ಆರ್.ಬಿ. ಪಾಂಡೆ ಗ್ರಾಮಕ್ಕೆ ತಲುಪಿ ಆರೋಪಿಯನ್ನು ಕರೆತಂದಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ವರದಿಯನ್ನು ಸಲ್ಲಿಸಲಾಗಿದ್ದು, ತನಿಖೆಯ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿ ತಿಳಿಸಿದ್ದಾರೆ.
ಈ ಗ್ರಾಮದ ಉದಲ್ ಸಿಂಗ್ ಎಂಬಾತ ಸೀತಾರಾಮ್ ರಜಪೂತ್ ಎಂಬ ವ್ಯಕ್ತಿಯನ್ನು ಗ್ರಾಮದಲ್ಲಿ ಹಸುಗಳನ್ನು ಕದಿಯುತ್ತಿದ್ದ ಎಂದು ಹೇಳಿ ಪೊಲೀಸರಿಗೆ ಒಪ್ಪಿಸಿದ್ದಾನೆ. ಐವರು ಗ್ರಾಮಸ್ಥರು ಆತನನ್ನು ಅಮಾನುಷವಾಗಿ ಥಳಿಸಿ ಅಪರಾಧವನ್ನು ಒಪ್ಪಿಕೊಳ್ಳುವಂತೆ ಒತ್ತಾಯಿಸಿದರು ಎಂದು ಸೀತಾರಾಮ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅವರು ಅವನ ತಲೆಯನ್ನು ಅರ್ಧ ಬೋಳಿಸಿ, ಮೀಸೆಯನ್ನು ಕೂಡ ಅರ್ಧ ಬೋಳಿಸಿದ್ದಾರೆ. ಬಳಿಕ ಆತನ ಮುಖಕ್ಕೆ ಮಸಿ ಬಳಿದು ಮೆರವಣಿಗೆ ನಡೆಸಿದ್ದಾರೆ ಎಂದು ತನಿಖಾಧಿಕಾರಿ ಮತ್ತು ಹೊರಠಾಣೆ ಉಸ್ತುವಾರಿ ಆರ್.ಬಿ. ಪಾಂಡೆ ತಿಳಿಸಿದ್ದಾರೆ.
ಇದನ್ನೂ ಓದಿ: Viral News: ಮದುವೆಯಾದ ಕೂಡಲೆ ಗಂಡನ ಬಿಟ್ಟು ಪ್ರಿಯಕರನ ಜೊತೆ ವಧು ಪರಾರಿ; ಲವ್ ಸ್ಟೋರಿಗೆ ಹೊಸ ಟ್ವಿಸ್ಟ್!
Viral News: ಮದುವೆಯಾಗಿ 11 ವರ್ಷ ಕಾದರೂ ಮೊದಲ ರಾತ್ರಿಗೆ ಸಿಗಲೇ ಇಲ್ಲ ಮುಹೂರ್ತ; ಆಮೇಲೇನಾಯ್ತು?