ಗಾಯಕ ಸಿಧು ಮೂಸೆವಾಲಾ ತಂದೆ ಬಲ್ಕೌರ್​ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಸಾಧ್ಯತೆ

|

Updated on: Apr 04, 2024 | 2:44 PM

ಎರಡು ವರ್ಷಗಳ ಹಿಂದೆ ದುಷ್ಕರ್ಮಿಗಳ ಗುಂಡೇಟಿಗೆ ಬಲಿಯಾಗಿದ್ದ ಪಂಜಾಬಿ ಗಾಯಕ ಸಿಧು ಮೂಸೆವಾಲಾ ಅವರ ತಂದೆ ಬಲ್ಕೌರ್​ ಸಿಂಗ್ 2024ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ ಎನ್ನುವ ಊಹಾಪೋಹಗಳು ಹರಿದಾಡುತ್ತಿವೆ. ಕಾಂಗ್ರೆಸ್​ನಿಂದ ಬಟಿಂಡಾ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಸುವ ಬಗ್ಗೆಯೂ ಚರ್ಚೆ ನಡೆದಿದೆ.

ಗಾಯಕ ಸಿಧು ಮೂಸೆವಾಲಾ ತಂದೆ ಬಲ್ಕೌರ್​ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಸಾಧ್ಯತೆ
ಸಿಧು ಮೂಸೆವಾಲಾ ತಂದೆ
Follow us on

ಎರಡು ವರ್ಷಗಳ ಹಿಂದೆ ದುಷ್ಕರ್ಮಿಗಳ ಗುಂಡೇಟಿಗೆ ಬಲಿಯಾಗಿದ್ದ ಪಂಜಾಬಿ ಗಾಯಕ ಸಿಧು ಮೂಸೆವಾಲಾ(Sidhu Moosewala) ಅವರ ತಂದೆ ಬಲ್ಕೌರ್​ ಸಿಂಗ್ 2024ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ ಎನ್ನುವ ಊಹಾಪೋಹಗಳು ಹರಿದಾಡುತ್ತಿವೆ.

ಕಾಂಗ್ರೆಸ್​ನಿಂದ ಬಟಿಂಡಾ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಸುವ ಬಗ್ಗೆಯೂ ಚರ್ಚೆ ನಡೆದಿದೆ. ಮೂಲಗಳ ಪ್ರಕಾರ, ಕಾಂಗ್ರೆಸ್ ಬಲ್ಕೌರ್ ಸಿಂಗ್ ಅವರೊಂದಿಗೆ ಮಾತುಕತೆ ನಡೆಸಿದ್ದು, ಅವರು ಕೂಡ ಚುನಾವಣೆಗೆ ಸ್ಪರ್ಧಿಸಲು ಸಿದ್ಧರಾಗಿದ್ದಾರೆ.
ಬಲ್ಕೌರ್ ಸಿಂಗ್ ಕೆಲವು ತಿಂಗಳ ಹಿಂದೆ ರಾಜಕೀಯ ಪ್ರವೇಶಿಸುವ ಸುಳಿವು ನೀಡಿದ್ದರು. ಆಗ ನಾವೇಕೆ ರಾಜಕೀಯಕ್ಕೆ ಬರಬಾರದು ಎಂದು ಹೇಳಿಕೆ ನೀಡಿದ್ದರು.

ಪಂಜಾಬ್‌ನಲ್ಲಿ ನಡೆದ ಭಾರತ್ ಜೋಡೋ ಯಾತ್ರೆಯಲ್ಲಿ ಅವರು ರಾಹುಲ್ ಗಾಂಧಿಯವರೊಂದಿಗೆ ಕಾಣಿಸಿಕೊಂಡಿದ್ದರು.

ಮತ್ತಷ್ಟು ಓದಿ: ಮಗನ ಕಳೆದುಕೊಂಡ ನೋವಿನಲ್ಲೇ ಮಗುವಿಗೆ ಜನ್ಮ ನೀಡಿದ ಪಂಜಾಬಿ ಗಾಯಕ ಸಿಧು ಮೂಸೆವಾಲಾ ತಾಯಿ

ಸಿಧು ಮೂಸೆವಾಲಾ ರಾಜಕೀಯ ಜೀವನ
2022 ರಲ್ಲಿ ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಸಿಧು ಮೂಸೆವಾಲಾ ಸ್ಪರ್ಧಿಸಿದ್ದರು. ಅವರು ಮಾನ್ಸಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದರು ಆದರೆ ಆಮ್ ಆದ್ಮಿ ಪಕ್ಷದ (ಎಎಪಿ) ಅಲೆಗೆ ಸೋತರು. ಅವರು ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಡಾ.ವಿಜಯ್ ಸಿಂಗ್ಲಾ ವಿರುದ್ಧ ಪರಾಭವಗೊಂಡರು. ಇದು ಸಿಧು ಮೂಸೆವಾಲ ಅವರ ಮೊದಲ ಚುನಾವಣೆ.

ಸಿಧು ಮೂಸೆವಾಲಾ ಅವರನ್ನು 29 ಮೇ 2022 ರಂದು ಮಾನ್ಸಾದ ಜವಾಹರ್ಕೆ ಗ್ರಾಮದಲ್ಲಿ ಹತ್ಯೆ ಮಾಡಲಾಗಿತ್ತು.
ಪಂಜಾಬ್‌ನ ಇಬ್ಬರು ಮತ್ತು ಹರಿಯಾಣದ 4 ಶೂಟರ್‌ಗಳು ಅವರ ಮೇಲೆ ಗುಂಡು ಹಾರಿಸಿದ್ದರು. ಇದಾದ ಬಳಿಕ ಲಾರೆನ್ಸ್ ಗ್ಯಾಂಗ್ ಹತ್ಯೆಯ ಹೊಣೆ ಹೊತ್ತುಕೊಂಡಿತ್ತು.

ಲಾರೆನ್ಸ್ ಕಾಲೇಜಿನ ಸ್ನೇಹಿತ ವಿಕ್ಕಿ ಮಿಡ್ಡುಖೇಡ ಕೊಲೆ ಪ್ರಕರಣದಲ್ಲಿ ಸಿದ್ದು ಮೂಸೆವಾಳ ಭಾಗಿಯಾಗಿದ್ದರು ಎಂದು ಆರೋಪಿಸಿದ್ದರು. ಸಿಧು ಮೂಸೆವಾಲಾ ತಾಯಿ ಇದೀಗ ಐವಿಎಫ್​ ಮೂಲಕ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ, ಅವರಿಗೆ 58 ವರ್ಷ ವಯಸ್ಸು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ