Big Breaking ಬಂಧನದಿಂದ ರಕ್ಷಣೆ ಕೋರಿ ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿದ ನೂಪುರ್ ಶರ್ಮಾ
ಪ್ರವಾದಿ ಮೊಹಮ್ಮದ್ ಬಗ್ಗೆ ಆಕ್ಷೇಪಾರ್ಹ ನೀಡಿ ವಿವಾದಕ್ಕೀಡಾಗಿರುವ ಬಿಜೆಪಿಯ ಮಾಜಿ ವಕ್ತಾರೆ ನೂಪುರ್ ಶರ್ಮಾ ಪ್ರಸ್ತುತ ಪ್ರಕರಣದಲ್ಲಿ ಬಂಧನದಿಂದ ರಕ್ಷಣೆ ಕೋರಿ ಸುಪ್ರೀಂಕೋರ್ಟ್ಗೆ ಸೋಮವಾರ ಅರ್ಜಿ ಸಲ್ಲಿಸಿದ್ದಾರೆ
ದೆಹಲಿ: ನೂಪುರ್ ಶರ್ಮಾ(Nupur Sharma) ವಿರುದ್ಧ ನ್ಯಾಯಾಲಯ ಕಟುವಾಗಿ ಪ್ರತಿಕ್ರಿಯಿಸಿದ ನಂತರ ಆಕೆಯ ಮೇಲೆ ಕೊಲೆ ಬೆದರಿಕೆಗಳು ಬರತೊಡಗಿದ್ದು, ತನಗೆ ಬಂಧನದಿಂದ ರಕ್ಷಣೆ ನೀಡಬೇಕು ಎಂದು ಕೋರಿ ಸುಪ್ರೀಂಕೋರ್ಟ್ (Supreme Court) ಮೆಟ್ಟಿಲೇರಿದ್ದಾರೆ. ಅದೇ ವೇಳೆ ಪ್ರವಾದಿ ಮೊಹಮ್ಮದ್ (Prophet Muhammad) ಮತ್ತು ಇಸ್ಲಾಂ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಕ್ಕೆ ದೇಶದಾದ್ಯಂತ ಆಕೆ ವಿರುದ್ಧ ದಾಖಲಾಗಿರುವ 9 ಪ್ರಕರಣಗಳನ್ನು ಒಗ್ಗೂಡಿಸಬೇಕು ಎಂದು ಶರ್ಮಾ ಮನವಿ ಮಾಡಿದ್ದಾರೆ. ಎರಡು ತಿಂಗಳ ಹಿಂದೆ ಸುದ್ದಿವಾಹಿನಿಯ ಚರ್ಚೆಯಲ್ಲಿ ಬಿಜೆಪಿ ವಕ್ತಾರೆಯಾಗಿದ್ದ ನೂಪುರ್ ಶರ್ಮಾ ಪ್ರವಾದಿ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ್ದರು. ಈ ಹೇಳಿಕೆಗೆ ದೇಶ ವಿದೇಶಗಳಲ್ಲಿ ಆಕ್ರೋಶ ತೀವ್ರವಾದಾಗ ಬಿಜೆಪಿ ಆಕೆಯನ್ನು ಪಕ್ಷದಿಂದ ವಜಾ ಮಾಡಿತ್ತು. ಇದಕ್ಕಿಂತ ಮೊದಲು ನೂಪುರ್ ಶರ್ಮಾ ಎಫ್‌ಐಆರ್‌ಗಳನ್ನು ಒಟ್ಟು ಸೇರಿಸುವಂತೆ ಈ ಹಿಂದೆಯೂ ನ್ಯಾಯಾಲಯವನ್ನು ಒತ್ತಾಯಿಸಿದ್ದರು, ಆದರೆ ನ್ಯಾಯಾಲಯವು ಅವರ ವಿರುದ್ಧ ಕಟುವಾಗಿ ಪ್ರತಿಕ್ರಿಯಿಸಿದಾಗ ಆಕೆ ತನ್ನ ಮನವಿಯನ್ನು ಹಿಂಪಡೆದಿದ್ದರು. ಸೋಮವಾರ ಸಲ್ಲಿಸಿದ ಅರ್ಜಿಯಲ್ಲಿ ನೂಪುರ್ ಶರ್ಮಾ ಕೆಲವರು ಅತ್ಯಾಚಾರ ಮತ್ತು ಕೊಲೆ ಬೆದರಿಕೆಗಳನ್ನು ಹಾಕುತ್ತಿದ್ದಾರೆ ಎಂದು ದೂರಿದ್ದಾರೆ. ಆಕೆ ಈ ಹಿಂದೆ ನೀಡಿದ್ದ ಮನವಿಯಲ್ಲೂ ಕೊಲೆ ಬೆದರಿಕೆಗಳನ್ನು ಉಲ್ಲೇಖಿಸಿದ್ದರು.
ಮೊದಲ ಎಫ್‌ಐಆರ್ ಅನ್ನು ದೆಹಲಿಯಲ್ಲಿ ದಾಖಲಿಸಲಾಗಿದೆ. ಇನ್ನುಳಿದದ್ದನ್ನು ಅದರೊಂದಿಗೆ ಸೇರಿಸಬೇಕೆಂದು ಶರ್ಮಾ ಒತ್ತಾಯಿಸಿದ್ದಾರೆ.
Published On - 6:53 pm, Mon, 18 July 22