ಶಾಸಕಿಯಾಗಿ ಪ್ರಮಾಣವಚನ ಸ್ವೀಕರಿಸಿದ ಮರುದಿನವೇ ರಾಜೀನಾಮೆ ಕೊಟ್ಟ ಸಿಕ್ಕಿಂ ಮುಖ್ಯಮಂತ್ರಿ ಪತ್ನಿ ಕೃಷ್ಣಕುಮಾರಿ

|

Updated on: Jun 14, 2024 | 9:02 AM

ಶಾಸಕಿಯಾಗಿ ಪ್ರಮಾಣವಚನ ಸ್ವೀಕರಿಸಿದ ಮರುದಿನವೇ ರಾಜೀನಾಮೆ ನೀಡಿರುವ ಘಟನೆ ಸಿಕ್ಕಿಂನಲ್ಲಿ ನಡೆದಿದೆ. ಸಿಕ್ಕಿಂ ಮುಖ್ಯಮಂತ್ರಿ ಪ್ರೇಮ್ ಸಿಂಗ್ ತಮಾಂಗ್ ಪತ್ನಿ ಕೃಷ್ಣಕುಮಾರ್ ಈ ನಿರ್ಧಾರ ತೆಗೆದುಕೊಂಡಿದ್ದಾರೆ.

ಶಾಸಕಿಯಾಗಿ ಪ್ರಮಾಣವಚನ ಸ್ವೀಕರಿಸಿದ ಮರುದಿನವೇ ರಾಜೀನಾಮೆ ಕೊಟ್ಟ ಸಿಕ್ಕಿಂ ಮುಖ್ಯಮಂತ್ರಿ ಪತ್ನಿ ಕೃಷ್ಣಕುಮಾರಿ
ಕೃಷ್ಣಕುಮಾರಿ
Follow us on

ಸಿಕ್ಕಿಂ ಮುಖ್ಯಮಂತ್ರಿ ಪ್ರೇಮ್ ಸಿಂಗ್ ತಮಾಂಗ್ ಅವರ ಪತ್ನಿ ಕೃಷ್ಣ ಕುಮಾರಿ ರೈ(Krishna Kumari Rai) ಅವರು ಶಾಸಕರಾಗಿ ಪ್ರಮಾಣವಚನ ಸ್ವೀಕರಿಸಿದ ಮರುದಿನವೇ ರಾಜೀನಾಮೆ ನೀಡಿರುವ ಘಟನೆ ನಡೆದಿದೆ. ಅವರ ಹಠಾತ್ ನಿರ್ಧಾರದ ಹಿಂದಿನ ಕಾರಣ ಅಸ್ಪಷ್ಟವಾಗಿದೆ. ರಾಜೀನಾಮೆಯನ್ನು ಸ್ಪೀಕರ್ ಎಂಎನ್ ಶೆರ್ಪಾ ಅವರು ಅಂಗೀಕರಿಸಿದ್ದಾರೆ.

ಇತ್ತೀಚೆಗಷ್ಟೇ ಕೃಷ್ಣ ಕುಮಾರಿ ರೈ ಅವರು ಸಿಕ್ಕಿಂ ಡೆಮಾಕ್ರಟಿಕ್ ಫ್ರಂಟ್ (ಎಸ್‌ಡಿಎಫ್) ಅಭ್ಯರ್ಥಿ ಬಿಮಲ್ ರೈ ಅವರನ್ನು ಸೋಲಿಸಿ ವಿಧಾನಸಭೆ ಚುನಾವಣೆಯಲ್ಲಿ ನಾಮ್ಚಿ-ಸಿಂಘಿತಂಗ್ ಕ್ಷೇತ್ರದಿಂದ ಗೆಲುವು ಸಾಧಿಸಿದ್ದರು. ರೈ 7907 ಮತಗಳನ್ನು ಪಡೆದರೆ, ಅವರ ಎಸ್‌ಡಿಎಫ್ ಎದುರಾಳಿ 2605 ಮತಗಳನ್ನು ಗಳಿಸಿದ್ದರು.
ಕ್ಷೇತ್ರದಿಂದ ಎಸ್‌ಕೆಎಂ ನಾಯಕನ ವಿರುದ್ಧ ಸ್ಪರ್ಧಿಸಿದ್ದ ಮಹೇಶ್ ರೈ (ಸಿಎಪಿ-ಎಸ್) ಮತ್ತು ಅರುಣಾ ಮಾಂಗರ್ (ಬಿಜೆಪಿ) ‘

ಕ್ರಮವಾಗಿ 136 ಮತ್ತು 233 ಮತಗಳನ್ನು ಪಡೆದಿದ್ದರು. ಇದಲ್ಲದೆ, ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ, 56 ವರ್ಷದ ಪ್ರೇಮ್ ಸಿಂಗ್ ತಮಾಂಗ್ ನೇತೃತ್ವದ ಎಸ್‌ಕೆಎಂ, ಲೋಕಸಭೆ ಚುನಾವಣೆಗಳಲ್ಲಿ ರಾಜ್ಯ ಚುನಾವಣೆಗಳಲ್ಲಿ ಪ್ರಚಂಡ ಗೆಲುವು ಸಾಧಿಸಿತು.

ಮತ್ತಷ್ಟು ಓದಿ: ಆಡಳಿತ ಪಕ್ಷಗಳ ವಿಜೃಂಬಣೆ; ಅರುಣಾಚಲದಲ್ಲಿ ಬಿಜೆಪಿ, ಸಿಕ್ಕಿಂನಲ್ಲಿ ಎಸ್​ಕೆಎಂ ದಿಗ್ವಿಜಯ

32 ವಿಧಾನಸಭಾ ಕ್ಷೇತ್ರಗಳ ಪೈಕಿ 31 ಕ್ಷೇತ್ರಗಳನ್ನು ಗೆದ್ದಿರುವ ಪಕ್ಷವು ಸಿಕ್ಕಿಂನ ಏಕೈಕ ಲೋಕಸಭಾ ಸ್ಥಾನವನ್ನೂ ಗೆದ್ದುಕೊಂಡಿದೆ.
ವಿಶೇಷವೆಂದರೆ, ಲೋಕಸಭೆ ಚುನಾವಣೆಯ ಜೊತೆಗೇ ರಾಜ್ಯದಲ್ಲಿ ವಿಧಾನಸಭಾ ಚುನಾವಣೆಯೂ ನಡೆದಿತ್ತು.

ಮುಖ್ಯಮಂತ್ರಿ ತಮಾಂಗ್ ಅವರು ಸ್ಪರ್ಧಿಸಿದ್ದ ರೆನಾಕ್ ಮತ್ತು ಸೊರೆಂಗ್-ಚಕುಂಗ್ ಕ್ಷೇತ್ರಗಳೆರಡರಿಂದಲೂ ಗೆದ್ದಿದ್ದಾರೆ. ಆದರೆ, 2019 ರವರೆಗೆ 25 ವರ್ಷಗಳ ಕಾಲ ರಾಜ್ಯವನ್ನು ಆಳಿದ ಪ್ರತಿಪಕ್ಷ ಸಿಕ್ಕಿಂ ಡೆಮಾಕ್ರಟಿಕ್ ಫ್ರಂಟ್ (SDF), ಕೇವಲ ಒಂದು ಸ್ಥಾನಕ್ಕೆ ಸೀಮಿತವಾಗಿತ್ತು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ