ಇನ್ಮುಂದೆ ಹೈಕೋರ್ಟ್ನಲ್ಲಿ ಮಹಿಳಾ ಸಿಬ್ಬಂದಿಗೆ ಮುಟ್ಟಿನ ರಜೆ(Menstrual Leave) ಸಿಗಲಿದೆ. ಸಿಕ್ಕಿಂ ಹೈಕೋರ್ಟ್ ಈ ಐತಿಹಾಸಿಕ ನಿರ್ಧಾರವನ್ನು ತೆಗೆದುಕೊಂಡಿದ್ದು, ಈ ನಿಟ್ಟಿನಲ್ಲಿ ಮೊದಲ ಹೆಜ್ಜೆ ಇಟ್ಟಿದೆ. ಹೈಕೋರ್ಟ್ನ ಮಹಿಳಾ ಉದ್ಯೋಗಿಗಳು ತಿಂಗಳಲ್ಲಿ 2-3 ದಿನ ಮುಟ್ಟಿನ ರಜೆ ಪಡೆಯಬಹುದು ಎಂದು ಹೇಳಲಾಗಿದ್ದು, ಇದರಿಂದ ಮಹಿಳಾ ಸಿಬ್ಬಂದಿ ಸಂತಸಪಟ್ಟಿದ್ದಾರೆ.
ಆದರೆ ಈ ರಜೆಯನ್ನು ಹೈಕೋರ್ಟ್ನ ವೈದ್ಯಾಧಿಕಾರಿಗಳ ಶಿಫಾರಸಿನ ಮೇರೆಗೆ ನೀಡಲಾಗುತ್ತದೆ. ಇದನ್ನು ಒಟ್ಟಾರೆ ರಜೆ ಜತೆಗೆ ಪರಿಗಣಿಸಲಾಗುವುದಿಲ್ಲ.
ಸಿಕ್ಕಿಂ ಹೈಕೋರ್ಟ್ ದೇಶದ ಅತ್ಯಂತ ಚಿಕ್ಕ ಹೈಕೋರ್ಟ್ ಆಗಿದ್ದು ದೊಡ್ಡ ನಿರ್ಧಾರವನ್ನೇ ಕೈಕೊಂಡಿದೆ. ಇದರಲ್ಲಿ ಮೂವರು ನ್ಯಾಯಮೂರ್ತಿಗಳು ಇದ್ದಾರೆ, ಒಬ್ಬರು ಮಹಿಳಾ ಅಧಿಕಾರಿ ಸೇರಿದಂತೆ ಕೇವಲ 9 ಮಂದಿ ಇದ್ದಾರೆ.
ಸಿಕ್ಕಿಂ ಹೈಕೋರ್ಟ್ ಮುಟ್ಟಿನ ರಜೆ ನೀತಿಯನ್ನು ಪರಿಚಯಿಸಿದ ಮೊದಲ ಹೈಕೋರ್ಟ್ ಆಗಿದೆ. ಪ್ರಸ್ತುತ, ಮುಟ್ಟಿನ ರಜೆಗೆ ಯಾವುದೇ ರಾಷ್ಟ್ರೀಯ ನೀತಿ ಅಥವಾ ಕಾನೂನು ಇಲ್ಲ.
ಮತ್ತಷ್ಟು ಓದಿ: ವೇತನ ಸಹಿತ ಮುಟ್ಟಿನ ರಜೆ: ಸ್ಮೃತಿ ಇರಾನಿ ಹೇಳಿಕೆ ಬೆಂಬಲಿಸಿದ ನಟಿ ಕಂಗನಾ
ಫೆಬ್ರವರಿ 2023 ರಲ್ಲಿ, ದೇಶದಲ್ಲಿ ವಿದ್ಯಾರ್ಥಿಗಳು ಮತ್ತು ಉದ್ಯೋಗಸ್ಥ ಮಹಿಳೆಯರಿಗೆ ಮುಟ್ಟಿನ ರಜೆಯನ್ನು ಕೋರುವ ಅರ್ಜಿಯನ್ನು ಆಲಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿತು.
ಡಿಸೆಂಬರ್ 2023 ರಲ್ಲಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ಅವರು ಮುಟ್ಟಿನ ರಜೆ ನೀತಿಯನ್ನು ವಿರೋಧಿಸಿದರು. ಋತುಚಕ್ರ ಅಂಗವೈಕಲ್ಯವಲ್ಲ ಎಂದು ಹೇಳಿದ್ದರು.
ಅದೇ ತಿಂಗಳಿನಲ್ಲಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಮುಟ್ಟಿನ ನೈರ್ಮಲ್ಯದ ಕರಡು ನೀತಿಯನ್ನು ರೂಪಿಸಿತು, ಅದು ಮಹಿಳೆಯರಿಗೆ ಯಾವುದೇ ತಾರತಮ್ಯವಾಗದಂತೆ ಮನೆಯಿಂದ ಕೆಲಸ ಅಥವಾ ಬೆಂಬಲ ರಜೆಗಳು ಲಭ್ಯವಿರಬೇಕು ಎಂದು ಹೇಳಿತು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ