ನೊಯ್ಡಾ: ಉತ್ತರ ಪ್ರದೇಶದ ನೊಯ್ಡಾದಲ್ಲಿ (Noida) ಮಹಿಳೆಯ ಮೇಲೆ ಹಲ್ಲೆ ನಡೆಸಿ, ಅಸಭ್ಯವಾಗಿ ನಿಂದನೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸೂರಜ್‌ಪುರ ನ್ಯಾಯಾಲಯವು ಬಿಜೆಪಿ ಮುಖಂಡ ಶ್ರೀಕಾಂತ್ ತ್ಯಾಗಿ (Shrikant Tyagi) ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿದೆ. ಶ್ರೀಕಾಂತ್ ತ್ಯಾಗಿ ಅವರ ನೊಯ್ಡಾ ಹೌಸಿಂಗ್ ಸೊಸೈಟಿಯಲ್ಲಿ ಮಹಿಳೆಯೊಬ್ಬರ ಮೇಲೆ ದೌರ್ಜನ್ಯ ಮತ್ತು ಹಲ್ಲೆ ನಡೆಸಿದ ಆರೋಪದ ಮೇಲೆ ಪೊಲೀಸರು ಅವರನ್ನು ಮಂಗಳವಾರ ಬಂಧಿಸಿದ್ದರು. 12 ಪೊಲೀಸ್ ತಂಡಗಳು ಮತ್ತು ಉತ್ತರ ಪ್ರದೇಶ ಎಸ್‌ಟಿಎಫ್ 3 ರಾಜ್ಯಗಳಲ್ಲಿ ಶ್ರೀಕಾಂತ್ ತ್ಯಾಗಿಗಾಗಿ ಹುಡುಕಾಟ ನಡೆಸಿತ್ತು. ಕೊನೆಗೆ ಆತನನ್ನು ಮೀರತ್‌ನಲ್ಲಿ ಪತ್ತೆ ಹಚ್ಚಲಾಗಿದ್ದು, ಪೊಲೀಸರು ಆತನ ಜೊತೆ ಮೂವರು ಸಹಚರರನ್ನು ಬಂಧಿಸಿದ್ದರು.
ಮಹಿಳೆಯ ಮೇಲಿನ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 354ರ ಅಡಿಯಲ್ಲಿ ಸಲ್ಲಿಸಲಾದ ಜಾಮೀನು ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದೆ. ಐಪಿಸಿ ಸೆಕ್ಷನ್ 420, 419, 482ರ ಅಡಿಯಲ್ಲಿ ದಾಖಲಾಗಿರುವ ಪ್ರಕರಣದ ವಿಚಾರಣೆಯನ್ನು ನ್ಯಾಯಾಲಯವು ಆಗಸ್ಟ್ 16ರಂದು ವಿಚಾರಣೆ ನಡೆಸಲಿದೆ.
Noida, UP | Bail plea of #ShrikantTyagi rejected in the woman assault-abuse case. Hearing in another matter under Sec 420 (cheating & dishonestly inducing delivery of property) to be held on 16th Aug, hearing in matters related to 6 other people also on August 16.
(File photo) pic.twitter.com/Zb2jfrMu1a
— ANI (@ANI) August 11, 2022
ಶ್ರೀಕಾಂತ್ ತ್ಯಾಗಿ ಅವರ ನೋಯ್ಡಾ ಹೌಸಿಂಗ್ ಸೊಸೈಟಿಯಲ್ಲಿ ಮಹಿಳೆಯೊಬ್ಬರ ಮೇಲೆ ದೌರ್ಜನ್ಯ ಮತ್ತು ಹಲ್ಲೆ ನಡೆಸಿದ ಆರೋಪದ ಮೇಲೆ ಪೊಲೀಸರು ಅವರನ್ನು ಮಂಗಳವಾರ ಬಂಧಿಸಿದ್ದರು. 12 ಪೊಲೀಸ್ ತಂಡಗಳು ಮತ್ತು ಉತ್ತರ ಪ್ರದೇಶ ಎಸ್‌ಟಿಎಫ್ 3 ರಾಜ್ಯಗಳಲ್ಲಿ ಶ್ರೀಕಾಂತ್ ತ್ಯಾಗಿಗಾಗಿ ಹುಡುಕಾಟ ನಡೆಸಿತ್ತು. ಕೊನೆಗೆ ಆತನನ್ನು ಮೀರತ್‌ನಲ್ಲಿ ಪತ್ತೆ ಹಚ್ಚಲಾಗಿದ್ದು, ಪೊಲೀಸರು ಆತನ ಜೊತೆ ಮೂವರು ಸಹಚರರನ್ನು ಬಂಧಿಸಿದ್ದರು.
ಇದನ್ನೂ ಓದಿ: Breaking News: ಶ್ರೀಕಾಂತ್ ತ್ಯಾಗಿಯನ್ನು ಬಂಧಿಸಿದ ಉತ್ತರ ಪ್ರದೇಶ ಪೊಲೀಸರು
ನೊಯ್ಡಾ ರೆಸಿಡೆನ್ಷಿಯಲ್ ಸೊಸೈಟಿಯಲ್ಲಿ ರಾಜಕಾರಣಿ ಶ್ರೀಕಾಂತ್ ತ್ಯಾಗಿ ಮಹಿಳೆಯ ಮೇಲೆ ದೌರ್ಜನ್ಯ ಎಸಗುತ್ತಿರುವುದು ಕ್ಯಾಮರಾದಲ್ಲಿ ಸೆರೆಯಾಗಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿದ್ದ ಶ್ರೀಕಾಂತ್ ತ್ಯಾಗಿ ಅವರ ಪತ್ನಿ, ನನ್ನ ಗಂಡ ಏನು ಮಾಡಿದ್ದಾನೆ, ಆ ಮಹಿಳೆ ಏನು ಮಾಡಿದಳು ಎಂಬುದನ್ನು ನೋಡಿದೆ. ನನ್ನ ಪತಿ ಮಾಡಿದ್ದು ತಪ್ಪಾಗಿದೆ. ಆದರೆ ಅವನು ಮಾಡಿದ ತಪ್ಪಿಗೆ ಅವನಿಗೆ ಶಿಕ್ಷೆಯಾಗಬೇಕು. ನನ್ನ ಗಂಡ ಆ ಮಹಿಳೆಯ ಬಳಿ ಕ್ಷಮೆ ಯಾಚಿಸಬೇಕು ಎಂದು ಹೇಳಿದ್ದರು.
Noida, UP | What happened was wrong, he should’ve apologized. The topic was that he insulted a woman. It should have been handled like that. But everything is now being dragged. Our car, trees, house, everything has suddenly become illegal: Anu Tyagi, wife of Shrikant Tyagi (1/2) pic.twitter.com/zzDeWwgNEe
— ANI (@ANI) August 10, 2022
ನೋಯ್ಡಾ ಪೊಲೀಸರು ಶ್ರೀಕಾಂತ್ ತ್ಯಾಗಿ ವಿರುದ್ಧ ಐಪಿಸಿ ಸೆಕ್ಷನ್ 354ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದರು. ಈ ಪ್ರಕರಣದಲ್ಲಿ ಐಪಿಸಿ ಸೆಕ್ಷನ್ 323 (ಸ್ವಯಂಪ್ರೇರಿತವಾಗಿ ನೋವುಂಟುಮಾಡುವುದು), 504 (ಸಾರ್ವಜನಿಕ ಶಾಂತಿ ಭಂಗವನ್ನು ಪ್ರಚೋದಿಸುವುದು), 506 (ಕ್ರಿಮಿನಲ್ ಬೆದರಿಕೆ), 447 (ಅಪರಾಧ ಅತಿಕ್ರಮಣ) ಅಡಿಯಲ್ಲಿ ಆರೋಪಗಳನ್ನು ಹೊರಿಸಲಾಗಿತ್ತು.
ಇದನ್ನೂ ಓದಿ: ನೋಯ್ಡಾದ ಹೌಸಿಂಗ್ ಸೊಸೈಟಿಯಲ್ಲಿ ಮಹಿಳೆ ಜತೆ ಅನುಚಿತವಾಗಿ ವರ್ತಿಸಿದ್ದ ವ್ಯಕ್ತಿಗೆ ಸೇರಿದ ಕಟ್ಟಡ ಕೆಡವಿದ ನೋಯ್ಡಾ ಪ್ರಾಧಿಕಾರ
ಈ ಘಟನೆ ಆದ ನಂತರ ಬಂಧನಕ್ಕೊಳಗಾಗಿದ್ದ ಶ್ರೀಕಾಂತ್ ತ್ಯಾಗಿ, ನನ್ನ ಮೇಲೆ ಹಲ್ಲೆಯ ಆರೋಪ ಮಾಡಿರುವ ಮಹಿಳೆ ನನಗೆ ಸಹೋದರಿ ಇದ್ದಂತೆ ಎಂದು ಹೇಳಿದ್ದರು. ಈ ಇಡೀ ಘಟನೆಯು ರಾಜಕೀಯಗೊಂಡಿದೆ. ಯಾರೋ ನನ್ನನ್ನು ರಾಜಕೀಯವಾಗಿ ನಾಶಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದರು.
Published On - 1:18 pm, Thu, 11 August 22