ದೆಹಲಿ: ಪಂಜಾಬಿ ಗಾಯಕ-ಕಾಂಗ್ರೆಸ್ ನಾಯಕ ಸಿಧು ಮೂಸೆ ವಾಲಾ ಹತ್ಯೆಗೆ (Sidhu Moose Wala) ಸಂಬಂಧಿಸಿದಂತೆ ಪಂಜಾಬ್ ಪೊಲೀಸರ ನಕಲಿ ಎನ್‌ಕೌಂಟರ್‌ಗೆ ಹೆದರಿ ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ (Lawrence Bishnoi) ಬುಧವಾರ ದೆಹಲಿ ಹೈಕೋರ್ಟ್‌ನಿಂದ (Delhi HC) ಅರ್ಜಿಯನ್ನು ಹಿಂಪಡೆದಿದ್ದಾರೆ. ಇದೀಗ ಅವರು ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್‌ನ ಮೊರೆ ಹೋಗಲಿದ್ದಾರೆ. ಲಾರೆನ್ಸ್ ಬಿಷ್ಣೋಯ್ ಅವರ ಮನವಿಯನ್ನು ದೆಹಲಿ ಹೈಕೋರ್ಟ್ ಬುಧವಾರ ವಿಚಾರಣೆ ನಡೆಸಬೇಕಿತ್ತು. ಸಿಧು ಮೂಸೆ ವಾಲಾ ಹತ್ಯೆಯ ಪ್ರಮುಖ ಶಂಕಿತರಲ್ಲಿ ಒಬ್ಬನಾದ ಬಿಷ್ಣೋಯ್, ತನ್ನ ಕಸ್ಟಡಿಯನ್ನು ಬೇರೆ ಯಾವುದೇ ರಾಜ್ಯ ಪೊಲೀಸರಿಗೆ ನೀಡುವ ಮೊದಲು ತನ್ನ ರಕ್ಷಣೆಯನ್ನು ಖಚಿತಪಡಿಸಿಕೊಳ್ಳಲು ತಿಹಾರ್ ಜೈಲು ಪ್ರಾಧಿಕಾರ ಮತ್ತು ದೆಹಲಿ ಪೊಲೀಸರಿಗೆ ನಿರ್ದೇಶನ ನೀಡುವಂತೆ ಮನವಿ ಮಾಡಿದ್ದನು. “ಪ್ರೊಡಕ್ಷನ್ ವಾರೆಂಟ್ ಸಮಯದಲ್ಲಿ ಮತ್ತು ಟ್ರಾನ್ಸಿಟ್ ರಿಮಾಂಡ್‌ನಲ್ಲಿ ಸುರಕ್ಷತೆಗಾಗಿ ಪಂಜಾಬ್ ಪೋಲೀಸ್ ಯಾವುದೇ ವಾರಂಟ್ ನೀಡಿದರೆ, ಅರ್ಜಿದಾರರಿಗೆ ಅಗತ್ಯವಿರುವ ಎಲ್ಲಾ ಭದ್ರತಾ ವ್ಯವಸ್ಥೆಗಳನ್ನು ಖಚಿತಪಡಿಸಿಕೊಳ್ಳಲು ದೆಹಲಿ ಪೋಲೀಸ್ ಮತ್ತು ತಿಹಾರ್ ಜೈಲು ಪ್ರಾಧಿಕಾರಕ್ಕೆ ನಿರ್ದೇಶನವನ್ನು ರವಾನಿಸಿ ಎಂದು ದೆಹಲಿ ಹೈಕೋರ್ಟ್‌ಗೆ ಸಲ್ಲಿಸಿದ ಮನವಿಯಲ್ಲಿ ಹೇಳಲಾಗಿದೆ.
ಕನಿಷ್ಠ 60 ಪ್ರಕರಣಗಳನ್ನು ಹೊಂದಿರುವ ಬಿಷ್ಣೋಯ್ ಮಹಾರಾಷ್ಟ್ರ ಸಂಘಟಿತ ಅಪರಾಧಗಳ ನಿಯಂತ್ರಣ ಕಾಯ್ದೆಯ ಹಳೆಯ ಪ್ರಕರಣದಲ್ಲಿ ತಿಹಾರ್ ಜೈಲಿನಲ್ಲಿದ್ದನು. ಮಂಗಳವಾರ ಈತನ ಮೇಲೆ ಶಸ್ತ್ರಾಸ್ತ್ರ ಕಾಯ್ದೆಯ ಪ್ರಕರಣವನ್ನು ವಿಧಿಸಿದ ನಂತರ ಅವರನ್ನು ಬಂಧಿಸಿದ ನಂತರ ದೆಹಲಿ ಪೊಲೀಸ್ ವಿಶೇಷ ಸೆಲ್‌ಗೆ ಮೂರು ದಿನಗಳ ಕಸ್ಟಡಿಗೆ ನೀಡಲಾಯಿತು. ಸೋಮವಾರ ವಿಶೇಷ ಸೆಲ್ ಬಿಷ್ಣೋಯ್ ವಿಚಾರಣೆ ನಡೆಸಿತ್ತು.
ಮಾನ್ಸಾ ಜಿಲ್ಲೆಯಲ್ಲಿ ಪಂಜಾಬಿ ಗಾಯಕನನ್ನು ಗುಂಡಿಕ್ಕಿ ಕೊಂದ ಎರಡು ದಿನಗಳ ನಂತರ ಸಿಧು ಮೂಸೆ ವಾಲಾ ಹತ್ಯೆ ಪ್ರಕರಣದಲ್ಲಿ ಪಂಜಾಬ್ ಪೊಲೀಸರು ಮಂಗಳವಾರ ಮೊದಲ ಬಂಧನ ಮಾಡಿದ್ದಾರೆ.
ದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ
Published On - 1:48 pm, Wed, 1 June 22