ದೆಹಲಿ: ದೆಹಲಿಯ (Delhi) ಹೈದರ್‌ಪುರ ಪ್ರದೇಶದ ನೀರಿನ ಸ್ಥಾವರದಲ್ಲಿ ಸಿಕ್ಕಿಂ ಪೊಲೀಸ್ (Sikkim Police) ಸಿಬ್ಬಂದಿಯೊಬ್ಬರು ತಮ್ಮದೇ 3 ಸಿಬ್ಬಂದಿಗೆ ಗುಂಡು ಹಾರಿಸಿದರು. ಗುಂಡು ತಗಲಿದ ಮೂರು ವ್ಯಕ್ತಿಗಳೂ ಸಾವಿಗೀಡಾಗಿದ್ದಾರೆ. ದೆಹಲಿಯ ಹೈದರ್‌ಪುರ ಪ್ರದೇಶದಲ್ಲಿನ ನೀರಿನ ಘಟಕದಲ್ಲಿ ಸಿಕ್ಕಿಂ ಪೊಲೀಸ್ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿತ್ತು. ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಉಧಂಪುರ್ ಜಿಲ್ಲೆಯಲ್ಲಿ ಇಂಡೋ ಟಿಬೆಟಿಯನ್ ಬಾರ್ಡರ್ ಪೊಲೀಸ್ ಸಿಬ್ಬಂದಿ ತಮ್ಮ ಮೂವರು ಸಹೋದ್ಯೋಗಿಗಳ ಮೇಲೆ ಗುಂಡು ಹಾರಿಸಿದ ನಂತರ ತನ್ನ ಜೀವವನ್ನೇ ಕಳೆದುಕೊಂಡ ಘಟನೆ ನಡೆದ ಎರಡು ದಿನಗಳ ನಂತರ ದೆಹಲಿಯಲ್ಲಿ ಈ ಘಟನೆ ನಡೆದಿದೆ.
#UPDATE | The injured person who was admitted to a hospital was declared brought dead by the doctors: Delhi Police
ಇದನ್ನೂ ಓದಿ— ANI (@ANI) July 18, 2022
Published On - 4:56 pm, Mon, 18 July 22