Shocking News: ದೇವರ ವಿಗ್ರಹವನ್ನು ಧ್ವಂಸಗೊಳಿಸಿದ್ದಕ್ಕೆ ಯುವಕನನ್ನು ಮರಕ್ಕೆ ಉಲ್ಟಾ ನೇತುಹಾಕಿ ಥಳಿಸಿದ ಜನ

ಮದ್ಯಪಾನ ಮಾಡಿದ ಯುವಕನೊಬ್ಬ ಶಿವನ ದೇವಸ್ಥಾನದಲ್ಲಿ ವಿಗ್ರಹಗಳನ್ನು ಧ್ವಂಸಗೊಳಿಸಿದ್ದಾನೆ ಎಂದು ಆರೋಪಿಸಲಾಗಿದೆ. ನಂತರ ಸ್ಥಳೀಯರು ಯುವಕನನ್ನು ಹಿಡಿದು ಮರಕ್ಕೆ ನೇತು ಹಾಕಿ ಥಳಿಸಿದ್ದಾರೆ.

Shocking News: ದೇವರ ವಿಗ್ರಹವನ್ನು ಧ್ವಂಸಗೊಳಿಸಿದ್ದಕ್ಕೆ ಯುವಕನನ್ನು ಮರಕ್ಕೆ ಉಲ್ಟಾ ನೇತುಹಾಕಿ ಥಳಿಸಿದ ಜನ
ಸಾಂದರ್ಭಿಕ ಚಿತ್ರ
Edited By:

Updated on: Jan 16, 2023 | 1:48 PM

ಜೈಪುರ: ರಾಜಸ್ಥಾನದ (Rajasthan) ಜುಂಜುನು ಜಿಲ್ಲೆಯ ಉದಯಪುರವತಿ (Udaipurwati) ಪಟ್ಟಣದಲ್ಲಿ ಯುವಕನೊಬ್ಬನನ್ನು ಮರಕ್ಕೆ ತಲೆಕೆಳಗಾಗಿ ನೇತು ಹಾಕಿದ ಗ್ರಾಮಸ್ಥರು ಅಮಾನುಷವಾಗಿ ಥಳಿಸಿರುವ ಘಟನೆ ನಡೆದಿದೆ. ದೇವರ ವಿಗ್ರಹವನ್ನು ಧ್ವಂಸಗೊಳಿಸಿದ್ದಕ್ಕೆ ಆ ಯುವಕನನ್ನು ಥಳಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ (Social Media) ವೈರಲ್ ಆಗುತ್ತಿದೆ.

ಉದಯಪುರವತಿ ಪಟ್ಟಣದ ವಾರ್ಡ್ ನಂ. 18ರಲ್ಲಿ ಮದ್ಯಪಾನ ಮಾಡಿದ ಯುವಕನೊಬ್ಬ ಶಿವನ ದೇವಸ್ಥಾನದಲ್ಲಿ ವಿಗ್ರಹಗಳನ್ನು ಧ್ವಂಸಗೊಳಿಸಿದ್ದಾನೆ ಎಂದು ಆರೋಪಿಸಲಾಗಿದೆ. ನಂತರ ಸ್ಥಳೀಯರು ಯುವಕನನ್ನು ಹಿಡಿದು ಮರಕ್ಕೆ ನೇತು ಹಾಕಿ ಥಳಿಸಿದ್ದಾರೆ.

ರಾಜಸ್ಥಾನದಲ್ಲಿ ಯುವಕನನ್ನು ನೇತು ಹಾಕಿ ಥಳಿಸಿದ ಜನ

ಇದನ್ನೂ ಓದಿ: Crime News: ಜೈ ಶ್ರೀರಾಮ್ ಹೇಳಲು ನಿರಾಕರಿಸಿದ್ದಕ್ಕೆ ಮುಸ್ಲಿಂ ಬಾಲಕನ ಮೇಲೆ ಹಲ್ಲೆ

ಸ್ಥಳೀಯರ ಪ್ರಕಾರ, ಯುವಕ ಸಂಪೂರ್ಣವಾಗಿ ಕುಡಿದ ಅಮಲಿನಲ್ಲಿ ಈ ಕೃತ್ಯ ಎಸಗಿದ್ದಾನೆ. ಈತ ನಿತ್ಯ ಕುಡಿದು ಗಲಾಟೆ ಮಾಡುತ್ತಿದ್ದ. ಈ ಪ್ರದೇಶದಲ್ಲಿ ಶಾಂತಿ ಕದಡುವ ಇಂತಹ ಕೃತ್ಯಗಳನ್ನು ಮಾಡುತ್ತಿದ್ದ. ಪೊಲೀಸರು ಈ ವಿಷಯವನ್ನು ಅರಿತುಕೊಂಡು ಸೂಕ್ತ ಕ್ರಮದ ಭರವಸೆ ನೀಡಿದ್ದಾರೆ. ಜನರಿಂದ ಹಲ್ಲೆಗೊಳಗಾದ ಯುವಕನಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:17 pm, Mon, 16 January 23