ಸ್ವದೇಶಿ ನಿರ್ಮಿತ ಪ್ರಳಯ್ ಖಂಡಾಂತರ ಕ್ಷಿಪಣಿಯ ಪರೀಕ್ಷಾರ್ಥ ಪ್ರಯೋಗ ಯಶಸ್ವಿ

ಸ್ವದೇಶಿ ನಿರ್ಮಿತ ಪ್ರಳಯ್ ಖಂಡಾಂತರ ಕ್ಷಿಪಣಿಯ ಪರೀಕ್ಷಾರ್ಥ ಪ್ರಯೋಗ ಯಶಸ್ವಿ
ಪ್ರಳಯ್ ಕ್ಷಿಪಣಿ

ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಪ್ರಳಯ್ ಯಶಸ್ವಿ ಹಾರಾಟದ ಪ್ರಯೋಗಕ್ಕಾಗಿ ಡಿಆರ್​​ಡಿಒ ಮತ್ತು ಸಂಬಂಧಿತ ತಂಡಗಳನ್ನು ಅಭಿನಂದಿಸಿದ್ದಾರೆ. ಡಿಆರ್​​ಡಿಒ ಚೇರ್ಮನ್ ಡಾ.ಜಿ.ಸತೀಶ್ ರೆಡ್ಡಿ ತಂಡವನ್ನು ಶ್ಲಾಘಿಸಿದರು.

TV9kannada Web Team

| Edited By: Rashmi Kallakatta

Dec 22, 2021 | 7:16 PM

ದೆಹಲಿ: ಒಡಿಶಾದ ಕರಾವಳಿಯಲ್ಲಿರುವ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ದ್ವೀಪದಿಂದ ಬುಧವಾರ ಬೆಳಗ್ಗೆ ಭಾರತವು ಸ್ವದೇಶಿ ನಿರ್ಮಿತ ಸೀಮಿತ ದೂರ ತಲುಪಬಲ್ಲ ನೆಲದಿಂದ ನೆಲಕ್ಕೆ ಚಿಮ್ಮುವ ‘ಪ್ರಳಯ್’ ಖಂಡಾಂತರ ಕ್ಷಿಪಣಿಯ ಪರೀಕ್ಷಾರ್ಥ ಪ್ರಯೋಗ ಯಶಸ್ವಿಯಾಗಿ ನಡೆಸಿತು. ಬೆಳಿಗ್ಗೆ 10.30ರ ವೇಳೆಗೆ ಪರೀಕ್ಷಾರ್ಥ ಪ್ರಯೋಗ ನಡೆಯಿತು ಎಂದು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯು (ಡಿಆರ್‌ಡಿಒ) ತಿಳಿಸಿದೆ.  “ಹೊಸ ಕ್ಷಿಪಣಿಯು ಅಪೇಕ್ಷಿತ ಖ್ವಾಸಿ-ಬ್ಯಾಲಿಸ್ಟಿಕ್ ಪಥವನ್ನು ಅನುಸರಿಸಿತು. ಉನ್ನತ ಮಟ್ಟದ ನಿಖರತೆಯೊಂದಿಗೆ ನಿಯಂತ್ರಣ, ಮಾರ್ಗದರ್ಶನ ಮತ್ತು ಮಿಷನ್ ಅಲ್ಗಾರಿದಮ್​​ಗಳೊಂದಿಗೆ ಗೊತ್ತುಪಡಿಸಿದ ಗುರಿಯನ್ನು ತಲುಪಿದೆ ಎಂದು ರಕ್ಷಣಾ ಸಚಿವಾಲಯ (MoD) ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.  ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) 2015 ರ ಸುಮಾರಿಗೆ ಅಲ್ಪ-ಶ್ರೇಣಿಯ ಘನ-ಇಂಧನ ನೆಲದಿಂದ ನೆಲಕ್ಕೆ ಚಿಮ್ಮುವ ಕ್ಷಿಪಣಿಯನ್ನು ಅಭಿವೃದ್ಧಿಪಡಿಸುವ ಯೋಜನೆಯಲ್ಲಿ ಕೆಲಸ ಮಾಡಲು ಪ್ರಾರಂಭಿಸಿತು. ಕ್ಷಿಪಣಿಯನ್ನು ತರುವಾಯ ಪ್ರಳಯ್ ಎಂದು ನಾಮಕರಣ ಮಾಡಲಾಯಿತು. ಇದು 10 ಮೀಟರ್‌ಗಿಂತಲೂ ಕಡಿಮೆ ನಿಖರತೆಯೊಂದಿಗೆ 150 ರಿಂದ 500 ಕಿಲೋಮೀಟರ್ ವ್ಯಾಪ್ತಿಯಲ್ಲಿ ಗುರಿಯನ್ನು ಮುಟ್ಟುತ್ತದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಎಲ್ಲಾ ಉಪ-ವ್ಯವಸ್ಥೆಗಳು ತೃಪ್ತಿಕರವಾಗಿ ಕಾರ್ಯನಿರ್ವಹಿಸಿವೆ. ಪೂರ್ವ ಕರಾವಳಿಯಾದ್ಯಂತ ಪ್ರಭಾವದ ಬಿಂದುವಿನ ಬಳಿ ನಿಯೋಜಿಸಲಾದ ಎಲ್ಲಾ ಸಂವೇದಕಗಳು, ಡೌನ್ ರೇಂಜ್ ಶಿಪ್ ಸೇರಿದಂತೆ, ಕ್ಷಿಪಣಿ ಪಥವನ್ನು ಟ್ರ್ಯಾಕ್ ಮಾಡುತ್ತವೆ ಮತ್ತು ಎಲ್ಲಾ ಘಟನೆಗಳನ್ನು ಸೆರೆಹಿಡಿಯುತ್ತವೆ ”ಎಂದು ಸಚಿವಾಲಯದ ಪ್ರಕಟಣೆ ಹೇಳಿದೆ.  ಮೊಬೈಲ್ ಲಾಂಚರ್‌ನಿಂದ ಉಡಾವಣೆ ಮಾಡಬಹುದಾದ ಕ್ಷಿಪಣಿಯು ಅತ್ಯಾಧುನಿಕ ನ್ಯಾವಿಗೇಷನ್ ಕಾರ್ಯವಿಧಾನಗಳು ಮತ್ತು ಸಮಗ್ರ ಏವಿಯಾನಿಕ್ಸ್ ಅನ್ನು ಒಳಗೊಂಡಿರುವ ಮಾರ್ಗದರ್ಶನ ವ್ಯವಸ್ಥೆಯನ್ನು ಹೊಂದಿದೆ.

ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಪ್ರಳಯ್ ಯಶಸ್ವಿ ಹಾರಾಟದ ಪ್ರಯೋಗಕ್ಕಾಗಿ ಡಿಆರ್​ಡಿಒ ಮತ್ತು ಸಂಬಂಧಿತ ತಂಡಗಳನ್ನು ಅಭಿನಂದಿಸಿದ್ದಾರೆ. ಡಿಆರ್​ಡಿಒ ಚೇರ್ಮನ್ ಡಾ.ಜಿ.ಸತೀಶ್ ರೆಡ್ಡಿ ತಂಡವನ್ನು ಶ್ಲಾಘಿಸಿದರು. ಪ್ರಳಯ್ ಆಧುನಿಕ ತಂತ್ರಜ್ಞಾನಗಳನ್ನು ಹೊಂದಿರುವ ಹೊಸ ತಲೆಮಾರಿನ ನೆಲದಿಂದ ನೆಲಕ್ಕೆ ಚಿಮ್ಮುವ ಕ್ಷಿಪಣಿಯಾಗಿದ್ದು, ಶಸ್ತ್ರಾಸ್ತ್ರ ವ್ಯವಸ್ಥೆಯ ಇಂಡಕ್ಷನ್ ಸಶಸ್ತ್ರ ಪಡೆಗಳಿಗೆ ಅಗತ್ಯವಾದ ಸಹಾಯವನ್ನು ನೀಡುತ್ತದೆ ಎಂದು ಹೇಳಿದರು.

ಇದನ್ನೂ ಓದಿ: ಕೈ ಬಂಧಿಯಾಗಿದೆ, ನಾನು ಸಂದಿಗ್ಧ ಪರಿಸ್ಥಿತಿಯಲ್ಲಿದ್ದೇನೆ ಎಂದ ಹರೀಶ್ ರಾವತ್; ಉತ್ತರಾಖಂಡ ಕಾಂಗ್ರೆಸ್​​ನಲ್ಲಿ ಎದುರಾಯಿತೇ ಸಂಕಷ್ಟ?

Follow us on

Related Stories

Most Read Stories

Click on your DTH Provider to Add TV9 Kannada