ಭಾರತದೆಲ್ಲಡೆ ಶೂಟರ್ ದಾದಿ ಎಂದೇ ಜನಪ್ರಿಯರಾಗಿದ್ದ ಚಂದ್ರೋ ತೋಮರ್ ಶುಕ್ರವಾರದದಂದು ಮೀರತ್ ನಗರದ ಖಾಸಗಿ ಆಸ್ಪತ್ರೆಯೊಂದರಲ್ಲಿ ಕೊವಿಡ್ಗೆ ಬಲಿಯಾಗದ್ದಾರೆ. ಉಸಿರಾಟದ ತೊಂದರೆ ಬಗ್ಗೆ ದೂರಿದ ನಂತರ ಸೋಮವಾರದಂದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರಿಗೆ 89 ವರ್ಷ ವಯಸ್ಸಾಗಿತ್ತು. ತಮ್ಮ 60ನೇ ವಯಸ್ಸಿನಲ್ಲಿ ಶೂಟಿಂಗ್ ಮಾಡುವುದನ್ನು ಆರಂಭಿಸಿದ ತೋಮರ್ ರಾಷ್ಟ್ರೀಯ ಚಾಂಪಿಯನ್ಶಿಪ್ನಲ್ಲಿ ಹಲವಾರು ಪದಕಗಳನ್ನು ಗೆದ್ದಿದ್ದರು. ಅವರ ಬದುಕಿನಿಂದ ಪ್ರಭಾವಕ್ಕೊಳಗಾಗಿದ್ದ ನಿರ್ಮಾಪಕರೊಬ್ಬರು ಬಯೋಪಿಕ್ (ಸಾಂಡ್ ಕಿ ಆಂಖ್) ನಿರ್ಮಿಸಿದ್ದಾರೆ. ಅವರು ಕೇವಲ ಸಿನಿಮಾದವರಿಗೆ ಮಾತ್ರ ಪ್ರೇರಣೆಯಾಗಿರಲಿಲ್ಲ. ಅವರ ಸಾಧನೆಗಳು ಅನೇಕ ಯುವತಿಯರಿಗೆ ಸ್ಫೂರ್ತಿಯಾಗಿ ಅವರು ಶೂಟಿಂಗನ್ನು ವೃತ್ತಿಬದುಕನ್ನಾಗಿ ಮಾಡಿಕೊಳ್ಳಲು ಹುರಿದುಂಬಿಸಿವೆ. ಶೂಟಿಂಗ್ ಸ್ಪರ್ಧೆಗಳು ನಡೆಯುವಾಗ ಯಾರಾದರೂ ಆತಂಕದಲ್ಲಿರುವುದು ಕಂಡರೆ, ‘ಯಾಕೆ ಹೆದರಿಕೊಳ್ಳುತ್ತಿದ್ದಿಯಾ? ಟಾರ್ಗೆಟ್ನೆಡೆ ಗುರಿಯಿಡು ಮತ್ತು ಟ್ರಿಗ್ಗರ್ ಒತ್ತಿಬಿಡು,’ ಅಂತ ಹೇಳುತ್ತಿದ್ದರಂತೆ.
Chandro Tomar popularly knows as 'Shooter Dadi', passes away
She was admitted to a Meerut hospital on April 26 after she tested positive for COVID19 pic.twitter.com/GskaCzQYL5
— ANI UP (@ANINewsUP) April 30, 2021
ತೋಮರ್ ಶೂಟಿಂಗ್ ಮಾಡುವುದನ್ನು ನೋಡಲಿ ಜನ ತಮ್ಮ ಮಕ್ಕಳನ್ನು ಕರೆತರುತ್ತಿದ್ದರು. ಭಾಗಪತ್, ಮೀರತ್ ಮತ್ತು ಪಶ್ಚಿಮ ಉತ್ತರ ಪ್ರದೇಶದ ಸುತ್ತಮುತ್ತಲಿನ ಹಲವಾರು ಪ್ರದೇಶಗಳ ಬಾಲಕಿಯರು ಶೂಟಿಂಗ್ ಮಾಡಲು ಪ್ರಾರಭಿಸಿದರಂತೆ.
ಅವರ ಸಾವಿನ ಸುದ್ದಿ ಕೇಳಿ ನಾದಿನಿ ಪ್ರಕಾಶಿ ತೋಮರ್ ಅವರು, ‘ ಆಕೆ ನನ್ನನ್ನು ಅಗಲಿದ್ದಾರೆ, ಚಂದ್ರೋ ನೀನೆಲ್ಲಿರುವೆ,’ ಎಂದು ಟ್ವೀಟ್ ಮಾಡಿದ್ದಾರೆ.
2019ರಲ್ಲಿ ಒಬ್ಬ ಪತ್ರಕರ್ತ ತೋಮರ್ ನಿಧನ ಹೊಂದಿದ್ದಾರೆ ಅಂತ ಟ್ವೀಟ್ ಮಾಡಿದ್ದಾಗ, ತೋಮರ್ ದಾದಿ, ‘ನೀನು ತುಂಬಾ ಅವಸರದಲ್ಲಿರುವಂತಿದೆ,’ ಅಂತ ಹೇಳಿದ್ದರು.
ಉತ್ತರ ಪ್ರದೇಶದ ಭಾಗ್ಪತ್ ಜಿಲ್ಲೆಯ ಜೊಹ್ರಿ ಹೆಸರಿನ ಊರಿವರಾಗಿದ್ದ ತೋಮರ್ ಶೂಟರ್ ದಾದಿ ಎಂದೇ ಜನಜನಿತರಾಗಿದ್ದರು, ಅವರು ಶೂಟಿಂಗ್ ಆರಂಭಿಸಿದ್ದು 1999ರಲ್ಲಿ. 60 ವಯಸ್ಸಿನವರಾದ ನಂತರ ಅವರು ರಾಷ್ಟ್ರೀಯ ಚಾಂಪಿಯನ್ಶಿಪ್ನಲ್ಲಿ 30 ಕ್ಕಿಂತ ಹೆಚ್ಚು ಪದಕಗಳನ್ನು ಗೆದ್ದಿದ್ದರು.
ವಿಶ್ವದ ನಂಬರ್ ವನ್ ರೈಫಲ್ ಶೂಟರ್ ದಿವ್ಯಾಂಶ್ ಪರ್ವರ್ ಅವರನ್ನು ಟ್ರೇನ್ ಮಾಡುವ ಕೋಚ್ ದೀಪಕ್ ದುಬೆ ಅವರು, ಚಂದ್ರೋ ಮತ್ತು ಪ್ರಕಾಶೀ ರಾಷ್ಟ್ರೀಯ ಚಾಂಪಿಯನ್ಶಿಪ್ನಲ್ಲಿ ಭಾಗಿಯಾಗಿರುವುದನ್ನು ನೆನೆಪಿಸಿಕೊಂಡಿದ್ದಾರೆ.
‘ನಾನು ಶೂಟರ್ ಆಗಿದ್ದ ದಿನಗಳಲ್ಲಿ ಅಗಾಗ ಜೊಹ್ರಿ ರೇಂಜ್ನಲ್ಲಿ ಅಭ್ಯಾಸ ಮಾಡುತ್ತಿದ್ದೆ. ಅವರಿಬ್ಬರೂ ನಮ್ಮಲ್ಲಿ ಸ್ಫೂರ್ತಿಯನ್ನು ತುಂಬುತ್ತಿದ್ದರು. ದೇಹಕ್ಕೆ ವಯಸ್ಸಾಗಿರಹುದು, ಅದರೆ ಹೃದಯಕ್ಕಲ್ಲ, ಎಂದು ಅವರು ಹೇಳುತ್ತಿದ್ದರು. ರಾಷ್ಟ್ರೀಯ ಚಾಂಪಿಯನ್ಶಿಪ್ನಲ್ಲಿ ಅವರಿಬ್ಬರು ಹಿರಿಯರ ಕೆಟೆಗೆರಿಯಲ್ಲಿ ಭಾಗವಹಿಸುತ್ತಿದ್ದರು. ಆಗ ಹಿರಿಯರ ಕೆಟೆಗಿರಿಯಲ್ಲಿ ಜಾಸ್ತಿ ಸ್ಪರ್ಧಿಗಳು ಇರುತ್ತಿರಲಿಲ್ಲ, ಆದರೆ ಈಗ ಅವರ ಸಂಖ್ಯೆ ಹೆಚ್ಚಾಗಿದೆ. ಅತಂಕಮಯವಾದ ವಾತಾವರಣವನ್ನು ತಿಳಿಯಾಗಿಸುವ ಅಪರೂಪದ ಕಲೆ ಅವರಲ್ಲಿತ್ತು. ಅವರು ತಮ್ಮ ಬದುಕಿನ ಅನುಭವನ್ನು ನಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದರು ಮತ್ತು ಯುವ ಶೂಟರ್ಗಳನ್ನು ಹುರಿದುಂಬಿಸುತ್ತಿದ್ದರು,’ ಎಂದು ದುಬೆ ಹೇಳಿದ್ದಾರೆ.
‘ಸಾಂಡ್ ಕಿ ಆಂಖ್ನಲ್ಲಿ’ ನಲ್ಲಿ ಚಂದ್ರೋ ತೋಮರ್ ಅವರ ಪಾತ್ರ ನಿರ್ವಿಹಿಸಿರುವ ಖ್ಯಾತ ನಟಿ ಭೂಮಿ ಪೆಡ್ನೇಕರ್ ಅವರು ಟ್ವೀಟ್ಮೂಲಕ ಶ್ರದ್ಧಾಂಜಿಯನ್ನು ಸಮರ್ಪಿಸಿದ್ದಾರೆ.
‘ಚಂದ್ರೋ ದಾದಿ ಅವರ ಸಾವಿನ ಸುದ್ದಿ ಕೇಳಿ ಆಘಾತಕ್ಕೊಳಗಾಗಿದ್ದೇನೆ. ನನ್ನ ಒಂದು ಭಾಗವನ್ನು ಕಳೆದುಕೊಂಡಂತೆ ಭಾಸವಾಗುತ್ತಿದೆ. ಅವರು ತಮ್ಮದೇ ಆದ ನಿಯಮಗಳನ್ನು ರೂಪಿಸಿಕೊಂಡಿದ್ದರು ಮತ್ತು ಅನೇಕ ಯುವತಿಯರಿಗೆ ತಮ್ಮ ಕನಸುಗಳನ್ನು ಸಾಕಾರಗೊಳಿಸಿಕೊಳ್ಳಲು ಪ್ರೇರಣೆಯಾದರು. ಆಕೆ ಬಿಟ್ಟು ಹೋಗಿರುವ ಪರಂಪರೆ ಯಾವತ್ತೂ ಅಳಿಯದು. ಆಕೆಯ ಬಗ್ಗೆ ತಿಳಿದುಕೊಳ್ಳುವ ಸಿಕ್ಕಿದ್ದು ನನ್ನ ಅದೃಷ್ಟ ,’ ಎಂದು ಭೂಮಿ ಟ್ವೀಟ್ ಮಾಡಿದ್ದಾರೆ.
Devastated by the news of Chandro Dadi’s demise. Feels like a part of me is gone. She made her own rules & paved the path for many girl to find their dream. Her legacy will live on in them. Condolences to the family. Am lucky I got to know and be her ?#ChandroTomar #ShooterDadi
— bhumi pednekar (@bhumipednekar) April 30, 2021
ಇದನ್ನೂ ಓದಿ: Tokyo Olympics 2021: ಈ ಬಾರಿಯ ಒಲಿಂಪಿಕ್ಸ್ ಪ್ರೇಕ್ಷಕರಿಲ್ಲದೆ ನಡೆಯಬಹುದು; ಒಲಿಂಪಿಕ್ ಕ್ರೀಡಾಕೂಟದ ಮುಖ್ಯಸ್ಥ ಹಶಿಮೊಟೊ
Published On - 12:42 am, Sat, 1 May 21